ಸಾಯುವ ಮುನ್ನ ಹೆಂಡತಿಯನ್ನು ಕೋಟ್ಯಾಧೀಶೆ ಮಾಡಿದ ಗಂಡ..!

ಬೆಂಗಳೂರಿನಲ್ಲಿ ಈ ರೀತಿಯ ಅಚ್ಚರಿಯ ಘಟನೆಯೊಂದು ನಡೆದಿದೆ. ಗಂಡನೊಬ್ಬ ಸಾಯುವ ಮುನ್ನ ಹೆಂಡತಿಯನ್ನು ಕೋಟ್ಯಾಧೀಶೆ ಆಗುವಂತೆ ಮಾಡಿ ತನ್ನ ಬದುಕು ಮುಗಿಸಿದ್ದಾನೆ. ಕೋರಮಂಗಲದ ವಿಟ್ಲಸಂದ್ರದಲ್ಲಿ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ ಟೆಕ್ಕಿ ಕೃಷ್ಣಪ್ರಸಾದ್ ಗರಲಪಟ್ಟಿ ಹಾಗೂ ಆತನ ಪತ್ನಿ ಸುಪ್ರಿಯಾ ವಾಸವಾಗಿದ್ದರು. ಕಳೆದ 2 ವರ್ಷಗಳ ಹಿಂದೆ ಇನ್ಶುರೆನ್ಸ್​ ಒಂದನ್ನು ಮಾಡಿಸಿದ್ದರು. ಅದರಂತೆ ವಾರ್ಷಿಕ 51 ಸಾವಿರ ರೂಪಾಯಿ ಪಾಲಿಸಿಯನ್ನೂ ತುಂಬಿದ್ದರು. ಆ ಬಳಿಕ ಕಳೆದ 3 ತಿಂಗಳ ಹಿಂದೆ ಕೃಷ್ಣಪ್ರಸಾದ್ ಮೃತಪಟ್ಟಿದ್ದರು. ಗಂಡ ಸಾವನ್ನಪ್ಪಿದ ಬಳಿಕ ಇನ್ಶುರೆನ್ಸ್​ ಕಂಪನಿಗೆ ದಾಖಲೆ ಪತ್ರ ಸಲ್ಲಿಸಿದ್ದ ಸುಪ್ರಿಯಾ, ಹೃದಯಾಘಾತ ಎಂದು ಇನ್ಶುರೆನ್ಸ್​ ಕಂಪನಿಗೆ ಕೊಟ್ಟಿದ್ದರು. ಆ ಬಳಿಕ ಇನ್ಶುರೆನ್ಸ್​ ಕಂಪನಿ 3 ಕೋಟಿ 20 ಲಕ್ಷ ರೂಪಾಯಿ ಹಣವನ್ನು ಸುಪ್ರಿಯಾ ಬ್ಯಾಂಕ್​ ಖಾತೆಗೆ ವರ್ಗಾವನೆ ಮಾಡಿತ್ತು.

ಟೆಕ್ಕಿ ಸಾವಿಗೆ ಕಾರಣವಾಯ್ತಾ ಕ್ಯಾನ್ಸರ್​ ಕಾಯಿಲೆ..?

ಆಂಧ್ರ ಪ್ರದೇಶದ ಕೃಷ್ಣಪ್ರಸಾದ್ ಗರಲಪಟ್ಟಿ 31 ವರ್ಷ ಮಾತ್ರ ವಯಸ್ಸಾಗಿತ್ತು. ಬೆಂಗಳೂರಿನ ಆಕ್ಸೆಂ‍ಚರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕೃಷ್ಣಪ್ರಸಾದ್​, ವಿಮೆ ಮಾಡಿಸಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವುದು ಸುಪ್ರಿಯಾ ವಾದ. ಇದೇ ವಾದವನ್ನು ಒಪ್ಪಿಕೊಂಡಿದ್ದ ಇನ್ಶುರೆನ್ಸ್​ ಕಂಪನಿ ದಾಖಲೆ ಪರಿಶೀಲನೆ ನಡೆಸಿದ ಬಳಿಕ 3.20 ಕೋಟಿ ವಿಮೆ ಹಣವನ್ನೂ ವರ್ಗಾವಣೆ ಮಾಡಿತ್ತು. ಆದರೆ ಕೃಷ್ಣಪ್ರಸಾದ್ ಗರಲಪಟ್ಟಿ, ಕ್ಯಾನ್ಸರ್​ನಿಂದ ಬಳಲುತ್ತಿದ್ದರು, ಕ್ಯಾನ್ಸರ್​ ಕಾಯಿಲೆಯನ್ನು ಮುಚ್ಚಿಟ್ಟು ವಿಮೆ ಮಾಡಿಸಿದ್ದಾರೆ ಎಂದು ರವಿ ಎಂಬುವರು ವಿಮಾ ಕಂಪನಿಗೆ ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿದ ಇನ್ಶುರೆನ್ಸ್​ ಕಂಪನಿ, ಕೋರಮಂಗಲ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇನ್ಶುರೆನ್ಸ್​ ಕಂಪನಿಯ ಕಾನೂನು ಸಲಹೆಗಾರ ಪಿ.ಎಸ್​ ಗಣಪತಿ ಎಂಬುವರು ನೀಡಿದ ದೂರು ಆಧರಿಸಿ ಪೊಲೀಸರು ಸುಪ್ರಿಯಾಗಾಗಿ ಹುಡುಕಾಟ ನಡೆಸ್ತಿದ್ದಾರೆ.

ಇದನ್ನೂ ಓದಿ: ಈ ಮುಗ್ದ ಕಂದಮ್ಮನ ಸಾವಿಗೆ ಹೊಣೆ ಯಾರು..? ಉತ್ತರ ಕೊಡಿ ಸಿಎಂ ಸಾರ್​..!!

ಸುಪ್ರಿಯಾ ನಾಪತ್ತೆ ಆಗಿರುವುದು ಅನುಮಾನಕ್ಕೆ ಕಾರಣ.!!

ಗಂಡ ಸಾವನ್ನಪ್ಪಿದ ಬಳಿಕ 3.20 ಕೋಟಿ ವಿಮೆ ಹಣ ಪಡೆದಿರುವ ಮೃತ ಕೃಷ್ಣಪ್ರಸಾದ್​ ಪತ್ನಿ ಸುಪ್ರಿಯಾ ಈಗ ಎಲ್ಲಿದ್ದಾರೆ ಎನ್ನುವ ಮಾಹಿತಿ ಇನ್ನೂ ಕೂಡ ನಿಗೂಢವಾಗಿದೆ. ಒಂದು ವೇಳೆ ಸುಪ್ರಿಯಾ ಕೊಟ್ಟಿರುವ ದಾಖಲೆ ಎಲ್ಲವೂ ಅಸಲಿ ಆಗಿದ್ದರೆ, ನೇರವಾಗಿ ಪ್ರಕರಣವನ್ನು ಎದುರಿಸಬಹುದಿತ್ತು. ಆದರೆ ಇದೀಗ ಸುಪ್ರಿಯಾ ನಾಪತ್ತೆ ಆಗಿರುವು ಹಲವು ಅನುಮಾನಗಳನ್ನು ಉಂಟು ಮಾಡಿದೆ. ಆದರೆ ವಿಮಾ ಕಂಪನಿಗೆ ದೂರು ನೀಡಿರುವ ರವಿ ಬಗ್ಗೆಯೂ ಹಲವಾರು ಅನುಮಾಗಳು ಮೂಡುತ್ತಿವೆ. ಸುಪ್ರಿಯಾ ತನ್ನ ಗಂಡನಿಗೆ ಮಾಡಿಸಿದ್ದ ವಿಮೆ ಹಾಗೂ ಆ ವಿಮಾ ಹಣವನ್ನು ಸುಪ್ರಿಯಾ ಪಡೆದಿರುವು ಸೇರಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಿ ವಿಮಾ ಕಂಪನಿಗೆ ಮಾಹಿತಿ ನೀಡಿರುವುದನ್ನು ನೋಡಿದಾಗ ಈ ವಂಚನೆ ಕೇಸ್‌ನಲ್ಲಿ ದೂರುದಾರ ರವಿ ಕೂಡ ಭಾಗಿಯಾಗಿದ್ದಾರಾ..? ಎನ್ನುವ ಅನುಮಾನ ಮೂಡಿಸುತ್ತಿದೆ.

ಇದನ್ನೂ ಓದಿ: ತಂಗಿ ಗಂಡನ ಜೊತೆಗೆ ಸರಸ ಸಲ್ಲಾಪ.. 4 ಮಕ್ಕಳು ಸೇರಿ ಐವರನ್ನು ಬಲಿ ಪಡೆದ ಮಾ‘ನಾ’ರಿ

31 ವರ್ಷಕ್ಕೆ ಬದುಕು ಮುಗಿಸಿದ ಕೃಷ್ಣಪ್ರಸಾದ್ ನಿಸ್ವಾರ್ಥ ಚಿಂತನೆ..!!

ಮೃತ ಕೃಷ್ಣಪ್ರಸಾದ್‌ಗೆ ಕ್ಯಾನ್ಸರ್ ಕಾಯಿಲೆ ಇದ್ದಿದ್ದರಿಂದಲೇ ದುಬಾರಿ ವಿಮೆ ಮಾಡಿಸಲಾಗಿದೆ ಎನ್ನುವುದು ಈಗ ಕೇಳಿಬರುತ್ತಿರುವ ಆರೋಪ. ಆದರೆ 3.20 ಕೋಟಿ ವಿಮಾ ಹಣ ಬಂದಿರುವುದರಿಂದ ಉದ್ದೇಶ ಪೂರ್ವಕವಾಗಿಯೇ ಹಣ ಲಪಟಾಯಿಸಲು ಆರೋಪ ಸೃಷ್ಟಿ ಆಗಿರುವುದನ್ನೂ ಅಲ್ಲಗಳೆಯುವಂತಿಲ್ಲ. ಕೋಟಿ ಕೋಟಿ ಹಣ ಕಾಣಿಸಿದಾಗ ಲಪಟಾಯಿಸಲು ತಿಮಿಂಗಿಲಗಳೇ ಸೃಷ್ಟಿಯಾಗುತ್ತವೆ. ಒಂದು ವೇಳೆ ಆಸ್ಪತ್ರೆಯಿಂದ ಕೊಟ್ಟಿರುವ ದಾಖಲೆಗಳೆಲ್ಲಾ ನಕಲಿ ಎನ್ನುವುದೇ ಆಗಿದ್ದರೆ ಆಸ್ಪತ್ರೆ ಕೂಡ ಈ ವಂಚನೆ ಕೇಸ್​ನಲ್ಲಿ ಪಾಲುದಾರ ಆಗಿರಲೇಬೇಕು. ಆದರೆ ಸುಪ್ರಿಯಾ ವಿರುದ್ಧ ಮಾತ್ರ ಕೇಸ್​ ದಾಖಲಿಸಿದ್ದು ಯಾಕೆ ಎನ್ನುವ ಪ್ರಶ್ನೆಯೂ ಸೃಷ್ಟಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಪ್ರಿಯಾ ಯಾವ ರೀತಿಯ ಪ್ರತ್ಯುತ್ತರ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ತಾನು ಸಾಯುವುದು ಖಚಿತ ಎಂದು ತಿಳಿದಿದ್ದರೂ ಕೃಷ್ಣಪ್ರಸಾದ್​​, ವಿಮೆ ಮಾಡಿಸಿದ್ದರೂ ತನ್ನ ಹೆಂಡತಿ ಸುಖವಾಗಿರಲಿ ಎಂದು ವಿಮೆ ಮಾಡಿಸಿದ ಆ ಮುಗ್ದ ಜೀವಕ್ಕೆ ಸಲಾಂ ಹೇಳಲೇಬೇಕಿದೆ.

Related Posts

Don't Miss it !