ಮೇನಲ್ಲಿ ಮದುವೆ.. ಜೂನ್‌ಗೆ ಜೂಟ್.. ಆಗಸ್ಟ್‌ಗೆ ಆತ್ಮಹತ್ಯೆ.. ಇದಕ್ಕೆ ಪೊಲೀಸರೇ ಕಾರಣ..

ಮೈಸೂರಿನಲ್ಲಿ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಮೇ 8 ರಂದು ಮದುವೆಯಾಗಿದ್ದ ಯುವತಿ ವರ್ಷಿತಾ ನೇಣಿಗೆ ಕೊರಳೊಡ್ಡಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. 20 ವರ್ಷದ ಯುವತಿ ವರ್ಷಿತಾ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದರು. ಆದರೂ ಪೋಷಕರು ಆಕೆಯನ್ನು ಬೇರೆ ಹುಡುಗನ ಜೊತೆಗೆ ಮದುವೆ ಮಾಡಿ ಕಳುಹಿಸಿದ್ದರು ಎನ್ನಲಾಗಿದೆ. ಮೇ ತಿಂಗಳಲ್ಲಿ ಮದುವೆಯಾದ ಬಳಿಕ ಎದುರಾದ ಆಷಾಢ ಮಾಸ ಆಕೆಯನ್ನು ಮತ್ತೊಂದು ದಿಕ್ಕಿನ ಕಡೆಗೆ ರವಾನಿಸಿದ್ದು, ಬದುಕು ಅಂತ್ಯವಾಗುವಂತೆ ಮಾಡಿದೆ.

ನವ ವಿವಾಹಿತೆ ಅಪ್ಪನ ಮನೆಗೆ ಬಂದು ಎಸ್ಕೇಪ್​..!

ಮದುವೆ ಇಷ್ಟ ಇಲ್ಲ ಎಂದರೂ ಕೇಳದ ಪೋಷಕರು ಪ್ರೀತಿಸಿದವನ ಜೊತೆಯಲ್ಲಿ ಮದುವೆ ಮಾಡಿಕೊಡಲು ನಿರಾಕರಿಸಿ ಚಾಮರಾಜ‌ನಗರ ಮೂಲದ ಯುವಕನ‌ ಜೊತೆ ಮದುವೆ ಮಾಡಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆಷಾಢ ಮಾಸ ಎದುರಾಗಿತ್ತು. ಹಿಂದೂಗಳ ಸಂಪ್ರದಾಯದಂತೆ ತವರಿಗೆ ಬಂದಿದ್ದ ವರ್ಷಿತಾ, ಪ್ರಿಯಕರನ ಜೊತೆಗೆ ಬೆಂಗಳೂರಿಗೆ ಜೂಟ್​ ಹೇಳಿದ್ದಳು. ಪ್ರಿಯಕರನ ಜೊತೆ ಪರಾರಿಯಾದರೂ ಹಠ ಬಿಡದೆ ಪೋಷಕರು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಬೆಂಗಳೂರಿನಿಂದ ಹುಡುಕಿ ಕರೆ ತಂದಿದ್ದ ಪೊಲೀಸ್​..!

ವರ್ಷಿತಾ ಪ್ರಿಯಕರನ ಜೊತೆ ಬೆಂಗಳೂರಿಗೆ ಬಂದು ಜೀವನ ನಡೆಸುತ್ತಿದ್ದರೆ ಹುಲ್ಲಹಳ್ಳಿಯ ಪೊಲೀಸ್ರು ಬಂದು ಪ್ರೇಯಸಿ ಜೊತೆಗೆ ಪ್ರೇಮಿಯನ್ನು ಎಳೆದುಕೊಂಡು ಹೋಗಿದ್ದರು. ಪ್ರಿಯಕರನ ಜೊತೆ ಬೆಂಗಳೂರಿನಲ್ಲಿ ಪತ್ತೆಯಾದ ವರ್ಷಿತಾಳನ್ನು ರಾಂಪುರ ಗ್ರಾಮದ ತಾತನ ಮನೆಗೆ ಕಳುಹಿಸಿದ್ದರು. ಪೋಷಕರು ನನ್ನನ್ನು ಪ್ರೀತಿಸಿದವನ ಜೊತೆಗೆ ಬದುಕಲು ಬಿಡುತ್ತಿಲ್ಲ ಎನ್ನುವ ಕಾರಣಕ್ಕೆ ಮನನೊಂದ ಯುವತಿ ವರ್ಷಿತಾ ತಾತನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸ್​ ಇಲಾಖೆಯೇ ತಪ್ಪು ಮಾಡಿದೆ ಎನ್ನುವುದು ಮೇಲ್ನೋಟಕ್ಕೆ ಸತ್ಯ ಎನಿಸುತ್ತಿದೆ.

ವಯಸ್ಕ ಯುವತಿಗೆ ಸ್ವಂತ ನಿರ್ಧಾರದ ಅಧಿಕಾರ..!

ಪೋಷಕರು ಹೇಳಿದವನನ್ನು ಮದುವೆ ಆಗಿ ಆ ಬಳಿಕ ತಾನು ಪ್ರೀತಿಸಿದವನ ಜೊತೆಯಲ್ಲಿ ಬೆಂಗಳೂರಿಗೆ ತೆರಳಿ ಸುಖ ಸಂಸಾರದ ಕನಸು ಕಂಡಿದ್ದ ವರ್ಷಿತಾ ಇನ್ನು ನೆನಪು ಮಾತ್ರ. ಪೋಷಕರು ಹಠ ಮಾಡಿ ಮಗಳನ್ನು ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ರಾದ್ದಾಂತಗಳು ಗೊತ್ತಿದ್ದರೂ ಮದುವೆಯಾಗಿದ್ದ ಚಾಮರಾಜನಗರದ ಹುಡುಗ ಹೆಂಡತಿ ಕಳೆದುಕೊಂಡಂತೆ ಆಗಿದೆ. ಪ್ರೀತಿಸಿದ ಯುವಕ ಪೊಲೀಸರ ಕೇಸ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆದರೆ ಇದಕ್ಕೆಲ್ಲಾ ಪ್ರಮುಖ ಕಾರಣ ಕರ್ತರಾದ ಪೊಲೀಸ್ರು ಮಾತ್ರ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ.

ವಯಸ್ಕ ಯುವತಿಯನ್ನು ಎಳೆದು ತಂದಿದ್ದು ತಪ್ಪಲ್ಲವೇ..?

ಭಾರತದ ಸಂವಿಧಾನದ ಪ್ರಕಾರ ವಯಸ್ಕರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅರ್ಹಳು. ಪೋಷಕರ ದೂರಿನ ಮೇರೆಗೆ ಬೆಂಗಳೂರಿಗೆ ಬಂದು ಪೊಲೀಸರು ಕರೆದೊಯ್ಯುವಾಗ ನಾವಿಬ್ಬರೂ ಅಕ್ಕಪಕ್ಕದ ಮನೆಯವರು. ನಾವು ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ ಎಂದು ಪರಿಪರಿಯಾಗಿ ಬೇಡಿಕೊಂಡರು ಬಿಡದೆ ಕರೆದುಕೊಂಡು ಹೋಗಿದ್ದು ಪೊಲೀಸರ ತಪ್ಪಲ್ಲವೇ..? ಒಂದು ವೇಳೆ ಪೋಷಕರ ಎದುರಿನಲ್ಲಿ ಕೂರಿಸಿ ಮಾತನಾಡಿಸಿ, ಇಬ್ಬರು ವಯಸ್ಕರು, ಅವರನ್ನು ಬದುಕಲು ಬಿಟ್ಟು ಬಿಡಿ ಎಂದು ಪೊಲೀಸರೇ ಪೋಷಕರ ಮನವೊಲಿಸುವ ಕೆಲಸ ಮಾಡಿಸಬಹುದಿತ್ತು. ಆದರೆ ಹಿಡಿಕೊಂಡು ಹೋಗಿದ್ದೂ ಅಲ್ಲದೆ ಪೋಷಕರ ವಶಕ್ಕೆ ಕೊಟ್ಟಿದ್ದು ಮತ್ತೊಂದು ತಪ್ಪು. ಇದೀಗ ಆಕೆ ಜೀವವನ್ನೇ ಕಳೆದಕೊಂಡಿದ್ದಾಳೆ. ಇದಕ್ಕೆ ಹೊಣೆ ಯಾರು..?

Related Posts

Don't Miss it !