ಕುಸಿದು ಬೀಳುವುದು, ಮೆದುಳು ನಿಷ್ಕ್ರಿಯ.. ಯುವ ಸಮುದಾಯಕ್ಕೆ ಆತಂಕ..!

ಕೊರೊನಾ ಸೋಂಕು ಒಂದು, ಎರಡು, ಮೂರನೇ ಅಲೆ ಬಳಿಕ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವ ಸಮುದಾಯದ ಜನರೂ ಕೂಡ ನಿಂತಲ್ಲೇ ಕುಸಿದು ಬೀಳುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಥವಾ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಮೆದುಳು ನಿಷ್ಕ್ರಿವಾಗಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಸಾವನ್ನು ಸಾರ್ಥಕತೆ ಮಾಡಿಕೊಳ್ಳುತ್ತಿರುವ ಪ್ರಕಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಪವರ್​ ಸ್ಟಾರ್​​ ಪುನೀತ್​ ರಾಜ್​​ಕುಮಾರ್​ ಸಾವಿನಿಂದ ಶುರುವಾದ ಆಕಸ್ಮಿಕ ಸಾವುಗಳ ಸರಣಿ ಇನ್ನೂ ಕೂಡ ನಿಂತಿಲ್ಲ. ಕೋಲಾರದಲ್ಲಿ ಮದುವೆ ಆರತಕ್ಷತೆಯಲ್ಲೇ ಕುಸಿದು ಬಿದ್ದಿದ್ದ ಚೈತ್ರಾ, ಮೊನ್ನೆಯಷ್ಟೇ ನಿಮ್ಹಾನ್ಸ್​​ನಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಚೈತ್ರಾ ತಂದೆ, ತಾಯಿ ಅಂಗಾಂಗ ದಾನ ಮಾಡುವ ಮೂಲಕ ಸಾವಲ್ಲೂ ಸಾರ್ಥಕತೆ ಕಂಡಿದ್ದರು. ಆ ಬಳಿಕ ಚಕ್ಕಮಗಳೂರಿನ ಗಾನವಿ ಪರಿಸ್ಥಿತಿ.

ಚೈತ್ರಾ

ಇದನ್ನೂ ಓದಿ: ಮದುವೆ ಆರತಕ್ಷತೆಯಲ್ಲಿ ನಿಂತಿದ್ದ ಮಧುಮಗಳು ಸ್ಮಶಾನ ಸೇರಿದ್ಯಾಕೆ..?

ಆಸ್ಪತ್ರೆಯಲ್ಲಿ ಕುಸಿದು ಬಿದ್ದ ಗಾನವಿ ಸಾವು..!

ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಸ್ಟಾಪ್​ ನರ್ಸ್​ ಆಗಿ ಕೆಲಸ ಮಾಡುತ್ತಿದ್ದ ಗಾನವಿ ಫೆಬ್ರವರಿ 8 ರಂದು ಕುಸಿದು ಬಿದ್ದಿದ್ದರು. ಆ ಬಳಿಕ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 12ರಂದು ಇಹಲೋಕ ತ್ಯಜಿಸಿದ್ದಾರೆ. ವೈದ್ಯರು ಸಾವಿಗೆ ಕೊಟ್ಟ ಕಾರಣ ಮೆದುಳು ನಿಷ್ಕ್ರಿಯವಾಗಿದೆ ಎನ್ನುವುದು. ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ (N R ಪುರ) ತಾಲೂಕಿನ ಕೆರೆಮನೆಯ ಕೃಷ್ಣೇಗೌಡ ಹಾಗೂ ಲೀಲಾವತಿ ದಂಪತಿಯ ಎರಡನೇ ಪುತ್ರಿ ಆಗಿದ್ದ ಗಾನವಿಯ ಮೆದುಳು ನಿಷ್ಕ್ರಿಯದ ಬಗ್ಗೆ ಪೋಷಕರಿಗೆ ತಿಳಿಸಿದ್ದರು. ಆದರೆ ಅದಕ್ಕೆ ಕಾರಣ ಏನು ಎನ್ನುವುದು ಮಾತ್ರ ಇಲ್ಲೀವರೆಗೂ ನಿಗೂಢವಾಗಿದೆ. ಸ್ಟಾಪ್​ ನರ್ಸ್​ ಆಗಿದ್ದ ಗಾನವಿಯ ಯಕೃತ್, 2 ಕಿಡ್ನಿ, ಹೃದಯನಾಳಗಳು, 2 ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಕಾರಣಕ್ಕೆ ಆರೋಗ್ಯ ಸಚಿವ ಡಾ ಸುಧಾಕರ್​ ಕೂಡ ಟ್ವೀಟ್​ ಮಾಡಿ ಸಂತಾಪ ಸಲ್ಲಿಸಿದ್ದಾರೆ. ಆಸ್ಪತ್ರೆ ವೈದ್ಯರು ಹಾಗೂ ನರ್ಸ್​ಗಳ ಟೀಂ ಗಾನವಿಯ ಪಾರ್ಥಿವ ಶರೀರವನ್ನು ಮೌನ ಕಂಬನಿಯೊಂದಿಗೆ ಬೀಳ್ಕೊಟ್ಟಿದ್ದಾರೆ.

ಇದನ್ನೂ ಓದಿ: ಹಿಜಬ್​ ವಿವಾದ, ಕೇಸರಿ ಬಲೆಗೆ ಸಿಲುಕಿದ ಕಾಂಗ್ರೆಸ್​, ಕ್ಷಮೆ ಕೇಳಿದ ಜಮೀರ್..!

ಮಲಗಿದ್ದಲ್ಲೇ ಶವವಾದ 23 ವರ್ಷದ ಯುವಕ..!

ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 23 ವರ್ಷ ನಾಗೇಶ್​ ಅರೆ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿರುವ ವರದಿಯಾಗಿದೆ. ಫೆಬ್ರವರಿ 13ರ ರಾತ್ರಿ ಕರ್ತವ್ಯ ನಿರ್ವಹಿಸುವಾಗ ಮಲಗಿದ್ದಲ್ಲೇ ಶವವಾಗಿದ್ದಾರೆ. ಉಪ್ಪಿನಂಗಡಿ ನಿವಾಸಿಯಾಗಿರುವ ನಾಗೇಶ್​, ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯಾಗಿಯೂ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ, ವಿಶ್ರಾಂತಿ ಪಡೆಯುತ್ತಿರುವಾಗ ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರ್ಡಿಯಾಕ್ ಅರೆಸ್ಟ್​ (ಹೃದಯ ಸ್ತಂಭನ) ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಹಾಸನದಲ್ಲಿ ತಾಯಿ ಕೊಂದ ಮಗ, ಮೈಸೂರಲ್ಲಿ ತಂದೆ ಮೇಲೆ ಫೈರಿಂಗ್..!

ತಿಂಡಿ ತಿನ್ನಲು ಕುಳಿತವ ಕ್ಷಣದಲ್ಲೇ ಹೆಣವಾದ..!

ಮೈಸೂರಿನ ಹೋಟೆಲ್​ನಲ್ಲಿ ತಿಂಡಿ ತಿನ್ನಲು ಕುಳಿತಿದ್ದ ಕಾನೂನು ವಿದ್ಯಾರ್ಥಿ ಕುಳಿತಿದ್ದ ಹಾಗೆ ಸಾವನ್ನಪ್ಪಿದ್ದ ವಿಚಾರ ವರದಿತಾಗಿತ್ತು. ಹುಣಸೂರು ಪಟ್ಟಣದ ಹೋಟೆಲ್‌ನಲ್ಲಿ ತಿಂಡಿ ಆರ್ಡರ್​​ ಮಾಡಿದ್ದ 25 ವರ್ಷದ ನಿತಿನ್​ ಕುಮಾರ್​​ ಹಠಾತ್​ ಸಾವನ್ನಪ್ಪಿದ್ದನು. ಆರ್ಡರ್ ಮಾಡಿ ಸ್ನೇಹಿತನ ಜೊತೆಗೆ ಮಾತನಾಡುತ್ತ ಕುಳಿತಿದ್ದ ನಿತಿನ್​ ಕುಮಾರ್​​ ತಿಂಡಿ ಬರುವ ಮುನ್ನವೇ ಕೊನೆಯುಸಿರೆಳೆದ ಅಂತಿಮ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ನಂಜಾಪುರ ಗ್ರಾಮದ ನಿತಿನ್ ಕುಮಾರ್​ ಸಾವಿಗೂ ಇಲ್ಲೀವರೆಗೂ ಉತ್ತರ ಸಿಕ್ಕಿಲ್ಲ. ಇನ್ನೂ ಇದೇ ರೀತಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಯುವ ಸಮುದಾಯವೇ ಸಾವನ್ನಪ್ಪುತ್ತಿರುವ ಸಾಕಷ್ಟು ಸಂಗತಿಗಳು ಕೇಳಿ ಬರುತ್ತಿವೆ. ಆದರೆ ಹಾರ್ಟ್​ ಅಟ್ಯಾಕ್​​ (ಕಾರ್ಡಿಯಾಕ್​ ಅರೆಸ್ಟ್​) ಎಂದು ಹೇಳಲಾಗುತ್ತಿದೆ. ಆದರೂ ಸಾವಿನ ಬಗ್ಗೆ ಸಾಕಷ್ಟು ಗುಮಾನಿಗಳು ಶುರುವಾಗುತ್ತಿವೆ.

ನಿತಿನ್ ಕುಮಾರ್

ಯುವ ಜನಾಂಗಕ್ಕೆ ಮಾರಕವಾಗ್ತಿರೋದ್ಯಾಕೆ ಕಾರ್ಡಿಯಾಕ್ ಅರೆಸ್ಟ್​..!?

ಕಾರ್ಡಿಯಾಕ್​ ಅರೆಸ್ಟ್​ ಆಗುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಎಂದು ವೈದ್ಯಕೀಯ ಲೋಕ ಹೇಳುವುದು ಸರಿ. ಆದರೆ ನಾವು ಬೆಳೆದು ಬಂದ ಪರಿಸರದಲ್ಲಿ ಈ ರೀತಿಯ ಸಾವುಗಳನ್ನು ಎಂದೆಂದು ಕಂಡಿರಲಿಲ್ಲ ಎಂದು ಅದೇ ವೈದ್ಯರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಡಿಯಾಕ್​ ಅರೆಸ್ಟ್​ ಯುವ ಸಮುದಾಯದಲ್ಲಿ ಆಗುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆಯೂ ಸೃಷ್ಟಿಯಾಗುವುದು ಸಾಮಾನ್ಯ. ಬೆಂಗಳೂರಿನಂತಹ ಒತ್ತಡದ ಜೀವನದಲ್ಲಿ ಕಾರ್ಡಿಯಾಕ್​ ಅರೆಸ್ಟ್​ ಆಗಿದೆ, ಸಡನ್​ ಡೆತ್​ ಸಂಭವಿಸಿದೆ ಎಂದರೆ ನಂಬಬಹುದು. ಆದರೆ ಈ ಮೇಲಿನ ಎಲ್ಲಾ ಪ್ರಕರಣಗಳಲ್ಲೂ ಆ ಮಟ್ಟದ ಒತ್ತಡ ಕಾಣಿಸುವುದಿಲ್ಲ. ನಟ ಪುನೀತ್​ ರಾಜ್​ಕುಮಾರ್​, ಕಳೆದ 2 ವರ್ಷದಿಂದ ಯಾವುದೇ ಒತ್ತಡವಿಲ್ಲದೆ ಕೊರೊನಾ ಸಮಯದಲ್ಲಿ ಉತ್ತಮ ವ್ಯಾಯಾಮ ಮಾಡುತ್ತಾ ಬದುಕಿದ್ದರು. ಇನ್ನೂ ಕೋಲಾರದ ಚೈತ್ರಾ ಬಿಜಿಎಸ್​​ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು ಚಿಕ್ಕಮಗಳೂರಿನ ಗಾನವಿ, ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಸ್ಟಾಪ್​​ ನರ್ಸ್​, ಇನ್ನೂ ಉಪ್ಪಿನಮಗಡಿಯ ನಾಗೇಶ್​ ಕೂಡ ಅರೆ ವೈದ್ಯಕೀಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮೈಸೂರಿನಲ್ಲಿ ಸಾವನ್ನಪ್ಪಿದ ನಿತಿನ್ ಕುಮಾರ್​ ಕಾನೂನು ವಿದ್ಯಾರ್ಥಿ. ಇವರಿಗೆ ಒತ್ತಡದಿಂದಲೇ ಕಾರ್ಡಿಯಾಕ್​ ಅರೆಸ್ಟ್​ ಆಗಿದೆ ಎನ್ನುವುದನ್ನು ಸ್ವತಃ ವೈದ್ಯರೂ ಒಪ್ಪಲಾರರು. ಹಾಗಿದ್ದರೆ ಇವರ ಸಾವಿಗೆ ಕಾರಣವೇನು..? ವೈದ್ಯಲೋಕಕ್ಕೆ ಸವಾಲು ಹಾಕಿರುವ ಸಾವುಗಳು. ಅಧ್ಯಯನದಿಂದ ಮಾತ್ರ ಉತ್ತರ ಸಿಗಬೇಕಿದೆ.

Related Posts

Don't Miss it !