ಕೊರೊನಾ ಬಂದಿದ್ರೆ ಡೇಂಜರ್.. ಸರ್ಕಾರದಿಂದ ಗುಡ್‌ ನ್ಯೂಸ್‌

Appu Hrudaya Jyothi

ಕೊರೊನಾ ಬಳಿಕ ದೇಶದಲ್ಲಿ ಹೃದಯಘಾತದಿಂದ ಸಾಯುವ ಜನರ ಸಂಖ್ಯೆ ಹೆಚ್ಚಾಗಿತ್ತು. ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೇ ಕಾರಣ ಅನ್ನೋ ಚರ್ಚೆ ಕೂಡ ನಡೆದಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೊರೊನಾ ಸೋಂಕು ಬಂದಿದ್ದವರು ಹಾಗು ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರು ಎಚ್ಚರಿಕೆ ಇಂದ ಇರಬೇಕು ಎಂದು ಕೇಂದ್ರದ ಆರೋಗ್ಯ ಸಚಿವ ಮನ್ಸೂಖ್ ಮಾಡವೀಯ ಹೇಳಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಹೆಸರಲ್ಲಿ ‘ಹೃದಯ ಜ್ಯೋತಿ’ ಕರ್ನಾಟಕದಲ್ಲೂ ಕೊರೊನಾ ನಂತರ ಹೃದಯಘಾತದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. […]

ಇಂದಿರಾ ಕ್ಯಾಂಟೀನ್​ನಲ್ಲಿ ಬದಲಾಯ್ತು ಊಟ-ತಿಂಡಿ ಮೆನು..!

ಕಾಂಗ್ರೆಸ್​​ ಸರ್ಕಾರದಲ್ಲಿ ಸಿದ್ದರಾಮಯ್ಯ ಬಡ ಜನರನ್ನು ಗುರಿಯಾಗಿಸಿ ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದರು. ಆ ಬಳಿಕ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್​ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ಸಾಕಷ್ಟು ಬಡ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರ ಮತ್ತೆ ಇಂದಿರಾ ಕ್ಯಾಂಟೀನ್​ಗೆ ಚಾಲನೆ ಕೊಡುವ ಕೆಲಸ ಮಾಡುತ್ತಿದೆ. ಜೊತೆಗೆ ಇಂದಿರಾ ಕ್ಯಾಂಟೀನ್​​ನಲ್ಲಿ ದರ್ಶಿನಿಗಳ ರೀತಿ ಮೇಲ್ದರ್ಜೆಗೆ ಏರಿಸುವ ಕೆಲಸವನ್ನೂ ಮಾಡಲಾಗ್ತಿದೆ. ಇದೇ ಕಾರಣಕ್ಕೆ ಇಂದಿರಾ ಕ್ಯಾಂಟೀನ್​ನಲ್ಲಿ ಹೊಸ ಮೆನೂ ಲಿಸ್ಟ್​ ಬಂದಿದೆ. ಈ […]

ಬೆಂಗಳೂರಿನ 2 ಶಾಲೆಗಳಲ್ಲಿ 31 ಮಕ್ಕಳಿಗೆ ಕೋವಿಡ್​..! ಶಾಲೆಗಳಿಗೆ ಹೊಸ ರೂಲ್ಸ್​..!

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳ ಆಗುತ್ತಲೇ ಇದೆ. ಸಾಮೂಹಿಕವಾಗಿ ತಪಾಸಣೆ ಮಾಡಿದರೆ ಹತ್ತಾರು ಸಾವಿರ ಕೇಸ್​ ದಾಖಲು ಆದರೂ ಆಗಬಹುದು. ಬಹುತೇಕ ಮಂದಿ ಶೀತ, ಜ್ವರದಿಂದ ಬಳಲುತ್ತಿದ್ದಾರೆ. ಈಗಾಗಲೇ ಕೋವಿಡ್​ 19 ಸೋಂಕನ್ನು ಜನರು ಸಾಮಾನ್ಯ ಜ್ವರ ಎಂಬಂತೆ ನೋಡುತ್ತಿರುವ ಕಾರಣದಿಂದ ಬಹುತೇಕರು ತಪಾಸಣೆಗೆ ಮುಂದಾಗುತ್ತಿಲ್ಲ. ಆದರೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 2 ಖಾಸಗಿ ಶಾಲೆಯಲ್ಲಿ ಕೊರೊನಾ ಸೋಂಕು ಅಬ್ಬರಿಸಿದೆ. ಒಟ್ಟು 31 ಮಂದಿ ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಉಳಿದ ಮಕ್ಕಳಿಗೆ […]

ಕುಸಿದು ಬೀಳುವುದು, ಮೆದುಳು ನಿಷ್ಕ್ರಿಯ.. ಯುವ ಸಮುದಾಯಕ್ಕೆ ಆತಂಕ..!

ಕೊರೊನಾ ಸೋಂಕು ಒಂದು, ಎರಡು, ಮೂರನೇ ಅಲೆ ಬಳಿಕ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವ ಸಮುದಾಯದ ಜನರೂ ಕೂಡ ನಿಂತಲ್ಲೇ ಕುಸಿದು ಬೀಳುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಥವಾ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಮೆದುಳು ನಿಷ್ಕ್ರಿವಾಗಿ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಸಾವನ್ನು ಸಾರ್ಥಕತೆ ಮಾಡಿಕೊಳ್ಳುತ್ತಿರುವ ಪ್ರಕಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಪವರ್​ ಸ್ಟಾರ್​​ ಪುನೀತ್​ ರಾಜ್​​ಕುಮಾರ್​ ಸಾವಿನಿಂದ ಶುರುವಾದ ಆಕಸ್ಮಿಕ ಸಾವುಗಳ ಸರಣಿ ಇನ್ನೂ ಕೂಡ […]

ಸಕ್ಕರೆ ಕಾಯಿಲೆಗೆ ನಾಟಿ ಔಷಧಿ, ಕುತ್ತಿಗೆ ಕೊಯ್ದು ಬಂಗಾರ ಕದ್ದ ಬಿಹಾರಿ..!

ಸಕ್ಕರೆ ಕಾಯಿಲೆ ಬೆಂಗಳೂರಿನಂತಹ ನಗರ ವಾಸಿಗಳಿಗೆ ಸಿಗುವ ವಿಶೇಷ ಉಡುಗೊರೆ ಅಂದ್ರೆ ಸುಳ್ಳಲ್ಲ. ಸೂರ್ಯನ ಬಿಸಿಲನ್ನೇ ಕಾಣದ, ಮನೆಯಿಂದ ಕಚೇರಿಗೆ ಕಚೇರಿಯಿಂದ ಮನೆಗೆ ವಾಹನದಲ್ಲಿ ಸುತ್ತಾಡುವ, ಕಲುಷಿತ ಗಾಳಿ ಸೇವನೆ ಮಾಡಿಕೊಂಡು ಬೆಂಗಳೂರಿನಲ್ಲಿ ಇರುವುದೇ ಹೆಮ್ಮೆಯ ಸಂಗತಿ ಎಂದು ಬದುಕುತ್ತಿರುವ ಜನರಿಗೆ ಸಕ್ಕರೆ ಕಾಯಿಲೆ ಅರ್ಥಾತ್​ ಮಧುಮೇಹ, ಶುಗರ್​​ ಎಂಬುದು ಕೂಡ ಹೆಮ್ಮೆಯ ಸಂಗತಿ. ಆದರೆ ಈ ರೀತಿಯ ಸಕ್ಕರೆ ಕಾಯಿಲೆಯಿಂದ ಬಳಲುವ ಜನರು ಸಕ್ಕರೆ ಕಾಯಿಲೆ ಗುಣ ಮಾಡಿಕೊಳ್ಳಲು ಯಾವುದೇ ಔಷಧಿ ಬಗ್ಗೆ ಹೇಳಿದರೂ ಪ್ರಯೋಗ […]

ಏರ್​ಪೋರ್ಟ್​ ಕೋವಿಡ್​ ಟೆಸ್ಟ್​ ದಂಧೆ..! ರೊಚ್ಚಿಗೆದ್ದ ಯುವತಿ, ತನಿಖೆಗೆ ತಂಡ..!

ಕೊರೊನಾ ಸೋಂಕು ಹೆಚ್ಚಳ ಆದಷ್ಟೂ ಲೂಟಿ ಮಾಡುವ ಅಧಿಕಾರಿಗಳಿಗೆ ಸುಗ್ಗಿ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಟೀಕೆ. ಇನ್ನೂ ಕೊರೊನಾ ಟೆಸ್ಟ್​ನಲ್ಲೂ ಸಾಕಷ್ಟು ಸುಳ್ಳು ಅಂಕಿ ಅಂಶ ಸೇರಿಸಲಾಗುತ್ತೆ ಎನ್ನುವುದು ಸ್ವತಃ ಜನಪ್ರತಿನಿಧಿಗಳೇ ಹೇಳುವ ಮಾತು. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಯಾವುದೇ ಕೊರೊನಾ ಸೋಂಕಿನ ಲಕ್ಷ ಇಲ್ಲದಿದ್ದರೂ ಕೊರೊನಾ ತಪಾಸಣೆ ಮಾಡಿಸಿಕೊಂಡು, ನೆಗೆಟಿವ್ ವರದಿ ಜೊತೆಗೆ ದುಬೈಗೆ ತೆರಳುತ್ತಿದ್ದ ಯುವತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. […]

ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಬರಬೇಡಿ.. ಸರ್ಕಾರದಿಂದ ಹೊಸ ಆದೇಶ..!

ಕರ್ನಾಟಕದಲ್ಲಿ ಕೊರೊನಾ ಸೋಂಕು ಅಬ್ಬರ ಶುರು ಮಾಡಿದೆ. ದಿನದಿಂದ ದಿನಕ್ಕೆ ಏಣಿ ಏರಿದ ಮಂಗನಂತೆ ಏರುಗತಿಯಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಶನಿವಾರ ಒಂದೇ ದಿನ 32,793 ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಊಹೆಗೂ ನಿಲುಕದೆ ಅಟ್ಟಹಾಸ ನಡೆಸುತ್ತಿರುವ ಕೊರೊನಾ ಸೋಂಕು ಶನಿವಾರ ಒಂದೇ ದಿನ 22 ಸಾವಿರದ 284 ಜನರಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ವೇಗ ಶೇಕಡ 15ರಷ್ಟಾಗಿದೆ. ಶನಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಸೋಂಕಿತರ ಸಂಖ್ಯೆ 4,273 ಮಾತ್ರ. ಇನ್ನೂ […]

ಕೊರೊನಾ ಬಳಿಕ ಓಮೈಕ್ರಾನ್​ ಅಬ್ಬರ ಶುರು..! ಕಠಿಣ ಕ್ರಮಕ್ಕೆ ಕೇಂದ್ರ ಪತ್ರ..!

ಕೊರೊನಾ ಸೋಂಕಿನ ಅಬ್ಬರದಲ್ಲಿ ಲಾಕ್​ಡೌನ್​​ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಜನತೆ ಮತ್ತೆ ಲಾಕ್​ಡೌನ್​ ಅಥವಾ ಸೆಮಿಲಾಕ್​ಡೌನ್​ಗೆ ಒಳಗಾಗುವ ಕಾಲ ಸಮೀಪಿಸುತ್ತಿದೆ. ಯಾಕೆಂದ್ರೆ ಬೆಂಗಳೂರು ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಕೊರೊನಾ ಕೂಪಾಂತರ ವೈರಸ್​ ಆಗಿರುವ ಓಮೈಕ್ರಾನ್​ ದಿನದಿಂದ ದಿನಕ್ಕೆ ಅಬ್ಬರ ಹೆಚ್ಚಿಸುತ್ತಲೇ ಇದೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಈಗಾಗಲೇ ಲಕ್ಷಾಂತರ ಜನರಲ್ಲಿ ಈ ಸೋಂಕು ಆವರಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲೂ ತನ್ನ ವರಸೆ ತೋರಿಸುವ ಎಲ್ಲಾ ಲಕ್ಷಗಳು ಕಾಣಿಸುತ್ತಿದೆ. ಮುಂದಾಲೋಚನೆಯಿಂದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ […]

ಎರಡು ಡೋಸ್​ ಲಸಿಕೆ ಆಗಿದ್ರೂ ಬರ್ತಿದೆ ಕೊರೊನಾ..! ರೆಡಿಯಾಗ್ತಿದೆ ಬೂಸ್ಟರ್​ ಡೋಸ್​

ಕೊರೊನಾ ಬಿಸಿ 2ನೇ ಅಲೆ ಬಳಿಕ ಇದೀಗ ಕೊಂಚ ಶಮನವಾದ ಮನಸ್ಥಿತಿ ಬರುತ್ತಿದೆ. ಜನಸಂಚಾರ ಯಥಾಸ್ಥಿಗೆ ಮರಳುತ್ತಿದೆ. ಮೂರನೇ ಅಲೆ ಬರುತ್ತೆ ಎನ್ನುವ ಎಚ್ಚರಿಕೆಯೊಂದಿಗೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದೆ. ಈ ನಡುವೆ ವೈದ್ಯಲೋಕ ಕೊಟ್ಟಿರುವ ಮಾಹಿತಿ ಇಡೀ ಜನರನ್ನು ಬೆಚ್ಚಿ ಬೀಳಿಸುವಂತಿದೆ. ಈಗಾಗಲೇ ಎರಡು ಡೋಸ್​ ಲಸಿಕೆ ಹಾಕಿಸಿಕೊಂಡವರಲ್ಲೂ ಮತ್ತೆ ಕೊರೊನಾ ಸೋಂಕು ಹರಡುತ್ತಿದೆ ಎನ್ನುವ ಮಾಹಿತಿ ಸಾರ್ವಜನಿಕ ವಲಯವನ್ನು ಬೆಚ್ಚಿ ಬೀಳುವಂತೆ ಮಾಡಿದೆ. 2 ಡೋಸ್​ಲಸಿಕೆ ಹಾಕಿಸಿಕೊಂಡ ಬಳಿಕವೂ ಕೊರೊನಾ ಹರಡುತ್ತಿದೆ ಎಂದರೆ ಮುಂದೇನು […]