The Public Spot
ಅಪರಾಧ

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.. ಬಂಡಾರದ ಲೆಕ್ಕಾಚಾರ..

ನಿನ್ನೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿತ್ತು. ಬೆಂಗಳೂರಿನಲ್ಲಿ ಮೂವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, KRDCL ಚೀಫ್ ಇಂಜಿನಯರ್ ವಸಂತ್ ನಾಯ್ಕ್ ಮನೆ ಹಾಗೂ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರು. ವಸಂತ್​ ನಾಯ್ಕ್ ಮನೆಯಲ್ಲಿ ದಾಖಲೆಗಳ ಪತ್ರಗಳ ಪರಿಶೀಲನೆ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಬಗ್ಗೆ ಪರಿಶೀಲನೆ ಮಾಡಲಾಗಿದೆ.

ಬೆಂಗಳೂರಿನಲ್ಲಿ KRDCL ಚೀಫ್ ಇಂಜಿನಯರ್ ವಸಂತ್ ನಾಯ್ಕ್ ಹಾಗೂ ಸಿಂಗನಾಯಕನಹಳ್ಳಿ ಕೋ ಆಪರೇಟಿವ್ ಸೊಸೈಟಿ CEO ಶಶಿಧರ್ ಮನೆಗಳ ಮೇಲೆ ದಾಳಿ ನಡೆದಿದೆ. ಯಾದಗಿರಿಯಲ್ಲಿ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್​ಸ್ಪೆಕ್ಟರ್ ವಿರೇಶ್ ಹಿರೇಮಠ್, ಮಂಡ್ಯದಲ್ಲಿ PWD AEE ಎಸ್ ಸತೀಶ್ ನಿವಾಸ, ಧಾರವಾಡದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ ಕೆ ಸುರಕೋಡ, ಹಾಸನದಲ್ಲಿ ಮಹಾನಗರ ಪಾಲಿಕೆ AEE ಎಂ ಸಿ ಸತ್ಯನಾರಾಯಣ, ಮೈಸೂರಲ್ಲಿ ಜಲಮಂಡಳಿ ಎಇಇ ಮತ್ತು ಇಇ ( ಇನ್ಚಾರ್ಜ್ ) ಆಶಿಫ್ ಇಕ್ಬಾಲ್ ಮನೆ ಮೇಲೆ ದಾಳಿ ನಡೆದಿದೆ.

ಬೆಂಗಳೂರಿನ ಮೂರು ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತರು ದಾಳಿ ಮಾಡಿದ್ದು, ಮೂರನೇಯವರಾಗಿ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಇಂದ್ರೇಶ್ ಮನೆ ಮೇಲೆ ದಾಳಿ ಮಾಡಲಾಗಿದೆ. ಹೆಬ್ಬಾಳದ ಮನೋರಾಯನ ಪಾಳ್ಯದ CIL ಲೇಔಟ್ ಬಳಿ ಇರುವ ಅಪಾರ್ಟ್​ಮೆಂಟ್​ಗೆ 3 ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ 10 ವರ್ಷಗಳಿಂದ ವಾಸವಾಗಿರುವ ಹೆಬ್ಬಾಳ ವೆಟರ್ನರಿ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಹೆಚ್ .ಸಿ.ಇಂದ್ರೇಶ್ ಮನೆಯಲ್ಲಿ ದಾಖಲೆ ಪತ್ರಗಳನ್ನು ಜಾಲಾಡುತ್ತಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಆದಾಯಕ್ಕೂ ಮೀರಿದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಕೋಟಿ ಕೋಟಿ ಬೆಲೆಯ ಪ್ರಾಪರ್ಟಿ ಪತ್ರಗಳು, ಸಂಬಂಧಿಕರ ಹೆಸರಿನಲ್ಲಿ ಮಾಡಿರುವ ಆಸ್ತಿ ಪತ್ರಗಳೂ ಕೂಡ ಪತ್ತೆಯಾಗಿವೆ. ಚಿನ್ನದ ಆಭರಣಗಳು, ಬೆಳ್ಳಿ ಪಾತ್ರೆಗಳು ಕೂಡ ಅಧಿಕಾರಿಗಳ ಬಂಡಾರದಲ್ಲಿ ಸಿಕ್ಕಿದೆ. ಎಲ್ಲಾ ಅಧಿಕಾರಿಗಳ ಬಳಿ ಸಿಕ್ಕ ಬಂಡಾರದ ಪರಿಶೀಲನೆ ನಡೆದ ಬಳಿಕ ಆದಾಯ ಎಷ್ಟು..? ಆದಾಯ ಮೀರಿದ ಆಸ್ತಿ ಎಷ್ಟು ಅನ್ನೋದು ತಿಳಿಯಬೇಕಿದೆ.

ಸೂಪರಿಂಟೆಂಡೆಂಟ್ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದ ಬಳಿಕ ಹಲವು ದಿನಗಳಿಂದ ಕಚೇರಿಗೆ ಹಾಜರಾಗದ ಅಧಿಕಾರಿ ಮೇಲೆ ದೂರು ದಾಖಲಾಗಿದೆ. ಫೆಬ್ರವರಿ 7ರಂದು ಜನಾರ್ಧನ್​ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಮಾಡಲಾಗಿತ್ತು. ಕರ್ನಾಟಕದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕಾರಿ ಜನಾರ್ಧನ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯೆಲ್ಲಿ, ಜನಾರ್ಧನ್ ಮನೆ ಹಾಗೂ ಸ್ನೇಹಿತರ ಮನೆಯಲ್ಲೂ ತಲಾಶ್ ಮಾಡಲಾಗಿತ್ತು. ದಾಳಿ ವೇಳೆ ಕೋಟಿ ಕೋಟಿ ನಗದು, ಸಾಕಷ್ಟು ಬೆಲೆಬಾಳುವ ವಸ್ತುಗಳು ಪತ್ತೆಯಾಗಿದ್ದವು. ದಾಳಿ ನಂತರ ಈವರೆಗೂ ಜನಾರ್ಧನ್ ಕಚೇರಿಗೆ ಹಾಜರಾಗಿಲ್ಲ. ಹೀಗಾಗಿ ನಗರ ಪೊಲೀಸ್ ಆಯುಕ್ತರಿಗೆ ಕೆ.ಆರ್.ಎಸ್ ಪಕ್ಷದದಿಂದ ದೂರು ಸಲ್ಲಿಕೆ ಆಗಿದೆ. ತನಿಖೆಗೆ ಹೆದರಿ ನಾಪತ್ತೆಯಾಗಿದ್ದಾರೆ. ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Related posts

BENGALURU FIRE ACCIDENT: ಬೆಂಕಿ ಅವಘಡಕ್ಕೆ ನಿನ್ನೆ ಒಂದು.. ಇವತ್ತು ಐವರ ಸಜೀವ ದಹನ..

Publicspot

Court Order bring Happy & Sad: ಕೋರ್ಟ್‌ ಆದೇಶದಿಂದ ಸಂತೋಷ ಜೊತೆಗೆ ದುಃಖ

Publicspot

ಕಾಯೋ ದೈವವೇ ಕ್ರೂರವಾದರೆ.. ರಕ್ಷಣೆ ಎಲ್ಲಿದೆ..? ಅಯ್ಯೋ ದೇವರೇ..?

Publicspot

ತಂದೆ ತಾಯಿಗೆ ಚಾಕು ಇರಿದ ಮಗ.. ಅಮೆರಿಕದಲ್ಲಿ ಓದಿಸಿದ್ದಕ್ಕೂ ಸಾರ್ಥಕ..

Publicspot

BigBoss Ranjith Case; ಇರೋಕೆ ಮನೆ ಕೊಟ್ರೆ ನಂದೇ ಅಂದ್ರಂತೆ ನಟ ರಂಜಿತ್​..!!

Publicspot

ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ಅಟ್ಯಾಕ್​​ ಮಾಡಿದ್ದ ಅಡಕಮಾರನಹಳ್ಳಿ ಆಂಟಿ ಅರೆಸ್ಟ್​..

Publicspot