ಸಾಮೂಹಿಕ ಅತ್ಯಾಚಾರವೋ.. ಲೈಂಗಿಕ ಕಾರ್ಯಕರ್ತೆ ಮೇಲಿನ ದೌರ್ಜನ್ಯವೋ..?

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಇದೀಗ ಯಾದಗಿರಿಯಲ್ಲಿ ಸಾಮೂಹಿಕ ಅತ್ಯಾಚಾರ ಎಂಬ ಅಮಾನವೀಯ ಘಟನೆ ನಡೆದಿದೆ ಎಂಬುದು ಭಾರೀ ಸದ್ದು ಮಾಡ್ತಿದೆ. ಮಹಿಳೆಯನ್ನ ಬೆತ್ತಲೆ ಮಾಡಿ ಹಲ್ಲೆ ನಡೆಸಿರುವ ವಿಡಿಯೋ ಕೂಡ ವೈರಲ್​ ಆಗಿದೆ. ಮಹಿಳೆಯ ಅಂಗಾಂಗ ಮುಟ್ಟಿ ವಿಕೃತವಾಗಿ ನಡೆದುಕೊಂಡಿದ್ದಾರೆ ಆ ಯುವಕರು. ಯಾದಗಿರಿ ಹಾಗೂ ಶಹಾಪುರ ರಾಜ್ಯ ಹೆದ್ದಾರಿ ನಡುವೆ ಈ ಘಟನೆ ನಡೆದಿದೆ. ಮಹಿಳೆ ಮೇಲೆ ಹಲ್ಲೆ ನಡೆಸುವ ವೇಳೆ ಯುವಕನೊಬ್ಬ ನನ್ನಿಂದ 10 ರಿಂದ 15 ಸಾವಿರ ಹಣ ಪಡೆದಿದ್ದಾಳೆ ಎಂದು ಕೋಪತಾಪ ಪ್ರದರ್ಶನ ಮಾಡಿದ್ದಾನೆ . ಆ ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ರು ಬಿಡದ ಯುವಕರು ಹಸಿ ಜೋಳದ ಕಡ್ಡಿಯಿಂದ ಹಲ್ಲೆ ಮಾಡಿದ್ದಾರೆ. ಕಿರುಚಾಡಿದ್ರೆ ಇಲ್ಲೆ ಕೊಂದು ಹಾಕುತ್ತೇವೆ ಎನ್ನುವ ಯುವಕರ ಗುಂಪು,, ಇಲ್ಲಿ ಏನು ಮಾಡಿದರೂ ಕೇಳೋಕೆ ಯಾರು ಇಲ್ಲ ಎಂದು ಬೆದರಿಸಿದ್ದಾರೆ.

ವಿಡಿಯೋ ವೈರಲ್​ ಬಳಿಕ ಎಚ್ಚೆತ್ತ ಖಾಕಿಪಡೆ..!

ಮಹಿಳೆಯನ್ನ ನಗ್ನಗೊಳಿಸಿ ಥಳಿಸಿದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಕರೆತಂದು ಯಾದಗಿರಿ ಎಸ್​ಪಿ ವೇದಮೂರ್ತಿ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ಸಂತ್ರಸ್ಥೆಯನ್ನೂ ವಿಚಾರಣೆ ನಡೆಸಲಾಗಿದೆ. ಡಿವೈಎಸ್​ಪಿ ಸಂತೋಷ ಬನ್ನಹಟ್ಟಿ, ಸಿಬಿಐ ಚೆನ್ನಯ್ಯ ಹಿರೇಮಠ, ಶ್ರೀನಿವಾಸ ಅಲ್ಲಾಪುರಿ ಅವರು ವಿಚಾರಣೆ ನಡೆಸಿದ್ದಾರೆ. ಕೃತ್ಯದ ವಿಡಿಯೋ ಮಾಡಲು ಬಳಸಿದ್ದ yಉವಕನ ಮೊಬೈಲ್ ಹಾಗೂ ಸಂತ್ರಸ್ಥೆ ಬಳಿ ಇದ್ದ ಕಿಪ್ಯಾಡ್ ಪೋನ್ ಹಾಗೂ ಉಳಿದ ಆರೋಪಿಗಳ ಬಳಿಯಿದ್ದ 3 ಸ್ಮಾರ್ಟ್ ಪೋನ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಾಗೂ ಸಂತ್ರಸ್ಥೆಯನ್ನು ಕರೆದೊಯ್ದು ರಸ್ತಾಪುರ ಕ್ರಾಸ್ ಬಳಿ ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಆರೋಪಿಗಳಾದ ನಿಂಗರಾಜ, ಅಯ್ಯಪ್ಪ, ಭೀಮಾಶಂಕರ ಹಾಗೂ ಶರಣು ಎಂಬುವರನ್ನು ಬಂಧನ ಮಾಡಲಾಗಿದೆ.

Read this also

ಆತ್ಮಸ್ಥೈರ್ಯ ತುಂಬಿದ ಡಿಸಿಯಿಂದ ಪರಿಹಾರ..!

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ಥೆಗೆ ಯಾದಗಿರಿ ಜಿಲ್ಲಾಧಿಕಾರಿ ರಾಗಪ್ರಿಯ ಆತ್ಮಸ್ಥೈರ್ಯ ತುಂಬಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಸ್ಥೈರ್ಯ ನಿಧಿಯಡಿ 25 ಸಾವಿರ ರೂಪಾಯಿ ಹಾಗೂ ದೌರ್ಜನ್ಯ ತಡೆ ಕಾಯ್ದೆಯಡಿ 50 ಸಾವಿರ ಪರಿಹಾರದ ಹಣ ವಿತರಣೆ ಮಾಡಿದ್ದಾರೆ. ಸಂತ್ರಸ್ಥ ಮಹಿಳೆಗೆ ಸ್ವಯಂ ಉದ್ಯೋಗದ ತರಬೇತಿ ನೀಡಿ, ಸಾಲ ಸೌಲಭ್ಯ ನೀಡುವ ಭರವಸೆ ನೀಡಿದ ಜಿಲ್ಲಾಧಿಕಾರಿ ರಾಗಪ್ರಿಯ. ಆದರೆ ಅತ್ಯಾಚಾರ ನಡೆದಿದೆ ಎನ್ನಲಾದ ಘಟನೆ ನಡೆದು ಒಂದು ವರ್ಷ ಕಳೆದಿದ್ದು, ಮಹಿಳೆಗೆ ಪರಿಚಿತನಾಗಿದ್ದ ವ್ಯಕ್ತಿಯಿಂದಲೇ ಕೃತ್ಯ ನಡೆದಿದೆ ಎನ್ನಲಾಗ್ತಿದೆ. ಘಟನೆ ಬಳಿಕ ಪೊಲೀಸ್​ ಠಾಣೆಗೆ ದೂರು ನೀಡದಂತೆ ಹಣ ನೀಡಿ ಒತ್ತಡ ಹಾಕಿದ್ದರು ಎನ್ನಲಾಗ್ತಿದೆ. ಇದೇ ಕಾರಣದಿಂದ ಕುಟುಂಬಸ್ಥರಿಗೆ ವಿಚಾರ ಗೊತ್ತಾದರೂ ದೂರು ನೀಡಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಗೆ ಮಾಹಿತಿ ಸಿಕ್ಕ ಮೇಲೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

Read this also;

ಅತ್ಯಾಚಾರವೋ..? ಲೈಂಗಿಕ ಕಾರ್ಯಕರ್ತೆ ದೌರ್ಜನ್ಯವೋ..?

ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಮಹಿಳೆ ಲೈಂಗಿಕ ಕಾರ್ಯಕರ್ತಳಾಗಿ ಕೆಲಸ ಮಾಡುತ್ತಿದ್ದಳು ಎನ್ನುವುದು ಸ್ಥಳೀಯರು ಹೇಳುವ ಮಾತು. ಈ ಹಿಂದೆ ಹಣ ಪಡೆದು ವಂಚಿಸಿರುವ ವಿಚಾರದಲ್ಲಿ ಆಕೆಯನ್ನು ಹಿಂಸಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇ ಪ್ರಕರಣ ಈಗಾಗಲೇ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿ ರಾಜಿ ಪಂಚಾಯ್ತಿ ಮಾಡಲಾಗಿದೆ. ಆದರೆ ಇದೀಗ ವಿಡಿಯೋ ವೈರಲ್​ ಆದ ಬಳಿಕ ಮತ್ತೆ ಪೊಲೀಸರೇ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಜೀವ ಕೊಟ್ಟಂತಿದೆ. ವಿಡಿಯೋದಲ್ಲಿ ಆ ಮಹಿಳೆಯೇ ಒಪ್ಪಿಕೊಳ್ಳುವ ಪ್ರಕಾರ ಹಣದ ಮೋಸವನ್ನು ಒಪ್ಪಿಕೊಂಡಿದ್ದಾಳೆ. ಹಣವನ್ನು ವಾಪಸ್​ ಕೊಡ್ತೇನೆ ಎಂದೂ ಹೇಳಿದ್ದಾಳೆ. ವೇಶ್ಯಾವಾಟಿಕೆ ಕೇಸ್​​ನಲ್ಲಿ ಆ ಮಹಿಳೆ ಸೇರಿದಂತೆ ಮಹಿಳೆಯನ್ನು ಬೆತ್ತಲೆ ಮಾಡಿ ದೌರ್ಜನ್ಯ ನಡೆಸಿರುವ ಯುವಕರನ್ನು ಕಾನೂನು ಮೂಲಕ ಶಿಕ್ಷೆಗೆ ಒಳಪಡಿಸುವ ಅಗತ್ಯವಿದೆ. ಅತ್ಯಾಚಾರ ನಡೆದಿದ್ದರೆ ಅದನ್ನೂ ಕೋರ್ಟ್​ ಎದುರು ಸಾಬೀತು ಮಾಡಬೇಕಿದೆ. ಆದರೆ ವರ್ಷದ ಹಿಂದೆ ನಡೆದಿರುವ ಘಟನೆಯನ್ನು ಹಿಡಿದು ರಾಜ್ಯದ ಗಮನ ಬೇರೆಡೆಗೆ ಸೆಳೆಯುವ ಕೆಲಸ ಬೇಕಾಗಿಲ್ಲ. ರಾಜಿ ಮಾಡಿದ್ದ ಪೊಲೀಸರನ್ನೇ ಶಿಕ್ಷಿಸಬೇಕಾದ ಅಗತ್ಯವಿದೆ.

Related Posts

Don't Miss it !