ರಷ್ಯಾ ಹಾಗೂ ಉಕ್ರೇನ್​ ನಡುವೆ ಯುದ್ಧ ಆರಂಭಕ್ಕೆ ಕಾರಣ ಏನು..!? ಉಕ್ರೇನ್‌ಗೆ ಬೆಂಬಲಿಸ್ತಾರಾ ಮೋದಿ..?

ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾ, ತನ್ನ ನೆರೆಯ ರಾಷ್ಟ್ರ ಉಕ್ರೇನ್​​ ಮೇಲೆ ಯುದ್ಧ ಘೋಷಣೆ ಮಾಡಿದೆ. ಉಕ್ರೇನ್​ನ ಎರಡು ನಗರಗಳಾದ ಕ್ರಿಮಿಯ ಮತ್ತು ಡೋನ್​ಬಾಸ್​ಗಾಗಿ ಯುದ್ಧ ಶುರುವಾಗಿದ್ದು, ಉಕ್ರೇನ್​ ಮೇಲೆ ರಷ್ಯಾ ಆಧಿಪತ್ಯ ಸ್ಥಾಪನೆ ಮಾಡಲು ಮುಂದಾಗಿದೆ. ಬಾಂಬ್​​ ದಾಳಿ ನಡೆಸುತ್ತಿರುವ ರಷ್ಯಾ, ಸಾಕಷ್ಟು ಸೇನಾ ನೆಲೆಗಳನ್ನು ಧ್ವಂಸ ಮಾಡಿರುವ ರಷ್ಯಾ, ಉಕ್ರೇನ್​ ತನ್ನ ಎದುರು ಶರಣಾಗುವಂತೆ ಸಲಹೆ ನೀಡಿದೆ. ಒಂದು ವೇಳೆ ಶರಣಾಗತಿ ಆದರೆ ರಷ್ಯಾ ಎದುರು ಉಕ್ರೇನ್​​ ತಲೆಬಾಗಬೇಕಿದೆ. ಈ ಮೂಲಕ ರಷ್ಯಾ ಹೇಳಿದಂತೆ ಕೇಳಬೇಕಾದ ಪರಿಸ್ಥಿತಿಯೂ ಉದ್ಬ ಆಗಬಹುದು. ಆದರೆ ರಷ್ಯಾ ಆಹ್ವಾನ ತಿರಸ್ಕರಿಸಿರುವ ಉಕ್ರೇನ್​ ಅಧ್ಯಕ್ಷರು, ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಗುಂಪು ಕಟ್ಟುವುದಾಗಿ ಘೋಷಣೆ ಮಾಡಿದೆ. ಇದರಿಂದ ಕೆರಳಿರುವ ರಷ್ಯಾ, ಉಕ್ರೇನ್​​ನ ವಿಮಾನ ನಿಲ್ದಾಣಗಳು, ಸೆನಾ ನೆಲೆಗಳು, ಶಸ್ತ್ರಾಸ್ತ್ರ ಸಂಗ್ರಹಗಾರಗಳನ್ನು ಧ್ವಂಸ ಮಾಡುತ್ತಿದೆ. ಇದೀಗ ಉಕ್ರೇನ್​ ಭಾರತದ ಕಡೆಗೆ ಸಹಾಯ ಹಸ್ತ ಚಾಚಿದೆ.

ಭಾರತದ ಮೋದಿ ಹೇಳಿದರೆ ರಷ್ಯಾ ಒಪ್ಪಬಹುದು..!

ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಭಾವಿ ನಾಯಕರಾಗಿದ್ದು, ರಷ್ಯಾ ಅಧ್ಯಕ್ಷರ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುವುದು ಉಕ್ರೇನ್​ ಅಧ್ಯಕ್ಷರ ಮಾತಾಗಿದೆ. ಈ ನಡುವೆ ಭಾರತ ಉಕ್ರೇನ್​ ಸಹಾಯಕ್ಕೆ ನಿಲ್ಲುತ್ತ ಎನ್ನುವ ಅಚ್ಚರಿ ಎದುರಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಭದ್ರತಾ ಮಂಡಳಿ ಸಭೆ ನಡೆಯುತ್ತಿದ್ದು, ಸಭೆ ಬಳಿಕ ಭಾರತದ ನಿಲುವುಗಳು ಹಾಗೂ ರಷ್ಯಾ ಅಧ್ಯಕ್ಷರ ಜೊತೆಗೆ ಮಾತನಾಡುವ ಮೂಲಕ ರಷ್ಯಾ ಹಾಗೂ ಉಕ್ರೇನ್​​ ನಡುವೆ ಸಂಧಾನಕಾರರಾಗಿ ಕೆಲಸ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜನಾಥ್​, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್​​ ಸೇರಿದಂತೆ ಬಹುತೇಕ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಭಾರತದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ರಷ್ಯಾ ಯುದ್ಧದಾಹಿಯೋ..? ಉಕ್ರೇನ್​ ಮಾಡಿದ ಎಡವಟ್ಟೋ..?

11 ಏರ್​ಬೇಸ್​ ಸೇರಿದಂತೆ ಉಕ್ರೇನ್​ನ 74 ಕಡೆಗಳಲ್ಲಿ ನಮ್ಮ ಸೇನೆ ಧ್ವಂಸ ಮಾಡಿದೆ ಎಂದು ರಷ್ಯಾ ಹೇಳಿಕೊಂಡಿದೆ. ಇನ್ನೂ ಉಕ್ರೇನ್​ ಕೂಡ ಮೂರು ಹೆಲಿಕಾಪ್ಟರ್​​ಗಳನ್ನು ಹೊಡೆದು ಉರುಳಿಸಿದ್ದೇವೆ ಎಂದು ಉಕ್ರೇನ್​ ಕೂಡ ಹೇಳಿಕೊಂಡಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್​​, ಯುದ್ಧದ ಬಗ್ಗೆ ಕಟು ಮಾತುಗಳಿಂದ ಟೀಕಿಸಿದ್ದಾರೆ. ಕೂಡಲೇ ರಷ್ಯಾ ಯುದ್ಧವನ್ನು ಸ್ಥಗಿತ ಮಾಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದು, ಅಲ್ಲೀವರೆಗೂ ಅಮೆರಿಕ ಉಕ್ರೇನ್​ಗೆ ಶಸ್ತ್ರಾಸ್ತ್ರ ಸೇರಿದಂತೆ ಅಗತ್ಯ ಸೇನಾ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಬೈಡನ್​​ ತಿಳಿಸಿದ್ದಾರೆ. ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಮನವಿ ಮಾಡಿದೆ. ಈ ನಡುವೆ ವಿಶ್ವಸಂಸ್ಥೆ ವಿಶೇಷ ಮಹಾ ಅಧಿವೇಶನ ಕರೆದು ಸಮಸ್ಯೆ ತಿಳಿಗೊಳಿಸುವಂತೆ ಉಕ್ರೇನ್​ ಆಗ್ರಹ ಮಾಡಿದೆ. ಆದರೆ ಉಕ್ರೇನ್​​ ಪ್ರಬಲ ಆಗಲು ಮುಂದಾಗಿದ್ದೇ ರಷ್ಯಾ ಕೋಪಕ್ಕೆ ಕಾರಣ ಎನ್ನಲಾಗ್ತಿದೆ.

ಸಹೋದರ ರಾಷ್ಟ್ರವನ್ನು ಎದುರಿಸಲು ಉಕ್ರೇನ್​ ತಯಾರಿ..!

ವಿಶ್ವದ ಹಲವಾರು ರಾಷ್ಟ್ರಗಳು ಸಮಸ್ಯೆಗಳು ಎದುರಾದ ವೇಳೆ ಸಮಸ್ಯೆಯಿಂದ ಹೊರ ಬರುವ ಉದ್ದೇಶದಿಂದ ಹಲವಾರು ಸ್ನೇಹ ರಾಷ್ಟ್ರಗಳ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. G 7, ಹಾಗೂ ನ್ಯಾಟೋ ಪಡೆಗಳು ಪ್ರಬಲವಾಗಿದ್ದು, ಯಾವುದೇ ಒಂದು ರಾಷ್ಟ್ರ ಈ ಗುಂಪಿನ ರಾಷ್ಟ್ರಗಳ ಮೇಲೆ ಯುದ್ಧ ಸಾರಿದಾಗ ಬೆಂಬಲಕ್ಕೆ ನಿಲ್ಲುವ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಿವೆ. ನ್ಯಾಟೋ ಪಡೆಯ 30 ರಾಷ್ಟ್ರಗಳ ಗುಂಪಿನ ಜೊತೆಗೆ ತಾನೂ ಸೇರಿಕೊಳ್ಳುವ ಬಗ್ಗೆ ಉಕ್ರೇನ್​​ ಒತ್ತಾಯ ಮಾಡಿತ್ತು. 2014ರಲ್ಲಿ ಈ ಬಗ್ಗೆ ನ್ಯಾಟೋ ಪಡೆಗಳ ಜೊತೆಗೆ ಚರ್ಚೆಯನ್ನೂ ಶುರು ಮಾಡಿತ್ತು. ತನ್ನ ಎದುರಾಳಿ ಪ್ರಬಲ ಆಗುವುದರಿಂದ ಸಂಕಷ್ಟ ಸಿಲುಕುವ ಅಪಾಯ ಅರಿತ ರಷ್ಯಾ, ಉಕ್ರೇನ್​ ಮಟ್ಟಹಾಕುವ ನಿರ್ಧಾರ ಮಾಡಿತ್ತು. 2014ರಲ್ಲಿ ರಷ್ಯಾ ಬೆಂಬಲಿತ ಅಧ್ಯಕ್ಷನ ಪದಚ್ಯುತಿ ಆಗಿತ್ತು. ಆ ಬಳಿಕ ರಷ್ಯಾ ಬೆಂಬಲಿತರ ತೆಕ್ಕೆಯಲ್ಲಿದ್ದ 2 ಪ್ರದೇಶಗಳಾದ ಡೊನಿಯಾಸ್ಕ್ ಮತ್ತು ಲಾಹನ್ಸ್​ಕ್ ಪ್ರದೇಶಗಳನ್ನು ಪುಟಿನ್ ಸ್ವತಂತ್ರ್ತ ಪ್ರದೇಶಗಳು ಎಂದು ಘೋಷಣೆ ಮಾಡಿದ್ದರು. ಅಲ್ಲಿಂದ ಇಲ್ಲೀವರೆಗೂ ಯುದ್ಧ ತಯಾರಿಗಳು ನಡೆಯುತ್ತಲೇ ಇದ್ದವು. ಇದೀಗ ಉಕ್ರೇನ್​ನ 3 ಭಾಗಗಳಿಂದಲೂ ದಾಳಿ ಮಾಡಿರುವ ರಷ್ಯಾ, ತನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದಿದೆ. ಇದು ಜಗತ್ತಿನ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ನಡುವೆ ಉಕ್ರೇನ್ ಸೇನೆ ಸೇರುವಂತೆ ತನ್ನ ಪ್ರಜೆಗಳಿಗೆ ಕರೆ ನೀಡಿದೆ. ಮೂರನೇ ವಿಶ್ವಯುದ್ಧ ಸನ್ನಿಹಿತ ಎನ್ನುತ್ತಿದ್ದಾರೆ ಅಂತಾರಾಷ್ಟ್ರೀಯ ವಿಶ್ಲೇಷಕರು.

Related Posts

Don't Miss it !