ಹೆಚ್ಚು ಲೈಂಗಿಕ ಸಂಗಾತಿಗಳು ಇರುವುದು ಯಾರಿಗೆ..? ಸಮೀಕ್ಷೆಯಲ್ಲಿ ಭಯಾನಕ ಮಾಹಿತಿ..!

ವಿದ್ಯೆ ಕಲಿತ ನಾರಿ ಪರ ಪುರುಷನ ಜೊತೆಗೆ ಪರಾರಿ ಎನ್ನುವುದು ಸಾಮಾನ್ಯ ಜನರು ಮಾತನಾಡುವ ಮಾತು. ಆದರೆ ಇಲ್ಲೊಂದು ಸಮೀಕ್ಷೆ ಭಯಾನಕ ಅಂಸವನ್ನು ಬೆಳಕಿಗೆ ತಂದಿದ್ದು, ಲೈಂಗಿಕ ಸಂಗಾತಿಯನ್ನು ಹೆಚ್ಚಾಗಿ ಹೊಂದುವುದು ಮಹಿಳೆಯರು ಎಂದು ವರದಿ ಹೇಳಿದೆ. ಪುರುಷನಿಗೆ ಹೋಲಿಸಿಕೊಂಡರೆ ಮಹಿಳೆಯರಿಗೆ ಹೆಚ್ಚು ಮಂದಿ ಲೈಂಗಿಕ ಸಂಗಾತಿಗಳು ಇರುತ್ತಾರೆ ಎನ್ನುವುದು ಈ ಸಮೀಕ್ಷೆಯ ಸಂಪೋರ್ಣ ಸಾರ. NFHS ( National Family Health Survey ) ನ್ಯಾಷನಲ್​​ ಫ್ಯಾಮಿಲಿ ಹೆಲ್ತ್​ ಸರ್ವೇ ಪ್ರಕಾರ ಭಾರತ ದೇಶದಲ್ಲಿ ಮಹಿಳೆಯರಿಗೆ ಹೆಚ್ಚು ಮಂದಿ ಲೈಂಗಿಕ ಸಂಗಾತಿಗಳು ಇರುತ್ತಾರೆ ಎನ್ನಲಾಗಿದೆ.

2019 ರಿಂದ 2021ರ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ ಎಂದು ಹೇಳಲಾಗಿದೆ. ದೇಶದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ 707 ಜಿಲ್ಲೆಗಳಲ್ಲಿಂದ ಜನರನ್ನು ಆಯ್ಕೆ ಮಾಡಿಕೊಂಡು ಈ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ 1 ಲಕ್ಷದ 10 ಸಾವಿರ ಮಹಿಳೆಯರು ಹಾಗು ಒಂದು ಲಕ್ಷ ಪುರುಷರು ಭಾಗಿಯಾಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ಅಂದ್ರೆ ದೇಶದ 11 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಲೈಂಗಿಕ ಸಂಗಾತಿಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಆದರೆ ಆ 11 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಇಲ್ಲ.

ಇದನ್ನು ಓದಿ: ವೀರ ಸಾವರ್ಕರ್​ ಅವರನ್ನ ಸಿದ್ದರಾಮಯ್ಯ ಒಪ್ಪಿಕೊಂಡಿದ್ರಾ..? ಹೌದು ಎನ್ನುತ್ತಿದೆ ಈ ಸಾಕ್ಷಿ..

ರಾಜಸ್ಥಾನ, ಹರ್ಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಾಡಾಖ್, ಮಧ್ಯಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೆರಿ ಮತ್ತು ತಮಿಳುನಾಡು ಸೇರಿದ್ದು, ಈ ರಾಜ್ಯದಲ್ಲಿ ಪುರುಷ ಸಂಗಾತಿಯನ್ನು ಅಷ್ಟೇ ಅಲ್ಲದೆ ಪರ ಪುರುಷನನ್ನು ಸಂಗಾತಿಯಾಗಿ ಮಹಿಳೆಯರು ಹೆಚ್ಚು ಸೆಳೆಯುತ್ತಾರೆ. ಲೈಂಗಿಕ ಸಂಗಾತಿಗಳು ಮಹಿಳೆಯರಿಗೇ ಹೆಚ್ಚು ಎನ್ನುವ ಅಂಶ ಹೊರಬಿದ್ದಿದೆ. ಈ ರಾಜ್ಯಗಳಲ್ಲಿ ಮಹಿಳೆಯರಿಗೆ ಲೈಂಗಿಕ ಸಂಗಾತಿ ಸರಾಸರಿ 3.1 ರಷ್ಟು ಇದ್ದರೆ, ಪುರುಷರಿಗೆ ಸಂಗಾತಿ ಸರಾಸರಿ 1.8ರಷ್ಟು ಇದೆ ಎನ್ನುವ ಮಾಹಿತಿ ಸಿಕ್ಕಿದೆ.

ನಗರ ಪ್ರದೇಶದ ಮಹಿಳೆಯರಿಗಿಂತ ಕೊಂಚ ಗ್ರಾಮೀಣ ಭಾಗದ ಮಹಿಳೆಯರೇ ಲೈಂಗಿಕ ಸಂಗಾತಿಗಳನ್ನು ಹೆಚ್ಚಾಗಿ ಹೊಂದಿರುವ ವಿಚಾರವೂ ಬಯಲಾಗಿದೆ. ಇನ್ನು ಮದುವೆ ಆಗದ, ವಿವಾಹ ವಿಚ್ಛೇದನೆ ಪಡೆದಿರುವ, ವಿಧವೆ, ಗಂಡನಿಂದ ದೂರ ಇರುವ ಮಹಿಳೆಯರು ಒಂದು ವರ್ಷದಲ್ಲಿ ಎರಡು ಅಥವಾ ಹೆಚ್ಚು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸದೆ ಇರುವುದು ಆತಂಕಕ್ಕೂ ಕಾರಣವಾಗಿದೆ. ಹೆಚ್​ಐವಿ ಏಡ್ಸ್​ ನಂತಹ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗಿ ಹರಡುವ ಭೀತಿವರದಿಯಲ್ಲಿ ಉಲ್ಲೇಖವಾಗಿದೆ.

Related Posts

Don't Miss it !