The Public Spot
ಅಪರಾಧ

ಶಿವಮೊಗ್ಗದಲ್ಲಿ SSLC ಸ್ಪೆಷಲ್ ಕ್ಲಾಸ್‌ ಮುಗಿಸಿ ಬರ್ದತಿದ್ದ ಹುಡುಗನನ್ನು ಹತ್ಯೆ!

ಶಿವಮೊಗ್ಗದಲ್ಲಿ ಕೋಮು ದಳ್ಳೂರಿಗೆ ಆಹ್ವಾನ ಕೊಡುವಂತಹ ಘಟನೆ ನಡೆದಿದೆ. SSLC ಓದುತ್ತಿದ್ದ ಹಿಂದೂ ಬಾಲಕನನ್ನು ಕೊಲೆ ಮಾಡಲಾಗಿದೆ. ಶಿವಮೊಗ್ಗ ನಗರದ ಊರಗಡೂರಿನಲ್ಲಿ ಘಟನೆ ನಡೆದಿದೆ. ಊರಗಡೂರಿನ ಸರ್ಕಾರಿ ಫ್ರೌಢಶಾಲೆಯಲ್ಲಿ SSLC ಓದುತ್ತಿದ್ದ ಬಾಲಕನಿಗೆ ಪ್ರಿಪರೇಟರಿ ಪರೀಕ್ಷೆ ಹಿನ್ನೆಲೆಯಲ್ಲಿ ವಿಶೇಷ ತರಗತಿಗೆ ಹಾಜರಾಗಿದ್ದ ಬಾಲಕ ಕೊಲೆ ಆಗಿದ್ದಾನೆ. ಸ್ಪೆಷಲ್ ಕ್ಲಾಸ್ ಮುಗಿಸಿ, ಹೋಗುವಾಗ ಈ ದುರ್ಘಟನೆ ನಡೆದಿದೆ. ಸರ್ಕಾರಿ ಶಾಲೆಯಿಂದ ಅನತಿ ದೂರದಲ್ಲಿ ಹಲ್ಲೆ ನಡೆದಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ 3-4 ಅಪ್ತಾಪ್ತ ಬಾಲಕರಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಬಾಲಕರಿಂದ ತೀವ್ರವಾಗಿ ಹಲ್ಲೆಯಾಗಿ ಅಸ್ತಸ್ವಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಅದೇ ಶಾಲೆಯಲ್ಲಿ ಓದಿ ಡ್ರಾಪ್ ಔಟ್ ಆಗಿದ್ದ ಬಾಲಕರೇ ಕೊಲೆ ಮಾಡಿದ್ದಾರೆ. ಮೃತ ಬಾಲಕನ ಮೃತದೇಹವನ್ನು ಸರ್ಕಾರಿ ಮೆಗ್ಗಾನ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಶವಾಗಾರಕ್ಕೆ ಭೇಟಿ ನೀಡಿದ ಎಸ್‌ಪಿ ನಿಖಿಲ್, ಘಟನಾ ಸ್ಥಳದಲ್ಲಿದ್ದ ಬಾಲಕನಿಂದ ಮಾಹಿತಿ ಪಡೆದಿದ್ದಾರೆ. ಶಿವಮೊಗ್ಗ ಶಾಸಕ ಎಸ್.ಎನ್ ಚನ್ನಬಸಪ್ಪ ಕೂಡ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶವಾಗಾರದ ಬಳಿ ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಿವಮೊಗ್ಗ ನಗರದಾದ್ಯಂತ ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಿವಮೊಗ್ಗ ಹೊರವಲಯದ ಊರುಗಡೂರಿನಲ್ಲಿ ಅಪ್ರಾಪ್ತ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿ ಬಿ ನಿಖಿಲ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಹತ್ಯೆ ನಡೆದಿದೆ. ವಿಶೇಷ ತರಗತಿ ಮುಗಿಸಿಕೊಂಡು ಹೊರಟ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ. ಐದಾರು ಜನರಿದ್ದ ಅಪ್ರಾಪ್ತ ಬಾಲಕರ ಗುಂಪು ಹಲ್ಲೆ ನಡೆಸಿದೆ. ಇದರಿಂದಾಗಿ ಅಸ್ವಸ್ಥಗೊಂಡ ವಿದ್ಯಾರ್ಥಿ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆತರುತ್ತಿರುವಾಗ ಮಾರ್ಗದಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇದೇ ಶಾಲೆಯಲ್ಲಿ ಓದಿ ಡ್ರಾಪ್ ಔಟ್ ಆಗಿದ್ದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದೇ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈಗಾಗಲೇ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಇನ್ನಷ್ಟು ಅಪ್ರಾಪ್ತ ಬಾಲಕರ ಬಂಧನ ಆಗಬೇಕಾಗಿದೆ ಎಂದಿದ್ದಾರೆ.

ಶಿವಮೊಗ್ಗ ಹೊರವಲಯದ ಊರುಗಡೂರಿನಲ್ಲಿ ಅಪ್ರಾಪ್ತ ಬಾಲಕನ ಹತ್ಯೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಶಿವಮೊಗ್ಗ ಬಿಜೆಪಿ ಶಾಸಕ ಎಸ್.ಎನ್ ಚನ್ನಬಸಪ್ಪ, ಇದೊಂದು ಅತ್ಯಂತ ದುಃಖಕರ ವಿಚಾರ. ವಿಶೇಷ ತರಗತಿ ಮುಗಿಸಿಕೊಂಡು ಹೊರಟಿದ್ದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ. ಇನ್ನೊಬ್ಬನ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲು ಹೋದ ವಿದ್ಯಾರ್ಥಿ ಜೀವ ಕಳೆದುಕೊಂಡಿದ್ದಾನೆ. ಬೆಳಗ್ಗೆಯಷ್ಟೇ ಊರಗಡೂರಿನ ಪರಿಸ್ಥಿತಿಯ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲ ಆಗಿದೆ. ಹಿಂದುಗಳ ಹತ್ಯೆ ನಡೆದಾಗ ಅವರ ಹೆಣ ಹೊರಲು ಪೊಲೀಸರು ಬರುತ್ತಾರೆ. ಘಟನೆ ಸಂಬಂಧ ಕೆಲವರನ್ನ ಬಂಧಿಸಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ. ಆದರೆ ಈಗ ಹೋಗಿರುವ ಜೀವ ಮತ್ತೆ ಬರುತ್ತಾ..? ಎಂದು ಪ್ರಶ್ನಿಸಿದ್ದಾರೆ.

ಶಿರಾಳಕೊಪ್ಪದಲ್ಲೂ ಸಹ ಇಂಥದೇ ಘಟನೆ ನಡೆದಿದೆ. ಆದಾಗಿಯೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದಿರುವ ಶಾಶಕ ಚನ್ನಬಸಪ್ಪ, ಕೇವಲ ಹತ್ಯೆಗೀಡಾದ ಹಿಂದೂಗಳ ಪೋಸ್ಟ್ ಮಾರ್ಟಂ ಹಾಗೂ ಶವದ ಮೆರವಣಿಗೆಗೆ ಪೊಲೀಸರು ಸೀಮಿತವಾಗಿದ್ದಾರೆ. ಅವರ ಉಪವಾಸದ ಹಬ್ಬದಲ್ಲೂ ಹಿಂದೂಗಳ ಮೇಲೆ ಹಲ್ಲೆ ಮುಂದುವರಿದಿದೆ. ದ್ವಿಚಕ್ರ ವಾಹನದಲ್ಲಿ ಮೂರ್ನಾಲ್ಕು ಜನರು ದೊಣ್ಣೆ ಹಿಡಿದು ಓಡಾಡುವುದು ಮಾಮೂಲಿಯಾಗಿದೆ. ಮತ್ತೂರು ಸುತ್ತಮುತ್ತಲ ಗ್ರಾಮದಲ್ಲಿ ಹೆಣ್ಣು ಮಕ್ಕಳ ಮೇಲೂ ಹಲ್ಲೆ ನಡೆಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಏನಾದರೂ ಹೇಳಲು ಹೋದರೆ ನಮ್ಮನ್ನು ಕೋಮುವಾದಿಗಳು ಎಂದು ಹೇಳುತ್ತಾರೆ. ಹಾಗೆಂದು ಇಂತಹ ಕೃತ್ಯವನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ..? ಎಂದು ಆಕ್ರೋಶ ಹೊರಹಾಕಿದ್ದಾರೆ.

Related posts

Man Stab a Girl for ; ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ಚಾಕುವಿನಿಂದ ಇರಿತ!!

Publicspot

ದುಷ್ಚಟಕ್ಕೆ ದಾಸರಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್​ ಮಾಡಿದ್ದ ಗೆಳೆಯರು ಅಂದರ್!

Publicspot

Hassan Ganesha Tragedy: ಹಾಸನದಲ್ಲಿ ಗಣೇಶ ಮೆರವಣಿಗೆ ದುರಂತ.. 9 ಸಾವು.. 20ಕ್ಕೂ ಹೆಚ್ಚು ಗಾಯ..

Publicspot

BENGALURU FIRE ACCIDENT: ಬೆಂಕಿ ಅವಘಡಕ್ಕೆ ನಿನ್ನೆ ಒಂದು.. ಇವತ್ತು ಐವರ ಸಜೀವ ದಹನ..

Publicspot

ಅಪ್ಪನ ಕಡು ಕೋಪಕ್ಕೆ ನಡೀತು ಘನಘೋರ ಘಟನೆ.. ಅಯ್ಯೋ ಶಿವನೇ..

Publicspot

ಹೊಲಕ್ಕೆ ಹೊದವರನ್ನು ಗುಂಡಿಟ್ಟು ಕೊಂದಿದ್ಯಾಕೆ ಅರಣ್ಯ ಸಿಬ್ಬಂದಿ..?

Publicspot