ನಟಿ ರಮ್ಯಾ ಡಿಕೆಶಿಗೆ ಕೌಂಟರ್ ಕೊಟ್ಟಿದ್ಯಾಕೆ..? ಅಸಲಿ ವಿಷಯ ಇದೇನಾ..?

ಕಾಂಗ್ರೆಸ್ ಪಕ್ಷದ ಸೇನಾನಿಗಳ ನಡುವೆ ಯುದ್ಧ ಘೋಷಣೆಯಾಗಿದೆ. ಸೈನಿಕರು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಲು ಕಾಯುತ್ತಾ ನಿಂತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಟ್ವಿಟ್ಟರ್‌ನಲ್ಲಿ ಹೇಳಿಕೆ ಹಾಕಿದ ಬೆನ್ನಲ್ಲೇ ರಮ್ಯಾ ವಿರುದ್ಧ ಡಿ.ಕೆ ಶಿವಕುಮಾರ್ ಬಣ ರೊಚ್ಚಿಗೆದ್ದು ಟ್ವೀಟ್ ಮಾಡಿತ್ತು. ಆದರೆ ಡಿ.ಕೆ ಶಿವಕುಮಾರ್ ಗೆರಿಲ್ಲಾ ಯುದ್ಧ ತಂತ್ರವನ್ನು ಅರಿತ ಮಾಜಿ ಸಂಸದೆ ರಮ್ಯಾ ಮತ್ತೊಂದು ಕೌಂಟರ್ ಕೊಟ್ಟಿದ್ದಾರೆ. ತನ್ನ ವಿರುದ್ಧ ಹೇಳಿಕೆ ನೀಡಿದರು ಎನ್ನುವ ಕಾರಣಕ್ಕೆ ಟೀಕೆ ಮಾಡುವ ಭರದಲ್ಲಿ ಡಿ.ಕೆ ಶಿವಕುಮಾರ್ ತನ್ನದೇ ಪಕ್ಷದ ನಾಯಕಿಯ ಎದುರು ಕಾಲು ಜಾರಿ ಬಿದ್ದಂತಾಗಿದೆ. ಇಂದು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಮತ್ತಷ್ಟು ರಷ ರೋಚಕ ವಿದ್ಯಮಾನಗಳು ಸೃಷ್ಟಿಯಾಗುವ ಸಾಧ್ಯತೆ. ಅಷ್ಟಕ್ಕೂ ರಮ್ಯಾ ಉರುಳಿಸಿದ ದಾಳ ಕಾಂಗ್ರೆಸ್ ತಲ್ಲಣ ಆಗುವಂತೆ ಮಾಡಿದೆ.

ನಟಿ ರಮ್ಯಾ ಮಾಡಿದ್ದ ಟ್ವೀಟ್ ಏನು..? ಡಿಕೆಶಿಗೆ ಕೋಪ ಯಾಕೆ..?

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಡಿ.ಕೆ ಶಿವಕುಮಾರ್ ಸಮರ ಸಾರಿದ್ದರು. ಪಿಎಸ್‌ಐ ಹಗರಣದಲ್ಲಿ ಅಶ್ವತ್ಥ ನಾರಾಯಣ ಸಹೋದರ ಡೀಲ್ ಮಾಡಿದ್ದಾರೆ. ಸಚಿವರ ಪಾತ್ರವಿದೆ ಎಂದು ಆರೋಪಿಸಿದ್ದರು. ರಾಜೀನಾಮೆಗೂ ಕಾಂಗ್ರೆಸ್ ಪಕ್ಷ ಆಗ್ರಹ ಮಾಡಿತ್ತು. ಇದೇ ವೇಳೆ ಎಂಬಿ ಪಾಟೀಲ್ ಜೊತೆಗೆ ಅಶ್ವತ್ಥ ನಾರಾಯಣ ಭೇಟಿ ಆಗಿದ್ದಾರೆ. ರಾಜಿ ಸಂಧಾನಕ್ಕೆ‌ ಅಶ್ವತ್ಥ ನಾರಾಯಣ ಯತ್ನಿಸಿದ್ದಾರೆ ಎಂದು ಟೀಕಿಸಿದ್ರು. ಆದ್ರೆ ನಾನು ಅಶ್ವತ್ಥ‌ ನಾರಾಯಣ ಅವರನ್ನು ಭೇಟಿ‌ ಮಾಡಿಲ್ಲ. ನನ್ನ ಮಗ ಹಾಗೂ ಅವರ ಮಗಳು ಸ್ನೇಹಿತರು. ಕಳೆದ ಕೆಲವು ತಿಂಗಳ ಹಿಂದೆ ನನ್ನನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆ ಬಳಿಕ ಭೇಟಿಯಾಗಿಲ್ಲ. ಶಿಕ್ಷ ಸಂಸ್ಥೆಗಳ ಮಾಲೀಕರಾಗಿರುವ ನಾವು ಕೆಲವೊಮ್ಮೆ ಭೇಟಿಯಾಗಬೇಕಾಗುತ್ತದೆ. ಭೇಟಿ ಆದರೂ ತಪ್ಪೇನು ಇಲ್ಲ ಎಂದು ಡಿ.ಕೆ ಶಿವಕುಮಾರ್ ಮಾತಿಗೆ ಠಕ್ಕರ್ ಕೊಟ್ಟಿದ್ದರು. ಆ ಬಳಿಕ ರಮ್ಯಾ ಕೂಡ ಕೌಂಟರ್ ಕೊಟ್ರು.

s

ರಮ್ಯಾ ವಿರುದ್ಧ ಟೀಕೆ ಮಾಡಲು ಡಿಕೆ ಶಿವಕುಮಾರ್ ಕುಮ್ಮಕ್ಕು..!!

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ MB ಪಾಟೀಲ್ ಅವರು ಕಾಂಗ್ರೆಸ್​​‌ನ ನಿಷ್ಠಾವಂತ ನಾಯಕರು. ಡಿಕೆ ಶಿವಕುಮಾರ್ ಅವರ ಹೇಳಿಕೆ ನನಗೆ ಅಚ್ಷರಿಯನ್ನು ತಂದಿದೆ. ಚುನಾವಣೆಗೆ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದ್ದ ನಾಯಕರನ್ನು ಭಿನ್ನಾಭಿಪ್ರಾಯ ಬಂದಿದೆ ಎಂದು ಎಂಬಿ ಪಾಟೀಲ್ ಪರವಾಗಿ ಎನಿಸುವಂತೆ ರಮ್ಯಾ ಟ್ವೀಟ್ ಮಾಡಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಡಿ.ಕೆ ಶಿವಕುಮಾರ್ ಅಭಿಮಾನಿಗಳು ರಮ್ಯಾ ವಿರುದ್ದ ಹರಿಹಾಯಲು ಶುರುಮಾಡಿದ್ದರು. ಸ್ವತಃ ರಮ್ಯಾ ಆರೋಪಿಸುವಂತೆ ಕೆಪಿಸಿಸಿ‌ ಕಚೇರಿಯಿಂದ ರಮ್ಯಾ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಟೀಕೆ ಮಾಡುವಂತೆ ಸಂದೇಶ ಹೋಗಿದೆ ಎಂದಿದ್ದಾರೆ. ಆದರೆ ಸಂದೇಶ ಹೋಗಿದ್ಯಾ..? ಅಥವಾ ಡಿಕೆ ಶಿವಕುಮಾರ್ ಅಭಿಮಾನಿ ಬಳಗವೇ ಈ ರೀತಿ ಮಾಡಿದ್ಯಾ ಗೊತ್ತಿಲ್ಲ.

ಈಗ ರಮ್ಯಾ ಟ್ವೀಟ್ ಮಾಡಿದ್ದರ ಉದ್ದೇಶ ಏನು..?

ನಟಿ ರಮ್ಯಾ ವಿರುದ್ಧ ಏನ್ನೆಲ್ಲಾ ಟ್ವೀಟ್​ ಮಾಡಬೇಕು ಎಂದು ಕೆಪಿಸಿಸಿ ಸೋಷಿಯಲ್​ ಮೀಡಿಯಾ ಟೀಂ ಸಂದೇಶ ರವಾನೆ ಮಾಡಿದೆ. ನನ್ನನ್ನು ಯಾರೂ ಟ್ರೋಲ್​ ಮಾಡುವುದು ಬೇಡ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ತೇನೆ ಎಂದಿರುವ ರಮ್ಯಾ, 7 ಸರಣಿ ಟ್ವೀಟ್​​ಗಳನ್ನು ಮಾಡಿದ್ದಾರೆ. ಇದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಟ್ಯಾಗ್​ ಮಾಡಿರುವುದು ವಿಶೇಷ. ಆದರೆ ಈ ಟ್ವೀಟ್ ಹಿಂದಿನ ರಹಸ್ಯವೇನು ಎನ್ನುವುದು ಇಡೀ ರಾಜ್ಯದ ಜನರ ಮಾತಾಗಿದೆ. ಈಗಾಗಲೇ ಕಾಂಗ್ರೆಸ್‌ನ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಟಿ ರಮ್ಯಾ ಇದೀಗ ವಾಪಸ್ ತವರು ನೆಲಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಯಾವುದೇ ಸ್ಥಾನಮಾನವನ್ನು ನೀಡಿಲ್ಲ. ಚುನಾವಣೆಯೂ ಹತ್ತಿರದಲ್ಲೇ ಇದೆ. ಆದರೂ‌ ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದೆ. ಆ ನಿರ್ಲಕ್ಷ್ಯಕ್ಕೆ‌ ಡಿ.ಕೆ ಶಿವಕುಮಾರ್ ಕಾರಣ ಎನ್ನುವುದು ರಮ್ಯಾ ಅವರ ನಂಬಿಕೆ ಎನ್ನಲಾಗಿದೆ. ಇದೇ ಕಾರಣದಿಂದ ರಮ್ಯಾ ಹೀಗೆಲ್ಲಾ‌ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ‌ಬರ್ತಿವೆ.

Related Posts

Don't Miss it !