ಕಿಚ್ಚ ಸುದೀಪ್​ಗೆ ನಿಜವಾಗಲೂ ಆಗಿರೋದು ಏನು..? ಇದು ವದಂತಿ ಮಾತ್ರಾನಾ..?

ಸ್ಯಾಂಡಲ್​ವುಡ್​ ಅಷ್ಟೇ ಅಲ್ಲದ ಕಾಲಿವುಡ್​, ಟಾಲಿವುಡ್​, ಬಾಲಿವುಡ್​ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಕಿಚ್ಚ ಸುದೀಪ್​ ಆರೋಗ್ಯದಲ್ಲಿ ಸಮಸ್ಯೆ ಆಗಿದೆ ಎನ್ನುವ ಬಗ್ಗೆ ಗೊಂದಲಕಾರಿ ವದಂತಿ ಗಾಂಧಿನಗರದಲ್ಲಿ ಸುಳಿದಾಡಿತ್ತು. ಗಾಂಧಿನಗರದ ಗಾಸಿಪ್​​ ನಟ ಸುದೀಪ್​ ಕುಟುಂಬಸ್ಥರಲ್ಲೂ ಆತಂಕ ಸೃಷ್ಟಿಸುವ ಕೆಲಸ ಮಾಡಿತ್ತು. ವಿಕ್ರಾಂತ್​ ರೋಣಾ ಸಿನಿಮಾ ಇದೇ ತಿಂಗಳ 28ರಂದು ಬಿಡುಗಡೆ ಆಗುತ್ತಿತ್ತು. ಸುದೀಪ್​ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹೋಂ ಕ್ವಾರಂಟೈನ್​ ಆಗಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೆ ನಿನ್ನೆ ರಾತ್ರಿ ಸಿಕ್ಕ ಮಾಹಿತಿ ಕೊಂಚ ಸಮಾಧಾನ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಸುದೀಪ್​ ಜ್ವರದಿಂದ ಬಳಲುತ್ತಿರುವುದು ಸತ್ಯ ಎನ್ನುವುದನ್ನು ಖಚಿತ ಮಾಡಲಾಗಿದೆ.

ಕೊರೊನಾ ಪಾಸಿಟಿವ್​ ಎನ್ನುವುದು ಸುಳ್ಳು ವದಂತಿ..!

ಕಿಚ್ಚ ಸುದೀಪ್​ಗೆ ಕೊರೊನಾ ಪಾಸಿಟಿವ್ ಎಂಬ ವದಂತಿ ಬಗ್ಗೆ ನಿರ್ಮಾಪಕ ಹಾಗೂ ನಟ ಸುದೀಪ್​ ಮ್ಯಾನೇಜರ್​ ಆಗಿರುವ ಜಾಕ್ ಮಂಜು ಸ್ಪಷ್ಟನೆ ನೀಡಿದ್ದು, ನಟ ಸುದೀಪ್ ಅವರಿಗೆ ಕೊರೊನ ಸೋಂಕು ಕಾಣಿಸಿಕೊಂಡಿದೆ ಅನ್ನೋದು ಸುದ್ಧ ಸುಳ್ಳು ಮಾಹಿತಿ. ದೆಹಲಿಯಿಂದ ಬಂದು ಕ್ರಿಕೆಟ್ ಆಟ ಆಡುವಾಗ ಮಳೆಯಲ್ಲಿ ನೆನೆದಿದ್ದ ಕಾರಣಕ್ಕೆ ವೈರಲ್ ಫೀವರ್ ಬಂದಿದೆ. ಆದರೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಜುಲೈ 22, 23, 24 ರಂದು ಮೂರು ದಿನಗಳ ಕಾಲ ಮುಂಬೈನಲ್ಲಿ ವಿಕ್ರಾಂತ್​ ರೋಣಾ ಸಿನಿಮಾ ಬಗ್ಗೆ ಪ್ರಚಾರದ ಕಾರ್ಯದಲ್ಲಿ ತೊಡಗಿಸಿಕೊಳ್ತಾರೆ. ಆ ಬಳಿಕ ಜುಲೈ 25ರಂದು ಹೈದರಾಬಾದ್ , ಜುಲೈ 26ಕ್ಕೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜುಲೈ 27 ಕ್ಕೆ ದುಬೈನಲ್ಲಿ ನಡೆಯುವ ಪ್ರೀಮಿಯರ್ ಶೋಗೆ ಸುದೀಪ್​ ತೆರಳಲಿದ್ದಾರೆ ಎಂದಿದ್ದಾರೆ.

ವಿಕ್ರಾಂತ್​ ರೋಣಾ ಸೋಲಿಸಲು ವಿರೋಧಿಗಳ ಸಂಚು..!

ಕಳೆದ ಕೆಲವು ಚಿತ್ರಗಳು ಕಿಚ್ಚ ಸುದೀಪ್​ಗೆ ಹೇಳಿಕೊಳ್ಳುವಂತಹ ಹಿಟ್​ ಬಂದಿಲ್ಲ. ಇದೀಗ ಬರುತ್ತಿರುವ ವಿಕ್ರಾಂತ್​ ರೋಣಾ ಸಾಕಷ್ಟು ಅಬ್ಬರ ಸೃಷ್ಟಿಸಿದ್ದು, ಗೆಲುವು ಕಾಣುವ ಸಾಧ್ಯತೆಗಳು ನಿಚ್ಛಳ ಆಗಿವೆ. ಈಗಾಗಲೇ ಸಾಮಾಜಿಕ ಜಾಲತಾಣ ಹಾಗು ಯೂಟ್ಯೂಬ್​ನಲ್ಲಿ ರಾ ರಾ ರಕ್ಕಮ್ಮ ಹಾಡು ಟ್ರೆಂಡಿಂಗ್​ ಸೃಷ್ಟಿಸಿದೆ. ಅಷ್ಟೇ ಅಲ್ಲದೆ 3ಡಿ ತಂತ್ರಜ್ಞಾನದಲ್ಲಿ ಬರುತ್ತಿರುವ ವಿಕ್ರಾಂತ್​ ರೋಣಾನನ್ನು ಥಿಯೇಟರ್​ಗಳಲ್ಲಿ ಕಣ್ತುಂಬಿಕೊಳ್ಳಲು ಕನ್ನಡಿಗರೂ ಸೇರಿ ದೇಶ ವಿದೇಶಗಳಲ್ಲೂ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಎನ್ನುವ ಹೆಬ್ಬಯಕೆಯಿಂದ ಸುಳ್ಳು ಸುದ್ದಿಗಳನ್ನು ಹರಡುವ ಕೆಲಸ ಮಾಡಲಾಗ್ತಿದೆ ಎನ್ನುವುದು ಸುದೀಪ್​ ಆಪ್ತ ವಲಯದ ಮಾತು. ಯಶಸ್ಸನ್ನು ಸಹಿಸದ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ, ಪ್ರಚಾರವನ್ನು ಬೇರೆ ಕಡೆಗೆ ಬದಲಾಯಿಸುವ ಉದ್ದೇಶ ಕಾಣಿಸುತ್ತಿದೆ ಎನ್ನುತ್ತಾರೆ ಆಪ್ತರು.

Related Posts

Don't Miss it !