ಸಿ.ಡಿ ನಂಟು.. ಸಿಎಂ ಸೀಟು.. ನಡುವಲ್ಲಿ ಮಠ.. ಅನುಮಾನದ ಹುತ್ತ.!?

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ಹೇಳಿದ ಕೂಡಲೇ ನಾನು ಸಿಎಂ ಸ್ಥಾನ ಬಿಟ್ಟು ಇಳಿಯುತ್ತೇನೆ. ನಾನು ಸಿದ್ಧವಾಗಿದ್ದೇನೆ ಎಂದು ಹೇಳಿದ್ದ ಹೇಳಿಕೆ ಭಾರೀ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಾಗಲೇ ಸಿಎಂ ಅಭ್ಯರ್ಥಿಯಾಗಿ ಬೇರೊಬ್ಬರ ಆಯ್ಕೆ ಮಾಡಲು ಕಸರತ್ತು ನಡೆದಿತ್ತು. ಆದರೂ ಹಠ ಬಿಡದ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ವಿಶೇಷ ಅಂದ್ರೆ ಪ್ರತಿಯೊಂದಕ್ಕೂ ಟ್ವೀಟ್ ಮಾಡುವ ಪ್ರಧಾನಿ ನರೇಂದ್ರ ಮೋದಿ ಸ್ವತಃ ತಮ್ಮದೇ ಪಕ್ಷದ ನಾಯಕ‌ ಸಿಎಂ ಆದರೂ ಅಭಿನಂದನೆ ಸಲ್ಲಿಸಲಿಲ್ಲ. ಆಪರೇಷನ್ ಕಮಲದಿಂದ ಬಂದಿದ್ದಕ್ಕೆ ಎಂದು ಸಬೂಬು ಹೇಳಬಹುದು. ಆದರೆ ಅದೇ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಶಿವರಾಜ್ ಸಿಂಗ್ ಚೌವ್ಹಾಣ್‌ಗೆ ಶುಭಾಶಯಗಳನ್ನು ತಿಳಿಸಿದ್ರು. ಅಂದರೆ ಯಡಿಯೂರಪ್ಪ ಸಿಎಂ ಆಗುವುದು ಸುತರಾಂ ಬಿಜೆಪಿಗೆ ಇಷ್ಟವಿರಲಿಲ್ಲ ಎನ್ನುವುದು ಖಚಿತ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ‌ ಹೈಕಮಾಂಡ್ ಹೇಳಿದರೆ ನಾನು ಕುರ್ಚಿ ಬಿಡೋದಕ್ಕೆ ಸಿದ್ಧ ಎಂದು ಹೇಳಿದ ಮರ್ಮವೇನು..? ಇದಕ್ಕೆ ಇಲ್ಲಿದೆ ಉತ್ತರ.

old tweet

ಮಠದಲ್ಲಿ ಸಿಎಂ ಹೇಳಿಕೆ ಗುಟ್ಟು..!?

ಕಳೆದ ವಾರ ಮೈಸೂರಿನ ಸುತ್ತೂರು ಮಠ ಸುದ್ದಿಯಲ್ಲಿತ್ತು. ಅದರಲ್ಲಿ ಪ್ರಮುಖವಾದದ್ದು ಮೂರು ಪಕ್ಷಗಳ ಸರ್ಕಾರ ಎಂದು ಹೇಳಿಕೆ ನೀಡಿದ್ದ ಸಚಿವ ಸಿ.ಪಿ ಯೋಗೇಶ್ವರ್ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಬಂದು ಸ್ವಾಮೀಜಿ ಭೇಟಿಯಾಗಿ‌ ಚರ್ಚೆ ನಡೆಸಿದ್ದರು. ಭದ್ರತಾ ವಾಹನ, ಗನ್‌ಮ್ಯಾನ್ ಇಲ್ಲದೆಯೇ ಮಠಕ್ಕೆ ಆಗಮಿಸಿ ಶ್ರೀಗಳನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಅದೇ ದಿನ ಬಿಜೆಪಿ ನಾಯಕ ಸಿ.ಟಿ ರವಿ ಕೂಡ ಸುತ್ತೂರು‌ ಮಠಕ್ಕೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ‌ ಶ್ರೀಗಳ ಜೊತೆಗೆ ಚರ್ಚೆ ನಡೆಸಿದ್ದರು‌ ಎನ್ನುವುದು ಗಮನಿಸಬೇಕಾದ ಸಂಗತಿ. ಇಷ್ಟೇ ಅಲ್ಲದೆ ಶ್ರೀಗಳ ಭೇಟಿ ಬಳಿಕ ಮಾತನಾಡಿದ್ದ ಸಿ.ಟಿ ರವಿ ಸದ್ಯಕ್ಕೆ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ ನಾಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು. ಅದಕ್ಕೂ ಮುನ್ನ ಫೇಸ್‌ಬುಕ್‌ನಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ಬಗ್ಗೆ ಬರೆದಿದ್ದ ಸಿ.ಟಿ ರವಿ, ಇತಿಹಾಸದಿಂದ ಪಾಠ ಕಲಿಯಬೇಕಾದ ನಾವು ಎಷ್ಟು ಕಲಿತಿದ್ದೇವೆ? ಪ್ರಜೆಗಳನ್ನು ಬಲಿಕೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯವೆಷ್ಟು ದಿನ ಉಳಿದೀತು? ಮರೆಯಲಾಗದ ಮಹಾಸಾಮ್ರಾಜ್ಯದ ಪತನ ನಮಗೆ ಪಾಠ ಕಲಿಸಲಾರದೆ? ಎಂದು ಪ್ರಶ್ನೆ ಮಾಡುವ ಮೂಲಕ ಸರ್ಕಾರವನ್ನು ಪ್ರಶ್ನಿಸಿದಂತಿತ್ತು. ಮಠ ಭೇಟಿಗೂ ಸಿಎಂ ಕುರ್ಚಿ ಬಿಡುವ ಹೇಳಿಕೆಗೂ ಏನು ಸಂಬಂಧ ಅನ್ನೋದಕ್ಕೆ ಉತ್ತರ ಮುಂದಿದೆ.

DK Shivakumar On CD?

ಡಿಕೆಶಿ ಬಿಚ್ಚಿಟ್ಟರು ಸಿ.ಡಿ ಶೋ..?

ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ದಾವಣಗೆರೆಯಲ್ಲಿ ಮಾತನಾಡುತ್ತ, “ಯಾರೋ ಒಬ್ಬ ಸಿ.ಡಿ ಹಿಡಿದುಕೊಂಡು ಮಠಕ್ಕೆ ಹೋಗಿದ್ನಂತೆ. ಸ್ವಾಮೀಜಿ ಬೈದು ಕಳಿಸಿದ್ರಂತೆ” ಅದು ಯಾರದ್ದು ಸಿ.ಡಿ ಎನ್ನುವ ಮಾತಿಗೆ “ಅದೇ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು” ಎಂದು ಸೂಚ್ಯವಾಗಿ ಹೇಳಿದರು. ಬಸನಗೌಡ ಪಾಟೀಲ್ ಹೇಳಿದ್ದ ಸಿ.ಡಿ ಯಾವುದು..? ಅಂದ್ರೆ ಕೆಲವರು ಸಿ.ಡಿ ತೋರಿಸಿ ಯಡಿಯೂರಪ್ಪ ಅವರನ್ನು ಹೆದರಿಸಿ ಮಂತ್ರಿಯಾಗ್ತಾರೆ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ಬಗ್ಗೆ ಟೀಕಿಸಿದ್ರು. ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲ ಸಿಎಂ ಅವರದ್ದೇ ಸಿ.ಡಿ ಇದೆ ಎನ್ನುವ ಮಾತುಗಳು ಕೇಳಿ‌ ಬಂದಿದ್ದವು. ಸಿ.ಪಿ ಯೋಗೇಶ್ವರ್ ಸಚಿವರಾದ ಬಳಿಕ ಆಕ್ರೋಶ ವ್ಯಕ್ತಪಡಿಸಿದ್ದ ಹೆಚ್ ವಿಶ್ವನಾಥ್, ಸಿಪಿ ಯೋಗೇಶ್ವರ್ ಅಲ್ಲ ಸಿ.ಡಿ ಯೋಗೇಶ್ವರ್ ಎಂದು ಕಟುವಾಗಿ ಟೀಕಿಸಿದ್ರು. ಆದ್ರೆ ಇದೀಗ ಮಠದ ಮೆಟ್ಟಿಲು ಹತ್ತಿದ್ದು ಯಾವ ಸಿ.ಡಿ ಎನ್ನುವುದು ಬಯಲಾಗಬೇಕಿದೆ.

https://kannada.asianetnews.com/video/politics/h-vishwanath-attacks-cp-yogeshwar-grg-qmywpw

ಮೈಸೂರು ಬಳಿಕ ದೆಹಲಿಯಲ್ಲಿ ಆ್ಯಕ್ಟೀವ್..!

ಮೈಸೂರಿಗೆ ತೆರಳಿದ್ದ ಸಿ.ಟಿ ರವಿ ವಿಜಯೇಂದ್ರ ದೆಹಲಿಯಿಂದ ವಾಪಸ್ ಆಗ್ತಿದ್ದ ಹಾಗೆ ದೆಹಲಿಗೆ ತೆರಳಿದ್ರು. ಬಳಿಕ ಬಿ.ಎಲ್ ಸಂತೋಷ್ ಜೊತೆಗೂಡಿ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಜೆ.ಪಿ.ನಡ್ಡಾ, ಬಿ.ಎಲ್. ಸಂತೋಷ್, ಸಿ.ಟಿ. ರವಿ ಪ್ರತ್ಯೇಕ ಮಾತುಕತೆ ನಡೆಸಿದ ಮರು ದಿನವೇ ಸಿಎಂ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ಹೇಳಿದರೆ ರಾಜೀನಾಮೆಗೆ ಸಿದ್ಧ ಎಂದಿದ್ದಾರೆ. ಇನ್ನೊಂದು ಸಂಗತಿ ಎಂದರೆ ಯೋಗೇಶ್ವರ್ ಹೇಳಿಕೆ ಬಗ್ಗೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಯೋಗೇಶ್ವರ್ ರಾಜೀನಾಮೆ ಪಡೆಯುವ ಶಕ್ತಿ ಯಡಿಯೂರಪ್ಪ ಅವರಿಗೆ ಇಲ್ಲ. ಒಂದು ವೇಳೆ ಯೋಗೇಶ್ವರ್ ರಾಜೀನಾಮೆ ಪಡೆದರೆ ಕೇವಲ ಒಂದು ಗಂಟೆ ಅವಧಿಯಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ರು. ಬಳಿಕ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿಯಾಗಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಇದಿಷ್ಟು ಆಗಿರುವ ಬೆಳವಣಿಗೆಗಳ ಸಂಕ್ಷಿಪ್ತ ವರದಿ. ಸಿ.ಡಿ, ಮಠ, ಸಿಎಂ ಕುರ್ಚಿ ಏನೆಲ್ಲಾ ಸಾಧ್ಯತೆಗಳಿವೆ ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.

Related Posts

Don't Miss it !