ಮುಸ್ಲಿಂ ಏರಿಯಾದಲ್ಲಿ ಸಂಚಾರ; ನಿಮ್ಮ ಪ್ರಾಣಕ್ಕೆ ಸಂಚಕಾರ..! ಇದೆಷ್ಟು ಸತ್ಯ..!?

ಬೆಂಗಳೂರಿನ ಚಾಮರಾಜಪೇಟೆ, ಶಿವಾಜಿನಗರ, K.R ಮಾರ್ಕೆಟ್, ಡಿಜೆ ಹಳ್ಳಿ, ಕೆಜಿ ಹಳ್ಳಿ ಸೇರಿದಂತೆ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ವಾಸ ಮಾಡುವ ಪ್ರದೇಶದಲ್ಲಿ ಜನರು ಓಡಾಡುವುದು ಕಷ್ಟ ಎನ್ನುವ ಮಾತಿದೆ. ಮುಸ್ಲಿಮರ ಪ್ರದೇಶದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆಗಳು ನಡೆಯುತ್ತವೆ. ಪೊಲೀಸರು ಕೂಡ ಮುಸ್ಲಿಂ ಏರಿಯಾಗಳಲ್ಲಿ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದು ಇಲ್ಲ. ಹೆಲ್ಮೆಟ್ ಇಲ್ಲ, ತ್ರಿಬಲ್ ರೈಡಿಂಗ್ ಸೇರಿದಂತೆ ಯಾವುದೇ ಕಾನೂನು ಉಲ್ಲಂಘನೆ ಮಾಡಿದರೂ ಪೊಲೀಸರು ಕ್ರಮ ತೆಗೆದುಕೊಳ್ಳುವುದಿಲ್ಲ. ರಾತ್ರಿ ಎಲ್ಲಾ ಕಡೆ ಬಂದ್ ಆದರೂ‌ ಮುಸಲ್ಮಾನ ಏರಿಯಾದಲ್ಲಿ ಅಂಗಡಿಗಳು ಓಪನ್ ಇರುತ್ತವೆ. ಆದರೆ ಇದೇ ರೀತಿಯ ಪ್ರಕರಣದಲ್ಲಿ ಕೊಲೆ ನಡೆದುಹೋಗಿದೆ.

ಬರ್ತ್ ಡೇ ಆಚರಣೆ ಸಂಭ್ರಮದಲ್ಲಿ ನಡೀತು ಮರ್ಡರ್..!!

ಸೋಮವಾರ ರಾತ್ರಿ ಸೈಮನ್ ಬರ್ತ್​​ ಡೇ ಆಚರಣೆ ಮಾಡಿದ್ದ ಸ್ನೇಹಿತರು. ಚಿಕನ್​ ರೋಲ್​ ತರುವುದಕ್ಕಾಗಿ ಹುಡುಕಾಟ ನಡೆಸಿದ್ದರು. ಸ್ನೇಹಿತ ಚಂದ್ರಶೇಖರ್ ಜೊತೆಗೆ ಕೆ.ಆರ್ ಮಾರ್ಕೆಟ್, ಚಾಮರಾಜಪೇಟೆ ಸೇರಿದಂತೆ ಬಹುತೇಕ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿದ್ದರು. ಎಲ್ಲಿಯೂ ಆಹಾರ ಸಿಗದಿದ್ದಾಗ ಮಧ್ಯರಾತ್ರಿ 2 ಗಂಟೆ ವೇಳೆ ಜೆಜೆ ನಗರದ ಹಳೇ ಗುಡ್ಡದಹಳ್ಳಿ ಕಡೆಗೆ ಹೋಗಿದ್ದರು. ಅಲ್ಲೊಂದು ಹೋಟೆಲ್‌ ಓಪನ್ ಇತ್ತು. ತಮಗೆ ಬೇಕಾದ ಆಹಾರ ಕೊಳ್ಳುವ ಮುನ್ನ ಸ್ಥಳೀಯ ಯುವಕ‌ನ ಜೊತೆಗೆ ಸಣ್ಣದೊಂದು ಗಲಾಟೆ ಆಗಿತ್ತು. ಬೈಕ್ ಟಚ್ ಆಯಿತು‌ ಎನ್ನುವ ಕ್ಷುಲ್ಲಕ ಕಾರಣಕ್ಕೆ‌ ಶುರುವಾದ ಸಂಘರ್ಷ ಕೆಲವೇ ನಿಮಿಷಗಳಲ್ಲಿ ಕೊಲೆಯಲ್ಲಿ ಅಂತ್ಯವಾಗಿದೆ. 22 ವರ್ಷದ ಯುವಕ ಚಂದ್ರಶೇಖರ್ ಎಂಬಾತನಿಗೆ ಚಾಕು ಇರಿದು ಹತ್ಯೆ ಮಾಡಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆ ಆಗಿದೆ.

ಬೈಕ್ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು ಹೇಗೆ..!?

ಊಟ ತರುವುದಕ್ಕೆ ಹೋಟೆಲ್ ಹುಡುಕಿ ಹೋದವರ ಬೈಕ್, ಸ್ಥಳೀಯ ಯುವಕ ಶಾಹೀದ್ ಎಂಬಾತನ ಬೈಕ್‌ಗೆ ಟಚ್ ಆಗಿತ್ತು. ಬೈಕ್‌ನಿಂದ ಇಳಿದ ಶಾಹೀದ್, ಚಂದ್ರಶೇಖರ್ ಹಾಗೂ ಸೈಮನ್ ಮೇಲೆ‌ ಹಲ್ಲೆಗೆ ಮುಂದಾಗಿದ್ದಾನೆ. ಇದೇ ವೇಳೆ ಶಾಹೀದ್ ಜೊತೆಗೂಡಿದ ಸ್ನೇಹಿತರು, ಜಗಳ ಬಿಡಿಸುವ ಬದಲಿಗೆ ಎಲ್ಲರೂ ಸೇರಿಕೊಂಡು ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಎಷ್ಟೇ ಬಗೆಬಗೆಯಾಗಿ ಬೇಡಿಕೊಂಡರು ಕ್ಷಮಿಸದ ಯುವಕರು ಚಂದ್ರಶೇಖರ್‌ಗೆ ಚಾಕು ಇರಿದಿದ್ದಾರೆ ಎನ್ನಲಾಗಿದೆ. ತೊಡೆಯ ಭಾಗಕ್ಕೆ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸಾವು ಸಂಭವಿಸಿದೆ. ಸೈಮನ್ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾನೆ. ಆರೋಪಿ ಶಾಹೀನ್ ಸೇರಿದಂತೆ ಮೂವರು ಆರೋಪಿಗಳನ್ನು ಜೆಜೆ ನಗರ ಪೊಲೀಸರು ಬಂಧನ ಮಾಡಿದ್ದಾರೆ ಎನ್ನುವುದನ್ನು ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಸ್ಪಷ್ಟಪಡಿಸಿದ್ದಾರೆ.

ಕೈ ಮುಗಿದರೂ ಕ್ಷಮಿಸದ ಕ್ರೂರಿಗಳು

ರಂಜಾನ್ ಮಾಸದಲ್ಲಿ ನಡೆದ ಹತ್ಯೆಗೆ ಕ್ಷಮೆ ಇದೆಯಾ..!!

ಹಲ್ಲೆ ಮತ್ತು ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೇ ದೃಶ್ಯಗಳ ಆಧಾರದಲ್ಲಿ ಆರೋಪಿ ಶಾಹೀದ್ ಸೇರಿ ಮೂವರನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ. ಗಲಾಟೆ ನಡೆಯುವುದಕ್ಕೆ ಎರಡೂ ಕಡೆಯಿಂದ ಪ್ರಚೋದನೆ ಸಿಕ್ಕಿರಬಹುದು. ಸೈಮನ್ ಹಾಗೂ‌ ಚಂದ್ರಶೇಖರ್ ತಪ್ಪೇ ಮಾಡಿಲ್ಲ ಎಂದು ಹೇಳುವುದು ಉತ್ಪ್ರೇಕ್ಷೆ ಆಗುತ್ತದೆ. ಆದರೆ ಏನಾದರೂ ತಪ್ಪು ಮಾಡಿದ್ದರೆ ಬುದ್ಧಿ ಹೇಳಿ ಕಳುಹಿಸಬೇಕಿತ್ತು. ಒಂದೊಮ್ಮೆ ಅಷ್ಟು ಸಾಲದಿದ್ದರೆ ನಾಲ್ಕು ಪೆಟ್ಟು ಕೊಟ್ಟು ಅಲ್ಲಿಂದ ಹೊರಡುವಂತೆ ಹೇಳಬಹುದಿತ್ತು. ಕೊಲೆ ಮಾಡಿದ್ದು ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷವನ್ನು ಸಮರ್ಥಿಸುವಂತೆ ಮಾಡಿದೆ. ಪವಿತ್ರ ರಂಜಾನ್ ಮಾಸವನ್ನು ಉಪವಾಸ ಮಾಡುವ ಮೂಲಕ ಆಚರಣೆ ಮಾಡುತ್ತ ಜಗತ್ತಿನ ಶಾಂತಿಗಾಗಿಯೇ ವ್ರತ ಮಾಡುತ್ತೇವೆ ಎನ್ನುವ ಮುಸಲ್ಮಾನರ ಏರಿಯಾದಲ್ಲಿ ಕ್ಷುಲ್ಲಕ‌ ಕಾರಣಕ್ಕೆ ಕೊಲೆಯಾಗಿದ್ದು ಎಷ್ಟು‌ಸರಿ..? ಕಾನೂನು ಕೈಗೆ ಎತ್ತಿಕೊಂಡಿದ್ದು ಅಪರಾಧ ಅಲ್ಲವೇ..?

Related Posts

Don't Miss it !