September 14, 2026
The Public Spot
ರಾಜಕೀಯ

ಕಾಂಗ್ರೆಸ್‌ನಲ್ಲಿ ನಿಲ್ತಿಲ್ಲ ಮಿಡ್‌ನೈಟ್‌ ಪಾರ್ಟಿ.. ಮೀಟಿಂಗ್‌..

ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚುತ್ತಿದೆ. ಸಚಿವಾಕಾಂಕ್ಷಿಗಳು ನಿನ್ನೆ ರಾತ್ರಿ ಮಹತ್ವ ಸಭೆ ಮಾಿದ್ದಾರೆ. ಬಜೆಟ್‌ ಅಧಿವೇಶನದ ನಡುವೆ ಮಹತ್ವ ಪಡೆದುಕೊಂಡಿದೆ ಕಾಂಗ್ರೆಸ್ ಹಿರಿಯ ಶಾಸಕರ ಸಭೆ. ಬೆಂಗೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ಮಾಡಲಾಗಿದೆ. ಸಭೆಗೆ ಕಾಂಗ್ರೆಸ್ ಹಿರಿಯ ಶಾಸಕರು ಆಗಮಿಸಿದ್ದಾರೆ. ಮೂರ್ನಾಲ್ಕು ಬಾರಿ ಗೆದ್ದ ಶಾಸಕರು, ಸಂಪುಟ ಪುನಾರಚನೆ ವೇಳ ಸಚಿವ ಸ್ಥಾನ ಪಡೆಯಲು ತಂತ್ರಗಾರಿಗೆ ಮಾಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮೂರು ವರ್ಷದ ತುಂಬುವ ಸನಿಹದಲ್ಲಿ ಇದ್ದರೂ ಸಚಿವ ಸ್ಥಾನ ಸಿಗದ್ದಕ್ಕೆ ಬೇಸರಗೊಂಡಿದ್ದು, ಎರಡೂವರೆ ವರ್ಷದ ಬಳಿಕ ಸಚಿವರಾಗುವ ಕನಸು ಕಂಡಿದ್ದ ಆಕಾಂಕ್ಷಿಗಳಿಗೆ ಬೇಸರ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಬೇಸರಗೊಂಡಿರೋ ಸಚಿವ ಆಕಾಂಕ್ಷಿಗಳು ಮಹತ್ವದ ಸಭೆ ನಡೆಸಿದ್ದಾರೆ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಹಿರಿಯ ಶಾಸಕರು ಸಭೆ ನಡೆಸಿ, ಹೈಕಮಾಂಡ್‌ ಕದ ತಟ್ಟಲು‌ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿಯ ಸಭೆ ಬಳಿಕೆ ಹೈಕಮಾಂಡ್‌‌ಗೆ ಮನವಿ ಸಲ್ಲಿಕೆ ಮಾಡಲು ನಿರ್ಧಾರ ಮಾಡಿದ್ದು, ಸಿಎಂ ಸಿದ್ದರಾಮಯ್ಯಗೂ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

ಬಜೆಟ್ ಅಧಿವೇಶನದ ಬಳಿಕ ತಕ್ಷಣ ಸಂಪುಟ ಪುನಾರಚನೆ ಮಾಡುವಂತೆ ಮನವಿ ಮಾಡಲಿದ್ದು, ಕಾಂಗ್ರೆಸ್‌ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಲೂ ನಿರ್ಧಾರ ಆಗಿದೆ ಎನ್ನಲಾಗಿದೆ. ಶಾಸಕರಾದ ಗೋಪಾಲಕೃಷ್ಣ, ಅಬ್ಬಯ್ಯ ಪ್ರಸಾದ್, ನಾರಾಯಣ ಸ್ವಾಮಿ ಸೇರಿ 25ಕ್ಕೂ ಹೆಚ್ಚು ಹಿರಿಯ ಶಾಸಕರು ಸಭೆಯಲ್ಲಿ ಸೇರಿದ್ದು, ಬೌರಿಂಗ್ ಇನ್ಸ್ ಟಿಟ್ಯೂಟ್ ನಲ್ಲಿ ಹಿರಿಯ ಕಾಂಗ್ರೆಸ್ ಶಾಸಕರು ಮಹತ್ವದ ನಿರ್ಧಾರ ಮಾಡಿದ್ದಾರೆ. 30 ಮಂದಿ ಶಾಸಕರು ಸಭೆಯಲ್ಲಿ ಭಾಗಿಯಾಗಿ ಈ ಬಾರಿ ಹೊಸಬರಿಗೆ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದಾರೆ.

ಹಿರಿಯ ಶಾಸಕರ ಸಭೆ ಬಳಿಕ ಶಾಸಕರಾದ ಶಿವಲಿಂಗೇಗೌಡ ಮತ್ತು ಬೇಳೂರು ಗೋಪಾಲಕೃಷ್ಣ ಮಾತಾಡಿ, ಇದು ಪಕ್ಷದ ವಿರುದ್ದದ ಸಭೆಯಲ್ಲ, 30 ಮಂದಿ ಶಾಕರುಗಳು ಸೇರಿದ್ವಿ, ಪ್ರಬಲ ಆಕಾಂಕ್ಷಿ ಆಗಿದ್ದೇನೆ. ಸಚಿವ ಸ್ಥಾನ ಯಾರಿಗೂ ಕೊಟ್ಟರೂ ಸರಿ, ಆದರೆ ಪುನಾರಚನೆ ಆಗಬೇಕು ಎಂದಿದ್ದಾರೆ ಶಾಸಕ ಶಿವಲಿಂಗೇಗೌಡ. ಇನ್ನು ನಾನು ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆ ಆಗುವಾಗ ನನಗೆ ಆಶ್ವಾಸನೆ ಕೊಟ್ಟಿದ್ದರು. ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದಿದ್ದಾರೆ. ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಏನೂ ಚರ್ಚೆ ಇಲ್ಲ ಎಂದಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಮೂರ್ನಾಲ್ಕು ಬಾರಿ ಗೆದ್ದವ್ರು ಎಲ್ಲಾ ಸೇರಿದ್ವಿ. ಎರಡೂ ಮುಕ್ಕಾಲು ವರ್ಷ ಆಯ್ತು.. ನಮಗೆ ಹೇಳಿದ್ರು, ಚೆಂಜ್ ಮಾಡ್ತೇವೆ ಅಂತ. ಇನ್ನೂ ಮಾಡಿಲ್ಲ.. ನಮಗೂ ಅವಕಾಶ ಕೊಡಬೇಕು.. ಯಾರಿಗೆ ಅವಕಾಶ ಕೊಟ್ಟರೂ ಸರಿ, ನೋಡೋಣ ಎಂದಿದ್ದಾರೆ. ಇದು ಕೇವಲ ಸಚಿವ ಸಂಪುಟದ ಬದಲಾವಣೆ ಬಗ್ಗೆಯಷ್ಟೇ ಚರ್ಚೆ ಎಂದು ಸ್ಪಷ್ಟನೆಯನ್ನೂಕೊಟ್ಟಿದ್ದಾರೆ.

Related posts

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot

ಬೀಸೋ ದೊಣ್ಣೆಯಿಂದ ಪಾರಾಗುವ ಪ್ರಯತ್ನ ಮಾಡಿತೇ ಕಾಂಗ್ರೆಸ್‌ ಸರ್ಕಾರ..?

Publicspot

ಡಿ.ಕೆ ಶಿವಕುಮಾರ್‌ ನೇತೃತ್ವದ ಸರ್ಕಾರ ರಚನೆ.. ಏನೆಲ್ಲಾ ಆಯ್ತು..?

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

ಚಿಕ್ಕಮಗಳೂರಿನ ಶೃಂಗೇರಿ ಶಾಸಕರು ಯಾರು..? ಮರ ಮತ ಎಣಿಕೆ ಏನಾಯ್ತು..?

Publicspot