ಬೆಂಗಳೂರಲ್ಲಿ ಮಳೆ, ಮಧ್ಯರಾತ್ರಿ ಅಖಾಡಕ್ಕಿಳಿದ ಡಿಸಿಎಂ..

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಭಾರೀ ಪ್ರಮಾಣದ ಮಳೆಯಾಗಿದ್ದು, ಸಂಜೆಯಿಂದಲೇ ಶುರುವಾದ ಧಾರಾಕಾರ ಮಳೆ ಬೆಂಗಳೂರಿಗರಿಗೆ ತಂಪೆರೆಯುವ ಜೊತೆಗೆ ರಸ್ತೆಗಳು ತುಂಬಿ ಹರಿದ ಪರಿಣಾಮ ಜನರು ಮನೆಗಳಿಗೆ ವಾಪಸ್‌ ಆಗುವುದಕ್ಕೆ ಪರದಾಡುವಂತಾಗಿತ್ತು. ಸಂಜೆ ಬಳಿಕ ಬೆಂಗಳೂರಿನ ಯಲಹಂಕದಲ್ಲಿ 11.4 ಸೆಂ.ಮೀ ಮಳೆ ಆಗಿದೆ. ನಂದಿನಿ ಲೇಔಟ್‌ನಲ್ಲಿ 7.5 ಸೆಂ.ಮೀ. ಹಂಪಿ ನಗರ 8.6 ಸೆಂ.ಮೀ, ಅಗ್ರಹಾರ ದಾಸರಹಳ್ಳಿ 6.2 ಸೆಂ.ಮೀ, ನಾಗಪುರ 8.2 ಸೆಂ.ಮೀ, ಜಕ್ಕೂರು 5.8 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ […]

ಇದ್ದರೆ ಇರಬೇಕು ಇವಳಂಥಾ ಹೆಂಡ್ತಿ.. ಪೊಲೀಸರೇ ಆರೋಪಿಗಳು..

ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದಲ್ಲಿ 28 ವರ್ಷದ ನಿಖಿಲ್ ಕುಂದಗೋಳ ಎಂಬಾತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮೊದಲಿಗೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ ಹೆಂಡತಿ ಜೊತೆಗೆ ಸೇರಿಕೊಂಡು ಪೊಲೀಸರ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ. ಗುರುವಾರ ಗಂಡನ ವಿರುದ್ಧ ದೂರು, ಖಾಕಿ ಟಾರ್ಚರ್.. ಆತ್ಮಹತ್ಯೆ ಮಾಡಿಕೊಂಡಿರುವ ನಿಖಿಲ್ ಕಿರುಕುಳ ನೀಡಿದ್ದಾನೆ ಎಂದು ಗಂಡನ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಗಂಡ ನಿಖಿಲ್‌‌ನನ್ನು ಕರೆಸಿ ವಿಚಾರಣೆ ಮಾಡಿದ್ದ […]

ಮಲೆನಾಡು, ಕರಾವಳಿ ಜನರು ಅರೆಸ್ಟ್‌ ಆಗ್ತಾರಾ..?

Cheetha Skin

ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್‌‌ ಹಾಕಿಕೊಂಡಿರುವ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ವರ್ತೂರು ಸಂತೋಷ್‌‌ ಬಂಧನ ಮಾಡಿ ಬೇಲ್‌ ಮೇಲೆ ಬಿಡುಗಡೆ ಆಗಿದ್ದರೂ ಹುಲಿ ಉಗುರಿನ ಪೆಂಡೆಂಟ್‌ ಹಾಕಿದ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದೆ. ಪೆಂಡೆಂಟ್‌ಗಳನ್ನು ವಶಕ್ಕೆ ಪಡೆಯುತ್ತಲೇ ಇದ್ದಾರೆ. ಆದರೆ ಈ ನಡುವೆ ಮಲೆನಾಡು ಹಾಗು ಕರಾವಳಿ ಭಾಗದ ಎಲ್ಲಾ ಮನೆಯವರನ್ನು ಅರೆಸ್ಟ್‌ ಮಾಡುವ ಭೀತಿ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮಲೆನಾಡು ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ ಹುಲಿ ಉಗುರು ಸೇರಿದಂತೆ […]

ವರ್ತೂರು ಸಂತೋಷ್​ಗೆ ಕೋರ್ಟ್​ನಿಂದ ಜಾಮೀನು.. ಮತ್ತೆ BIGG BOSS ಗೆ ಹೋಗ್ತಾರಾ..?

Varthu Santhosh

ಹುಲಿ ಉಗುರಿನ ಪೆಂಡೆಂಟ್​ ಹಾಕಿಕೊಂಡಿದ್ದ ಕಾರಣಕ್ಕೆ ಬಿಗ್​ಬಾಸ್​ ಮನೆಯಿಂದಲೇ ಬಂಧನಕ್ಕೆ ಒಳಗಾಗಿದ್ದ ವರ್ತೂರು ಸಂತೋಷ್​ಗೆ ಜಾಮೀನು ಮಂಜೂರಾಗಿದೆ. ಬೆಂಗಳೂರು ನಗರ 2ನೇ ACJM ಕೋರ್ಟ್​ನಲ್ಲಿ ನಿನ್ನೆ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು, ಇಂದಿಗೆ ಜಾಮೀನು ಆದೇಶ ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕರಣ ಮಾಡಿರುವ ನ್ಯಾಯಾಧೀಶರು, 4 ಸಾವಿರ ರೂಪಾಯಿ ಬಾಂಡ್​ ಅಥವಾ ಒಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಲು ಒಪ್ಪಿಗೆ ಸೂಚಿಸಿದೆ. ಇದೀಗ ಮತ್ತೆ ಬಿಗ್​ಬಾಸ್​ ಮನೆಗೆ ಹೋಗ್ತಾರಾ..? ಅಥವಾ ಬಿಗ್​ಬಾಸ್​ ಮನೆಯಿಂದ ವಾಪಸ್​ ಮನೆಗೆ ಹೋಗ್ತಾರಾ […]

200 ಯೂನಿಟ್ ಕರೆಂಟ್ ಫ್ರೀ.. ಅರ್ಜಿ ಹಾಕಲು ಮೊಬೈಲ್ ಸಾಕು..

ರಾಜ್ಯ ಸರ್ಕಾರ 200 ಯೂನಿಟ್ ಒಳಗಿನ ಕರೆಂಟ್ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ ಎನ್ನುವ ಆದೇಶ ಮಾಡಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ ಸರ್ಕಾರ ಫ್ರೀ ಯೋಜನೆ ಘೋಷಣೆ ಮಾಡಿದೆ. ಆದರೆ ಸರ್ಕಾರದ ಕಚೇರಿಗಳಿಗೆ ಹೋಗಿ ಅರ್ಜಿ ಹಾಕುವುದು ಹೇಗೆ..? ಸರತಿ ಸಾಲಿನಲ್ಲಿ ನಿಂತು ಅರ್ಜಿ ಹಾಕೋಣ ಎಂದರೂ ಸರ್ವರ್ ಡೌನ್ ಅನ್ನೋ ಮಾತುಗಳೇ ಕೇಳಿ ಬರುತ್ತಿವೆ. ಆದರೆ ನಿಮ್ಮ The Public Spot ಸರಳ ಉಪಾಯವನ್ನು ನಿಮ್ಮ ಮುಂದಿಡುತ್ತಿದೆ. ಸ್ವಯಂ ಅರ್ಜಿ […]

14 ಮಹಡಿಯಿಂದ ಬಿದ್ದು ಬಾಲಕ ಆತ್ಮಹತ್ಯೆ.. ತಪ್ಪು ಪೋಷಕರದ್ದೋ..? ಶಾಲೆಯದ್ದೋ..?

ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. 10ನೇ ತರಗತಿ ಓದುತ್ತಿದ್ದ ಬಾಲಕನೊಬ್ಬ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. SSLC ಓದುತ್ತಿದ್ದ ವಿದ್ಯಾರ್ಥಿ ಮೋಯಿನ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗವಾರ ಬಳಿಯ RR ಸಿಗ್ನೇಚರ್ ಅಪಾರ್ಟ್‌ಮೆಂಟ್‌ನ ಮೇಲಿಂದ ಕೆಳಕ್ಕೆ ಬಿದ್ದಿದ್ದಾನೆ. ಖಾಸಗಿ ಶಾಲೆಯಲ್ಲಿ SSLC ಓದುತ್ತಿದ್ದ ವಿದ್ಯಾರ್ಥಿ ಮೋಯಿನ್, ಪರೀಕ್ಷೆ ವೇಳೆ ಕಾಪಿ ಹೊಡೆದಿದ್ದ ಅನ್ನೋ ಕಾರಣಕ್ಕೆ ಶಾಲೆಯಿಂದ ಹೊರಕ್ಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿ ಮೋಯಿನ್​ ನೇರವಾಗಿ ಅಪಾರ್ಟ್​ಮೆಂಟ್​ ಮೇಲಕ್ಕೆ ಹೋಗಿ ಅಲ್ಲಿಂದ ಜಿಗಿದಿದ್ದಾನೆ. […]

ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಶವಪತ್ತೆ.. ಕೊಲೆ ಆಗಿರೋ ಅನುಮಾನ..

ಕಳೆದ ಭಾನುವಾರ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಮಗ ಶವವಾಗಿ ಪತ್ತೆಯಾಗಿದ್ದಾರೆ. ದಾವಣಗೆರೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾತ್ರ ಕಳೆದ ನಾಲ್ಕು ದಿನಗಳಿಂದ ಅನ್ನ ಆಹಾರ ಬಿಟ್ಟು ಗೋಳಿಡುತ್ತಿದ್ದರು. ಆದರೆ ಸಾವು ಸಂಭವಿಸಿದ್ದು ಅಪಘಾತದಿಂದ ಎಂದು ಹೇಳಲಾಗ್ತಿದೆ, ಆದರೆ ಸಾವಿನ ಹಿಂದೆ ಹತ್ತಾರು ಅನುಮಾನಗಳು ಕಾಡುತ್ತಿದೆ. ಕಾರು ಅಪಘಾತ ಆಗಿದ್ರೆ, ಅಪಘಾತ ಆದ ಕಾರಿನಲ್ಲಿ ಶವ ಹಿಂದಕ್ಕೆ ಹೋಗಿ ಬಿದ್ದಿರೋದು ಯಾಕೆ..? ಕಾರಿನ ಮುಂಭಾಗದಲ್ಲಿ ಎರಡು ಏರ್​ಬ್ಯಾಗ್​ಗಳು​ ಓಪನ್​ ಆಗಿದೆ. ಅಂದಮೇಲೆ ಇಬ್ಬರು ಪ್ರಯಾಣಿಕರು ಇದ್ದಿರಬಹುದು. […]

ಕನ್ನಡಮ್ಮನ ಜನ್ಮದಿನ.. ಕರ್ನಾಟಕದ ಇತಿಹಾಸ ತಿಳಿದುಕೊಳ್ಬೇಕಾ..? ಕರ್ನಾಟಕ ಬಂದಿದ್ದೆಲ್ಲಿಂದ..?

.ಎಲ್ಲರಿಗೂ 67ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಇಂದು ನಮ್ಮ ಕರ್ನಾಟಕ ಜನ್ಮ ತಾಳಿದ ದಿನ ಅಂದ್ರೆ ನಮ್ಮ ಕನ್ನಡಾಂಬೆಯ ಹುಟ್ಟುಹಬ್ಬ. 1947ರಲ್ಲಿ 560ಕ್ಕೂ ಹೆಚ್ಚು ಸಂಸ್ಥಾನಗಳು ಒಟ್ಟುಗೂಡಿ ಭಾರತದ ಉದಯ ಆಗಿತ್ತು. ಆಗ ನಮ್ಮ ಮೈಸೂರು ಸಂಸ್ಥಾನ ಕೂಡ ಭಾರತ ಒಕ್ಕೂಟಕ್ಕೆ ಸೇರ್ಪಡೆ ಆಗಿತ್ತು. ಆ ಸಮಯದಲ್ಲಿ ಕಲ್ಯಾಣ​ ಕರ್ನಾಟಕ, ಕಿತ್ತೂರು ಕರ್ನಾಟಕ, ಮದ್ರಾಸು ಕರ್ನಾಟಕ ಸೇರಿದಂತೆ ಕರ್ನಾಟಕದ ಇತರೆ ಭಾಗಗಳು ಮೈಸೂರು ರಾಜ್ಯದ ಭಾಗ ಆಗಿರಲಿಲ್ಲ. ನವೆಂಬರ್​ 01, 1956ರಲ್ಲಿ ರಾಜ್ಯಗಳನ್ನು ಭಾಷೆಗಳ ಆಧಾರದಲ್ಲಿ […]

ಮನೆಯವರ ಭಕ್ಷ್ಯ ಭೋಜನ, ಪೂಜೆ ಮೀರಿಸಿದ್ದು ಅಪ್ಪು ಅಭಿಮಾನಿಗಳ ಪ್ರೀತಿ..!

ಅಕ್ಟೋಬರ್ 29, 2021ರಂದು ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಇನ್ನಿಲ್ಲ ಅನ್ನೋ ವಿಚಾರ ಅಭಿಮಾನಿಗಳ ಪಾಲಿಗೆ ಬರಸಿಡಿಲು ಬಡಿದಂತೆ ಆಗಿತ್ತು. ಒಂದು ವರ್ಷ ಆದರೂ ಅಪ್ಪು ಮೇಲಿನ ಪ್ರೀತಿ ಕಿಂಚಿತ್ತು. ಕರಗಿಲ್ಲ ಅನ್ನೋದು ಇಂದಿನ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಬೀತಾಯ್ತು. ಒಂದೇ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್​ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ, ಪ್ರೀತಿಯ ನಟನಿಗೆ ನಮಿಸಿದ್ದಾರೆ. ಪುನೀತ್​ ಪತ್ನಿ ಅಶ್ವಿನಿ ಸೇರಿದಂತೆ ದೊಡ್ಮನೆ ಕುಟುಂಬದ ಪುಣ್ಯಸ್ಮರಣೆ ಕಾರ್ಯದಲ್ಲಿ ಗಮನ ಸೆಳೆದಿದ್ದ […]