ಕರ್ನಾಟಕದಿಂದ ಪ್ರಧಾನಿ ನರೇಂದ್ರ ಮೋದಿಗೆ ಸುಳ್ಳು ಮಾಹಿತಿ..!

ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದರೆ ಅಭಿವೃದ್ಧಿ ಸಾಧ್ಯ ಎನ್ನುವ ಮಾತು ಇತ್ತು. ಆದರೆ ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಅಭಿವೃದ್ಧಿ ಅನ್ನೋದು ಆಮೆಗತಿಯಲ್ಲಿ ಸಾಗುತ್ತಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ಆದರೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಯೋಗ ದಿನಾಚರಣೆ ಪ್ರಯುಕ್ತ ಬೆಂಗಳೂರು ಹಾಗು ಮೈಸೂರಿಗೆ ಪ್ರವಾಸ ಕೈಗೊಂಡಿದ್ದರಿಂದ ಸಾಕಷ್ಟು ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ಬಿಬಿಎಂಪಿ ಆತುರಾತುವಾಗಿ ಮಾಡಿ ಮುಗಿಸಿತ್ತು. ವಿಶೇಷ ಅಂದ್ರೆ ಪ್ರಧಾನಿ ಬೆಂಗಳೂರಿಗೆ ಬರುವ ಮುನ್ನ ಬರೋಬ್ಬರಿ 23 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿಯೂ ಹೊರಬಿದ್ದಿತ್ತು. ಆ ಬಳಿಕ ರಸ್ತೆ ಕಾಮಗಾರಿಯ ಅಸಲಿಯತ್ತು ಬಯಲಾಗಿತ್ತು.

ಎರಡೇ ದಿನದಲ್ಲಿ ಕಿತ್ತು ಬಂದಿತ್ತು ರಸ್ತೆ ಡಾಂಬರ್​..!

ಬೆಂಗಳೂರಲ್ಲಿ ಪ್ರಧಾನಿ ಸಂಚರಿಸಿದ ರಸ್ತೆಗಳಿಗೆ ಹೊಸದಾಗಿ ಡಾಂಬರ್​ ಹಾಕಿದ್ದು, ಕಳಪೆ ಗುಣಮಟ್ಟದಿಂದ ಕೂಡಿತ್ತು ಅನ್ನೋದನ್ನು ಸ್ವತಃ ಸಾರ್ವಜನಿಕರೇ ಬಯಲು ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾದ ಬಳಿಕ ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸಂಚಾರ ಮಾಡಿದ ರಸ್ತೆ ಕಾಮಗಾರಿ ಕಳಪೆ ಅನ್ನೋದು ರಾಷ್ಟ್ರೀಯ ಮಾಧ್ಯಮಗಳಲ್ಲೂ ಸದ್ದು ಮಾಡಿತ್ತು. ಆ ಬಳಿಕ ಪ್ರಧಾನಿ ಕಾರ್ಯಾಲಯ, ರಾಜ್ಯ ಸರ್ಕಾರದಿಂದ ವರದಿ ಕೇಳಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಬಿಬಿಎಂಪಿ ಆಯುಕ್ತರಿಂದ ವರದಿ ಕೇಳಿದ್ದರು. ಇದೀಗ ಪ್ರಧಾನಿ ಕಾರ್ಯಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು, ಯಾವುದೇ ಕಳಪೆ ಕಾಮಗಾರಿ ನಡೆದಿಲ್ಲ ಎಂದು ಸುಳ್ಳು ವರದಿ ಸಲ್ಲಿಕೆ ಮಾಡಲಾಗಿದೆ.

ಮೋದಿ ಸಂಚಾರ ಮಾಡಿದ ರಸ್ತೆಗಳು ಕಳಪೆಯಲ್ಲ..!

ಕೇಂದ್ರ ಸರ್ಕಾರಕ್ಕೆ ಬಿಬಿಎಂಪಿ ವರದಿ ರವಾನೆ ಮಾಡಿದ್ದು, ಸರ್ಕಾರದ ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಚಾರ ಮಾಡಿದ ಮಾರ್ಗದ ಅಕ್ಕಪಕ್ಕದ ರಸ್ತೆಗಳಲ್ಲಿ ಗುಂಡಿ ಆಗಿವೆ. ಆದರೆ ಪ್ರಧಾನಿ ಮೋದಿ ಸಂಚರಿಸಿರುವ ಮಾರ್ಗದಲ್ಲಿ ಯಾವುದೇ ಗುಂಡಿ ಬಿದ್ದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನ ಜ್ಞಾನಭಾರತಿ, ಮರಿಯಪ್ಪನಪಾಳ್ಯ ಮಾರ್ಗದಲ್ಲಿ ರಸ್ತೆ ಗುಂಡಿ ಆಗಿದ್ದವು. ಈ ರಸ್ತೆ ಕಾಮಗಾರಿ ಮಾಡಿದ ಮೂವರಿಗೆ ಬಿಬಿಎಂಪಿ ನೋಟಿಸ್ ನೀಡುವ ಕೆಲಸ ಮಾಡಿತ್ತು. ಜಲಮಂಡಳಿ ಪೈಪ್​ ಹೊಡೆದು ಹೋಗಿ ಈ ಘಟನೆ ಆಗಿದೆ ಎಂದು ಮೊದಲಿಗೆ ಹೇಳಲಾಗಿತ್ತು. ಆ ಬಳಿಕ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನಿಗೆ ದಂಡ ವಿಧಿಸುವುದಾಗಿಯೂ ಹೇಳಿದ್ದರು. ಅಂತಿಮವಾಗಿ ಕೇಂದ್ರಕ್ಕೆ ಕೊಟ್ಟ ವರದಿಯಲ್ಲಿ ತಪ್ಪನ್ನು ಮುಚ್ಚಿಟ್ಟು ತೇಪೆ ಹಾಕುವ ಕೆಲಸ ಮಾಡಿದ್ದಾರೆ.

ಸುಳ್ಳು ವರದಿಯನ್ನು ಹೇಗೆ ನಂಬ್ತಾರೆ ‘ನಮೋ’..!?

ಪ್ರಧಾನಿ ಕಚೇರಿಗೆ ವರದಿ ಸಲ್ಲಿಕೆಗೂ ಮುನ್ನ ಬಿಬಿಎಂಪಿ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಭೆ ನಡೆಸಿತ್ತು. ಸಭೆಯಲ್ಲಿ BWSSB, BDA ನಡುವಿನ ಅಸಹಕಾರದ ಬಗ್ಗೆ ಚರ್ಚೆ ನಡೆಸಲಾಯ್ತು. ಅಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ತರಾಟೆ ತೆಗೆದುಕೊಂಡು ಅಂತಿಮವಾಗಿ ಮುಖು ಮುಚ್ಚಿಕೊಂಡು ಸುಳ್ಳು ವರದಿಯನ್ನು ರವಾನೆ ಮಾಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದಲ್ಲಿ ಸಾಕಷ್ಟು ಉತ್ತಮ ಅಧಿಕಾರಿಗಳು ಇದ್ದು, ರಾಜ್ಯ ಸರ್ಕಾರದ ಪರವಾಗಿ ಬಿಬಿಎಂಪಿ ಸಲ್ಲಿಕೆ ಮಾಡಿರುವ ವರದಿಯನ್ನು ಹೇಗೆ ಒಪ್ಪುತ್ತಾರೆ..? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಒಂದು ವೇಳೆ ವರದಿಯಲ್ಲಿ ಲೋಪಗಳಿಗೆ ಅಥವಾ ಸರಿಯಾದ ಮಾಹಿತಿ ಎಇಲ್ಲ ಎಂದು ಮೋದಿ ಕಾರ್ಯಾಲಯದಿಂದ ವರದಿ ವಾಪಸ್​ ಆದರೆ ರಾಜ್ಯ ಸರ್ಕಾರಕ್ಕೆ ಮುಖಭಂಗ ಕಟ್ಟಿಟ್ಟ ಬುತ್ತಿ.

Related Posts

Don't Miss it !