The Public Spot
ದೇಶ-ವಿದೇಶ

ಇರಾನ್‌ ಸರ್ವೋಚ್ಛ ನಾಯಕ, ಇಸ್ರೇಲ್‌ ಪ್ರಧಾನಿ ಇಬ್ಬರೂ ಇಲ್ಲ.. ಏನಾದ್ರು..?

ಇರಾನ್‌ ಮೇಲೆ ಯುದ್ಧ ಸಾರಿದ್ದ ಅಮೆರಿಕ ಹಾಗೂ ಇಸ್ರೇಲ್‌ ಥಂಡಾ ಹೊಡೆದಿವೆ ಎನ್ನಬಹುದು. ಇರಾನ್‌ ದೊಡ್ಡ ಪ್ರಮಾಣದಲ್ಲಿ ಪ್ರತಿರೋಧ ತೋರಿಸದೆ ಶರಣಾಗುತ್ತದೆ ಎಆಂದುಇ ಭಾವಿಸಿದ್ದ ಅಮೆರಿಕದ ಲೆಕ್ಕಾಚಾರ ತಲೆಕೆಳಗಾಗಿದೆ. ಇದೀಗ ಅಮೆರಿಕ ಹಾಗೂ ಇಸ್ರೇಲ್‌ ಮೇಲೆ ಇರಾನ್‌‌ ದಾಳಿ ಮಾಡುವ ಮೂಲಕ ಪ್ರತ್ಯುತ್ತರ ನೀಡುತ್ತಿದೆ. ಹೊರ್ಮುಜ್‌ ಜಲಸಂಧಿಯನ್ನು ನಾವು ಹತೋಟಿಗೆ ತೆಗೆದುಕೊಂಡಿದ್ದೇವೆ. ಯಾವುದೇ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ, ಶೇಕಡ 90ರಷ್ಟು ಇರಾನ್‌ ಭೂ ಭಾಗದ ಮೇಲೆ ಅಮೆರಿಕ ದಾಳಿ ಮಾಡಿದೆ. 7 ಸಾವಿರ ಸ್ಥಳಗಳನ್ನು ಗುರುತಿಸಿ ದಾಳಿ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇರಾನ್ ಯುದ್ಧವನ್ನು ಅಂತ್ಯ ಮಾಡಿದರೆ ಅವರೊಂದಿಗೆ ವ್ಯಾಪಾರ ವಹಿವಾಟು ಮಾಡುತ್ತೇವೆ ಎಂದು ಘೋಷಣೆ ಮಾಡಿದೆ. ಇಸ್ರೇಲ್ ಮತ್ತು ಅಮೆರಿಕ ದಾಳಿಯಿಂದ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೊಜ್ತಾಬರನ್ನ ಉಳಿಸಿಕೊಳ್ಳಲು IRGC ರಹಸ್ಯವಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ಕರೆದೊಯ್ದಿದೆ ಎನ್ನಲಾಗಿದೆ. ಮಾಸ್ಕೋದಲ್ಲಿ ಚಿಕಿತ್ಸೆ ನಂತರ ಮೊಜ್ತಾಬ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹುನನ್ನ ಹತ್ಯೆ ಮಾಡಿದ್ದೇವೆ ಎಂದು ಈಗಾಗಲೇ ಇರಾನ್‌ ಘೋಷಣೆ ಮಾಡಿದೆ. ಆದರೆ ಇಸ್ರೇಲ್‌ ವಿಡಿಯೋ ರಿಲೀಸ್‌ ಮಾಡುವ ಮೂಲಕ ನೆತನ್ಯಾಹುಗೆ ಏನೂ ಆಗಿಲ್ಲ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಆದರೆ ಇಸ್ರೇಲ್‌ ರಿಲೀಸ್‌ ಮಾಡಿದ್ದು AI ವಿಡಿಯೋ ಎನ್ನಲಾಗ್ತಿದೆ. ಆದರೆ ಭಾರತೀಯ ರಾಯಭಾರ ಅಧಿಕಾರಿ ರುವೆನ್‌ ಅಜರ್‌, ನಾನು ವೈಯಕ್ತಿಕವಾಗಿ ನೋಡಿದ್ದೇನೆ. ನೇತನ್ಯಾಹು ಬದುಕಿದ್ದಾರೆ, ಸತ್ತಿಲ್ಲ ಎಂದಿದ್ದಾರೆ. ಈ ನಡುವೆ ಇಸ್ರೇಲ್ ಮತ್ತು ಇರಾನ್​ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನವನ್ನ ಭಾರತ ಚುರುಕುಗೊಳಿಸಿದೆ. 550ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಕರೆತರಲಾಗಿದೆ. ಅರ್ಮೇನಿಯಾ ಮೂಲಕ ಭಾರತಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ದೃಢಪಡಿಸಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ಹಿನ್ನೆಲೆ ಭಾರತದಲ್ಲಿ ಗ್ಯಾಸ್​​ ಅಭಾವ ಹೆಚ್ಚುತ್ತಿದೆ. ಯುದ್ಧದ ನಡುವೆಯೂ ಹೊರ್ಮೂಜ್ ಜಲಸಂಧಿ ದಾಟಿ 45 ಸಾವಿರ ಮೆಟ್ರಿಕ್ ಟನ್ LPG ಹೊತ್ತ ಶಿವಾಲಿಕ್ ಹಡಗು ಭಾರತಕ್ಕೆ ಬಂದು ತಲುಪಿದೆ. ಸುರಕ್ಷಿತವಾಗಿ ಶಿವಾಲಿಕ್ ಹಡಗು, ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರುಗೆ ಆಗಮಿಸಿದೆ. ಇಂದು ಮತ್ತೊಂದು ಹಡುಗು ನಂದಾದೇವಿ ಬರಲಿದೆ.. ಈ ಹಡುಗಿನಲ್ಲಿ 46 ಸಾವಿರ ಮೆಟ್ರಿಕ್‌ ಟನ್‌ ಎಲ್‌ಪಿಜಿ ಬರ್ತಿದೆ.. ನಿನ್ನೆ ಭಾರತ ತಲುಪಿದ ಶಿವಾಲಿಕ್ ಹಡಗು ಇವತ್ತು ಮಂಗಳೂರು ಪೋರ್ಟ್‌ಗೆ ತಲುಪಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆಗೆ ಸೇರಿದ ಶಿವಾಲಿಕ್ ಹಡಗು LPG ಹೊತ್ತು ಬಂದಿದ್ದು, ಕೊಂಚ ನೆಮ್ಮದಿ ತರಿಸಿದೆ.

Related posts

Stamped death; ತಮಿಳು ನಟ ವಿಜಯ್​​ Rally ಯಲ್ಲಿ ಕಾಲ್ತುಳಿತ.. 38 ಜನ ಸಾವು..!

Publicspot

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot

Indian Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು..

ಯಶವಂತಿ

Supreme Court on Waqf; ಕೇಂದ್ರದ ವಕ್ಫ್‌ ಕಾಯ್ದೆ ತಿದ್ದುಪಡಿಗೆ ಸುಪ್ರೀಂಕೋರ್ಟ್‌ನಲ್ಲಿ ಸಿಹಿ ಕಹಿ..

Publicspot

ಇರಾನ್​ ಇನ್ಮುಂದೆ ಒಂಟಿಯಲ್ಲ.. ಚೀನಾ, ರಷ್ಯಾ ಬೆಂಬಲ.. ಯುದ್ಧ ಮತ್ತಷ್ಟು ತೀವ್ರ..

Publicspot

ಇರಾನ್‌ ಮೇಲೆ ಅಮೆರಿಕ, ಇಸ್ರೇಲ್‌ ದ್ವೇಷಕ್ಕೆ ಕಾರಣ ಏನು..? ಖಮೇನಿ ಕೊಂದಿದ್ಯಾಕೆ..?

Publicspot