ದೂರು ಕೊಡಲು ಹೋದ ಮಹಿಳೆಯನ್ನು ಮಂಚಕ್ಕೆ ಕರೆದ ಖಾಕಿ..! ಆಯುಕ್ತರ ಬಳಿ ಅಬಲೆ ಅಳಲು..

ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೊಟ್ಟು, ಅಥವಾ ಮನೆಯನ್ನು ಲೀಸ್​ಗೆ ಹಾಕಿಕೊಂಡು ಜೀವನ ಮಾಡುವ ಒಂದು ವರ್ಗದ ಜನರೇ ಇದ್ದಾರೆ. ಮನೆ ಬಾಡಿಗೆ ಬಂದರೆ ಜೀವನ, ಇಲ್ಲದಿದ್ದರೆ ಸಂಷಕ್ಟ ಎನ್ನುವ ಪರಿಸ್ಥಿತಿಯೂ ಇದೆ. ಅದೂ ಕೂಡ ಕೊರೊನಾ ಸಂಕಷ್ಟದ ಸಮಯದಲ್ಲಿ ಮನೆ ಬಾಡಿಗೆಗೆ ಜನರಿಲ್ಲದೆ ಮಾಲೀಕರು ಸಾಕಷ್ಟು ಸಂಕಷ್ಟವನ್ನೂ ಎದುರಿಸಿರುವ ಸಾಕಷ್ಟು ಘಟನೆಗಳು ನಮ್ಮ ಕಣ್ಣ ಮುಂದಿದೆ. ಆದರೆ ಬೆಂಗಳೂರಿನಲ್ಲಿ ಭೋಗ್ಯಕ್ಕೆ ಮನೆ ಪಡೆದವರಿಂದಲೇ ಸಂಕಷ್ಟ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಭೋಗ್ಯಕ್ಕೆ ಇರುವ ಜನರು ನಮಗೆ ಹಿಂಸೆ ಕೊಡ್ತಿದ್ದಾರೆ ಎಂದು ಪೊಲೀಸರ ಬಳಿಗೆ ದೂರು ತೆಗೆದುಕೊಂಡು ಹೋದಾಗ, ಮಂಚಕ್ಕೆ ಬಾ ಎಂದು ಕರೆದಿರುವ ಖಾಕಿ ಕಪಿಚೇಷ್ಟೆಯೂ ನಡೆದಿದೆ. ಇದೀಗ ಪೊಲೀಸ್​ ಆಯುಕ್ತರ ಕಚೇರಿ ಮೆಟ್ಟಿಲೇರಿದೆ ಪ್ರಕರಣ.

ಅಸಲಿಗೆ ಆಗಿರುವ ಘಟನೆ ಏನು..? ಮಂಚಕ್ಕೆ ಕರೆದಿದ್ಯಾರು..?

ಬೆಂಗಳೂರಿನ ದೊಡ್ಡ ಬಾಣಸವಾಡಿಯ ಶಕ್ತಿನಗರದಲ್ಲಿ ಶೀಲಾ ಶುಭಕರ್ ಎಂಬುವರ ಮಾಲೀಕತ್ವದ ಮನೆ ಇದೆ. ಈ ಮನೆಯನ್ನು ವರಮಹಾಲಕ್ಷ್ಮಿ ಹಾಗೂ ಸುಮತಿ ಎಂಬ ದಂಪತಿ ₹7 ಲಕ್ಷಕ್ಕೆ ಭೋಗ್ಯಕ್ಕೆ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು ₹600 ರೂಪಾಯಿ ನೀರಿನ ಬಿಲ್​ ಕೊಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಇಬ್ಬರು ಗಂಡು ಮಕ್ಕಳ ಜೊತೆಗೆ ವಾಸವಿರುವ ವರಮಹಾಲಕ್ಷ್ಮೀ ಹಾಗೂ ಸುಮತಿ ದಂಪತಿ 1 ವರ್ಷ ಆದರೂ ನೀರಿನ ಬಿಲ್​ ಕೊಟ್ಟಿರಲಿಲ್ಲ. ಈ ಬಗ್ಗೆ ಭೋಗ್ಯದಾರರ ಬಳಿ ಹಣ ಕೇಳಲು ಹೋದಾಗ ಗಲಾಟೆ ನಡೆದಿತ್ತು. ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮನೆ ಮಾಲಕಿ ಶೀಲಾ ಶುಭಕರ್ ಎಂಬುವರು ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ ಅಲ್ಲಿನ ಪೊಲೀಸ್​ ಇನ್ಸ್​ಪೆಕ್ಟರ್​​ ವಸಂತ್​ ಕುಮಾರ್​, ನಾನು ಕ್ರಮ ಕೈಗೊಳ್ಳಬೇಕು ಎಂದರೆ ಹಣ ಕೊಡು, ಇಲ್ಲದಿದ್ದರೆ ನಾನು ಕರೆದಾಗ ನನ್ನ ಜೊತೆಯಲ್ಲಿ ಇರಬೇಕು ಅರ್ಥಾತ್​ ಮಂಚಕ್ಕೆ ಬರಬೇಕು ಎಂದು ನೇರವಾಗಿಯೇ ಹೇಳಿದ್ದಾರೆ ಎಂದು ದೂರು ನೀಡಲಾಗಿದೆ.

Read This; ಇಬ್ಬರು ಪೇದೆಗಳ ಬಂಧನ ಇನ್ಸ್​​ಪೆಕ್ಟರ್​, ಸಬ್​ ಇನ್ಸ್​ಪೆಕ್ಟರ್​ ಸಸ್ಪೆಂಡ್​..! ಎತ್ತ ಸಾಗುತ್ತಿದೆ ನಮ್ಮ ಸಮಾಜ..?

ಮಂಚಕ್ಕೆ ಬಾರಲಿಲ್ಲ ಎಂದು ಅಟ್ರಾಸಿಟಿ (Atrocity) ಕೇಸ್​..!

6 ತಿಂಗಳ ಹಿಂದೆಯೇ ಈ ಗಲಾಟೆ ನಡೆದಿದ್ದು, ದೂರು ನೀಡಲು ತೆರಳಿದಾಗ ಭೋಗ್ಯದಾರರು ಹೌದು ನೀರಿನ ಬಿಲ್​ ಕೊಡಬೇಕು ಎಂದು ಒಪ್ಪಿಕೊಂಡಿದ್ದರಂತೆ. ಆದರೆ 2 ತಿಂಗಳ ನಂತರ ಮತ್ತೆ ಅದೇ ಕಿರಿಕಿರಿ ಮಾಡಿದ್ದು, ಮತ್ತೆ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಆ ವೇಳೆ ನೀನು ನನಗೆ ಇಷ್ಟ, ನಾನು ಕರೆದಾಗ ನೀನು ಬರಬೇಕು, ಇಲ್ಲದಿದ್ದರೆ ಸಮಸ್ಯೆ ಎಂದಿದ್ದರಂತೆ. ಪೊಲೀಸ್​ ಇನ್ಸ್​ಪೆಕ್ಟರ್​ ವಸಂತ್​ ಕುಮಾರ್​ ಮಾತನ್ನು ತಿರಸ್ಕರಿಸಿದ ಬಳಿಕ ಸಮಸ್ಯೆ ಮತ್ತಷ್ಟು ಹೆಚ್ಚಾಯ್ತು ಎನ್ನುವುದು ಶೀಲಾ ಶುಭಕರ್​ ಆರೋಪ. ನೀರಿಲ್ಲ, ಕರೆಂಟ್​ ಇಲ್ಲ ಎಂದು ಪದೇ ಪದೇ ಭೋಗ್ಯದಾರರು ದೂರು ನೀಡುವುದು. ವಾರಕ್ಕೆ ಮೂರು ದಿನ ಪೊಲೀಸರನ್ನು ಕಳುಹಿಸಿ ಮನೆ ಬಳಿ ಗಲಾಟೆ ಮಾಡಿಸುವುದು ಮಾಡಿದ್ರಂತೆ. ಶೀಲಾ ಅವರ ತಾಯಿಯನ್ನೂ ಹಿಯ್ಯಾಳಿಸಿದ ಕಾರಣಕ್ಕೆ ಸ್ವಂತ ಮನೆಯನ್ನೇ ಬಿಟ್ಟು ಮಗಳ ಮನೆಗೆ ಹೋದರು ಎಂದು ದೂರುತ್ತಾರೆ ಶೀಲಾ. ಆ ನಂತರ ಭೋಗ್ಯದಾರರಿಗೆ ಸ್ವತಃ ಇನ್ಸ್​ಪೆಕ್ಟರ್​ ವಸಂತ್​ ಕುಮಾರ್​ ಹೇಳಿಕೊಟ್ಟು ಅಟ್ರಾಸಿಟಿ ದೂರನ್ನೂ ದಾಖಲು ಮಾಡಿಕೊಂಡರು. ನಾನು ಜಾಮೀನು ಪಡೆದು ಹೊರಕ್ಕೆ ಬಂದೆ ಎನ್ನುವ ಆರೋಪ ಮಾಡಿದ್ದಾರೆ.

Also Read; ಬನಶಂಕರಿ ದೇವರ ಭಕ್ತರಿಗೆ ಬಿತ್ತು ಬೆತ್ತದಲ್ಲಿ ಏಟು..? ಉಡುಪಿಯಲ್ಲಿ..?

ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಶೀಲಾ ಅನುಭವ..!

ಶಿಲಾ ಕೈ ಮೇಲೆ ಕಚ್ಚಿರುವ ಗುರುತು ಇದೆ. ಹಾಗೆಯೇ ಒಮ್ಮೆ ಕೈನಲ್ಲಿ ರಕ್ತ ಸೋರುವಂತೆ ಹಲ್ಲೆಯಾಗಿರುವ ಫೋಟೋ ಕೂಡ ಇದೆ. ಭೋಗ್ಯಕ್ಕೆ ಬಂದವರು ಸಮಸ್ಯೆ ಆಗಿದ್ದಾರೆ ಎಂದು ಪೊಲೀಸರ ಬಳಿ ನ್ಯಾಯ ಕೇಳಲು ಹೋದ ಮಹಿಳೆಯನ್ನು ಮಂಚಕ್ಕೆ ಕರೆದು ಮಾನಸಿಕ ಹಿಂಸೆ ನೀಡಿರುವುದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ ಶೀಲಾ ಅವರ ಅನುಭವ. ಇದೀಗ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರ ಅಂಗಳಕ್ಕೆ ದೂರು ಸಲ್ಲಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ತಮ್ಮ ಪೊಲೀಸ್​ ಇಲಾಖೆಯಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ತುಸು ಕೋಪಗೊಂಡಿರುವ ಕಮಲ್​ ಪಂತ್​ ಅವರು ಯಾವ ನಿರ್ಧಾರ ಕೈಗೊಳ್ತಾರೆ. ಪ್ರಕರಣದಲ್ಲಿ ಯಾರು ತಪ್ಪು..? ಯಾರು ಸರಿ..? ಎನ್ನುವ ಬಗ್ಗೆ ನಿರ್ಧಾರಕ್ಕೆ ಬರುವ ಮುನ್ನ ತನಿಖೆಗೆ ಆದೇಶ ಮಾಡ್ತಾರಾ..? ಎನ್ನುವುದರ ಮೇಲೆ ಶೀಲಾ ಶುಭಕರ್​ ಅವರ ದೂರಿನ ಭವಿಷ್ಯ ನಿಂತಿದೆ. ಒಂದು ವೇಳೆ ಇನ್ಸ್​ಪೆಕ್ಟರ್​ ವಸಂತ್​ ಕುಮಾರ್​ ತಪ್ಪು ಮಾಡಿದ್ದಾರೆ ಎನ್ನುವುದು ಖಾತ್ರಿ ಆದರೆ ಸಸ್ಪೆಂಡ್​ ಮಾಡುವುದಲ್ಲ, ಸೇವೆಯಿಂದ ವಜಾ ಮಾಡಿ ಅತ್ಯಾಚಾರ ಯತ್ನ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದು ಸೂಕ್ತ. ಆರಕ್ಷಕನೇ ಭಕ್ಷನಾದರೆ ನರಭಕ್ಷಕ ವ್ಯಾಘ್ರನಿಗೆ ಸಮ.

Related Posts

Don't Miss it !