The Public Spot
ಕ್ರೀಡೆ

IPL ಕ್ರಿಕೆಟ್‌ ಪಂದ್ಯ ನಡೆಸಲು ಸರ್ಕಾರದ ಸಮ್ಮತಿ..! 11 ಜನರ ಬಲಿ ಬಳಿಕ ಮತ್ತೆ ಪಂದ್ಯ..

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌‌ ನಡೆಸುವುದಕ್ಕೆ ರಾಜ್ಯ ಸಚಿವ ಸಂಪುಟ ಸಮ್ಮತಿ ಕೊಟ್ಟಿದೆ. ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಆಯೋಜನೆ ಬಗ್ಗೆ ಮಹತ್ವದ ಚರ್ಚೆ ನಡೆದು, ಅಂತಿಮವಾಗಿ ಕ್ರಿಕೆಟ್‌ ಆಯೋಜನೆ ಮಾಡಲು ಗ್ರೀನ್‌‌ ಸಿಗ್ನಲ್‌ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ವಿಷಯ ಪ್ರಸ್ತಾಪಿಸಿದರು. ಆ ಬಳಿಕ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಅನುಮತಿ ನೀಡಲು ಸಂಪುಟ ನಿರ್ಧಾರ ಮಾಡಿದೆ. ಕೆಲವು ಷರತ್ತುಗಳೊಂದಿಗೆ ಸರ್ಕಾರ ಅನುಮತಿ ನೀಡಿದ್ದು, ಕ್ರೀಡಾಂಗಣದಲ್ಲಿ 35 ಸಾವಿರದೊಳಗೆ ಮಾತ್ರ ವೀಕ್ಷಕರಿಗೆ ಅವಕಾಶ ಕಲ್ಪಿಸಬೇಕು. IPL ಉಧ್ಘಾಟನಾ ಪಂದ್ಯ ಆಯೋಜನೆಗೂ ಅವಕಾಶ ನೀಡಿದ್ದು, ಉನ್ನತ ಮಟ್ಟದ ಕಮಿಟಿಯ ಶಿಫಾರಸ್ಸಿನ ಆಧಾರದ ಮೇಲೆ ಅವಕಾಶ ಕಲ್ಪಿಸಲಾಗಿದೆ. ಮೂರು ಹಂತದಲ್ಲಿ ಕ್ರೀಡಾಂಗಣದ ಮಾರ್ಪಾಡಿಗೆ ಸೂಚನೆ ಕೊಡಲಾಗಿದ್ದು, ಈಗಾಗಲೇ ಮೊದಲ ಹಂತದ ಕಾಮಗಾರಿ ಶುರು ಮಾಡಲಾಗಿದೆ. ಕುನ್ಹಾ ವರದಿಯಲ್ಲಿನ ಶಿಫಾರಸ್ಸಿನಂತೆ ಕ್ರೀಡಾಂಗಣ ಮಾರ್ಪಾಡು ಮಾಡ್ಬೇಕು, ಪಂದ್ಯದ ಜೊತೆ ಜೊತೆಗೆ ಎರಡು ಮತ್ತು ಮೂರನೇ ಹಂತದ ಕಾಮಗಾರಿ ಮಾಡ್ಬೇಕು ಎಂದು ಷರತ್ತು ಹಾಕಲಾಗಿದೆ.

ಪರಿಣಿತರ ಸಮಿತಿ ವರದಿ ಆಧಾರದ ಮೇಲೆ ಕ್ಯಾಬಿನೆಟ್ ಈ ತೀರ್ಮಾನ ಕೈಗೊಂಡಿದ್ದು, ಈಗಾಗಲೇ ಕುನ್ಹಾ ವರದಿ ಶಿಫಾರಸು ಜಾರಿಗೊಳಿಸಲು ಕೆಎಸ್‌ಸಿಎ ಮುಂದಾಗಿದೆ. ಕ್ರೀಡಾಂಗಣದಲ್ಲಿ ಕೆಲವು ಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಬಹುದು ಎಂದು ಎಕ್ಸ್‌ಪರ್ಟ್ ಕಮಿಟಿ ವರದಿ ನೀಡಿತ್ತು. ವರದಿಯ ಆಧಾರದ ಮೇಲೆ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ಐಪಿಎಲ್ ಜೊತೆ ಜೊತೆಗೆ ಮೂಲ ಸೌಕರ್ಯ ಕಾಮಗಾರಿಗಳು ನಡೆಯಬೇಕು. ತಜ್ಞರ ಸಮಿತಿ ಎಲ್ಲಾ ಕಾಮಗಾರಿಯನ್ನ ಮಾನಿಟರಿಂಗ್ ಮಾಡಲಿದೆ. ಕಾಲ ಕಾಲಕ್ಕೆ ಪ್ರಗತಿ ವರದಿ ಪಡೆಯಲಿದ್ದಾರೆ. ಆಸನಗಳ ವ್ಯವಸ್ಥೆಯ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದೆ. ಅಭಿಮಾನಿಗಳ ಸಂಖ್ಯೆಗೆ ಅನುಗುಣವಾಗಿ ಸ್ಟ್ಯಾಂಡ್‌ಗಳಿಗೆ ಅನುಮತಿ ನೀಡಲಾಗಿದೆ. ಆದರೆ ಕೆಎಸ್‌ಸಿಎ ನೀಡಿರುವ ಭರವಸೆಗಳನ್ನು ಪಾಲಿಸಿದಿದ್ದರೆ ಅನುಮತಿ ಬಗ್ಗೆ ಪುನರ್ ಪರಿಶೀಲನೆ ಮಾಡಲು ನಿರ್ಧಾರ ಮಾಡಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ RCB ಮನವಿ ಬಗ್ಗೆ ಚರ್ಚೆ ಮಾಡಲಾಯ್ತು ಎಂದು ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ. IPL ಮ್ಯಾಚ್ ಆಡಿಸಬೇಕು ಅಂತ ಮನವಿ ಮಾಡಿದ್ರು. 11 ಜನರು ಕಾಲ್ತುಳಿತದಿಂದ ಸತ್ತಿದ್ರು. ತನಿಖೆಗೆ ಕುನ್ಹ ಸಮಿತಿ ಮಾಡಲಾತ್ತು. ತನಿಖೆ ನಡೆಸಿ ವರದಿ ಕೊಟ್ಟಿದ್ರು. KSCA ಅವರಿಗೆ ವುಮೆನ್ ವರ್ಲ್ಡ್ ಕಪ್ ಮಾಡುವಾಗ ಸಂಪರ್ಕ ಮಾಡಿದ್ರು. ಕುನ್ಹ ವರದಿ ಪ್ರಕಾರ ಸರಿಪಡಿಸಲು ತಿಳಿಸಿದ್ದೆವು. ಮೂರೂ ಭಾಗ ಮಾಡಿಕೊಂಡು ಕುನ್ಹಾ ವರದಿ ಅನುಷ್ಠಾನಕ್ಕೆ ತರಲು ಕ್ರಮ ಆಗಿದೆ. ಜನರನ್ನ ನಿಯಂತ್ರಣ, ಸೇಫ್ಟಿ, ಆಂಬ್ಯುಲೆನ್ಸ್, ಗೇಟ್ ವಿಸ್ತರಣೆಗೆ ಕ್ರಮ ಆಗಿದೆ. ಮಾರ್ಚ್ ನಲ್ಲಿ IPL ಆರಂಭವಾಗಲಿದೆ. ಸಮಿತಿ ರೆಕಮೆಂಡೇಷನ್ ಆಗಿದೆ. ವರದಿಯ ಆಧಾರದ ಮೇಲೆ ಕ್ಯಾಬಿನೆಟ್ ಒಪ್ಪಿ ಅನುಮತಿ ನಿಡೀದೆ. ಗೃಹ ಇಲಾಖೆಗೆ ಜವಾಬ್ದಾರಿ ನೀಡಿದ್ದಾರೆ ಎಂದಿದ್ದಾರೆ.

ಇದಕ್ಕೂ ಮೊದಲು ನಿನ್ನೆ ಗೃಹ ಸಚಿವ ಡಾ ಜಿ ಪರಮೇಶ್ವರ್‌‌ ನೇತೃತ್ವದಲ್ಲಿ ಐಪಿಎಲ್ ಪಂದ್ಯ ನಡೆಸುವ ನಿಟ್ಟಿನಲ್ಲಿ ಮಹತ್ವದ ಸಭೆ ಮಾಡಲಾಗಿತ್ತು. GBA ಆಯುಕ್ತ ಮಹೇಶ್ವರ್ ರಾವ್ ಸಮಿತಿ ಹಾಗೂ ಗೃಹ ಇಲಾಖೆ, ಪಂದ್ಯ ನಡೆಸಲು ಒಪ್ಪಿಗೆ ನೀಡಿದ ಬಳಿಕ ನ್ಯಾ. ಮೈಕಲ್ ಡಿ ಕುನ್ಹಾ ವರದಿ ಸಂಪೂರ್ಣ ಅನುಷ್ಠಾನಕ್ಕೆ ಒತ್ತಾಯಿಸಲಾಗಿತ್ತು. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಿ, ಸಭೆಯಲ್ಲಿ ಮಹೇಶ್ವರ್ ರಾವ್, ಪೊಲೀಸ್ ಅಧಿಕಾರಿಗಳು, KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್, RCB ಮುಖ್ಯಸ್ಥ ರಾಜೇಶ್ ಮೇನನ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು. ಆ ಸಭೆಯ ಮಾತುಕತೆ ವಿವರಗಳನ್ನು ಪರಮೇಶ್ವರ್‌ ಕ್ಯಾಬಿನೆಟ್‌ ಮುಂದೆ ಇರಿಸಿದ್ದರು. ಇದಿಗ ಮಾರ್ಚ್ 26ಕ್ಕೆ ಶುರುವಾಗಲಿರುವ ಐಪಿಎಲ್ ಉದ್ಘಾಟನಾ ಕಾರ್ಯಕ್ರಮ ಸೇರಿದಂತೆ ಕ್ರಿಕೆಟ್‌ ನಡೆಸಲು ಅನುಮತಿ ಕೊಡಲಾಗಿದೆ.

Related posts

India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

Publicspot

ಪಂಜಾಬ್‌ ವಿರುದ್ಧ RCB ಗೆಲುವಿಗೆ CSK ಫ್ಯಾನ್ಸ್‌ ಪ್ರಾರ್ಥನೆ.. ಯಾಕೆ..?

Publicspot

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot

ಕಮಿಷನ್‌ ಆಸೆಗೆ ಆನೇಕಲ್‌ನಲ್ಲಿ ಕ್ರೀಡಾಂಗಣ ಮಾಡ್ತಿರೋದಾ..?

Publicspot

RCB – CSK ಪಂದ್ಯಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ.. ಶಾಸಕರ ಟಿಕೆಟ್‌ಗಾಗಿ ಕ್ಯೂ ಕ್ಯೂ..

Publicspot

19 ವರ್ಷದ ಒಳಗಿನ ಹುಡುಗರಲ್ಲೂ ಭಾರತವೇ ಲೀಡರ್‌.. 6ನೇ ವಿಶ್ವಕಪ್‌..

Publicspot