ರಾಮ ಮಂದಿರ ಕನಸಿನ ಕರ್ತೃ ಇನ್ನಿಲ್ಲ.. ರಾಮನ ಭೂಮಿಯಲ್ಲೇ ಹುಟ್ಟುವ ಆಸೆ..

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್​ ವಿಧಿವಶರಾಗಿದ್ದಾರೆ. 89 ವರ್ಷ ವಯಸ್ಸಿನ ಕಲ್ಯಾಣ ಸಿಂಗ್​ ಎರಡು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿ, ರಾಜಸ್ಥಾನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಲ್ಯಾಣ್​ ಸಿಂಗ್​ ಅವರನ್ನು ಲಕ್ನೋದ ಸಂಜಯ್​ ಗಾಂಧಿ ಪೋಸ್ಟ್​ ಗ್ರಾಜುಯೇಟ್​ ಇನ್ಸ್​ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲ್ಯಾಣ ಸಿಂಗ್​ ಇಹಲೋಕ ತ್ಯಜಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದೆ.

ಕಲ್ಯಾಣ್​ ಸಿಂಗ್​ ಬೆಳೆದು ಬಂದ ಹಾದಿ..!

ಉತ್ತರ ಪ್ರದೇಶ ಅಲಿಘರ್​ನಿಂದ 25 ಕಿಲೋಮೀಟರ್​ ದೂರದ ಅತ್ರೋಲಿಯಲ್ಲಿ 1932ರಲ್ಲಿ ಜನಿಸಿದ ಕಲ್ಯಾಣ ಸಿಂಗ್​, 1967ರಿಂದ ಹಲವಾರು ಬಾರಿ ಅತ್ರೋಲಿಯ ಶಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಜೂನ್​ 1991 ರಿಂದ 1992ರ ಡಿಸೆಂಬರ್​ ತನಕ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ರು. ಸೆಪ್ಟೆಂಬರ್​ 1997 ರಿಂದ ನವೆಂಬರ್​ 1999ರ ತನಕ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಉತ್ತರ ಪ್ರದೇಶದಲ್ಲಿ ಜನಸೇವೆ ಮಾಡಿದ್ರು. ಮೊದಲ ಅವಧಿಯಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಡಿಸೆಂಬರ್​ 06, 1992ರಂದು ಧ್ವಂಸ ಮಾಡಿದ್ರು. ಈ ಘಟನೆ ಇಡೀ ದೇಶವನ್ನೇ ಆಘಾತದ ಅಲೆಯನ್ನು ಸೃಷ್ಟಿಸಿತ್ತು. ​

ಇದನ್ನೂ ಓದಿ;

ಬಾಬ್ರಿ ಮಸೀದಿ ಧ್ವಂಸ ಮಾಡಿ ರಾಜೀನಾಮೆ..!

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ವರ್ಷಕ್ಕೆ ಸರಿಯಾಗಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಕಲ್ಯಾಣ್​ ಸಿಂಗ್​, ಕೂಡಲೇ ರಾಜೀನಾಮೆ ನೀಡಿದ್ರು. ಅತ್ತ ಇನ್ನೊಂದು ಕಡೆ ರಾಷ್ಟ್ರಪತಿ ಶಂಕರ್​ ದಯಾಳ್​ ಶರ್ಮಾ ಇಡೀ ಉತ್ತರ ಪ್ರದೇಶ ಸರ್ಕಾರವನ್ನೇ ವಜಾ ಮಾಡಿ ಆದೇಶ ಹೊರಡಿಸಿದ್ರು. ಬಿಜೆಪಿ ಧೀಮಂತ ನಾಯಕರಾದ ಲಾಲ್​ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್​ ಜೋಷಿ ಜೊತೆಗೆ ಕಲ್ಯಾಣ್​ ಸಿಂಗ್​ ಅವರನ್ನು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಪಿತೂರಿ ಮಾಡಿದ್ರು ಎಂದು ಆರೋಪಿಸಲಾಯ್ತು. ಕಳೆದ ವರ್ಷವಷ್ಟೇ ಲಕ್ನೋ ಕೋರ್ಟ್​ ಆರೋಪದಿಂದ ಖುಲಾಸೆ ಮಾಡಿತ್ತು.

ಇದನ್ನೂ ಓದಿ;

ಸಾಕಾರವಾಗಲಿಲ್ಲ ರಾಮ ಮಂದಿರದ ಹರಿಕಾರನ ಆಸೆ..!

2020ರ ಆಗಸ್ಟ್​ 5ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಅಂದು ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಕಲ್ಯಾಣ್​ ಸಿಂಗ್​, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುವ ತನಕ ನಾನು ಜೀವಂತವಾಗಿ ಇರಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ಆದರೆ ದುರಾದೃಷ್ಟವಶಾತ್​ ಕಲ್ಯಾಣ್​​ ಸಿಂಗ್​ ಉಸಿರು ಚೆಲ್ಲಿದ್ದಾರೆ. ಪತ್ನಿ ರಾಮವತಿ ದೇವಿ ಹಾಗೂ ಪುತ್ರಿ ಪ್ರಭಾ ವರ್ಮಾ ಮತ್ತು ಪುತ್ರ ರಾಜ್​ವೀರ್​ ಸಿಂಗ್​ರನ್ನು ಅಗಲಿದ್ದಾರೆ. ಆದರೆ ನಾನು ಮುಂದಿನ ಜನ್ಮದಲ್ಲಿ ಅಯೋಧ್ಯೆಯಲ್ಲೇ ಹುಟ್ಟುತ್ತೇನೆ ಎಂದಿದ್ದ ಕಲ್ಯಾಣ್​ ಸಿಂಗ್​ ರಾಮಮಂದಿರ ನಿರ್ಮಾಣದ ಹರಿಕಾರ ಎಂದರೆ ತಪ್ಪಾಗಲಾರದು. ಕರ ಸೇವಕರು ಬಾಬ್ರಿ ಮಸೀದಿ ಧ್ವಂಸ ಮಾಡುವಾಗ ಕೇಂದ್ರ ಪಡೆಗಳು ಗುಂಡು ಹಾರಿಸಲು ಸಜ್ಜಾಗಿ ತೆರಳುವಾಗ ಸಾಕೇತ್​ ಕಾಲೇಜು ಬಳಿ ಕರಸೇವಕರು ತಡೆದರು. ಈ ವೇಳೆ ಗುಂಡು ಹಾರಿಸುವುದನ್ನು ತಡೆಯುವ ಮೂಲಕ ಸಾವಿರಾರು ಜೀವ ಹಾನಿಯನ್ನು ತಡೆದೆ ಎಂದು ಕಲ್ಯಾಣ್​ ಸಿಂಗ್​ ಹೇಳಿಕೊಂಡಿದ್ದರು.

Related Posts

Don't Miss it !