ಯುವಕರೇ ಬೆತ್ತಲೇ ಬಾಲೆಗೆ ಮನಸೋತರೆ ಸಾಲ ಅಥವಾ ಸಾವು ಕಟ್ಟಿಟ್ಟ ಬುತ್ತಿ..! ಯಾಕೆ ಗೊತ್ತಾ..?

ಸಾಮಾಜಿಕ ಜಾಲತಾಣ ಎನ್ನುವುದು ಯುವಕ ಯುವತಿಯರನ್ನು ಕೈಗೊಂಬೆ ಮಾಡಿಕೊಂಡಿದೆ. ಸದಾ ಕಾಲ ಸಾಮಾಜಿಕ ಜಾಲತಾಣದಲ್ಲಿ ಕಾಲಕಳೆಯುವ ಯುವ ಸಮೂಹ ಅದರಿಂದ ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಐಶಾರಾಮಿ ಜೀವನಕ್ಕೆ ಮನಸೋಲುವ ಯುವಕ ಅಥವಾ ಯುವತಿಯ ತಂಡ, ಅನಾಮಿಕರ ಜೊತೆಗೆ ಸ್ನೇಹ ಸಂಪಾದನೆ ಮಾಡಿ ಅವರಿಂದ ಹಣ ವಸೂಲು ಮಾಡುವ ತಂತ್ರಗಾರಿಕೆ ರೂಪಿಸುತ್ತಿರುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮರ್ಯಾದೆ ಹೋಗುತ್ತದೆ ಎನ್ನುವ ಕಾಎರಣಕ್ಕೆ ಅದೆಷ್ಟೋ ಜನರು ಪ್ರಾಣವನ್ನೇ ಕಳೆದುಕೊಳ್ಳುವ ದುಸ್ಥಿತಿ ಎದುರಾಗಿದೆ. ಈ ಸಂದರ್ಭದಿಂದ ಹೊರ ಬುರುವುದಕ್ಕೆ ಸಾಧ್ಯವಾದರೆ ಜೀವ ಮತ್ತು ಜೀವನ ಉಳಿಸಿಕೊಳ್ಳಬಹುದು. ಆದರೆ ಸ್ವಲ್ಪ ಯಾಮಾರಿದ್ರೂ ಮಾನಸಿಕವಾಗಿ ಕುಗ್ಗಿದ್ರೂ ಪ್ರಾಣ ನಮ್ಮದಲ್ಲ ಎನ್ನುವ ಸ್ಥಿತಿ ಒದಗಿ ಬರುತ್ತದೆ ಎನ್ನುವುದು ಶತಸಿದ್ದ.

ವೀಡಿಯೋ ಕಾಲ್ ಮಾಡಿ ಬೆತ್ತಲಾದ ಯುವತಿ ಬ್ಲ್ಯಾಕ್​ ಮೇಲ್​..!

ಮೈಸೂರು ಜಿಲ್ಲೆ ಹುಣಸೂರಿನ ಬಿಳಿಕೆರೆ ಗ್ರಾಮದ ವಾಸು ಎಂಬುವರಿಗೆ ವಾಟ್ಸ್​ ಆಪ್​ನಲ್ಲಿ ವೀಡಿಯೋ ಕಾಲ್​ ಒಂದು ಬರುತ್ತೆ. ವಿಡಿಯೋ ಕಾಲ್ ಮಾಡಿd ಯುವತಿ ಏಕಾಏಕಿ ಬೆತ್ತಲಾಗ್ತಾಳೆ. ವಿಡಿಯೋ ಕಾಲ್ ಮಾಡುವ ಮುನ್ನ ಚಾಟ್ ಮಾಡಿದ್ದ ಯುವತಿ ತನ್ನನ್ನು ತಾನು ಅಮೃತಾ ಎಂದು ಪರಿಚಯಿಸಿಕೊಂಡಿದ್ದಳು. ಮಾತನಾಡುತ್ತಿದ್ದಾಗ ಒಬ್ಬರೇ ಇದ್ದೀರಾ..? ಎಂದು ಕೇಳಿದ್ದ ಅಮೃತಾ, ನಾನೂ ಕೂಡ ಒಬ್ಬಳೇ ಇದ್ದೇನೆ ಡಿಯರ್​ ಎನ್ನುವ ಉತ್ತರ ಬಂದಿತ್ತು. ಪ್ರಣಯ ಪಕ್ಷಿಗಳು ಸಾಕಷ್ಟು ವರ್ಷದಿಂದ ಮಾತನಾಡುತ್ತಿದ್ದಾರೆ ಎನ್ನುವ ಹಾಗೆ ಕೆಲವೇ ಕ್ಷಣಗಳಲ್ಲಿ ಮಾತನಾಡಿದ್ದ ಯುವತಿ ಬಗ್ಗೆ ಕೆಲವೇ ನಿಮಿಷಗಳಲ್ಲಿ ವೀಡಿಯೋ ಕಾಲ್​ ಮಾಡಿ ಬೆತ್ತಲಾಗಿದ್ದಳು. ಆಕೆ ಬೆತ್ತಲಾಗುತ್ತಿದ್ದ ಹಾಗೆ ವಾಸು ಫೋನ್​ ಕಟ್​ ಮಾಡಿದ್ದರು. ಬಳಿಕ ಅದೇ ವೀಡಿಯೋ ವಾಟ್ಸ್​ ಆಪ್​ನಲ್ಲಿ ವಾಸುಗೆ ಕಳುಹಿಸಿದ ಯುವತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಬೆದರಿಕೆ ಹಾಕಿದ್ದಳು. ಇದೀಗ ಸೈಬರ್​ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇಹ ಸೌಂದರ್ಯವೇ ಯುವತಿಯರ ಬಿಟ್ಟಿ ಬಂಡವಾಳ..!

ತನ್ನ ಮೈಮಾಟದಿಂದಲೇ ಪುರುಷರನ್ನು ಸೆಳೆಯುವ ಹೆಣ್ಣು ಅದನ್ನು ವ್ಯಾಪಾರ ಮಾಡಿಕೊಂಡಿದ್ದಾಳೆಯೇ..? ಎನ್ನುವುದನ್ನು ಪ್ರಶ್ನೆ ಮಾಡಬೇಕಿದೆ. ಮಂಡ್ಯದಲ್ಲಿ ಬಿಜೆಪಿ ಮುಖಂಡನನ್ನು ಬಲೆಗೆ ಹಾಕಿಕೊಂಡಿದ್ದ ಮುಸ್ಲಿಂ ಮಹಿಳೆಯೊಬ್ಬಳು ಬರೋಬ್ಬರಿ 50 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾಳೆ. ಚಿನ್ನಬೆಳ್ಳಿ ವ್ಯಾಪಾರ ಮಾಡುವ ವ್ಯಕ್ತಿ, ಯುವತಿಯ ಸ್ನೇಹಕ್ಕೆ ಮರುಳಾಗಿ 50 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಆದರೂ ಬ್ಲ್ಯಾಕ್​ ಮೇಲ್​ ನಿಲ್ಲದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಡ್ಯದ ಪ್ರತಿಷ್ಟಿತ ಶ್ರೀನಿಧಿ ಗೋಲ್ಡ್ ಚಿನ್ನದ ಅಂಗಡಿ ಮಾಲೀಕ ಜಗನ್ನಾಥ ಶೆಟ್ಟಿಯನ್ನು ಹನಿಟ್ರ್ಯಾಪ್​ ಮಾಡಿದ್ದ ಸಲ್ಮಾಭಾನು ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಟಿಕ್​ ಟಾಕ್​ ವೀಡಿಯೋಗಳಿಗೆ ಮನಸೋತು 50 ಲಕ್ಷ ರೂಪಾಯಿ ಕಳೆದುಕೊಂಡಂತೆ ಆಗಿದೆ.

ಸಾಮಾಜಿಕ ಜಾಲತಾಣ ನಿಮ್ಮ ಕೊರಳಿಗೆ ಹಾಕಬಹುದು ಯಮಪಾಶ..!

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಸಿಕ್ಕವರ ಜೊತೆಗೆ ಮಾತನಾಡುವ ಮುನ್ನ ನೂರಲ್ಲ ಸಾವಿರ ಸಲ ಯೋಚನೆ ಮಾಡಿದರೂ ತಪ್ಪಲ್ಲ. ಯಾಕೆಂದರೆ ಎಲ್ಲೋ ಕುಳಿತು ನಮ್ಮನ್ನು ಕೆಡ್ಡಾಗೆ ಕೆಡವುತ್ತಿದ್ದಾರೆ ಎನ್ನುವ ಹೊತ್ತಿಗೆ ಅವರ ಪ್ರೀತಿಯ ಮಾತುಗಳಿಗೆ ಮರುಳಾಗಿ ಮಾಡಬಾರದ್ದನ್ನು ಮಾಡಿ ನಿಮ್ಮ ಬಂಡವಾಳವನ್ನು ಬೇರೆಯವರಿಗೆ ಹಸ್ತಾಂತರ ಮಾಡಿ ಆಗಿರುತ್ತದೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ‌ ಹಾಕುತ್ತೇನೆ, ನಿಮ್ಮ ಸಂಬಂಧಿಕರಿಗೆ ಕಳುಹಿಸುತ್ತೇನೆ ಎನ್ನುವ ಗೊಡ್ಡು ಬೆದರಿಕೆಗಳಿಗೆ ಹೆದರಬೇಡಿ, ಯಾರಿಗಾದರೂ ಕಳುಹಿಸು ಎಂದೇಳಿ, ತಮ್ಮ‌ ಸಾಮಾಜಿಕ ಜಾಲತಾಣದ ಎಲ್ಲಾ ಅಕೌಂಟ್‌ಗಳನ್ನು ಡಿ ಆಕ್ಟಿವೇಟ್ ಮಾಡುವುದನ್ನು ಮರೆಯಬೇಡಿ. ಕೂಡಲೇ ಸಾಮಾಜಿಕ ಜಾಲತಾಣದ ಎಲ್ಲಾ ಅಕೌಂಟ್‌ಗಳನ್ನು ಡಿ ಆಕ್ಟಿವೇಟ್ ಮಾಡಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ. ಅಲ್ಲಿಗೆ ಬೆತ್ತಲಾದ ಬಾಲೆಯ ತಂತ್ರಗಾರಿಕೆಗೆ ಹಿನ್ನಡೆಯಾಗಲಿದೆ. ಒಂದು ವೇಳೆ ಮರ್ಯಾದೆ, ಕುಟುಂಬದ ಮರ್ಯಾದೆ, ಮುಂದಿನ ಜೀವನ ಏನು ಎಂದು ಯೋಚನೆ ಮಾಡಿದರೆ ಪ್ರಾಣ ಪಲಾಯನ ಮಾಡಲಿದೆ.

Related Posts

Don't Miss it !