‘ದೆಹಲಿಗೆ ಬನ್ನಿ’ ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಸಜ್ಜಾಗಿದ್ಯಾ ತಂಡ..?

ಕಾಂಗ್ರೆಸ್​ ಶಾಸಕರನ್ನು ಸೆಳೆಯುವ ಕಸರತ್ತು ಆರಂಭ ಆಗಿದೆ. ಸಮಯ ಬಂದಾಗ ಈ ಬಗ್ಗೆ ಹೇಳ್ತೀನಿ ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್​ ಹಿಂದೊಮ್ಮೆ ಹೇಳಿದ್ದರು. ಯಾರನ್ನು ಸಂಪರ್ಕ ಮಾಡ್ತಿದ್ದಾರೆ..? ಏನೇನು ಆಮೀಷ ಕೊಡ್ತಿದ್ದಾರೆ ಅನ್ನೋದು ನಮಗೆ ಗೊತ್ತಿದೆ. ಶಾಸಕರು ಸಿಎಂ ಸಿದ್ದರಾಮಯ್ಯ ಹಾಗು ನನ್ನ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದಿದ್ದರು. ಇದೀಗ ಕಾಂಗ್ರೆಸ್​ ಶಾಸಕರನ್ನು ಸೆಳೆಯುತ್ತಿರುವ ಬಗ್ಗೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್​ ಶಾಸಕ ರವಿಕುಮಾರ್ ಗಣಿಗ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರ ಕೆಡವಿದ್ದ ಟೀಂ ಆ್ಯಕ್ಟೀವ್..! […]

ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಮೋದಿ ಮಾಸ್ಟರ್ ಪ್ಲ್ಯಾನ್..! ಬಿಜೆಪಿ ನಾಯಕರಿಗೆ ಹೇಳಿದ ಕಿವಿಮಾತು..

ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇನ್ಮುಂದೆ ಪ್ರತೀ ತಿಂಗಳು ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರಾದೇಶಿಕವಾಗಿ ಮತ್ತು ಆಯಕಟ್ಟಿನ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಎಂದು ಮೋದಿ ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ರಾಜಕೀಯ ಸಭೆಗಳಲ್ಲಿ ಈ ರೀತಿಯ ಜೋಷ್ ಇರುತ್ತದೆ. ಆದರೆ ಇಲ್ಲಿ ಸರ್ಕಾರದ ಕಾರ್ಯಕ್ರಮದಲ್ಲಿ ಆ ಜೋಷ್ ಕಾಣಿಸಿದೆ. ಈ ಕ್ಷಣಕ್ಕೂ ನಾನು ಹೇಳುತ್ತೇನೆ […]

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ, ಬಿಜೆಪಿ ನಾಯಕರ ಖಂಡನೆ..! ಪ್ಲ್ಯಾನ್​ ಯಾರದ್ದು..?

ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ಎಸೆಯಲಾಗಿದೆ. ಹಿಂದೂ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಬಳಿಕ ಮೊಟ್ಟೆ ಎಸೆದಿದ್ದಾರೆ, ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೇರವಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದು, ಒಂದು ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಇದೇ ರೀತಿ ತಿರುಗಿ ಬಿದ್ದರೆ ನೀವು ಮನೆಯಿಂದ ಹೊರಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಗೊತ್ತಿರಲಿ ಎಂದು ಗುಡುಗಿದ್ದಾರೆ. ಇನ್ನು ಮುಂದಿನ ಆರೇಳು ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ. […]

ಹೂಮಾಲೆ ಹಾಕಿ B.S​​ ಯಡಿಯೂರಪ್ಪ ಅವರನ್ನು ಬಂಧಿಸಿತೇ ಬಿಜೆಪಿ ಹೈಕಮಾಂಡ್​..?

ಕರ್ನಾಟಕ ರಾಜಕೀಯದಲ್ಲಿ ತನ್ನದೇ ಆದ ಛಾಪು ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್​​ ಪ್ರಮುಖ ಸ್ಥಾನಮಾನ ನೀಡಿದೆ. ರಾಷ್ಟ್ರೀಯ ಚುನಾವಣಾ ಸಮಿತಿ ಹಾಗು ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ 11 ಜನರ ಸಂಸದೀಯ ವ್ಯವಹಾರಗಳ ಸಮಿತಿಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಹೈಕಮಾಂಡ್​ ಮಹತ್ವದ ಹೆಜ್ಜೆ ಇರಿಸಿದೆ. ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ಬಳಿಕ ಯಾವುದೇ ಹುದ್ದೆ ಇಲ್ಲದೆ ರಾಜ್ಯದಲ್ಲಿ ಅತಂತ್ರವಾಗಿದ್ದ ಯಡಿಯೂರಪ್ಪ ಅವರನ್ನು ದೆಹಲಿಗೆ ಸೆಳೆಯುವ […]

‘ಮುಂದಿನ ಮುಖ್ಯಮಂತ್ರಿ ಮುರುಗೇಶ್​ ನಿರಾಣಿ’ ಫೋಸ್ಟರ್​ ಅಭಿನಂದನೆ..!

Murugesh Nirani The Public Spot

ಮಾಧುಸ್ವಾಮಿ ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್​ಮೆಂಟ್​ ಕೆಲಸ ಮಾಡುತ್ತ 8 ತಿಂಗಳು ಮುಗಿಸುವ ಕೆಲಸ ಮಾಡ್ತಿದ್ದೇವೆ ಎಂದು ಹೇಳಿಕೆಯಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಬಿಜೆಪಿ ಸರ್ಕಾರ ಇದೀಗ ಮತ್ತೊಂದು ಮುಜುಗರಕ್ಕೆ ಒಳಗಾಗಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದರೂ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎನ್ನುತ್ತಲೇ ಬೇರೇ ಬೇರೆ ಚಟುವಟಿಕೆಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿ ಬದಲಾಗ್ತಾರಾ..? ಎಂದರೆ ಇಲ್ಲ ಎನ್ನುವ ಬಿಜೆಪಿ ಮುಂದಿನ ಮುಖ್ಯಮಂತ್ರಿ ಎಂದು ಪೋಸ್ಟ್​ ಹಾಕಿದರೆ ಏನರ್ಥ ಎನ್ನುವುದನ್ನು ಬಿಜೆಪಿ ನಾಯಕರೇ […]

BJP ನಾಯಕರು ಏನೇ ಹೇಳಿದ್ರೂ ಮುಖ್ಯಮಂತ್ರಿ ಬದಲಾಗ್ತಾರೆ, BSY ಸುಳಿವು..!!

B S Yeddyurappa The Public Spot Cm Change

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಅನ್ನೋದು ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ರಂಗದ ಗುಸುಗುಸು. ಇದಕ್ಕೆಲ್ಲಾ ಉತ್ತರ ಕೊಡಬೇಕಾಗುತ್ತೆ ಅನ್ನೋ ಕಾರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊರೊನಾ ಸೋಂಕಿನ ನೆಪದಲ್ಲಿ ಮನೆ ಸೇರಿದ್ದಾರೆ ಎನ್ನುವುದು ರಾಜಕೀಯ ಚದುರಂಗದಾಟ ಬಲ್ಲವರ ಸೀಕ್ರೆಟ್​​ ಟಾಕ್​. ಇದ್ರ ನಡುವೆ ಬಿಜೆಪಿ ಲೀಡರ್​​ಶಿಪ್​ ಬದಲಾವಣೆಗೆ ಬ್ಯಾಕ್​ ಸ್ಟೇಜ್​​ನಲ್ಲಿ ವರ್ಕೌಟ್​ ನಡೀತಾ ಇದೆ. ಆದರೆ ಬಿಜೆಪಿ ನಾಯಕರು, ಶಾಸಕರು ಮಾತ್ರ ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ ಎನ್ನುವ ಮೂಲಕ ಗುಟ್ಟಾಗಿ ಗೇಮ್​ ಮಾಡುವ ಕೆಲಸ […]

JDS​, BJPಗೆ ನಡುಕ ಶುರು.. ರಾಜ್ಯಕ್ಕೆ ಬಂದಿಳಿದ ಸ್ಟ್ರಾಟಜಿ ಮಾಸ್ಟರ್​ ಅಮಿತ್​ ಷಾ..!

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬದ ನೆಪದಲ್ಲಿ ನಡೆದ ಕಾಂಗ್ರೆಸ್​ ಪಕ್ಷದ ಅಥವಾ ಸಿದ್ದರಾಮಯ್ಯ ಅಭಿಮಾನಿಗಳ ಶಕ್ತಿ ಪ್ರದರ್ಶನದಲ್ಲಿ ನಿರೀಕ್ಷೆಗೂ ಮೀರಿದ ಜನರು ಸೇರಿದ್ದು ಕಾಂಗ್ರೆಸ್​ನಲ್ಲಿ ಚೇತರಿಕೆ ನೀಡಿದ್ದರೆ, ಜೆಡಿಎಸ್​ ಹಾಗು ಬಿಜೆಪಿ ಪಾಳಯದಲ್ಲಿ ಆತಂಕದ ಛಾಯೆ ಮೂಡುವಂತೆ ಮಾಡಿದೆ. ಸುಮಾರು 8 ಲಕ್ಷಕ್ಕೂ ಹೆಚ್ಚಿನ ಜನರು ಸೇರ್ಪಡೆ ಆಗಿದ್ದು, ಹತ್ತಾರು ಕಿಲೋಮೀಟರ್​ ದೂರ ಟ್ರಾಫಿಕ್​ ಸಮಸ್ಯೆ ಸೃಷ್ಟಿಯಾಗಿತ್ತು. ಮಧ್ಯರಾತ್ರಿ ಆದರೂ ಜನರು ತಮ್ಮ ವಾಹನಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗಲು ಪರದಾಡುವಂತಾಗಿತ್ತು. ಕಾಂಗ್ರೆಸ್​​ ಪಕ್ಷವೇ ಮುಂದಿನ ಬಾರಿ […]

ಸಿದ್ದರಾಮಯ್ಯಗೆ 75ನೇ ಹುಟ್ಟುಹಬ್ಬ, 75 ಕೋಟಿ ವೆಚ್ಚದಲ್ಲಿ ಅದ್ಧೂರಿ ಕಾರ್ಯಕ್ರಮ..!

ಮಾಜಿ ಸಿಎಂ ಹಾಗು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತನ್ನ ವಾಕ್​ ಚಾತುರ್ಯದಿಂದಲೇ ಜನಮಾನಸದಲ್ಲಿ ಖ್ಯಾತಿ ಪಡೆದಿರುವ ಜನನಾಯಕ. ಇಂದು ಆಗಸ್ಟ್​ 3, ಸಿದ್ದರಾಮಯ್ಯ 75ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದಾವಣೆಗೆರೆಯಲ್ಲಿ ಬೃಹತ್​ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬರೋಬ್ಬರಿ 75 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಸುಮಾರು 8 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ಪ್ರತಿಯೊಂದು ಕ್ಷೇತ್ರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇನ್ನೂ ಹಳೇ ಮೈಸೂರು […]

ಬಾಯ್​ ಮುಚ್ಕೊಂಡು ಕೆಲಸ ಮಾಡಿ ಎಂದಿದ್ದ ಡಿಕೆಶಿಗೆ ಜಮೀರ್​ ಕೌಂಟರ್​ ಅಟ್ಯಾಕ್​​..!

ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಹೇಳಿಕೆ ಸಿದ್ದು ಆಪ್ತ ನಾಯಕರ ಬಾಯಲ್ಲಿ ಸುರಿಯಲಾರಂಭಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಹೈಕಮಾಂಡ್​ ಎದುರು ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ, ಒಪ್ಪಿಗೆ ಪಡೆಯುವಲ್ಲಿ ವಿಫಲರಾಗಿದ್ದರು. ಸಾಮೂಹಿಕ ನಾಯಕತ್ವಕ್ಕೆ ಜೋತು ಬಿದ್ದ ಕಾಂಗ್ರೆಸ್​ ಹೈಕಮಾಂಡ್​ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ ಎನ್ನುವ ನಿರ್ಣಯವನ್ನು ಕಡ್ಡಿ ಮುರಿದಂತೆ ಸೂಚಿಸಿತ್ತು. ಆ ಬಳಿಕ ಕೆಲ ಕಾಲ ಮೌನವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಆಪ್ತರ ಬಳಗವನ್ನು ಮಾಧ್ಯಮಗಳ ಎದುರು ಛೂ ಬಿಟ್ಟಿದ್ದಾರೆ. ದಿನಬೆಳಗಾದರೆ ಆಪ್ತ ನಾಯಕರು ಸಿದ್ದರಾಮಯ್ಯನವರೇ […]

24 ಗಂಟೆಯೊಳಗೆ ರಾಜಾಹುಲಿ ಯಡಿಯೂರಪ್ಪ ಬಾಯಿ ಮುಚ್ಚಿಸಿದ ಹೈಕಮಾಂಡ್​..!?

ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಅಂತಾನೇ ಖ್ಯಾತಿ ಗಳಿಸಿರುವ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ರು. ಇದೇ ವೇಳೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ, ನೀವೆಲ್ಲಾ ಅವರ ಬೆಂಬಲಕ್ಕೆ ಇರಬೇಕು ಅನ್ನೋ ಸಂದೇಶ ಕೂಡ ನೀಡಿದ್ರು. ಆದ್ರೆ ಕೇವಲ 24 ಗಂಟೆಯಲ್ಲಿ ತಮ್ಮ ಹೇಳಿಕೆಯನ್ನು ವಾಪಸ್​ ಪಡೆದ ಮಾಜಿ ರಾಜಾಹುಲಿ, ಹೈಕಮಾಂಡ್​ ಹೇಳಿದ್ದಕ್ಕೆ ಬದ್ಧ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಲ್ಲಿ ಸೂಚಿಸ್ತಾರೆ ಅಲ್ಲಿಂದ ಸ್ಪರ್ಧೆ […]