ಶೋ ರೂಂ ಡಾರ್ಲಿಂಗ್​ಗಾಗಿ ಗಂಡನಿಗೆ ಮುಹೂರ್ತ..! ಅಬ್ಬೇಪಾರಿ ಗಂಡ ಜಸ್ಟ್​ ಮಿಸ್​..

ಬೆಂಗಳೂರು ಎನ್ನುವ ಮಾಯಾನಗರಿಯೇ ಹಾಗೆ. ಏನು ಗೊತ್ತಿಲ್ಲದ ಮುಗ್ದರು ಕೂಡ ಎಲ್ಲವನ್ನೂ ತಿಳಿದುಕೊಂಡು ಯಾಮಾರಿಸಿ ಬಿಡ್ತಾರೆ. ಇದು ಸಿಲಿಕಾನ್​ ಸಿಟಿ ಅನ್ನೋ ಬೆಂಗಳೂರಿನ ಅಸಲಿ ಮುಖ. ಬೆಂಗಳೂರಿನ ಕೂಗಳತೆ ದೂರದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಜರುಗಿದೆ. ಅರಿಶಿನಕುಂಟೆಯ ಆದರ್ಶ ನಗರದ ನಿವಾಸಿ ಗಿರೀಶ್​ ಕಳೆದ ಆರು ವರ್ಷಗಳ ಹಿಂದೆ ಚೈತ್ರಾ ಎಂಬುವರನ್ನು ಮದ್ವೆಯಾಗಿದ್ರು. ರಿಷಿಕ್​ ಗೌಡ ಎನ್ನುವ ಒಬ್ಬ ಮಗನಿದ್ದು, ಚೈತ್ರಾ ತಂದೆ ತಾಯಿಯನ್ನೂ ಗಿರೀಶ್​ ನೋಡಿಕೊಳ್ತಿದ್ರು. ಆದರೆ ಕೆಲಸ ಕೊಟ್ಟ ಮಾಲೀಕನ ಸಂಘ ಮಾಡಿದ ಪತ್ನಿ ಗಂಡನಿಗೆ ಚಟ್ಟ ಕಟ್ಟುವ ಕೆಲಸ ಮಾಡಿದ್ದಳು.

ಏನಿದು ಕೊಲೆ ಪ್ಲ್ಯಾನ್..?

ನೆಲಮಂಗಲದ ಮಹಿಂದ್ರಾ ಅಂಡ್​ ಮಹಿಂದ್ರಾ ಶೋರೂಂನಲ್ಲಿ ಕೆಲಸ ಮಾಡ್ತಿದ್ದ ಚೈತ್ರಾ, ತನ್ನ ಮಾಲೀಕ ಕಲ್ಪೇಶ್​ ಜೈನ್​ ಜೊತೆ ಸ್ನೇಹ ಸಂಪಾದಿಸಿದ್ಲು. ಆ ಸ್ನೇಹ ಮೋಹವಾಗಿ ಇಬ್ಬರು ಪರಸ್ಪರ ದೂರವಾಗದಷ್ಟು ಹತ್ತಿರವಾಗಿದ್ದರು. ದಿನದಿಂದ ದಿನಕ್ಕೆ ಗಂಡ, ಮಗನ ಮೇಲೆ ಕಾಳಜಿ ಕಡಿಮೆಯಾಗುತ್ತ ಬಂದಿದ್ದನ್ನು ಗಮನಿಸಿದ ಗಿರೀಶ್​, ಚೈತ್ರಾ ಮೊಬೈಲ್​ ಪರೀಶಿಲಿಸಿದ್ದ. ಆಕೆಯ ಮಾಲೀಕ ಕಲ್ಪೇಶ್​ ಜೈನ್​ ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದ ವಾಟ್ಸಪ್​ ಚಾಟ್​ ನೋಡಿ ಶಾಕ್​ ಆಗಿದ್ದ. ಪತ್ನಿ ದಾರಿ ತಪ್ಪಿದ್ದಾಳೆ ಎನ್ನುವುದನ್ನು ಅರಿತ ಗಿರೀಶ್​, ಇನ್ಮುಂದೆ ಕೆಲಸಕ್ಕೆ ಹೋಗುವುದು ಬೇಡ ಎಂದು ತಾಕೀತು ಮಾಡಿದ್ದ.

ಪ್ರಿಯಕರ ಕಲ್ಪೇಶ್ ಜೈನ್

ಗಂಡನ ಕೊಲೆಗೆ ಪತ್ನಿಯಿಂದ ಸ್ಕೆಚ್​..!

ಕೆಲಸ ಬಿಡಲು ಒಪ್ಪದ ಚೈತ್ರಾ ಗಂಡನ ಜೊತೆ ಜಗಳವಾಡಿ, ಗಂಡನ ಮಾತನ್ನು ಧಿಕ್ಕರಿಸಿ ಕೆಲಸಕ್ಕೆ ಹೋಗಿದ್ದಳು. ನಂತರ ಸಂಬಂಧಿಕರು ಸೇರಿ ರಾಜಿ ಸಂಧಾನ ಮಾಡಿದ್ದರು. ಇನ್ಮುಂದೆ ಈ ರೀತಿ ಮಾಡಬೇಡ ಎಂದು ಆಕೆಗೆ ಬುದ್ಧಿವಾದ ಕೂಡ ಹೇಳಿದ್ದರು. ಇದ್ರಿಂದ ಕುಪಿತಗೊಂಡ ಚೈತ್ರಾ ತನ್ನ ಗಂಡನನ್ನು ಮುಗಿಸಲು ಸ್ಕೆಚ್​ ಹಾಕಿದ್ಲು. ಪ್ರಿಯಕನರ ಜೊತೆ ಸೇರಿ ಗಿರೀಶ್​ ಮುಗಿಸಲು ಸಂಚು​ ಮಾಡಿದ್ಲು.

ಘಟನೆ ನಡೆದಿದ್ದು ಎಲ್ಲಿ, ಬಚಾವ್​ ಆಗಿದ್ದು ಹೇಗೆ..?

ನೆಲಮಂಗಲದ ಹುಸ್ಕೂರು ಬಳಿ ಕಂಪನಿಯೊಂದರಲ್ಲಿ ಗಿರೀಶ್​ ವೇರ್​ಹೌಸ್​ ಎಕ್ಸಿಕ್ಯೂಟಿವ್​ ಆಗಿ ಕೆಲಸ ಮಾಡ್ತಿದ್ದು, ಕೆಲಸದಿಂದ ಹೊರಕ್ಕೆ ಬರುವುದನ್ನೇ ಹೊಂಚು ಹಾಕಿ ಕುಳಿತಿದ್ರು. ಮಹೇಂದ್ರ ಜೈಲೋ ಕಾರಿನಲ್ಲಿ ಬಂದಿದ್ದ ಆರೋಪಿಗಳಲ್ಲಿ ಕಲ್ಪೇಶ್​ ಜೈನ್​ ಕಾರು ಚಾಲಕನನ್ನು ಪತ್ತೆ ಹಚ್ಚಿದ ಗಿರೀಶ್​ ಮತ್ತೆ ಕಂಪನಿ ಒಳಕ್ಕೆ ಓಡಿದ್ದಾರೆ. ಈ ವೇಳೆ ಆರೋಪಿಗಳು ಕೊಲೆ ಮಾಡಲು ಆಯುಧ ಹಿಡಿದು ಅಟ್ಟಿಕೊಂಡು ಹೋಗುವಾಗ ಗಸ್ತಿಗೆ ಬಂದಿದ್ದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನು ಹಿಡಿದಿದ್ದಾರೆ.

FIR Copy

15 ಲಕ್ಷಕ್ಕೆ ಸುಫಾರಿ, 3 ಲಕ್ಷ ಅಡ್ವಾನ್ಸ್​..!

ನೆಲಮಂಗಲ ತಾಲೂಕಿನ ನರಸಾಪುರ ಮೂಲದ ಯುವಕರು ಜಿಮ್​ಗೆ ಹೋಗುವಾಗ ಕಲ್ಪೇಶ್​ ಜೈನ್​ ಪರಿಚಯ ಆಗಿದ್ದ. ಪ್ರಿಯತಮೆ ಚೈತ್ರಾ ಗಂಡನಿಗೆ ಗತಿಕಾಣಿಸುವ ಮಾತನಾಡ್ತಿದ್ದ ಹಾಗೆ ಕಲ್ಪೇಶ್​ ಜೈನ್​, ತನ್ನ ಜೊತೆ ಜಿಮ್​ಗೆ ಬರ್ತಿದ್ದ ಹುಡುಗರನ್ನು ಕರೆದು ಕೊಲೆ ಮಾಡುವ ಆಫರ್​ ಕೊ್ಟಿದ್ದ. 15 ಲಕ್ಷಕ್ಕೆ ಡೀಲ್​ ಮುಗಿದಿತ್ತು. 3 ಲಕ್ಷ ರೂಪಾಯಿ ಅಡ್ವಾನ್ಸ್​ ಕೂಡ ಮಾಡಿದ್ದ. ಹಣದ ಆಸೆಗೆ ಬಿದ್ದ ಯುವಕರು ಗುಂಪು ಕೊಲೆ ಮಾಡಲು ಮುಂದಾಗಿ ಕಂಬಿ ಹಿಂದೆ ಸೇರಿದ್ದಾರೆ. ಚಿನ್ನದಂತ ಬಾಳಲ್ಲಿ ಚಕ್ಕಂದವಾಡಲು ಹೋದ ಚೈತ್ರಾ ಪ್ರಿಯಕರನ ಜೊತೆ ಮುದ್ದೆ ಮುರಿಯಲು ಹೋಗಿದ್ದಾಳೆ.

Related Posts

Don't Miss it !