ಮಂಡ್ಯದಲ್ಲಿ ಕಾಮುಕ LIC ಏಜೆಂಟ್​ ಅವಂತಾರ..! ಸತ್ತ ಅಪ್ಪ, ಮಗನೇ ಮೂರ್ಖರು..!

LIC ಏಜೆಂಟ್​ ಅಂದರೆ ಸಲಿಸಾಗಿ ಯಾರ ಮನೆಗೆ ಬೇಕಾದರೂ ಪ್ರವೇಶ ಪಡೆಯುವ ನಂಬಿಕಸ್ತರು ಎನ್ನುವ ಮಾತಿತ್ತು. ಆದರೆ ಇದೀಗ LIC ಪಾಲಿಸಿ ಮಾಡುವ ನೆಪದಲ್ಲಿ ಬಂದು ಹೆಂಡತಿಯನ್ನೇ ಬಲೆಗೆ ಬೀಳಿಸಿಕೊಳ್ಳುವ ಕಾಮಕರೂ ಇರುತ್ತಾರೆ ಎನ್ನುವುದನ್ನು ನೋಡಿದ್ರೆ ಹೇಗೆ ನಂಬುವುದು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಈ ರೀತಿಯ ಘಟನೆಯೊಂದು ನಡೆದಿದ್ದು, ಅನಾಚಾರ ಮಾಡಿದ ಹೆಂಡತಿ ಹಾಗೂ LIC ಏಜೆಂಟ್​ನನ್ನು ಬಿಟ್ಟು ಯಾವುದೇ ತಪ್ಪು ಮಾಡದ ತಂದೆ ಮತ್ತು ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿದ್ದ ಹೆಂಡತಿ ಸಿಂಧುವನ್ನು ಬಿಂಡಿಗನವಿಲೆ ಪೊಲೀಸರು ಬಂಧಿಸಿದ್ದಾರೆ. ಆದರೆ LIC ಏಜೆಂಟ್​ ನಂಜುಂಡೇಗೌಡನನ್ನು ಪೊಲೀಸರು ಇಲ್ಲೀವರೆಗೂ ಬಂಧಿಸುವ ಮನಸ್ಸು ಮಾಡಿಲ್ಲ ಎನ್ನುವುದು ಬೇಸರದ ಸಂಗತಿ.

ಏನಿದು LIC ಏಜೆಂಟ್ ಅನಾಚಾರದ ಪ್ರಕರಣ..!?

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯಲ್ಲಿ ನಡೆದಿರುವ ಘಟನೆಯಿದು. ಮಾಜಿ ಸಂಸದ ಎಲ್​.ಆರ್​ ಶಿವರಾಮೇಗೌಡ ಅವರ ಹುಟ್ಟೂರು ಲಾಳನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಿಟ್ಟೇಕೊಪ್ಪಲಿನ ದುರಂತ ಕಥೆ. ಗ್ರಾಮದ ಗಂಗಾಧರ್​ ಎಂಬಾತ ತನ್ನ 6 ವರ್ಷದ ಗಂಡು ಮಗುವಿನ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಪತ್ನಿ ಸಿಂಧು LIC ಏಜೆಂಟ್​ ನಂಜುಂಡೇಗೌಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಈ ಬಗ್ಗೆ ಹಲವಾರು ಬಾರಿ LIC ಏಜೆಂಟ್​ ನಂಜುಂಡೇಗೌಡನೇ ನನಗೆ ಬೆದರಿಕೆ ಹಾಕಿದ್ದಾನೆ. ನಿನ್ನ ಹೆಂಡತಿಯನ್ನು ಬಿಟ್ಟುಬಿಡು. ನಾನು ಆಕೆಗೆ ಬಾಳು ಕೊಡುತ್ತೇನೆ ಎಂದು ಬೆದರಿಸಿದ್ದಾರೆ. ನಾವು ಮರ್ಯಾದಸ್ಥ ಕುಟುಂಬದವರು. ಈ ಅವಮಾನ ಸಹಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ವೀಡಿಯೋ ಮಾಡಿಟ್ಟಿದ್ದಾನೆ. ಜನವರಿ 13ರ ರಾತ್ರಿ ಮಲಗಿದ್ದ ಮಗ ಜಶ್ವಿತ್​ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಪಕ್ಕದಲ್ಲೇ ಇದ್ದ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Read This; ಐವರು ಕನ್ನಡಿಗರು ಸೇರಿ ದೇಶದ 128 ಗಣ್ಯರಿಗೆ ಪದ್ಮ ಗೌರವ..! ಪ್ರಮುಖರ ಪಟ್ಟಿ..

LIC ಏಜೆಂಟ್ ನಂಜುಂಡೇಗೌಡ ಹಾಗೂ ಪತ್ನಿ

ಮೊಬೈಲ್​ನಲ್ಲಿ ಬಯಲಾಯ್ತು ಹೆಂಡತಿಯ ಬೆತ್ತಲೆ ನಾಟಕ..!

‘ತನ್ನ ಹೆಂಡತಿ ಸ್ನಾನದ ಮನೆಗೆ ಹೋಗಿ ವಿಡಿಯೋ ಕಾಲ್​ ಮಾಡಿ ಬೆತ್ತಲಾಗುತ್ತಾಳೆ. ರೂಮಿನಲ್ಲೂ ಗಂಟೆಗಳ ಕಾಲ ಬಾಗಿಲು ಬಂದ್​ ಮಾಡಿಕೊಂಡು ಆತನ ಜೊತೆಗೆ ಮಾತನಾಡ್ತಾಳೆ. ನಾನು ಮನೆಯಲ್ಲಿದ್ದಾಗ ಕೆಲವೊಮ್ಮೆ ಎಲ್ಲವೂ ಗೊತ್ತಾದರೂ ಸಾಕ್ಷಿ ಸಂಗ್ರಹ ಮಾಡಲು ಸಾಧ್ಯವಾಗಲಿಲ್ಲ. ಇವರಿಬ್ಬರ ರಂಗಿನಾಟ ಪತ್ತೆ ಮಾಡಲೇಬೇಕು ಎನ್ನುವ ಉದ್ದೇಶದಿಂದ ವಿಡಿಯೋ ರೆಕಾರ್ಡ್​ ಮಾಡುವ ಮೊಬೈಲ್​ ಕೊಂಡುಕೊಂಡೆ. ಇದೀಗ ಎಲ್ಲವೂ ಗಪ್​​ಚುಪ್​ ಆಗಿದೆ ಎನ್ನುವ ಗಂಗಾಧರ್​ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ. ಕೆರೆಯಲ್ಲಿ ಶವ ಹುಡುಕುವಾಗ ಸಿಂಧು ಹೈಡ್ರಾಮಾ ಮಾಡಿದ್ದು, ನೂರಾರು ಜನರ ಎದುರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಡ್ರಾಮಾ ಮಾಡಿದ್ದಾಳೆ. ಆ ಬಳಿಕ ಹತ್ತಾರು ಜನರು ಆಕೆಯೂ ಸಾಯಲಿ ಬಿಟ್ಟು ಬಿಡಿ ಎಂದರೂ ಕೆಲವರು ಆಕೆ ಮಾಡಿದ ಪಾಪಕ್ಕೆ ಆಕೆ ಕಾನೂನು ಮೂಲಕ ಶಿಕ್ಷೆ ಅನುಭವಿಸಲಿ ಎಂದು ರಕ್ಷಣೆ ಮಾಡಿದ್ದಾರೆ. ಬಿಂಡಿಗನವಿಲೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆದರೆ LIC ಏಜೆಂಟ್​​ ನಂಜುಂಡೇಗೌಡ ಮಾತ್ರ ನಾಪತ್ತೆಯಾಗಿದ್ದಾನೆ.

Also Read: ವಲಸಿಗರಲ್ಲಿ ಯಾರೆಲ್ಲಾ ಮಂತ್ರಿ ಸ್ಥಾನ ಕಳೆದುಕೊಳ್ತಾರೆ!? ಇಲ್ಲಿದೆ ಲಿಸ್ಟ್​..

ಅಕ್ಕನ ಮಗಳ ಮೇಲಿನ ಮೋಹಕ್ಕೆ ಪತ್ನಿಯ ಸಾವು..!

ಅಸಲಿಗೆ ಖತರ್ನಾಕ್​ ಲೇಡಿ ಸಿಂಧು LIC ನಂಜುಂಡೆಗೌಡನಿಗೆ ಸ್ವಂತ ಅಕ್ಕನ ಮಗಳು. 8 ವರ್ಷದ ಹಿಂದೆ ಪಿಟ್ಟೆಕೊಪ್ಪಲಿನ ಗಂಗಾಧರ್​ ಜೊತೆಗೆ ಮದುವೆ ಮಾಡಿಕೊಟ್ಟಿದ್ದರು. ಮುದ್ದಾದ ಗಂಡು ಮಗು ಕೂಡ ಜನಿಸಿತ್ತು. ಸಂಸಾರ ಚೆನ್ನಾಗಿಯೇ ಸಾಗಿತ್ತು. ಅಷ್ಟರಲ್ಲಿ ತನ್ನ ಅಕ್ಕನ ಮಗಳು ಸಿಂಧು ಸೌಂದರ್ಯ LIC ಏಜೆಂಟ್​ ನಂಜುಂಡೇಗೌಡನ ಕಣ್ಣು ಕುಕ್ಕಿತ್ತು. ಆಕೆಯ ಮೇಲಿನ ಮೋಹ ಹೆಚ್ಚಾದ ಬಳಿಕ ಇಬ್ಬರು ಗಪ್​ಚುಪ್​ ಸಂಸಾರು ಶುರು ಮಾಡಿದ್ದರು. ಇದನ್ನು ನೋಡಿದ LIC ಏಜೆಂಟ್ ನಂಜುಂಡೆಗೌಡ ಪತ್ನಿ ವಿರೋಧಿಸಿದ್ದರು. ನಿಯಂತ್ರಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದನ್ನು ಸಾಮಾನ್ಯ ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರ ಜೊತೆ ಸೇರಿ ಮುಗಿಸಿಬಿಟ್ಟಿದ್ದರು. ಪತ್ನಿ ಸಾವಿನ ಬಳಿಕ ಇನ್ನೂ ಅನುಕೂಲ ಆಯಿತು ಎನ್ನುವಂತೆ ಸಿಂಧು ಜೊತೆಗೆ ಸಂಸಾರ ಶುರು ಮಾಡುವ ಹಂಬಲದಲ್ಲಿ LIC ಏಜೆಂಟ್​ ನಂಜುಂಡೇಗೌಡ ಇದ್ದನು ಎನ್ನಲಾಗಿದೆ. ಇದೀಗ ಈ ಪ್ರಕರಣದಲ್ಲೂ ಗಂಡ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರ ಅನಾಚಾರಕ್ಕೆ ಆಹ್ವಾನ ಕೊಟ್ಟಂತೆ ಆಗಿದೆ.

ಶೋಕಿಲಾಲ ಏಜೆಂಟ್

ಸತ್ತವನೇ ಮೂರ್ಖ..! ಕೋರ್ಟ್​ನಲ್ಲಿ ಬೇಕಿದೆ ಸೂಕ್ತ ಸಾಕ್ಷಿ..!

ಆತ್ಮಹತ್ಯೆ ಮಾಡಿಕೊಂಡಿರುವ ಗಂಗಾಧರ ಮತ್ತು 6 ವರ್ಷದ ಮಗ ಜಶ್ವಿತ್​ ಸಾವನ್ನಪ್ಪಿದ್ದಾರೆ. ನನ್ನ ಸಾವಿಗೆ ಪತ್ನಿ ಸಿಂಧು ಮತ್ತು LIC ಏಜೆಂಟ್​ ರಾಮಚಂದ್ರ ಅಗ್ರಹಾರದ ನಂಜುಂಡೇಗೌಡನೇ ಕಾರಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ ಗಂಗಾಧರ್​ ಕುಟುಂಬಸ್ಥರೂ ಕೂಡ ಪತ್ನಿ ಸಿಂಧು ಹಾಗೂ LIC ಏಜೆಂಟ್​ ನಂಜುಂಡೇಗೌಡನಿಗೆ ಮರಣದಂಡನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಭಾವನೆಗಳ ಆಧಾರದಲ್ಲಿ ಕೋರ್ಟ್​ ಶಿಕ್ಷೆಯನ್ನು ನೀಡುವುದಿಲ್ಲ. ಬದಲಿಗೆ ಗಂಗಾಧರ್​ ತಪ್ಪು ಭಾವನೆಯಿಂದ ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾನೆ. ಆಕೆಯ ಸಂಬಂಧಿಯೂ ಆಗಿರುವ ಕಾರಣಕ್ಕೆ ಸಲುಗೆ ಇಂದ ಇದ್ದಿರಬಹುದು, ಆದರೆ ಗಂಗಾಧರ್​ ಮಾಡಿರುವ ಆರೋಪಗಳಿಗೆ ಸೂಕ್ತ ಸಾಕ್ಷಿಗಳು ಇಲ್ಲ ಎಂದು ಕೋರ್ಟ್​ನಲ್ಲಿ ಕೇಸ್​ ಉಲ್ಟಾ ಆಗುವ ಸಾಧ್ಯತೆಯೇ ಹೆಚ್ಚು. ಇನ್ನೂ ಬಿಂಡಿಗನವಿಲೆ ಪೊಲೀಸರು ಈ ಕೇಸ್​ ತನಿಖೆ ಮಾಡಲು ಶಸಕ್ತರು ಎಂದು ಹೇಳಲು ಸಾಧ್ಯವಿಲ್ಲ. ಘಟನೆ ನಡೆದು 15 ದಿನಗಳಾಗುತ್ತಿದ್ದರೂ ಆರೋಪಿಯನ್ನೇ ಪತ್ತೆ ಮಾಡಲು ಸಾಧ್ಯವಾಗಿಲ್ಲ. ತಾಂತ್ರಿಕ ಸಾಕ್ಷಿಗಳನ್ನು ಕಲೆ ಹಾಕಬೇಕಿರುವ ಕಾರಣ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ತನಿಖೆಯನ್ನು ವಿಶೇಷ ತನಿಖಾ ತಂಡ ರಚಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕಿದೆ. ಇಲ್ಲದಿದ್ದರೆ LIC ಏಜೆಂಟ್​​ ನಂಜುಂಡೇಗೌಡ ತನ್ನ ಹಣದ ಮದದಿಂದ ಸುಲಭವಾಗಿ ಕಾನೂನು ಕಣ್ಣಿಗೆ ಮಣ್ಣೆರಚುವುದು ಶತಸಿದ್ಧ ಎನ್ನುತ್ತಿದ್ದಾರೆ ಸ್ಥಳೀಯರು.

ನೀತಿ: ಸಾವಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದ್ದು ಹೋರಾಟ ನಡೆಸಬೇಕೇ ವಿನಃ ಸಾಯುವುದು ಮೂರ್ಖರ ನಿರ್ಧಾರ ಮಾತ್ರ.

ಕಮೆಂಟ್ ಮಾಡಿ ನಿಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಓದುಗರಾದ ನೀವೇ ನಮ್ಮ ಮಾರ್ಗದರ್ಶಕರು

Related Posts

Don't Miss it !