The Public Spot
ದೇಶ-ವಿದೇಶ

ಇರಾನ್‌ ಮೇಲೆ ಅಮೆರಿಕ, ಇಸ್ರೇಲ್‌ ದ್ವೇಷಕ್ಕೆ ಕಾರಣ ಏನು..? ಖಮೇನಿ ಕೊಂದಿದ್ಯಾಕೆ..?

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಸ್ರೇಲ್, ಅಮೆರಿಕ ಜಂಟಿ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯಾತುಲ್ಲಾ ಖಮೇನಿಯನ್ನು ಕೊಂದು ಮುಗಿಸಲಾಗಿದೆ. ಖಮೇನಿ ಹತ್ಯೆ ಬಳಿಕ ಇರಾನ್‌ ಕ್ರೋಧಗೊಂಡಿದ್ದು, ಪ್ರತಿದಾಳಿ ತೀವ್ರಗೊಳಿಸಿದೆ. ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಮಧ್ಯಪ್ರಾಚ್ಯ ದೇಶಗಳ ಮೇಲೆ ದಾಳಿ ನಡೆಸುತ್ತಿದೆ.. ಅಮೆರಿಕ ಹಾಗೂ ಇಸ್ರೇಲ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಮಿಸೈಲ್‌ಗಳ ಮಳೆಯನ್ನೇ ಸುರಿಸುತ್ತಿದೆ.

ಇರಾನ್ ಮೇಲಿನ ದಾಳಿ ವಿಡಿಯೋವನ್ನ ಇಸ್ರೇಲ್ ಡಿಫೆನ್ಸ್‌‌ ಫೋಸ್ಟ್‌ (IDF) ರಿಲೀಸ್ ಮಾಡಿದೆ. ಖಮೇನಿ ಮನೆಯನ್ನ ಉಡೀಸ್ ಮಾಡುವ ವಿಡಿಯೋವನ್ನ ಇಸ್ರೇಲ್​ ರಿಲೀಸ್ ಮಾಡಿದ್ದು, ಖಮೇನಿ ಮನೆ ಧ್ವಂಸ ಮಾಡುವ ದೃಶ್ಯ ಅತ್ಯಂತ ಭಯಾನಕವಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಖಮೇನಿ ಹತ್ಯೆ ಬಳಿಕ ತೈಲ ಸಾಗಾಟ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನ ಇರಾನ್​ ಮುಚ್ಚಿದೆ.. ಹಾರ್ಮುಜ್ ಜಲಸಂಧಿ ಮೂಲಕ ಹೋಗುತ್ತಿದ್ದ ತೈಲ ಟ್ಯಾಂಕರ್​ ಮೇಲೆ ಇರಾನ್​ ದಾಳಿ ಮಾಡಿದ್ದು, ತೈಲ ಟ್ಯಾಂಕರ್​ನಲ್ಲಿ 15 ಭಾರತೀಯರಿದ್ದು, ಅದರಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಇರಾನ್​ ಮೇಲೆ ದಾಳಿ ನಡೆಸಲು ಬಂದಿದ್ದ ಅಮೆರಿಕದ MQ-9 ಡ್ರೋನ್​ ಅನ್ನ ಇರಾನ್​ ವಾಯು ರಕ್ಷಣಾ ಪಡೆ ನಾಶ ಮಾಡಿದೆ. MQ-9 ಡ್ರೋನ್​ ಹೊಡೆದುರಿಳಿಸುವ ದೃಶ್ಯವನ್ನ ಇರಾನ್​ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿದೆ. ವಾಯು ರಕ್ಷಣಾ ತಂತ್ರಜ್ಞಾನ ಬಳಸಿ ರಕ್ಷಣಾ ಪಡೆಗಳು ಡ್ರೋನ್‌ ಕೆಲಸ ಮಾಡದಂತೆ ತಟಸ್ಥಗೊಳಿಸಿವೆ. ಅಮೆರಿಕ-ಇಸ್ರೇಲ್​ ವಿರುದ್ಧ ತಿರುಗಿ ಬಿದ್ದಿರುವ ಇರಾನ್​ ಪಡೆಗಳು, USS ಏರ್‌ಕ್ರಾಫ್ಟನ್ನೂ ಹೊಡೆದುರುಳಿಸಿದೆ. ಅರೇಬಿಯನ್ ಸಮುದ್ರದಲ್ಲಿ 4 ಬ್ಯಾಲೆಸ್ಟಿಕ್ ಮಿಸೈಲ್​ಗಳನ್ನ ಹಾರಿಸುವ ಮೂಲಕ ಅಬ್ರಹಾಂ ಲಿಂಕನ್ ಹೆಸರಿನ ಏರ್‌ಕ್ರಾಫ್ಟ್​ ಧ್ವಂಸ ಮಾಡಲಾಗಿದೆ.

ಇಸ್ರೇಲ್‌ ಮೇಲೂ ಇರಾನ್‌ ದಾಳಿ ಮುಂದುವರಿಸಿದೆ. ಇಸ್ರೇಲ್‌ನ ಬೀಟ್ ಶೆಮೆಶ್‌ ಮೇಲೆ ಇರಾನ್ ಅಟ್ಯಾಕ್ ಮಾಡಿದೆ. ಜನವಸತಿ ಪ್ರದೇಶಕ್ಕೆ ಇರಾನ್ ಕ್ಷಿಪಣಿ ಡಿಕ್ಕಿ ಹೊಡೆದಿದ್ದು, ಕಟ್ಟಡದಲ್ಲಿದ್ದ 9 ಮಂದಿ ಮಿಸೈಲ್ ದಾಳಿಗೆ ಬಲಿಯಾಗಿದ್ದಾರೆ. ಅಮೆರಿಕ ಬೆಂಬಲಕ್ಕೆ ನಿಂತಿರುವ UAE ಮೇಲೆ ಇರಾನ್ ಸಮರ ಸಾರಿದೆ. ​ದುಬೈನ ಬುರ್ಜ್‌ ಖಲೀಫಾ ಬಳಿ ಇರುವ ಹೋಟೆಲ್​​ ಮೇಲೂ ದಾಳಿ ಮಾಡಿರುವ ಇರಾನ್ ಸೇನೆ, ​ಹೋಟೆಲ್ ಅ​ನ್ನ ಧ್ವಂಸ ಮಾಡಿದೆ. ಕ್ಷಿಪಣಿ ದಾಳಿ ಮಾಡಿ ಹೋಟೆಲ್​ ನಾಶ ಮಾಡಿದ್ದು, ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗ್ತಿದೆ.

ಇರಾನ್‌ ಅಣ್ವಸ್ತ್ರ ಹೊಂದುತ್ತಿದೆ ಎನ್ನುವ ಕಾರಣಕ್ಕೆ ಅಮೆರಿಕ ಈ ಮೊದಲು ದಾಳಿ ಮಾಡಿತ್ತು. ಆ ಬಳಿಕ ಅಣ್ವಸ್ತ್ರ ಒಪ್ಪಂದಕ್ಕೆ ಅಮೆರಿಕ ಒತ್ತಾಯ ಮಾಡಿತ್ತು. ಆದರೆ ಇರಾನ್‌ ಅಣ್ವಸ್ತ್ರ ಒಪ್ಪಂದಕ್ಕೆ ಒಪ್ಪದಿದ್ದಕ್ಕೆ ಈ ಯುದ್ಧ ಎನ್ನಲಾಗ್ತಿದೆ. ಜೊತೆ ಅಮೆರಿಕ ಮಾತುಗಳಿಗೆ ಸೊಪ್ಪು ಹಾಕದೆ, ಸೇನಾ ನೆಲೆಗಳನ್ನು ನಿರ್ಮಿಸಲು ಅವಕಾಶ ಕೊಡದೆ, ಪ್ಯಾಲೆಸ್ಟೈನ್ ಬೆಂಬಲಿಸಿದ್ದಕ್ಕೆ ಇದೀಗ ಇರಾನ್ ಟಾರ್ಗೆಟ್ ಆಗಿದೆ. ಇರಾನ್‌ ಸುತ್ತಲೂ ಸೇನಾ ನೆಲಗಳನ್ನು ನಿರ್ಮಾಣ ಮಾಡಿಕೊಂಡ ಅಮೆರಿಕ, ಮುಸ್ಲಿಂ ದೇಶಗಳನ್ನೇ ಇರಾನ್‌ ವಿರುದ್ಧ ಎತ್ತಿಕಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಇರಾನ್‌ ಒಂಟಿಯಾದ ಬಳಿಕ ದಾಳಿ ಮಾಡಿ ಅಣ್ವಸ್ಥ್ರ ಸೇಡನ್ನು ತೀರಿಸಿಕೊಂಡಿದೆ. ಆದರೆ ಇಂಧನದ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಲು ಈ ಯುದ್ಧ ಎನ್ನುವುದನ್ನು ಜಗತ್ತು ಸಾರಿ ಹೇಳುತ್ತಿದೆ. ಅಮೆರಿಕ ವಿಶ್ವದ ದೊಡ್ಡಣ್ಣ ನಾನೇ ಎಂದು ಮೆರೆಯುತ್ತಿದೆ. ಮಾನವೀಯ ಮೌಲ್ಯಗಳನ್ನು ಮಣ್ಣು ಮಾಡಿದೆ. ಆದರೆ ಅಮೆರಿಕ ಕೃತ್ಯದ ಬಗ್ಗೆ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೊಂದು ಅಕ್ಷರಶಃ ದೌರ್ಜನ್ಯ ಅನ್ನೋ ಟೀಕೆಗಳು ಕೇಳಿ ಬರುತ್ತಿವೆ.

Related posts

Indian Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು..

ಯಶವಂತಿ

Supreme Court on Waqf; ಕೇಂದ್ರದ ವಕ್ಫ್‌ ಕಾಯ್ದೆ ತಿದ್ದುಪಡಿಗೆ ಸುಪ್ರೀಂಕೋರ್ಟ್‌ನಲ್ಲಿ ಸಿಹಿ ಕಹಿ..

Publicspot

ಲೋಕಸಭೆಯಲ್ಲಿ ಪ್ರಧಾನಿ ಮೇಲೆ ಹಲ್ಲೆಗೆ ನಡೆದಿತ್ತಾ ಪ್ಲಾನ್..? ಮೋದಿ ಗೈರಿಗೆ ಕಾರಣ ಇದೆನಾ..?

Publicspot

ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್‌ಗೆ ಯಾರು ಹೊಣೆ..? ಜವಾಬ್ದಾರಿ ಯಾರದ್ದು..?

Publicspot

LPG ತುಂಬಿದ 2 ಹಡಗು ತೆರಳಲು ಬಿಟ್ಟ ಭಾರತದ ಗೆಳಯ ಇರಾನ್‌..!

Publicspot

ಇರಾನ್‌ ಯುದ್ಧದಿಂದ ಭಾರತಕ್ಕೆ ಏನೆಲ್ಲಾ ಸಮಸ್ಯೆ ಆಗ್ತಿದೆ ಗೊತ್ತಾ..?

Publicspot