ಬೆಂಗಳೂರಿನಲ್ಲಿರುವ ರಾಜ್​ಕುಮಾರ್​ ಸೇರಿ ಹಲವಾರು ಪುತ್ಥಳಿಗಳ ತೆರವು ತಯಾರಿ..!

ಬೆಂಗಳೂರಿನ ಯಾವುದೇ ರಸ್ತೆಗೆ ಹೋದರೂ ಮಹಾನ್​ ನಾಯಕರ ಪುತ್ಥಳಿಗಳು ಕಾಣಸಿಗುತ್ತವೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಪ್ರತಿಮೆಗಳನ್ನು ಸ್ಥಾಪಿಸಿಕೊಂಡು ಹೆಮ್ಮೆಪಡುತ್ತಾರೆ. ಆದರೆ ಇನ್ಮುಂದೆ ಅಭಿಮಾನಿಗಳು, ಸಂಘಟನೆಗಳು, ಸಮುದಾಯದ ಮೆಚ್ಚಿನ ನಾಯಕನ ಪ್ರತಿಮೆ ಸ್ಥಾಪಿಸಿ ಗೌರವ ಸೂಚಿಸುವ ಎಲ್ಲಾ ಪುತ್ಥಳಿಗಳು ನೆಲಸಮ ಆಗಲಿವೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ನೆಲಸಮ ಮಾಡಬೇಕಿರುವ ಪುತ್ಥಳಿಗಳ ಲಿಸ್ಟ್​ ಮಾಡಿದ್ದು, ಶೀಘ್ರದಲ್ಲೇ ಉರುಳಿ ಬೀಳುವ ಸಾಧ್ಯತೆ ಇದೆ.

ಪುತ್ಥಳಿಗಳ ತೆರವು ಉದ್ದೇಶ ಏನು..?

ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ, ಫುಟ್​ಪಾತ್​ಗಳಲ್ಲಿ, ಸಾರ್ವಜನಿಕವಾಗಿ ಪುತ್ಥಳಿಗಳ ನಿರ್ಮಾಣವಾಗಿದೆ. ಇವುಗಳನ್ನು ತೆರವು ಮಾಡಬೇಕು ಎಂದು ಕೆ.ಎಸ್​ ಸುರೇಶ್​ ಎಂಬುವರು ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ ಜುಲೈ 30ರಂದು ಆದೇಶ ಹೊರಡಿಸಿದ್ದು, , ಬೆಂಗಳೂರು ರಸ್ತೆ, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣ ಆಗಿರುವ ಪುತ್ಥಳಿ, ಧ್ವಜಸ್ತಂಭ ತೆರವು ಮಾಡಬೇಕು ಎಂದು ಸೂಚನೆ ಕೊಡಲಾಗಿದೆ. ಹೈಕೋರ್ಟ್​ ಆದೇಶದ ಮೇರೆಗೆ ಬಿಬಿಎಂಪಿ ಬೆಂಗಳೂರಿನ ಹಲವು ನಗರಗಳ ಸರ್ಕಲ್​ನಲ್ಲಿ ಸ್ಥಾಪನೆ ಆಗಿರುವ ಪುತ್ಥಳಿ ಹಾಗೂ ಧ್ವಜ ಸ್ತಂಭಗಳನ್ನು ಪಟ್ಟಿ ಮಾಡಿದ್ದು, ಸಾಕಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆ.

Read this also

ಅಭಿಮಾನಕ್ಕೆ ಧಕ್ಕೆ ಬಂದರೆ ಕಿಚ್ಚು ಸಾಧ್ಯತೆ..!

ಸಾರ್ವಜನಿಕ ಸ್ಥಳ, ಫುಟ್​ಪಾತ್​ ಹಾಗೂ ರಸ್ತೆಯಲ್ಲಿ ಅಭಿಮಾನದಿಂದ ಪುತ್ಥಳಿಯನ್ನು ನಿರ್ಮಾಣ ಮಾಡಿರುತ್ತಾರೆ. ಅಭಿಮಾನಕ್ಕೋಸ್ಕರ ಸರ್ಕಾರವೂ ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿತ್ತು. ಆದರೆ ಈಗ ಕರ್ನಾಟಕ ಹೈಕೋರ್ಟ್​ ಆದೇಶ ನೀಡುರವ ಹಿನ್ನೆಲೆಯಲ್ಲಿ ಬಿಬಿಎಂಪಿ ತೆರವು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಡಾ ರಾಕ್​ಕುಮಾರ್​, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮೆಚ್ಚಿನ ನಾಯಕರ ಪುತ್ಥಳಿಗಳು ಶೀಘ್ರದಲ್ಲೇ ತೆರವು ಆಗಲಿವೆ. ಇಷ್ಟೇ ಅಲ್ಲದೆ ಸಮುದಾಯ ನಾಯಕರಾದ ಬಸವಣ್ಣ, ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ನಾಯಕರ ಪುತ್ಥಳಿಗಳನ್ನು ತೆರವು ಮಾಡಲು ತಯಾರಿ ನಡೆದಿದೆ.

Read this also

ಯಾರ ಪುತ್ಥಳಿಗೆ ಧಕ್ಕೆ ಬರುತ್ತೆ..?

ಬಿಬಿಎಂಪಿ ಸ್ಥಾಪನೆ ಮಾಡಿರುವ ಪುತ್ಥಳಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದು ನಿರ್ಮಾಣ ಮಾಡಿರುವ ಕಾರಣ ಆ ಪುತ್ಥಳಿಗಳನ್ನು ಅಧಿಕೃತ ಎಂದು ಘೋಷಣೆ ಮಾಡಲಾಗುತ್ತದೆ. ಆದರೆ ಆಟೋ ಡ್ರೈವರ್​ಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಪುತ್ಥಳಿಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಆಟೋ ನಿಲ್ದಾಣದಲ್ಲಿ ಶಂಕರ್​ನಾಗ್​ ಪ್ರತಿಮೆ ಹಾಗೂ ಧ್ವಜ ಸ್ತಂಭ ತೆರವು ಮಾಡಟಲು ಮುಂದಾದರೆ ಪ್ರತಿಭಟನೆ ವ್ಯಕ್ತವಾಗುವ ಭಯವೂ ಬಿಬಿಎಂಪಿ ಅಧಿಕಾರಿಗಳಲ್ಲಿ ಇದೆ. ಇನ್ನೂ ಕೆಲವು ಕಡೆ ಅನಧಿಕೃತವಾಗಿ ನಿರ್ಮಾಣ ಆಗಿರುವ ರಾಜ್ ಕುಮಾರ್, ವಿಷ್ಣುವರ್ಧನ್, ಬಸವಣ್ಣನವರ ಪುತ್ಥಳಿ ಸ್ಥಾಪನೆ ಆಗಿದ್ದರೆ ತೆರವು ಮಾಡಲಾಗುತ್ತದೆ. ಇದಕ್ಕೂ ವಿರೋಧ ವ್ಯಕ್ತವಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಸರ್ವೆ ಕಾರ್ಯ ಶುರುಮಾಡಿದ್ದು, ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಶುರುವಾಗಲಿದೆ.

Related Posts

Don't Miss it !