ಭಾರತೀಯರನ್ನೇ ಸೆರೆ ಹಿಡಿದ ಉಕ್ರೇನ್ ಸೈನಿಕರು..! ಮಾನವ ಗುರಾಣಿ ರೀತಿ ಬಳಕೆ..!!

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ. ಮೂರನೇ ವಿಶ್ವಯುದ್ಧ ನಡೆದರೆ ಪರಮಾಣು ಬಾಂಬ್‌ನಿಂದಲೇ ನಡೆಯುತ್ತದೆ ಎನ್ನುವ ಮೂಲಕ ಇಡೀ ವಿಶ್ವಕ್ಕೆ ರಷ್ಯಾ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. ಇನ್ನೂ ಉಕ್ರೇನ್ ಬೆಂಬಲಿಸುತ್ತಿರುವ ಯೂರೋಪಿಯನ್ ರಾಷ್ಟ್ರಗಳಿಗೂ ಎಚ್ಚರಿಕೆ ರವಾನಿಸಿರುವ ರಷ್ಯಾ, ಉಕ್ರೇನ್ ಬೆಂಬಲಕ್ಕೆ ನಿಂತವರು ನಮ್ಮ ದಾಳಿಯನ್ನು ಎದುರಿಸಬೇಕಾಗಬಹುದು. ನಾವು ನಿಮ್ಮ ಮೇಲೆ ದಾಳಿ ಮಾಡಲ್ಲ ಎಂದು ಹೇಳಲಾಗದು ಎನ್ನುವ ಮೂಲಕ ಶೀಘ್ರದಲ್ಲೇ ಯೂರೋಪಿಯನ್ ರಾಷ್ಟ್ರಗಳ ಕಡೆಗೂ ರಷ್ಯಾ ದಾಳಿ ವಿಸ್ತರಿಸಲಿದೆ ಎನ್ನುವ ಸುಳಿವು ನೀಡಿದೆ.‌ ಈ ನಡುವೆ ಉಕ್ರೇನ್ ದೇಶ ಭಾರತೀಯರನ್ನು ಮಾನವ ಗುರಾಣಿ ರೀತಿ ಬಳಸುತ್ತಿದೆ ಎನ್ನುವ ಅರೋಪ ಕೇಳಿ ಬಂದಿದೆ.‌

ಭಾರತಕ್ಕೆ ರಷ್ಯಾ ಸ್ನೇಹಿತ ರಾಷ್ಟ್ರ..! ಉಕ್ರೇನ್ ಜನರ ರಕ್ಷಣೆಗೆ ಭಾರತೀಯರ ಬಳಕೆ..!!

ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಮಾತನಾಡಿದರು. ಭಾರತೀಯರನ್ನು ವಾಪಸ್ ತವರಿಗೆ ಕರೆದುಕೊಂಡು ಬರುವುದಕ್ಕೆ ಅವಕಾಶ ಕಲ್ಪಿಸಿ ಎಂದು ಕೇಳಿಕೊಂಡಿದ್ದರು. ಇದರ ಜೊತೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮತದಾನದಿಂದ ದೂರ ಉಳಿದಿದ್ದ ಭಾರತ ನಾನು ತಟಸ್ಥ ನಿಲುವು ಹೊಂದಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ರಷ್ಯಾ ಕಡೆಗೆ ಒಲವು ವ್ಯಕ್ತಪಡಿಸಿದೆ. ಈ ನಡುವೆ ಉಕ್ರೇನ್‌ನ ಖಾರ್ಕಿವ್ ನಗರವನ್ನು ಕೂಡಲೇ ತೊರೆಯಿರಿ, ಬಸ್, ಕಾರು, ಟ್ರೈನ್ ಸಿಗದೆ ಹೋದರೆ ಕಾಲ್ನಡಿಗೆಯಲ್ಲೇ ಆದರೂ ಖಾರ್ಕಿವ್ ಬಿಟ್ಟು ಹೊರಡಿ ಎನ್ನುವ ಸಂದೇಶ ರವಾನೆ ಮಾಡಲಾಗಿತ್ತು. ಈ ನಡುವೆ ಉಕ್ರೇನ್ ದೇಶ ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ಭಾರತೀಯ ಪ್ರಜೆಗಳನ್ನು ಬಳಸಿಕೊಳ್ತಿದೆ ಎನ್ನುವುದನ್ನು ಭಾರತೀಯ ರಷ್ಯಾ ರಾಯಭಾರ ಕಚೇರಿ ಟ್ವೀಟ್ ಮೂಲಕ ಖಚಿತಪಡಿಸಿದೆ.

ರಷ್ಯಾ ಸೇನಾ ದಾಳಿ ತಡೆಯಲು ಉಕ್ರೇನ್​ ಮಾಸ್ಟರ್ ಪ್ಲ್ಯಾನ್..!

ಯೂರೋಪಿಯನ್ ರಾಷ್ಟ್ರಗಳು ಒಗ್ಗಟ್ಟು ಪ್ರದರ್ಶನ ಮಾಡುತ್ತಾ ಉಕ್ರೇನ್‌ಗೆ ಬೆಂಬಲ ನೀಡಿದೆ.‌ ಆದರೂ ಉಕ್ರೇನ್ ಸೈನಿಕರು ರಷ್ಯಾ ಆರ್ಭಟ ತಡೆಯುವುದಕ್ಕೆ ಸಾಧ್ಯವಾಗ್ತಿಲ್ಲ. ರಷ್ಯಾ ಸೈನಿಕರಿಂದ ದೇಶವನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಭಾರತೀಯರನ್ನು ವಿದ್ಯಾರ್ಥಿಗಳನ್ನು ಮಾನವ ಗುರಾಣಿಯಾಗಿ ಬಳಸುತ್ತಾರೆ. ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ, ಟೊಂಕ ಕಟ್ಟಿ ನಿಂತಿದೆ. ಆದರೂ ಉಕ್ರೇನ್‌ನಿಂದ ವಿಮಾನ ಸಂಚಾರ ನಡೆಯುತ್ತಿಲ್ಲ. ಅಕ್ಕ ಪಕ್ಕದ ರಾಷ್ಟ್ರಗಳಿಂದ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡಲಾಗ್ತಿದೆ. ಇದೀಗ ಮಾನವ ಗುರಾಣಿಯಾಗಿ ಯುದ್ದದಲ್ಲಿ ಬಳಕೆ‌ ಮಾಡಿದರೆ ಮತ್ತಷ್ಟು ಭಾರತೀಯರ ಸಾವು ನೋವು ಸಂಭವಿಸಲಿದೆ.

ಉಕ್ರೇನ್ ಕುತಂತ್ರ ನೀತಿ, ಭಾರತೀಯರಿಗೆ ಆತಂಕ..!!

ಬಲಾಢ್ಯ ರಾಷ್ಟ್ರ ರಷ್ಯಾ ಉಕ್ರೇನ್ ಮೇಲೆ ಘೋಷಣೆ ಮಾಡಿದ್ದು, ಉಕ್ರೇನ್ ತತ್ತರಿಸಿ ಹೋಗಿದೆ. ಈಗ ಅಂತಿಮ‌ ಹಂತದಲ್ಲಿ ಯುದ್ಧ ಮುಗಿಯುತ್ತದೆ ಎನ್ನುವ ಹೊತ್ತಿಗೆ ಸಂಧಾನ ವಿಫಲವಾಗಿ ಇದೀಗ ಭಾರತೀಯರನ್ನೇ ಹ್ಯೂಮನ್ ಶೀಲ್ಡ್ ರೀತಿ ಬಳಸಲಾಗ್ತಿದೆ ಎಂದಿದ್ದಾರೆ. ಈಗ ಉಕ್ರೇನ್ ಸರ್ಕಾರ ಮಾಡಿರುವ ಕುತಂತ್ರ ನೀತಿ, ಪೋಷಕರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ. ಆದರೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾತ್ರ ಇನ್ನು ಖಚಿತಪಡಿಸಿಲ್ಲ.

Related Posts

Don't Miss it !