ಅವಳಿಗೂ ಅವನಿಗೂ 16 ವರ್ಷ ಅಂತರ..! ಗಂಡನ ಶಕ್ತಿ ಕುಂದಿತ್ತು ಕೊಂದಳು ಪತ್ನಿ..!

ಬೆಂಗಳೂರು ಸಾಕಷ್ಟು ಅನಾಹುತಗಳಿಗೆ ಸಾಕ್ಷಿ ಆಗುತ್ತೆ ಅನ್ನೋದಕ್ಕೆ ಈ ಕೇಸ್​ ಕೂಡ ಒಂದು. ಯಾಕೆಂದ್ರೆ ಅಕ್ಟೋಬರ್​ 22ರಂದು ಯಲಹಂಕದಲ್ಲಿ ಕೊಲೆ ಆಗಿದ್ದ ಪ್ರಕರಣದಲ್ಲಿ ಹೆಂಡತಿಯೇ ಮಾಸ್ಟರ್​ ಮೈಂಡ್​ ಅನ್ನೋದು ಹೊರ ಪ್ರಪಂಚಕ್ಕೆ ಗೊತ್ತಾಗಿದೆ. ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದು ಮುಗಿಸಿದ್ದ ಹೆಂಡತಿ ಜೈಲು ಪಾಲಾಗಿದ್ದಾಳೆ. ಗಂಡನ ಹೆಣದ ಎದುರು ಕಣ್ಣೀರು ಹಾಕುವ ನಾಟಕ ಆಡಿದ್ದ ಕ್ರೂರ ಹೆಣ್ಣಿಗೆ ಪೊಲೀಸ್ರು ಕೈಕೋಳ ಹಾಕಿ ಜೈಲಿಗೆ ಅಟ್ಟಿದ್ದಾರೆ. ಅಷ್ಟಕ್ಕೂ ಈ ಕೊಲೆಗೆ ಕಾರಣ ಏನು ಅನ್ನೋದು ಪೊಲೀಸ್ರನ್ನೇ ಒಂದುಕ್ಷಣ ದಿಗ್ಬ್ರಮೆ ಆಗುವಂತೆ ಮಾಡಿದೆ ಅನ್ನೋದು ಮಾತ್ರ ಸತ್ಯ.

ಯಲಹಂಕದ ಕೊಂಡಪ್ಪ ಲೇಔಟ್​ನಲ್ಲಿ ಮಗ್ಗಾ ಬಿಡುವ ಕೆಲಸ ಮಾಡ್ತಿದ್ದ ಚಂದ್ರಶೇಖರ್​ ಕೊಲೆಯಾದ ವ್ಯಕ್ತಿ. ಆಂಧ್ರಪ್ರದೇಶದ ಚಂದ್ರಶೇಖರ್​​, ಮದುವೆ ಆದ ಬಳಿಕ ಕೇವಲ 6 ತಿಂಗಳ ಹಿಂದೆ ಅಷ್ಟೆ ಬೆಂಗಳೂರಿಗೆ ಶಿಫ್ಟ್​ ಆಗಿದ್ರು. ಆದರೆ ಇದೀಗ ಮನೆಯ ಟೆರೇಸ್​ ಮೇಲೆಯೇ ಕೊಲೆಯಾಗಿದ್ದು, ಭಾರೀ ಅನುಮಾನಕ್ಕೆ ಕಾರಣವಾಗಿದೆ. ಮೊದಲಿಗೆ ಹೆಂಡತಿ ಶ್ವೇತಾ ಗಂಡನ ಶವದ ಎದುರು ಗೋಳಾಡಿದ್ದನ್ನು ನೋಡಿದ ಪೊಲೀಸ್ರು, ಪತ್ನಿ ಮೇಲೆ ಅನುಮಾನಪಟ್ಟಿರಲಿಲ್ಲ. ಆದರೆ ಯಾವಾಗ ಕುಟುಂಬಸ್ಥರ ವಿಚಾರಣೆ ಆಯ್ತೋ ಆಗ ಹೆಂಡತಿಯೇ ಕೊಲೆಗಾತಿ ಅನ್ನೋದನ್ನು ಪೊಲೀಸ್ರು ಖಚಿತ ಮಾಡ್ಕೊಂಡು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ರು. ಮೊದಲಿಗೆ ನನಗೇನು ಗೊತ್ತೇ ಇಲ್ಲ ಎನ್ನುವಂತೆ ನೌಟಂಕಿ ಆಟವಾಡಿದ್ದ ಶ್ನೇತಾ ಕೊನೆಗೆ ಪೊಲೀಸರ ಭಾಷೆಗೆ ಒಪ್ಪಿಕೊಂಡಿದ್ದಾಳೆ.

ಕೊಲೆಗಾತಿ ಶ್ವೇತಾ ಹಾಗೂ ಕೊಲೆಯಾದ ನಾರಾಯಣಸ್ವಾಮಿ ಮೂಲತಃ ಆಂಧ್ರಪ್ರದೇಶದ ಹಿಂದೂಪುರದವರು. ನಾರಾಯಣಸ್ವಾಮಿ ಅಕ್ಕನ ಮಗಳನ್ನೇ ಮದುವೆ ಆಗಿದ್ದ. ಆದರೆ ಶ್ವೇತಾಗೆ ಹಿಂದೂಪರದಲ್ಲೇ ಈಗಾಗಲೇ ಓರ್ವ ಪ್ರೇಮಿ ಇದ್ದ. ಆತನ ಜೊತೆಗೆ ಚಕ್ಕಂದ ಆಡುತ್ತಿದ್ದ ಶ್ವೇತಾ ಮನೆಯವರ ನಿರ್ಧಾರವನ್ನು ವಿರೋಧಿಸಲು ಸಾಧ್ಯವಾಗದೆ ಯಾತಿ ತಮ್ಮನನ್ನೇ ಮದುವೆ ಆಗುವ ನಿರ್ಧಾರ ಮಾಡಿದ್ದಳು. ಯಾವಾಗ ಶ್ವೇತಾಳನ್ನು ಮದುವೆ ಆಗ್ತಿದ್ದ ಹಾಗೆ ಹಿಂದೂಪುರದಿಂದ ಬೆಂಗಳೂರಿಗೆ ಕುಟುಂಬ ಶಿಫ್ಟ್​ ಆಗಿತ್ತು. ಆಗ ಶ್ವೇತಾ ಗಂಡನನ್ನೇ ಮುಗಿಸಿ, ತವರು ಮನೆ ಸೇರುವ ಪ್ಲ್ಯಾನ್​ ಮಾಡಿದ್ದಳು. ಅದರ ಭಾಗವಾಗಿಯೇ ಚಂದ್ರಶೇಖರ್​ ಕೊಲೆ.

ಸ್ವಂತ ಅಕ್ಕನ ಮಗಳನ್ನೇ ಮದುವೆ ಆಗ್ಬೇಕು ಅನ್ನೋ ಕಾರಣಕ್ಕೋ ಏನೋ ಮದುವೆ ಆಗದೆ ಶ್ವೇತಾಳನ್ನು ಮದುವೆ ಆಗಿದ್ದ ಚಂದ್ರಶೇಖರ್​. ಶ್ವೇತಾ ಹಾಗು ಚಂದ್ರಶೇಖರ್​ ನಡುವೆ ಬರೋಬ್ಬರಿ 16 ವರ್ಷಗಳ ಅಂತರವಿತ್ತು. ಪ್ರೇಮಿ ಸುರೇಶ್​ ತೋಳ್ಬಲದ ಎದುರು ಚಂದ್ರಶೇಖರ್​ ಶಕ್ತಿ ಕ್ಷೀಣಿಸಿತ್ತು. ಇದೇ ಕಾರಣಕ್ಕೆ ಸುರೇಶ್​ ಜೊತೆಗೆ ರಹಸ್ಯ ಕಾಮಸುಖ ಪಡೆಯುತ್ತಿದ್ದ ಶ್ವೇತಾ ಚಂದ್ರಶೇಖರ್​ ಕೊಲೆಗೆ ಮಾಸ್ಟರ್​ ಮೈಂಡ್​ ಆಗಿದ್ದಳು. ಕೊಲೆಯಾದ ಬಳಿಕ ಹೇಗೆ ನಡೆದುಕೊಳ್ಬೇಕು ಅನ್ನೋ ಬಗ್ಗೆಯೂ ಪ್ಲ್ಯಾನ್​ ಮಾಡಿದ್ದಳು. ಆದರೆ ಕುಟುಂಬಸ್ಥರನ್ನು ವಿಚಾರಣೆ ಮಾಡಿದಾಗ ಈ ಹಿಂದೆ ಹಿಂದೂಪುರದಲ್ಲಿ ದಾಖಲಾದ ಕೇಸ್​ ಒಂದರ ಬಗ್ಗೆ ಮಾಹಿತಿ ನೀಡಿದ್ದರು. ಶ್ವೇತಾ ಲವ್ವರ್​ ಕೆಟ್ಟದಾಗಿ ಮೆಸೇಜ್​ ಮಾಡಿದ್ದ ಅನ್ನೋ ಸುದ್ದಿ ತಿಳಿಯುತ್ತಿದ್ದ ಹಾಗೆ ಪೊಲೀಸ್ರು ಶ್ವೇತಾಳನ್ನು ಬಂಧಿಸಿ, ಸತ್ಯವನ್ನು ಕಕ್ಕಿಸಿದ್ದಾರೆ. ಆದರೆ ಚಂದ್ರಶೇಖರ್​ ಮಾತ್ರ ಪ್ರಾಣ ಕಳೆದುಕೊಂಡಿದ್ದಾನೆ.

Related Posts

Don't Miss it !