ಕಟ್ಟ ಕಡೆಯಲ್ಲಿ ಮಾಡಿದ ಎಡವಟ್ಟು ಅಪ್ಪು ಜೀವಕ್ಕೆ ಆಯ್ತಾ ಆಪತ್ತು..!?

ನಟ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ 24 ಗಂಟೆಗಳು ಕಳೆದು ಹೋಗುತ್ತಿವೆ. ಲಕ್ಷಾಂತರ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಆಗಮಿಸಿ ಮೆಚ್ಚಿನ ನಟನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ದೂರದ ಊರುಗಳಿಂದ ಬಸ್‌ಗಳ ಮೂಲಕ ಗುಂಪು ಗುಂಪಾಗಿ ಅಭಿಮಾನಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಅಷ್ಟೊಂದು ಪ್ರೀತಿಸುವ ನಟನ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಆ ಅನುಮಾನಗಳಿಗೆ ಉತ್ತರ ಹೇಳುವವರು ಯಾರು..? ಎನ್ನುವ ಪ್ರಶ್ನೆ ಕಾಡುತ್ತಿದೆ. ಆ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ನಿಮ್ಮ The Public Spot ಮಾಡಿದೆ. ಅಲ್ಲಿ ಸಿಕ್ಕಿರುವ ಮಾಹಿತಿ ಬೆಚ್ಚಿ ಬೀಳಿಸುವಂತಿದೆ.

ಹಾರ್ಟ್​ ಅಟ್ಯಾಕ್​ ಆದ್ರೆ ಸತ್ತೇ ಹೋಗ್ತಾರಾ..?

ನಟ ಪುನೀತ್​ ರಾಜ್​ಕುಮಾರ್​ ಸಾವಿಗೆ ಕಾರಣ ಏನು ಎನ್ನುವುದು ಎಲ್ಲರನ್ನು ಕಾಡುತ್ತಿರುವ ಅತಿ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಹಾರ್ಟ್​ ಅಟ್ಯಾಕ್​ ಆದ ಕೂಡಲೇ ಸಾಯುವುದಿಲ್ಲ ಎನ್ನುವುದು ತಜ್ಞರ ಮಾತು. ಆದರೂ ಸಾವು ಸಂಭವಿಸಿದ್ದು ಹೇಗೆ..? ಅದೂ ಕೂಡ ಬೆಂಗಳೂರಿನಲ್ಲೇ ಇದ್ದರೂ ಆಸ್ಪತ್ರೆಗೆ ಕರೆದೊಯ್ಯುವುದು ತಡವಾಯಿತೇ..? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಮಾತ್ರ ಹೇಳುವುದಕ್ಕೆ ಯಾರೂ ತಯಾರಿಲ್ಲ. ಅದರಲ್ಲೂ ರಾಜ್​ ಕುಟುಂಬದ ನೆಚ್ಚಿನ ಮಗನಾಗಿದ್ದ ಯುವರತ್ನನನ್ನು ಕಳೆದುಕೊಂಡ ಆಘಾತದಿಂದ ಇಡೀ ಕುಟುಂಬ ಹೊರಕ್ಕೆ ಬಂದಿಲ್ಲ. ಆದರೆ The Public Spot ಗೆ ಸಿಕ್ಕಿರುವ ಮಾಹಿತಿ ಆಂಬ್ಯುಲೆನ್ಸ್​​ ಕರೆಸಿಕೊಳ್ಳದೆ ತಪ್ಪು ಮಾಡಿದರು ಎನ್ನುವುದು.

Read this;

ಎದೆ ನೋವು ಬಂದ ಕೂಡಲೇ ಕ್ಲೀನಿಕ್​ಗೆ ಪುನೀತ್​..!

ಸಣ್ಣ ಪ್ರಮಾಣದಲ್ಲಿ ಎದೆ ನೋವು ಕಾಣಿಸಿಕೊಂಡ ಕೂಡಲೇ ನಟ ಪುನೀತ್​ ರಾಜ್​​ ಕುಮಾರ್​ ಫ್ಯಾಮಿಲಿ ಡಾಕ್ಟರ್​ ಅವರ ಬಳಿಗೆ ಕರೆದುಕೊಂಡು ಹೋಗಲಾಗಿತ್ತು ಎನ್ನಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಹೃದಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಆದರೆ ಕ್ಲೀನಿಕ್​ನಿಂದ ಹೊರಕ್ಕೆ ಬರುವ ಮುನ್ನವೇ ಪುನೀತ್​ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ನಿರ್ಧಾರ ಮಾಡಿದ ಕುಟುಂಬಸ್ಥರು ಆಂಬ್ಯುಲೆನ್ಸ್​ಗೆ ಕಾಯದೆ, ತಮ್ಮ ಸ್ವಂತ ಕಾರಿನಲ್ಲೇ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ್ದರು. ಈ ಸಣ್ಣ ಎಡವಟ್ಟಿನ ನಿರ್ಧಾರವೇ ಕರುನಾಡಿನ ರಾಜಕುಮಾರನ ಪ್ರಾಣ ಪಕ್ಷಿ ಹಾರಿ ಹೋಗಲು ಕಾರಣವಾಯ್ತು ಎನ್ನುವ ಮಾತುಗಳು ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

Also Read;

ಎದೆ ನೋವಿನ ನಿರ್ಲಕ್ಷ್ಯ ಜೀವ ಹಾನಿಗೆ ಸುರಕ್ಷ..!

ಬೆಂಗಳೂರಿನ ಹೊರಗಡೆ ಇದ್ದು ಎದೆ ನೋವು ಕಾಣಿಸಿಕೊಂಡಿದ್ದರೆ, ಬೆಂಗಳೂರು ತಲುಪುವುದು ಕಷ್ಟವಾಗಿದೆ ಎನ್ನಬಹುದಿತ್ತು. ಆದ್ರೆ ಪುನೀತ್​ ರಾಜ್​ಕುಮಾರ್​ ಇದ್ದಿದ್ದು, ಬೆಂಗಳೂರಿನ ಐಶಾರಾಮಿ ಏರಿಯಾಗಳಲ್ಲಿ ಒಂದಾದ ಸದಾಶಿವನಗರದಲ್ಲಿ. ಇಲ್ಲಿಂದ ಕೂಗಳತೆ ದೂರದಲ್ಲಿ ಆಸ್ಪತ್ರೆಗಳಿವೆ. ಆದರೆ, ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ತಲುಪುವ ನಿರ್ಧಾರ ಮಾಡಿದ್ದರೆ, ಪುನೀತ್​ ಇಂದು ಅದೇ ನಗುಮೊಗದಲ್ಲಿ ನಮ್ಮೊಂದಿಗೆ ಇರುತ್ತಿದ್ದರು. ಹೃದಯದ ಸಮಸ್ಯೆ ಇದ್ದರೂ ಚಿಕಿತ್ಸೆ ಪಡೆಯಬಹುದಿತ್ತು. ಆ ಕ್ಷಣದಲ್ಲಿ ಅಲ್ಲಿದ್ದರಿಗೆ ಕಾರು ಉತ್ತಮ ಎನಿಸಿತೋ..!! ಅಥವಾ ಆಂಬ್ಯುಲೆನ್ಸ್​ ಬರುವುದು ತಡವಾಗುತ್ತದೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದರೋ ತಿಳಿಯದು. ಆದರೆ ಸದಾ ಮಂದಸ್ಮಿತ ಮುಖದ ಪುನೀತ್​ ನಮ್ಮನ್ನು ಅಗಲಿದ್ದಾರೆ.

Related Posts

Don't Miss it !