3ನೇ ವಿಶ್ವಯುದ್ಧ ಘೋಷಣೆಗೆ ಕ್ಷಣಗಣನೆ ಆರಂಭ..! ಇಕ್ಕಟ್ಟಿಗೆ ಸಿಲುಕಿದ ಭಾರತ..!

ಉಕ್ರೇನ್​​ ಜೊತೆಗೆ ಸಂಧಾನ ಮಾತುಕತೆ ನಾವು ಸಿದ್ಧ ಎಂದು ಹೇಳಿಕೊಳ್ಳುತ್ತಲೇ ರಷ್ಯಾ , ಉಕ್ರೇನ್​ ದೇಶವನ್ನು ಸರ್ವನಾಶ ಮಾಡುವ ಕಡೆಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಉಕ್ರೇನ್​ ದೇಶವನ್ನು ಸಂಪೂರ್ಣವಾಗಿ ಸುತ್ತುವರಿದು ರಷ್ಯಾ ಆಕ್ರಮ ಮಾಡುತ್ತಿದ್ದು, ಬಲಾಢ್ಯ ಎದುರಾಳಿಯ ಆರ್ಭಟ ತಾಳಲಾರದೆ ಉಕ್ರೇನ್​ ಸಹಾಯಕ್ಕಾಗಿ ಕಂಡ ಕಂಡವರ ಬಳಿ ಅಂಗಲಾಚುತ್ತಿದೆ. ಸೋತು ಶರಣಾಗತಿ ಆದರೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಆಗುತ್ತದೆ. ರಷ್ಯಾ ಇಡೀ ದೇಶವನ್ನು ಲೂಟಿ ಮಾಡಲಿದೆ ಎನ್ನುವ ಭೀತಿ ಜೊತೆಗೆ ನಾಗರಿಕೆ ಸೇನೆಯನ್ನೂ ಯುದ್ಧಕ್ಕೆ ಅಣಿಮಾಡಿದೆ. ತನ್ನ ದೇಶದ ಪ್ರಜೆಗಳಿಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಿರುವ ಉಕ್ರೇನ್​​, ರಷ್ಯಾ ಯುದ್ಧ ವಿಮಾನಗಳನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಸೂಚನೆ ಕೊಟ್ಟಿದೆ. ಈಗಾಗಲೇ ಉಕ್ರೇನ್​​ನ​ ಯುದ್ಧ ಸಂಗ್ರಹಗಾರದಲ್ಲಿದ್ದ ಶಸ್ತ್ರಾಸ್ತ್ರ, ಆಹಾರ ಸಾಮಾಗ್ರಿ ಖಾಲಿಯಾಗುತ್ತಾ ಬಂದಿದೆ. ಈ ನಡುವೆ ನ್ಯಾಟೋ ಪಡೆಗಳ ಬೆಂಬಲ ಉಕ್ರೇನ್​​ಗೆ ಸಿಕ್ಕಿದ್ದು, ಹೋದ ಜೀವ ಬಂದಂತಾಗಿದೆ.

ರಷ್ಯಾ ವಿರುದ್ಧ ತಿರುಗಿ ಬಿದ್ದ 30 ರಾಷ್ಟ್ರಗಳ ಕೂಟ ನ್ಯಾಟೋ..!

ವಿಶ್ವಸಂಸ್ಥೆ ಭದ್ರತಾ ಸಂಸ್ಥೆ ಸಭೆ ನಡೆದ ಬಳಿಕ ನ್ಯಾಟೋ ಒಕ್ಕೂಟ ಸಭೆ ಸೇರಿತ್ತು. ರಷ್ಯಾ ನಡೆಸುತ್ತಿರುವ ಆರ್ಭಟದ ಯುದ್ಧವನ್ನು ತಡೆಯಲು ಇರುವ ಮಾರ್ಗೋಪಾಯಗಳ ಕುರಿತು ಮಹತ್ವದ ಚರ್ಚೆ ನಡೆಸಿತು. ರಷ್ಯಾದ ಯುದ್ಧ ನಿಲುವನ್ನು ನ್ಯಾಟೋ ಒಕ್ಕೂಟ ರಾಷ್ಟ್ರಗಳು ಕಟುವಾಗಿ ಟೀಕಿಸಿದವು. ರಷ್ಯಾ ದೇಶವು ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದೆ. ಯುದ್ಧಾರ್ಭಟ ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ಮುಂದಿನ ದಿನಗಳಲ್ಲಿ ರಷ್ಯಾ ಈ ಎಲ್ಲಾ ಕೃತ್ಯಗಳಿಗೆ ತಕ್ಕ ಶಾಸ್ತಿ ಅನುಭವಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ ರಷ್ಯಾ ಸಂಧಾನ ಪ್ರಸ್ತಾವನೆಯನ್ನು ಅಲ್ಲಗಳೆಯುತ್ತಿದೆ. ಹೀಗಾಗಿ ನ್ಯಾಟೋ ರಾಷ್ಟ್ರಗಳ ಒಕ್ಕೂಟ, ಉಕ್ರೇನ್​ ಪರವಾಗಿ ನಿಲ್ಲುವ ನಿರ್ಣಯ ಕೈಗೊಂಡಿರುವುದಾಗಿ ಘೋಷಣೆ ಮಾಡಿದೆ. ಅಂದರೆ 3ನೇ ವಿಶ್ವ ಯುದ್ಧ ಶುರುವಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂದೇ ಅರ್ಥ.

ಇದನ್ನೂ ಓದಿ: ರಷ್ಯಾ – ಉಕ್ರೇನ್​ ಯುದ್ಧ ನಿಲ್ಲೋದು ಯಾವಾಗ..? ಜನರ ರಕ್ಷಣೆಗೆ ಮೆಟ್ರೋ ಸುರಂಗ..!!

ಉಕ್ರೇನ್​ ಸೇನೆಗೆ ರಷ್ಯಾ ಅಧ್ಯಕ್ಷರಿಂದ ಬಂಪರ್​ ಆಫರ್​..!

ಉಕ್ರೇನ್​ ಸೇನೆ ವಿರುದ್ಧ ರಷ್ಯಾ ತನ್ನ ಸೈನಿಕರ ಮೂಲಕ ಅಟ್ಟಹಾಸ ಮೆರೆಯುತ್ತಿದೆ. ಉಕ್ರೇನ್​ ಸೈನಿಕರು ಕಂಡರೆ ಬಾಂಬ್​ಗಳ ಮಳೆಯನ್ನೇ ಸುರಿಸಲಾಗ್ತಿದೆ. ಉಕ್ರೇನ್​ ಸೈನಿಕರು ಕುಟುಂಬಸ್ಥರನ್ನು ತೊರೆದು ಸೇನೆಗೆ ಹೋಗುತ್ತಿರುವ ದೃಶ್ಯಗಳು ವಿಶ್ವಾದ್ಯಂತ ಸಾಕಷ್ಟು ಭಾವನಾತ್ಮಕ ಸೆಳೆತ ಸೃಷ್ಟಿಸಿವೆ. ಈ ನಡುವೆ ಇಷ್ಟೆಲ್ಲಾ ಯುದ್ಧಕ್ಕೆ ಕಾರಣವಾದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟೀನ್, ಉಕ್ರೇನ್​ ಸೇನೆಗೆ ಬಂಪರ್​ ಆಫರ್​ ಕೊಟ್ಟಿದ್ದಾರೆ. ಉಕ್ರೇನ್​​ ಅಧ್ಯಕ್ಷರನ್ನು ಪದಚ್ಯುತಿಗೊಳಿಸಿ ದೇಶದ ಅಧಿಕಾರವನ್ನು ಸೇನೆ ತನ್ನ ವಶಕ್ಕೆ ಪಡೆದುಕೊಳ್ಳಲಿ. ನಮ್ಮ ಹೋರಾಟ ಏನಿದ್ದರೂ ಡ್ರಗ್​ ಗ್ಯಾಂಗ್, ನಾಝಿಗಳ ವಿರುದ್ಧ ಎಂದು ಘೋಷಣೆ ಮಾಡಿದ್ದಾರೆ. ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದ ಹಾಗೆ ಹೊಸ ದಾಳ ಉರುಳಿಸಿದೆ ರಷ್ಯಾ. ಆದರೆ ದೇಶಕ್ಕಾಗಿ ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ನಿರತರಾಗಿರುವ ಸೈನಿಕರು ರಷ್ಯಾ ಮಾತು ಕೇಳ್ತಾರಾ..? ಎನ್ನುವಷ್ಟರಲ್ಲಿ ನ್ಯಾಟೋ ಒಕ್ಕೂಟದ 30 ರಾಷ್ಟ್ರಗಳ ಬೆಂಬಲ ಉಕ್ರೇನ್​ಗೆ ಸಿಕ್ಕಿದೆ.

ಇದನ್ನೂ ಓದಿ: ರಷ್ಯಾ ಹಾಗೂ ಉಕ್ರೇನ್​ ನಡುವೆ ಯುದ್ಧ ಆರಂಭಕ್ಕೆ ಕಾರಣ ಏನು..!? ಉಕ್ರೇನ್‌ಗೆ ಬೆಂಬಲಿಸ್ತಾರಾ ಮೋದಿ..?

ಭಾರತದ ಬೆಂಬಲ ಯಾರಿಗೆ ಅನ್ನೋದೇ ಆತಂಕ..!

ಒಂದು ವೇಳೆ ವಿಶ್ವ ಯುದ್ಧ ಶುರುವಾದರೆ ವಿಶ್ವದಲ್ಲಿ ಎರಡು ಗುಂಪುಗಳು ಸೃಷ್ಟಿಯಾಗುವುದು ನಿಶ್ಚಿತ. ಈಗಾಗಲೇ ನ್ಯಾಟೋ ಒಕ್ಕೂಟದ 30 ರಾಷ್ಟ್ರಗಳು ಉಕ್ರೇನ್​ಗೆ ಬೆಂಬಲ ನೀಡಿವೆ. ಇದೀಗ ರಷ್ಯಾ ಯುದ್ಧವನ್ನು ನಿಲ್ಲಿಸಿ, ಜಾಗತಿಕ ಮಟ್ಟದ ಒತ್ತಡಕ್ಕೆ ತಲೆಬಾಗಬೇಕು. ಅಥವಾ ಉಳಿದ ರಾಷ್ಟ್ರಗಳ ಬೆಂಬಲವನ್ನು ಕೋರುವ ಮೂಲಕ ಹೋರಾಟಕ್ಕೆ ಸಿದ್ಧವಾಗಬೇಕು. ಒಂದು ವೇಳೆ ರಷ್ಯಾ ನ್ಯಾಟೋ ಪಡೆಗಳನ್ನು ಎದುರಿಸುವುದಕ್ಕೆ ಈಗ ತಯಾರಿ ಮಾಡಿದ್ದೇ ಆದರೆ 3ನೇ ವಿಶ್ವಯುದ್ಧ ಆರಂಭ ಆಗುತ್ತದೆ. ಆ ವೇಳೆ ಭಾರತದ ಬೆಂಬಲಕ್ಕಾಗಿ ಹಲವು ರಾಷ್ಟ್ರಗಳು ಮನವಿ ಮಾಡುವುದು ಸರ್ವೇ ಸಾಮಾನ್ಯ. ಇಲ್ಲೀವರೆಗೂ ವಿಶ್ವದಲ್ಲಿ 2 ಮಹಾಯುದ್ಧಗಳು ನಡೆದಿದ್ದು, ಭಾರತ ತಟಸ್ಥ ನಿಲುವು ಹೊಂದಿತ್ತು. ಯಾರಿಗೂ ಬೆಂಬಲ ನೀಡದ ಭಾರತ ಶಾಂತಿ ಸ್ಥಾಪನೆಗೆ ಸರ್ವ ಪ್ರಯತ್ನ ಮಾಡಿದೆ. ಈಗ ಒಂದು ವೇಳೆ ಭಾರತ ಯಾವುದಾದರೂ ಒಂದು ದೇಶಕ್ಕೆ ಬೆಂಬಲ ಸೂಚಿಸಿದರೂ ಅಪಾಯ ಕಟ್ಟಿಟ್ಟಬುತ್ತಿ ಎನ್ನಲಾಗ್ತಿದೆ. ಇಂದು ಮಧ್ಯಾಹ್ನ ಕೇಂದ್ರ ಸಂಪುಟ ಭದ್ರತಾ ಸಮಿತಿ ಸಭೆ ನಡೆಯಲಿದ್ದು, ಮಹತ್ವದ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆಯಿದೆ.

Related Posts

Don't Miss it !