ಕೇಂದ್ರದ BJP ಸರ್ಕಾರಕ್ಕೆ ಯಾಕೆ ಬೇಡ ನಾರಾಯಣ ಗುರು, ಸುಭಾಷ್​ ಚಂದ್ರ ಬೋಸ್​..?

ಪ್ರಧಾನಿ ನರೇಂದ್ರ ಮೋದಿ ನೇತೃವದಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದೇ ಹಿಂದುತ್ವ ಅಜೆಂಡದ ಆಧಾರದ ಮೇಲೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಿಂದೂಗಳ ಸಮಗ್ರ ರಕ್ಷಣೆ ಮಾಡಬೇಕು, ಹಿಂದೂಗಳಿಗೆ ಆದ್ಯತೆ ಸಿಗಬೇಕು ಎನ್ನುವ ಘೋಷಣೆ ಈಗಲೂ ಅಲ್ಲಲ್ಲಿ ಕೇಳಿ ಬರುತ್ತಿದೆ. ಆದರೆ ಹಿಂದೂ ಆಗಿಯೇ ಜನಿಸಿ ಹಿಂದೂ ಆಗಿಯೇ ತನ್ನ ಅಂತಿಮ ಯಾತ್ರೆ ಮುಗಿಸಿ ನಾರಾಯಣ ಗುರುಗಳ ಬಗ್ಗೆ ಸರ್ಕಾರಕ್ಕೆ ಅಸಡ್ಡೆ ಯಾಕೆ..? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇನ್ನೂ ಸ್ವತಃ ನರೇಂದ್ರ ಮೋದಿ ಅವರೇ ಸುಭಾಷ್​ ಚಂದ್ರ ಬೋಸ್​ ಅವರ ಜೀವನ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು ಎನ್ನುವ ಮಾತುಗಳ ನಡುವೆ ಗಣರಾಜ್ಯೋತ್ಸವ ಪರೇಡ್​ನಲ್ಲಿ ಸುಭಾಷ್​ ಚಂದ್ರ ಬೋಸ್​ ಹಾಗೂ ನಾರಾಯಣ ಗುರುಗಳ ಸ್ತಬ್ಧ ಚಿತ್ರಗಳ ಪಾಲ್ಗೊಳ್ಳುವಿಕೆಯನ್ನು ತಡೆದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಮಾಡಬೇಕಿದೆ.

ನಾರಾಯಣ ಗುರುಗಳು ಯಾರು..? ಬಿಜೆಪಿ ವಿರೋಧ ಯಾಕೆ..?

12ನೇ ಶತಮಾನದಲ್ಲಿ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ತನ್ನ ಜಾತಿಯಿಂದ ಹೊರಬಂದು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ ಬಸವಣ್ಣನ ಹಾದಿಯಲ್ಲೇ ಸಾಗಿದ ಮಹಾನ್​ ಚೇತನ ನಾರಾಯಣ ಗುರು. 1856 ಜನಿಸಿ 1928ರ ತನಕ ಜೀವಿಸಿದ್ದ ನಾರಾಯಣ ಗುರುಗಳು, ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಸಮಾನತೆಗಾಗಿ ಹೋರಾಡಿದ ಸಂತ. ಒಂದೇ ಜಾತಿ, ಒಬ್ಬನೇ ದೇವರು ಎಂದು ಲೋಕಕ್ಕೆ ಸಾರಿದವರು. ಇನ್ನೂ ಮೇಲುಕೀಳು ಎಂಬ ಬೇಧವಿಲ್ಲದೆ ಎಲ್ಲರೂ ಸಮಾನರು ಎಂಬ ಭಾವನೆಯಿಂದ ಬದುಕಬೇಕು ಎಂದು ಜಾಗೃತಿ ಮೂಡಿಸಿದವರು. ಕೇರಳದಲ್ಲಿ ಕಾಂಗ್ರೆಸ್​ ಸೇರಿದಂತೆ ಎಡಪಕ್ಷಗಳೂ ಕೂಡ ಒಪ್ಪಿಕೊಳ್ಳುವಂತಹ ಸಂತರಲ್ಲಿ ನಾರಾಯಣ ಗುರುಗಳು ಪ್ರಮುಖರು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಪರೇಡ್​ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಭಾಗವಹಿಸಲು ಅವಕಾಶ ನೀಡದೆ ಇರುವುದು ನಾರಾಯಣ ಗುರುಗುಳು ಸ್ಥಾಪನೆ ಮಾಡಿರುವ ಶಿವಗಿರಿ ಮಠಕ್ಕೂ ಬೇಸರ ಉಂಟು ಮಾಡಿದೆ. ಸಮಾನತೆಗಾಗಿ ಹೋರಾಡಿದ, ಹಿಂದೂಗಳು ಕ್ರೈಸ್ತ ಸಮುದಾಯಕ್ಕೆ ಮತಾಂತರ ಆಗುವುದನ್ನು ತಡೆದು ನಿಲ್ಲಿಸಿದ ದಾರ್ಶನಿಕನಿಗೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

Read This;

ಸುಭಾಷ್​ ಚಂದ್ರ ಬೋಸ್​ ಸ್ತಬ್ಧ ಚಿತ್ರಕ್ಕೂ ತಡೆ..!

ಕೇರಳದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿ, ಆದಿ ಶಂಕರಾಚಾರ್ಯರ ಸ್ತಬ್ಧಚಿತ್ರ ನಿರ್ಮಿಸುವಂತೆ ಕೇರಳಕ್ಕೆ ರಕ್ಷಣಾ ಸಮಿತಿ ಸಲಹೆ ನೀಡಿದೆ. ಆದರೆ ಕೇರಳ ಸರ್ಕಾರ ಸ್ತಬ್ಧ ಚಿತ್ರದಲ್ಲಿ ಭಾಗಿಯಾಗದೆ ಇರಲು ನಿರ್ಧಾರ ಮಾಡಿದೆ. ಇದರ ಬೆನ್ನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವೀರ ಸೇನಾನಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಸ್ತಬ್ಧ ಚಿತ್ರವನ್ನೂ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ. ಈ ಬಗ್ಗೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದಾರೆ. ಬಂಗಾಳದ ಜನರನ್ನು ಅವಮಾನಿಸುವ ಕೆಲಸ ಎಂದು ಕಟುವಾಗಿ ಟೀಕಿಸಿದ್ದಾರೆ. ಸುಭಾಷ್​ ಚಂದ್ರ ಬೋಸ್​ ಅವರ 125ನೇ ಜನ್ಮದಿನೋತ್ಸವ ಸಂದರ್ಭದಲ್ಲಿ ಸ್ತಬ್ಧಚಿತ್ರ ತಿರಸ್ಕಾರ ಮಾಡಿರುವ ಕ್ರಮ ನೋವು ತಂದಿದೆ ಎಂದು ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಸುಭಾಷ್ ಚಂದ್ರ ಬೋಸ್​ ಅವರ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಇರಲಿದೆ. ಆದರೆ ಕೇಂದ್ರ ಸರ್ಕಾರವೇ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರದಿಂದ ಅವಕಾಶ ಕಿತ್ತುಕೊಳ್ಳಲಾಗಿದೆ ಅಷ್ಟೆ ಎನ್ನಲಾಗ್ತಿದೆ. ಈ ವಿಚಾರ ಜನವರಿ 26ರಂದು ಸತ್ಯಾಸತ್ಯತೆ ತಿಳಿಯಬೇಕಿದೆ.

ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್​ ಹೊರಕ್ಕೆ..! ಯಾಕೆ..?

ಪ್ರಧಾನಿ ನರೇಂದ್ರ ಮೋದಿ ಕೂಡ ನಾನೂ ಹಿಂದುಳಿದ ವರ್ಗದಿಂದ ಬಂದವನು ಎಂದು ಹೆಮ್ಮೆಯಿಂದ ಹೇಳಿಕೊಳ್ತಾರೆ. ಇನ್ನೂ ರಾಷ್ಟ್ರಪತಿಗಳೂ ಸಹ ಗಿಂದುಳಿ ವರ್ಗಕ್ಕೆ ಸೇರಿದವರು, ಬಿಜೆಪಿ ಎಂದಿಗೂ ಜಾತಿ ನೋಡಿ ಮಣೆ ಹಾಕುವ ಕೆಲಸ ಮಾಡುವುದಿಲ್ಲ ಎನ್ನುವ ಮಾತನ್ನು ಸದಾ ಕಾಲ ಭಾಷಣಲದಲ್ಲಿ ಹೇಳುತ್ತಾರೆ. ಆದರೆ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ಮೂರು ಬಾರಿ ತಿರಸ್ಕರಿಸಿದ್ದು ಯಾಕೆ ಎಂದರೆ ಯಾರಲ್ಲೂ ಉತ್ತರವಿಲ್ಲ. ಕೇರಳದ ಶಿಕ್ಷಣ ಸಚಿವ ಕೇರಳ ಬಿಜೆಪಿಯನ್ನು ಈ ಪ್ರಶ್ನಿಸಿದ್ದು, ಪ್ರತಿಕ್ರಿಯೆ ನೀಡಿ ಎಂದು ಒತ್ತಾಯಿಸಿದ್ದಾರೆ. ಆದರೆ ಉತ್ತರ ಮಾತ್ರ ಬಂದಿಲ್ಲ. ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಕೇಂದ್ರ ಬಿಜೆಪಿ ನಾಯಕರಿಗೆ ಈ ವಿಚಾರ ಗೊತ್ತಿಲ್ಲವೇ..? ಉತ್ತರ ತಿಳಿಸಿ ಎಂದು ಸವಾಲು ಹಾಕಿದ್ದಾರೆ. ಆದರೂ ಕೇಂದ್ರ ಬಿಜೆಪಿ ಮೌನಕ್ಕೆ ಶರಣಾಗಿದೆ. ಕಾಂಗ್ರೆಸ್​ ನಾಯಕ ಬಿ.ಕೆ ಹರಿಪ್ರಸಾದ್​ ಮಾತ್ರ ತೀವ್ರವಾಗಿ ಖಂಡಿಸಿದ್ದು, ನಾಗ್ಪುರ ಯೂನಿವರ್ಸಿಟಿ ತಮ್ಮದಲ್ಲದ ಯಾವುದಕ್ಕೂ ಅವಕಾಶ ನೀಡುವುದಿಲ್ಲ ಎಂದು ನೇರವಾಗಿ ಆರ್​ಎಸ್​ಎಸ್​ ಸಿದ್ಧಾಂತವನ್ನು ಒಪ್ಪದವರನ್ನು ಹೊರಗಿಡುವ ಕೆಲಸ ಮಾಡುತ್ತದೆ ಎಂದು ಕುಟುಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಕೇಂದ್ರ ಸರ್ಕಾರ ನಿರ್ಧಾರವನ್ನು ಪುನರ್​ ಪರಿಶೀಲಿಸಬೇಕು. ನಾರಾಯಾಣ ಗುರುಗಳ ಸ್ತಬ್ಧ ಚಿತ್ರಕ್ಕೆ ಒಪ್ಪಿಗೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Also Read;

ಕರಾವಳಿ ಕೋಪಕ್ಕೆ ಸಚಿವ ಸುನೀಲ್​ ಕುಮಾರ್​ ತತ್ತರ..!

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದ ಬಗ್ಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್​ ಕುಮಾರ್​ ಉತ್ತರ ನೀಡಿದ್ದಾರೆ. ಪ್ರತಿವರ್ಷ 12 ರಾಜ್ಯಗಳ ಸ್ತಬ್ಧಚಿತ್ರ ಭಾಗಿಯಾಗಲು ಮಾತ್ರ ಅವಕಾಶ ಇರುತ್ತದೆ. ಮೂರು ವರ್ಷಕ್ಕೆ ಒಮ್ಮೆ ಈ ಸರದಿ ಬರುತ್ತದೆ. ಕೇರಳಕ್ಕೆ ಈ ಬಾರಿ ಅವಕಾಶವೇ ಇರಲಿಲ್ಲ. 2018 ಹಾಗೂ 2022ರಲ್ಲಿ ಕೇರಳ ಸರ್ಕಾರದ ಸ್ತಬ್ಧಚಿತ್ರ ಭಾಗಿಯಾಗಿದೆ ಎಂದು ಸಬೂಬು ಹೇಳಿದ್ದಾರೆ. ಆದರೆ ಕರ್ನಾಟಕದಿಂದ ಕಳೆದ ವರ್ಷ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ ಭಾಗವಹಿಸಿತ್ತು. ಕೃಷ್ಣದೇವರಾಯ, ಸೈನಿಕರು, ಶಿಲ್ಪಕಲೆ ಸೇರಿದಂತೆ ಮನಸೂರೆಗೊಳ್ಳುವಂತೆ ಸ್ತಬ್ಧಚಿತ್ರ ನಿರ್ಮಾಣ ಮಾಡಲಾಗಿತ್ತು. ಅದಾಗ್ಯೂ ಈ ಬಾರಿ ಕೂಡ ಕರ್ನಾಟಕದ ಸ್ತಬ್ಧಚಿತ್ರ ಭಾಗಿಯಾಗುತ್ತಿದೆ. ಈ ಬಗ್ಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಆದರೆ ಕರ್ನಾಟಕದ ವಿಚಾರದಲ್ಲಿ ಮೂರು ವರ್ಷದ ನಿಯಮ ಯಾಕೆ ಜಾರಿಯಾಗಿಲ್ಲ. ಕೇವಲ ನಾರಾಯಾಣ ಗುರುಗಳ ವಿಚಾರದಲ್ಲಿ ಮಾತ್ರ ನಿಯಮ ಬಂದಿತೇ..? ಎನ್ನುವುದಕ್ಕೆ ಸಚಿವರೇ ಉತ್ತರಿಸಬೇಕಿದೆ. ಇನ್ನೂ ಹಿಂದುಳಿದ ವರ್ಗವನ್ನು ದೇವಸ್ಥಾನದ ಒಳಕ್ಕೆ ಬಿಡುವಂತೆ ಹೋರಾಟ ನಡೆಸಿದ್ದರು. ಬ್ರಾಹ್ಮಣ್ಯತ್ವದ ವಿರುದ್ಧ ಹೋರಾಟ ನಡೆಸಿದ್ದರು ಎನ್ನುವ ಕಾರಣಕ್ಕೆ ನಾರಾಯಣ ಗುರುಗಳು ತಿರಸ್ಕಾರಕ್ಕೆ ಒಳಗಾದರೇ..? ಎನ್ನುವುದನ್ನು ಸಂಬಂಧಪಟ್ಟವರೇ ಹೇಳಬೇಕಿದೆ.

Related Posts

Don't Miss it !