ಮೇಕೆದಾಟು ವಿಚಾರದಲ್ಲಿ ಯಾರದ್ದು ಪಕ್ಕಾ ರಾಜಕೀಯ..!?ಸಂಸತ್​ನಲ್ಲಿ ಪ್ರಜ್ವಲ್​ ರೇವಣ್ಣ ಕಿಡಿ..!

ಮೇಕೆದಾಟು ಯೋಜನೆ ವಿಷಯದಲ್ಲಿ ಯಾವುದೇ ರೀತಿಯ ರಾಜೀ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಳಾಇ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮೇಕೆದಾಟು ವಿಚಾರವನ್ನು ರಾಜಕಾರಣಕ್ಕೆ ಬಳಕೆ ಮಾಡ್ತಿದ್ದಾರೆ. ಯಾವುದೇ ಪಕ್ಷದವರು ಇರವಹುದು ರಾಜಕಾರಣಕ್ಕಾಗಿ ವಿರೋಧ ಮಾಡ್ತಿದ್ದಾರೆ. ಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆ ಮಾಡುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗಾಗಲೇ ಕೇಂದ್ರ ನೀರಾವರಿ ಸಚಿವರ ಭೇಟಿ ಮಾಡಿದ್ದೇನೆ. ಆದಷ್ಟು ಬೇಗ ಅವರು ಒಪ್ಪಿಗೆ ನೀಡಲಿದ್ದಾರೆ ಎಂದಿದ್ದಾರೆ. ಎಲ್ಲವೂ ಕ್ಲಿಯರ್ ಆದ ಕೂಡಲೇ ಮೇಕೆದಾಟು ಕಾಮಗಾರಿ ಆರಂಭ ಮಾಡ್ತೇವೆ. ಯಾರಾದರೂ ಪ್ರೊಟೆಸ್ಟ್ ಮಾಡಿದ್ರೆ ಅದು ನಮಗೆ ಸಂಬಂಧ ಇಲ್ಲದ ವಿಚಾರ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೋರಾಟಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ಅಣ್ಣಾಮಲೈ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ..!

ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿಜೆಪಿ ಎಂಎಲ್​ಸಿ ರವಿಕುಮಾರ್ ಮಾತನಾಡಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ತಿರುಗೇಟು ನೀಡಿದ್ದಾರೆ. ಮೇಕೆದಾಟು ಯೋಜನೆಯನ್ನು ಕರ್ನಾಟಕ ಮಾಡಿಯೇ ತೀರುತ್ತದೆ. ಅಣ್ಣಾಮಲೈ ಅಲ್ಲಿಯ ಬಿಜೆಪಿ ಅಧ್ಯಕ್ಷರಾಗಿ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಯಿ ಕೂಡ ಯೋಜನೆ ಜಾರಿ ಆಗಲಿದೆ ಎಂದಿದ್ದಾರೆ. ಇನ್ನು ನೂತನ ಸಚಿವ ವಿ ಸೋಮಣ್ಣ ಮಾತನಾಡಿ, ಅಣ್ಣಾಮಲೈ ಯೋಜನೆಯನ್ನ ಅರ್ಥ ಮಾಡಿಕೊಳ್ಳಬೇಕಿದೆ. ಐಪಿಎಸ್ ಆಗ್ತಿದ್ದಂತೆ ದೊಡ್ಡವರು ಅನ್ನೋದು ಬೇಡ. ಅವರು ನಮ್ಮ ಪಕ್ಷದ ಅಧ್ಯಕ್ಷರಿದ್ದಾರೆ. ಮೇಕೆದಾಟು ನಮ್ಮ ಭಾಗದಲ್ಲಿ ಆಗಲಿದೆ. ಅವರ ಕಂಡೀಷನ್ಅನ್ನು ನಾವು ಪಾಲಿಸುತ್ತಿದ್ದೇವೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನೆ ಬೇಕಿದೆ. ಇದು ಅವರಿಗೂ ಅರ್ಥವಾಗಿದೆ. ಒಂದು ರಾಜ್ಯ ಮತ್ತೊಂದು ರಾಜ್ಯದ ಜೊತೆ ಬಾಂಧವ್ಯ ಇರಬೇಕು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸ್ಪಷ್ಟಪಡಿಸಿದ್ದಾರೆ.

ಮೇಕೆದಾಟು ಯೋಜನೆಗೆ ಅಣ್ಣಾಮಲೈ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿದ್ದು, ಈ ಹಿಂದಿನ‌ ಸಿಎಂ ಯಡಿಯೂರಪ್ಪ ಅವ್ರು ಈ ವಿಚಾರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಯೋಜನೆ ನಮ್ಮ ಹಕ್ಕು ಅಂತಾ ಹೇಳಿದ್ದಾರೆ. ಇದನ್ನ ತಡೆಯಲು ಯಾರಿಗೂ ಸಾಧ್ಯವಿಲ್ಲ. ಅಣ್ಣಾಣಮಲೈ ಯಾಕೆ ಅಡ್ಡಿ ಮಾಡ್ತಿದ್ದಾರೋ ಗೊತ್ತಿಲ್ಲ. ಸುಪ್ರೀಂಕೋರ್ಟ್ ಕೂಡ ನಮ್ಮ ಪರವಾಗಿ ತೀರ್ಪು ಕೊಟ್ಟಿದೆ ಎಂದಿದ್ದಾರೆ. ಈ ಮೂಲಕ ಮೇಕೆದಾಟು ಕಾಮಗಾರಿ ಆರಂಭಿಸಿದರೆ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿರುವ ತಮಿಳುನಾಡಯ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ಬಿಜೆಪಿ ನಾಯಕರು ಮಾತನಾಡಿದ್ದಾರೆ.

ಮೇಕೆದಾಟು ಯೋಜನೆ ಬಗ್ಗೆ ಸಂಸತ್​ನಲ್ಲಿ ಪ್ರಜ್ವಲ್​ ಪ್ರಶ್ನೆ..!

ಅತ್ತ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರಾಜಕೀಯ ಮಾಡುತ್ತಿದ್ದಾರೆ. ಇತ್ತ ಕರ್ನಾಟಕ ಬಿಜೆಪಿ ನಾಯಕರು ತಮಿಳುನಾಡು ಬಿಜೆಪಿ ವಿರುದ್ಧ ಮಾತನಾಡುವ ಮೂಲಕ ರಾಜಕೀಯ ರಂಗು ಮಾಡಿದ್ದಾರೆ. ಆದ್ರೆ ಸಂಸತ್​ ಅಧಿವೇಶನದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದನಿ ಎತ್ತುವ ಮೂಲಕ ಮೇಕೆದಾಟು ಬಗ್ಗೆ ಗಮನ ಸೆಳೆದಿದ್ದಾರೆ. ವಿದ್ಯುತ್ ಉತ್ಪಾದನೆ ನೀರು ಬಳಿಸಿಕೊಂಡರೆ ನೀರುವ ನದಿಗೇ ಹೋಗುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಿದ್ದರೂ ತಮಿಳುನಾಡು ಸೇರಿದಂತೆ ಉಳಿದ ರಾಜ್ಯಗಳ ಅನುಮತಿ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​, ಡಿಪಿಆರ್​ಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಆದರೆ ಅಂತಾರಾಜ್ಯ ಯೋಜನೆ ಆಗಿರುವ ಕಾರಣ ಕಾವೇರಿ ಕಣಿವೆ ರಾಜ್ಯಗಳ ಅನುಮತಿ ಅಗತ್ಯ ಎಂದಿದ್ದಾರೆ. ಅಂದರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುಮತಿ ಕೊಡಲ್ಲ ಎನ್ನುವುದನ್ನ ಪರೋಕ್ಷವಾಗಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಬಿಜೆಪಿ ವಾಗ್ದಾಳಿ ರಾಜಕೀಯವೇ..?

ತಮಿಳುನಾಡು ಬಿಜೆಪಿ ಮೇಕೆದಾಟು ಯೋಜನೆ ವಿಚಾರ ಹಿಡಿದುಕೊಂಡು ರಾಜಕೀಯ ಮಾಡಿ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದೆ. ಆದರೆ ಕರ್ನಾಟಕದಲ್ಲಿ ಮೇಕೆದಾಟು ವಿಚಾರ ಬಿಜೆಪಿಗೆ ತಿರುಗುಬಾಣ ಆಗುವ ಭೀತಿಯಿಂದ ರಾಜ್ಯ ಬಿಜೆಪಿ ನಾಯಕರು ತಮಿಳುನಾಡು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಅತ್ತ ಕೇಂದ್ರ ಬಿಜೆಪಿ ಸರ್ಕಾರ ನಾವು ಕರ್ನಾಟಕಕ್ಕೆ ಅನುಮತಿ ನೀಡಿಲ್ಲ, ಅಂತಾರಾಜ್ಯ ವಿಚಾರ ಆಗಿರುವ ಕಾರಣ ತಮಿಳುನಾಡು ಸೇರಿದಂತೆ ಕಾವೇರಿ ಕಣಿವೆ ರಾಜ್ಯಗಳ ಅನುಮತಿ ಪಡೆಯಬೇಕು ಎನ್ನುವ ಮೂಲಕ ಮತ್ತೊಂದು ರೀತಿಯ ರಾಜಕೀಯ ಶುರು ಮಾಡಿದೆ. ಮೇಕೆದಾಟು ಯೋಜನೆ ಆರಂಭವಾದರೆ ಕರ್ನಾಟಕ ಬಿಜೆಪಿಗೆ ಲಾಭ ಆಗಲಿದೆ. ಅತ್ತ ತಮಿಳುನಾಡಿನಲ್ಲೂ ಡಿಎಂಕೆ ಸರ್ಕಾರದ ವಿರುದ್ಧ ಮೇಕೆದಾಟು ವಿಚಾರವನ್ನೇ ದೊಡ್ಡದು ಮಾಡುವ ಮೂಲಕ ಲಾಭ ಮಾಡಿಕೊಳ್ಳುವ ತಂತ್ರಗಾರಿಕೆ ಮಾಡುತ್ತಿದೆ.

Related Posts

Don't Miss it !