Husband Murder; ಮಧ್ಯರಾತ್ರಿ ಗಂಡನ ಕೊಲೆಗೆ ಇದೇ ಕಾರಣವೇ..?

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತು ಚಾಲ್ತಿಯಲ್ಲಿದೆ. ಆದರೆ ಭಾನುವಾರ ರಾತ್ರಿ ಮಲಗುವ ಮುನ್ನ ಶುರುವಾದ ಜಗಳ ಗಂಡನ ಕೊಲೆಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅರುಳೋ ಮರುಳೋ ಎನ್ನುವ ಸಮಯದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ದಂಪತಿ, ದುರಂತ ಕಥೆಗೆ ಸಾಕ್ಷಿಯಾಗಿದ್ದಾರೆ. ಒಬ್ಬರು ಸತ್ತು ಸ್ಮಶಾನ ಸೇರಿದ್ರೆ ಮತ್ತೋರ್ವರು ಜೈಲು ಕಂಬಿಗಳ ಹಿಂದೆ ಬಂಧಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 52 ವರ್ಷದ ಗಂಡನನ್ನು ಸ್ವತಃ ಕಟ್ಟಿಕೊಂಡ ಹೆಂಡತಿಯೇ ಕೊಲೆಗೈದಿದ್ದಾರೆ. ಇಬ್ಬರು ಮದುವೆಗೆ ಬಂದು ನಿಂತಿರುವ ಹೆಣ್ಣುಮಕ್ಕಳು ಮನೆಯಲ್ಲಿದ್ದರೂ ತಾಯಿ ಗಂಡನನ್ನು ಕೊಂದ ಆರೋಪದಲ್ಲಿ ಜೈಲು ಸೇರುವಂತಾಗಿದೆ. ಈ ಘಟನೆಗೆ ಕಾರಣವಾಗಿದ್ದ ಹೆಂಡತಿಯ ಕಾಲು ಗಂಡನಿಗೆ ಟಚ್​ ಆಯ್ತು ಎನ್ನುವುದು ಎನ್ನುವ ವಿಚಾರ ಆಶ್ಚರ್ಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ; Care Taker; ಅಗರ್ಭ ಶ್ರೀಮಂತನ ಬಾಳಿಗೆ ನಕಲಿ ಸಂಗಾತಿ, ವಿಷವುಣಿಸಿದಳಾ ಈ ಮಹಿಳೆ..!?

ಅಂಧ್ರಹಳ್ಳಿಯಲ್ಲಿ ಮಲಗಿದ್ದ ಗಂಡನಿಗೆ ಕಾಲು ಟಚ್​..!

ಅಂಧ್ರಹಳ್ಳಿ ನಿವಾಸಿಗಳಾಗಿದ್ದ ಉಮೇಶ್​ ಹಾಗೂ ವರಲಕ್ಷ್ಮೀಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳಿಗೆ ಮದುವೆ ಮಾಡುವ ಬಗ್ಗೆ ಮನೆಯಲ್ಲಿ ಇತ್ತೀಚಿಗೆ ಮಾತುಕತೆಗಳೂ ನಡೆಯುತ್ತಿದ್ದವು. ಆದರೆ ಭಾನುವಾರ ರಾತ್ರಿ ಊಟ ಮಾಡಿ ಮಲಗಿದ ಬಳಿಕ ಸಣ್ಣದೊಂದು ಕಾರಣಕ್ಕೆ ಜಗಳ ಶುರುವಾಗಿತ್ತು. ಹೆಂಡತಿ ರೂಮಿಗೆ ಹೋಗುವ ಸಮಯದಲ್ಲಿ ಗಂಡನ ಕಾಲಿಗೆ ಹೆಂಡತಿ ಕಾಲು ತಾಗಿತ್ತು. ಈ ವಿಚಾರದಲ್ಲಿ ಉಮೇಶ್​ ಜಗಳ ಶುರು ಮಾಡಿದ್ದ ಎನ್ನಲಾಗಿದೆ. ಇದೇ ಸಮಯದಲ್ಲಿ ಹೆಂಡತಿ ಕೋಪವೂ ಮಿತಿ ಮೀರಿತ್ತು. ಮನೆಯಲ್ಲಿ ರಾಡ್​ನಲ್ಲಿ ಉಮೇಶ್​ ಕಡೆಗೆ ಕೋಪದಿಂದ ಬೀಸಿದ್ದರು. ಕ್ಷಣಮಾತ್ರದಲ್ಲಿ ಉಮೇಶ್​ ಹೆಣವಾಗಿದ್ದರು. ಬೆಳಗ್ಗೆ ಬ್ಯಾಡರಹಳ್ಳಿ ಪೊಲೀಸರು ಮಹಿಳೆ ವರಲಕ್ಷ್ಮೀಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೋಪದಲ್ಲಿ ನಡೆದುಹೋದ ಅಚಾತುರ್ಯ ಘಟನೆ ಬಗ್ಗೆ ತಾನೇ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೂ ಮಗುವೆಗೆ ಬಂದ ಮಕ್ಕಳಿರುವಾಗ ಗಂಡ ಹೆಂಡತಿ ಕೋಪ ಸಂಕಷ್ಟಕ್ಕೆ ದೂಡಿದೆ.

ಕೊಲೆಯಾದ ಉಮೇಶ್

ಗಲಾಟೆ ಮಾಡುವ ಮನುಷ್ಯನಲ್ಲ ಎನ್ನುತ್ತಾರೆ ಸ್ಥಳೀಯರು..!

ಉಮೇಶ್​​ ಆರ್ಥಿಕವಾಗಿಯೂ ಸದೃಢವಾಗಿದ್ದು, ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿದ್ದರು ಎನ್ನುವುದನ್ನು ಸ್ಥಳೀಯರು ಹಂಚಿಕೊಂಡಿದ್ದಾರೆ. ಅಕ್ಕಪಕ್ಕದವರ ಜೊತೆಗೂ ಯಾವುದೇ ರೀತಿಯಲ್ಲಿ ಕೆಟ್ಟ ರೀತಿಯಲ್ಲಿ ನಡೆದುಕೊಂಡವರಲ್ಲ, ಹೆಂಡತಿಯನ್ನು ಕೆಲಸಕ್ಕೂ ಕಳುಹಿಸಿದವರಲ್ಲ. ರಾತ್ರಿ 10.30ರ ತನಕವೂ ನಮ್ಮ ಜೊತೆಗೆ ಮಾತನಾಡಿಕೊಂಡಿದ್ದರು. ಸ್ವಂತ ಮನೆಯಿದ್ದು, ಯಾವುದೇ ಸಮಸ್ಯೆ ಇಲ್ಲದೆ ಬದುಕು ನಡೆಸುತ್ತಿದ್ದರು. ಯಾರೊಂದಿಗೂ ಜಗಳ ಆಡುತ್ತಿರಲಿಲ್ಲ, ಕುಡಿತದ ಚಟವೂ ಇರಲಿಲ್ಲ. ತುಮಕೂರಿನ ಕುಣಿಗಲ್​​ ತಾಲೂಕಿನ ಜಿನ್ನಾಗರ ಗ್ರಾಮದವರು. ಸಣ್ಣಪುಟ್ಟ ರಿಯಲ್​ ಎಸ್ಟೇಟ್​​ ಕೆಲಸ ಮಾಡುತ್ತಿದ್ದರು. ಕೊಲೆ ಮಾಡಿದ್ದು ಯಾಕೆ ಎನ್ನುವುದೇ ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು. ಹೆಂಡತಿ ನೀಡಿರುವ ಕಾರಣವೂ ಸಕಾರಣ ಎನ್ನುವಂತೆ ಕಾಣದೆ ಇರುವುದು ಪೊಲೀಸರಿಗೆ ಚಿಂತೆಯನ್ನುಂಟು ಮಾಡಿದೆ. ಕಾಲು ಟಚ್​ ಆಗಿದ್ದಕ್ಕೆ ಗಲಾಟೆ ಶುರುವಾಯ್ತು, ನಾನೇ ಕೊಂದೆ ಎನ್ನುವ ಹೇಳಿಕೆಯೇ ಅನುಮಾನ ಮೂಡಿಸುವಂತಿದೆ.

Related Posts

Don't Miss it !