ಪುನೀತ್​ ಸಾವಿನ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೆಡಿಕಲ್​ ಮಾಫಿಯಾ.. ಬೀ ಕೇರ್​ಫುಲ್​..

ಕರ್ನಾಟಕ ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರಾದ ಪುನೀತ್​ ರಾಜ್​ಕುಮಾರ್​ ಇತ್ತೀಚಿಗೆ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಾರಣವಾಗಿದ್ದು ಕಾರ್ಡಿಯಾಕ್ ಅರೆಸ್ಟ್​ (ಹೃದಯ ಸ್ತಂಭನ) ಎನ್ನುವುದು ಇಡೀ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ನಟ, ನಟಿಯರೂ ಸೇರಿದಂತೆ ಜಿಮ್​ ಮಾಡಿ ದೇಹವನ್ನು ಕಟ್ಟುಮಸ್ತಾಗಿ ಇಟ್ಟವರು ಕಕ್ಕಾಬಿಕ್ಕಿ ಆಗಿದ್ದಾರೆ. ಕರ್ನಾಟಕ ಅಷ್ಟೇ ಅಲ್ಲ ಅಕ್ಕಪಕ್ಕದ ರಾಜ್ಯಗಳ ಸಿನಿಮಾ ಮಂದಿಯನ್ನು ಅಪ್ಪು ಸಾವು ಭಯವನ್ನು ಬೆಸೆದುಕೊಂಡಿದೆ. ಪುನೀತ್​ ರಾಜ್​ಕುಮಾರ್​ ಯೋಗ ಮಾಡುತ್ತಿದ್ದರು. ವ್ಯಾಯಾಮ ಮಾಡುವ ಮೂಲಕ ದೇಹವನ್ನು ಕಟ್ಟುಮಸ್ತಾಗಿ ಇಟ್ಟಿದ್ದರು. ಹಣ, ಆಸ್ಪತ್ರೆ, ವೈದ್ಯರು ಇದ್ದರು ಆದರೆ ಯಾರೊಬ್ಬರು ಕೂಡ ಸಹಾಯಕ್ಕೆ ಬರಲಿಲ್ಲ ಎನ್ನುವುದು ಪುನೀತ್​ ರಾಜ್​​ಕುಮಾರ್​ ನಿಧನದಿಂದ ಸಾಬೀತಾಯ್ತು. ಆದರೂ ಇದೀಗ ಆಸ್ಪತ್ರೆ ಮಾಫಿಯಾ ಶುರುವಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸಲಹೆ ರೂಪದಲ್ಲಿ ಹೆದರಿಸಿ ಆಸ್ಪತ್ರೆಗೆ ಬರುವಂತೆ ಮಾಡಲಾಗ್ತಿದೆ. ಇನ್ನೂ ಕೆಲವರು ಮೊಬೈಲ್​ಗೆ ಸಂದೇಶ ಕಳುಹಿಸಿ ಡಿಸ್ಕೌ.ಂಟ್​ ಮೂಲಕ ತಪಾಸಣೆ ಆಮೀಷ ಒಡ್ಡುತ್ತಿದ್ದಾರೆ.

ಹೃದಯಾಘಾತ, ಹೃದಯ ಸ್ತಂಭನ ವಿಭಿನ್ನ..!

ಹೃದಯಾಘಾತ ಅಂದರೆ ಹಾರ್ಟ್​ ಅಟ್ಯಾಕ್​, ಇದು ಸಾಮಾನ್ಯವಾಗಿ ಒಂದೇ ಬಾರಿಗೆ ಸಾವು ಸಂಭವಿಸುವುದಿಲ್ಲ. ಹೃದಯದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆ ಆಗಿ ದಿನದಿಂದ ದಿನಕ್ಕೆ ರಕ್ತ ಸಂಚಲನ ನಿಧಾನವಾಗುತ್ತಾ ಬರುತ್ತದೆ. ಆ ವೇಳೆ ಎದೆನೋವು ಕಾಣಿಸಿಕೊಳ್ಳುತ್ತದೆ. ಕೂಡಲೇ ಆಸ್ಪತ್ರೆ ಕಡೆಗೆ ಧಾವಿಸಿ ಪರೀಕ್ಷೆಗೆ ಒಳಪಟ್ಟರೆ ಹೃದಯಾಘಾತನ್ನು ತಪ್ಪಿಸಬಹುದು. ಆದರೆ ಹೃದಯ ಸ್ತಂಭನ ಅಂದರೆ ಕಾರ್ಡಿಯಾಕ್​ ಅರೆಸ್ಟ್​ ಇದನ್ನು ಅಷ್ಟು ಸುಲಭವಾಗಿ ತಪ್ಪಿಸುವುದು ಕಷ್ಟ. ಯಾವುದೇ ಸಮಸ್ಯೆ ಇಲ್ಲದವರಲ್ಲೂ ಇದು ಕ್ಷಣಕಾಲದಲ್ಲಿ ಬಂದು ಬಿಡಬಹುದು. ಬಹುತೇಕ ವಯಸ್ಸಾದವರು, ಏಕಾಏಕಿ ಶಾಕ್​ಗೆ ಒಳಗಾದವರು ಸಾವನ್ನಪ್ಪುವುದು ಕಾರ್ಡಿಯಾಕ್​ ಅರೆಸ್ಟ್​​ನಿಂದಲೇ ಎನ್ನುವುದು ಗಮನಸಿಬೇಕಾದ ವಿಚಾರ. ಯಾವುದಾದರು ಕಾಯಿಲೆಯಿಂದ ಆಸ್ಪತ್ರೆ ಸೇರಿದ ವ್ಯಕ್ತಿ ಸಾವನ್ನಪ್ಪಿದ್ದರೆ ಅವರ ವರದಿ ತೆಗೆದು ಸಾವಿನ ಕಾರಣ ಏನು ಎನ್ನುವುದನ್ನು ಒಮ್ಮೆ ಗಮನಿಸಿ ಅಲ್ಲಿ ಕಾರ್ಡಿಯಾಕ್​ ಅರೆಸ್ಟ್​​ ಎಂದು ಬರೆದಿರುತ್ತಾರೆ. ಕಾರ್ಡಿಯಾಕ್​ ಅರೆಸ್ಟ್​ ಆದರೆ ಬದುಕಿಸುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ ವೈದ್ಯರು. ಹಾವನ್ನು ತುಳಿದ ತಕ್ಷಣ ಕೆಲವರು ಸಾವನ್ನಪ್ಪುತ್ತಾರೆ. ಅವರಿಗಿನ್ನೂ ಹಾವು ಕಚ್ಚಿಲ್ಲದಿದ್ದರೂ ಸಾವು ಸಂಭವಿಸುತ್ತದೆ. ಇದು ಕಾರ್ಡಿಯಾಕ್​ ಅರೆಸ್ಟ್​. ಅಂದರೆ ಹೃದಯ ಏಕಾಏಕಿ ತನ್ನ ಕಾಯಕವನ್ನು ಮರೆತು ಬಿಡುವುದು.

Read this;

ಪುನೀತ್​ ರಾಜ್​ಕುಮಾರ್​ ಟೆಸ್ಟ್​ ಮಾಡಿಸಿರಲಿಲ್ಲವೇ..?

ನಟ ಪುನೀತ್​ ರಾಜ್​ಕುಮಾರ್​ 46 ವರ್ಷ ವಯಸ್ಸಾಗಿತ್ತು. ವ್ಯಾಯಾಮ ಮಾಡುವ ಹವ್ಯಾಸ ಇರಿಸಿಕೊಂಡಿದ್ದರು. ಯೋಗವನ್ನೂ ರೂಢಿಸಿಕೊಂಡಿದ್ದರು. ಕಾಲ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲ ಎಂದರೆ ನಂಬಲು ಅಸಾಧ್ಯವೇ ಸರಿ. ಡಯಟ್​, ಆರೋಗ್ಯ ಕಾಳಜಿ ಎಲ್ಲವನ್ನೂ ಹೊಂದಿದ್ದರು. ಆದರೆ ಕಾರ್ಡಿಯಾಕ್​ ಅರೆಸ್ಟ್​ ಆದ ವೇಳೆ ಕುಟುಂಬ ವೈದ್ಯರ ಜೊತೆಯಲ್ಲೇ ಇದ್ದರು ಎನ್ನಲಾಗಿದೆ. ಆದರೂ ಬದುಕಿಸಲು ಸಾಧ್ಯವಾಗಲಿಲ್ಲ ಎಂದರೆ ವೈದ್ಯಲೋಕವೇ ತಲೆ ತಗ್ಗಿಸಬೇಕಾದ ವಿಚಾರ. ಕುಟುಂಬ ವೈದ್ಯರು ಇದ್ದರೂ ಕಾಲಕಾಲಕ್ಕೆ ತಪಾಸಣೆ ನಡೆಸಿದರೂ ಪುನೀತ್​ ರಾಜ್​ಕುಮಾರ್​ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಕಾರ್ಡಿಯಾಕ್​ ಅರೆಸ್ಟ್​ ಆದ ಸಮಯದಲ್ಲಿ ಕೆಲವೇ ನಿಮಿಷಗಳ ಕಾಲಾವಧಿ ಇರುತ್ತದೆ ಎನ್ನುತ್ತಾರೆ ವೈದ್ಯರು. ಆದರೆ ಕಾರ್ಡಿಯಾಕ್​ ಸಮಸ್ಯೆ ಇದ್ದವರು ವ್ಯಾಯಾಮ ಮಾಡಬೇಡಿ. ನಿಮ್ಮ ಹೃದಯ ಏಕಾಏಕಿ ರಕ್ತ ಪಂಪ್​ ಮಾಡುವುದನ್ನು ನಿಲ್ಲಿಸಿಬಿಡುತ್ತದೆ. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎನ್ನುವ ಬಿಟ್ಟಿ ಸಲಹೆ ನೀಡುತ್ತಾರೆ.

Also Read;

ಸಲಹೆ ಮೂಲಕವೇ ಬೆದರಿಸಿ ಕರೆಸಿಕೊಳ್ಳುವ ತಂತ್ರ..!

ವೈದ್ಯಕೀಯ ಲೋಕದಲ್ಲಿ ಯಾವುದೇ ವೈದ್ಯರೂ ಸಹ ರೋಗಿಯನ್ನು ಗುಣ ಮಾಡುವ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಡಾ ಖಾದರ್. ಕೇವಲ ರೋಗವನ್ನು ನಿಯಂತ್ರಿಸುವ ಕೆಲಸ ಮಾಡುತ್ತಾರೆ. ಜೀವನ ಪರ್ಯಂತ ಮಾತ್ರೆಗಳನ್ನು ಕೊಡುತ್ತಾ ಹೋಗುತ್ತಾರೆ. ಎಂದಿಗೂ ರೋಗ ಗುಣವಾಯ್ತು, ಮಾತ್ರೆಯನ್ನು ನಿಲ್ಲಿಸು ಎಂದು ಹೇಳುವುದಿಲ್ಲ ಎನ್ನುತ್ತಾರೆ ಡಾ ಖಾದರ್. ಅದು ಕಾರ್ಡಿಯಾಕ್​ ಅರೆಸ್ಟ್​ನಲ್ಲಿ ಸಂಪೂರ್ಣ ಸತ್ಯ ಎನ್ನುವುದು ಅಕ್ಷರಸಹಃ ಸತ್ಯ. ಇದು ಎಲ್ಲರಲ್ಲೂ ಸಂಭವಿಸುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಏಕಾಏಕಿ ಸಂಭವಿಸುವ ಸಮಸ್ಯೆ ಆಗಿರುವ ಕಾರಣ ವೈದ್ಯಲೋಕವೂ ಇದರ ಎದುರು ತಲೆತಗ್ಗಿಸಿದೆ ಎನ್ನುವುದು ಬಹುತೇಕ ಸತ್ಯ. ಇದನ್ನು ತಡೆಯುವುದಕ್ಕೆ ಇರುವ ಏಕೈಕ ಉಪಾಯ ಎಂದರೆ ಯಾವುದನ್ನೂ ಅತಿಯಾಗಿ ಮಾಡದೆ ಅಷ್ಟಿಷ್ಟು ಮಾಡಿಕೊಂಡು ಖುಷಿಖಷಿಯಿಂದ ಜೀವನ ಮಾಡುವುದು ಅಷ್ಟೆ ಎನ್ನುತ್ತಾರೆ ಡಾ ಬಿ.ಎಂ ಹೆಗಡೆ. ವೈದ್ಯರು ತಪಾಸಣೆ ಎಂದ ಕೂಡಲೇ ಎದ್ದೆನೋ ಬಿದ್ದೆನೋ ಎನ್ನುತ್ತಾ ಆಸ್ಪತ್ರೆ ಓಡಿದರೆ ಕಾಯಿಲೆ ಬಂದರೂ ಬರಬಹುದು. ಅಥವಾ ಮಾನಸಿಕ ಕಾಯಿಲೆಯೂ ಶುರುವಾಗಬಹುದು. ವೈದ್ಯರು ಹೇಳೋದೆಲ್ಲಾ ಸತ್ಯವಲ್ಲ ಎನ್ನುವ ಡಾ ಖಾದರ್​ ಅವರ ಮಾತಿನ ಬಗ್ಗೆ ಯೋಚಿಸಬೇಕಾದ ಕಾಲವಿದು.

Related Posts

Don't Miss it !