The Public Spot
ದೇಶ-ವಿದೇಶ

ಅಮೆರಿಕ ಬೆನ್ನುಮೂಳೆ ಮುರಿದ ಇರಾನ್​.. F-35 ಫೈಟರ್​ ಜೆಟ್​ ಫಿನಿಷ್​​..!!

ಇರಾನ್​ ವಿರುದ್ಧ ಸಮರ ಸಾರಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಬೆನ್ನು ಮೂಳೆ ಮುರಿದುಕೊಂಡು ಜಗತ್ತಿನ ಎದುರು ಬೆತ್ತಲಾಗಿದೆ. ಮೋಸ್ಟ್​ ಪವರ್​ ಫುಲ್​ ಅಸ್ತ್ರ ಎಂದೇ ಬಿಂಬಿತವಾಗಿದ್ದ ಅಮೆರಿಕದ F-35 ಯುದ್ಧ ವಿಮಾನವನ್ನು ಇರಾನ್​ನ ಸೇನೆ ದಾಳಿ ಮಾಡಿ ಕೆಳಕ್ಕೆ ಬೀಳಿಸಿದೆ ಎನ್ನಲಾಗಿದೆ. ಆದರೆ ಅಮೆರಿಕ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ತಿಣುಕಾಡುತ್ತಿದೆ. ಫೋರ್ಸ್​ ಲ್ಯಾಂಡಿಗ್​ ಆಗಿದೆ. ಪೈಲಟ್​ ಸೇಫ್​ ಆಗಿದ್ದಾರೆ. ಫೋರ್ಸ್​ ಲ್ಯಾಂಡಿಂಗ್​ಗೆ ಕಾರಣ ಏನು ಅನ್ನೋ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ತೇಪೆ ಹಾಕುವ ಕೆಲಸ ಮಾಡಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ತೀವ್ರತೆ ಹೆಚ್ಚುತ್ತಿರುವ ಈ ಸಮಯದಲ್ಲಿ ಜಪಾನ್ ಪ್ರಧಾನಿ ತಕಯೋಶಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಹರ್ಮೂಜ್‌ ಜಲಸಂಧಿ ತೆರವಿಗೆ ಮಿತ್ರ ರಾಷ್ಟ್ರಗಳು ಒಂದುಗೂಡಬೇಕು ಎಂದು ಡೊನಾಲ್ಡ್‌ ಟ್ರಂಪ್‌ ಕರೆ ನೀಡಿದ ಮರುದಿನವೇ ಜಪಾನ್‌ ಪ್ರಧಾನಿಯ ಈ ಭೇಟಿ ಕುತೂಹಲ ಮೂಡಿಸಿದೆ. ನಮಗೆ ಜಪಾನ್​ನ ಹಿತ ಮುಖ್ಯವಾಗುತ್ತದೆ. ಆ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ತಕಯೋಶಿ ತಿಳಿಸಿದ್ದಾರೆ.

ಇಸ್ರೇಲ್​ ಇರಾನ್​ನ ಇಂಧನ ಸಂಸ್ಕರಣಾ ಘಟಕದ ಮೇಲೆ ದಾಳಿ ಮಾಡಿತ್ತು. ಆ ಬಳಿಕ ಕತಾರ್​ನ​ ವಿಶ್ವದ ಅತಿ ದೊಡ್ಡ ಇಂಧನ ಸಂಸ್ಕರಣಾ ಘಟಕದ ಮೇಲೆ ಇರಾನ್​ ದಾಳಿ ಮಾಡಿತ್ತು. ಆ ಬಳಿಕ ಕುವೈತ್​ನ ಇಂಧನ ಸಂಸ್ಕರಣಾ ಘಟಕದ ಮೇಲೂ ದಾಳಿ ಮಾಡಿತ್ತು. ಇಸ್ರೇಲ್​ನ ಹೈಫಾ ನಗರದ ಇಂಧನ ಸಂಸ್ಕರಣ ಘಟಕವನ್ನು ಗುರಿಯಾಗಿಸಿ ಡ್ರೋಣ್​ ದಾಳಿ ಮಾಡಿತು. ಇದರಿಂದ ಕಂಗಾಲಾದ ಅಮೆರಿಕ ಇಂಧನ ಸಂಸ್ಕರಣಾ ಘಟಕಗಳು ನಮ್ಮ ಟಾರ್ಗೆಟ್​ ಅಲ್ಲ. ನಾವು ಇಂಧನ ಸಂಸ್ಕರಣಾ ಘಟಕಗಳನ್ನು ನಾಶ ಮಾಡುವ ಉದ್ದೇಶವಿಲ್ಲ. ಇರಾನ್​, ಇಸ್ರೇಲ್​ ಎರಡೂ ದೇಶಗಳು ಇದನ್ನು ಮುಂದುವರಿಸುವುದು ಸರಿಯಲ್ಲ ಎನ್ನುವ ಎಚ್ಚರಿಕೆ ನೀಡಿತು.

ಇಷ್ಟೆಲ್ಲಾ ಬೆಳವಣಿಗೆ ನಡುವೆ ಹೊರ್ಮೂಜ್‌ ಜಲಸಂಧಿಯನ್ನು ಯಾರ ಹಿಡಿತದಲ್ಲೂ ಇಲ್ಲದಂತೆ ಬಿಡುಗಡೆ ಮಾಡಿಸುತ್ತೇನೆ ಎಂದು ಅಮೆರಿಕ ಹೇಳಿಕೊಡಿದೆ. ಇರಾನ್​ ದಾಳಿ ಮಾಡುವ ಭೀತಿಯಿಂದ ವಿಶ್ವದ ಅನೇಕ ರಾಷ್ಟ್ರಗಳ ಹಡಗುಗಳು ಹೊರ್ಮುಜ್​​ ಜಲಸಂಧಿ ದಾಟಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿವೆ. ಈ ಸಂಕಷ್ಟದ ಸಮಯದಲ್ಲಿ ಇರಾನ್‌ ಮಾಸ್ಟರ್‌ ಪ್ಲಾನ್‌ ಮಾಡಿದ್ದು, ಹರ್ಮೂಜ್‌ ಜಲಸಂಧಿಯಲ್ಲಿ ಟೋಲ್‌ ಸಂಗ್ರಹ ಮಾಡಲು ಹೊಸ ಕಾನೂನು ಜಾರಿ ಮಾಡಲು ನಿರ್ಧರಿಸಿದೆ. ಇರಾನ್‌ ಸಂಸತ್​ನಲ್ಲಿ ಹೊಸ ಬಿಲ್​ಗೆ ಒಪ್ಪಿಗೆ ಸಿಕ್ಕ ಬಳಿಕ ಹೊಸ ಕಾನೂನು ಜಾರಿಯಾಗುವ ಸಾಧ್ಯತೆಯಿದೆ. ಒಟ್ಟಾರೆ ಅಮೆರಿಕ ಹಾಗೂ ಇಸ್ರೇಲ್​ ಮಾಡಿದ ತಂತ್ರಗಾರಿಕೆ ವಿಫಲವಾಗಿವೆ. ಇರಾನ್​ ಮಾತ್ರ ಸಾವು ನೋವು ಸಂಭವಿಸಿದರೂ ದೀರ್ಘಕಾಲದ ಯುದ್ಧಕ್ಕೆ ನಾನು ಸಿದ್ಧ ಎಂದು ಎದೆಯುಬ್ಬಸಿ ನಿಂತಿದೆ.

Related posts

ಇರಾನ್​ ಇನ್ಮುಂದೆ ಒಂಟಿಯಲ್ಲ.. ಚೀನಾ, ರಷ್ಯಾ ಬೆಂಬಲ.. ಯುದ್ಧ ಮತ್ತಷ್ಟು ತೀವ್ರ..

Publicspot

ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್‌..! ಕಾರಣ ಏನು..?

Publicspot

ಇರಾನ್‌ ಶರಣಾಗುತ್ತೆ ಎಂದಿದ್ದ ಅಮೆರಿಕಕ್ಕೆ ಡಿಚ್ಚಿ.. ಇಸ್ರೇಲ್‌ ಪ್ರಧಾನಿ ಹತ್ಯೆ ಪ್ರತಿಜ್ಞೆ

Publicspot

Indian Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು..

ಯಶವಂತಿ

Stamped death; ತಮಿಳು ನಟ ವಿಜಯ್​​ Rally ಯಲ್ಲಿ ಕಾಲ್ತುಳಿತ.. 38 ಜನ ಸಾವು..!

Publicspot

ಇರಾನ್​ ಅಷ್ಟು ಸುಲಭಕ್ಕೆ ಸೋಲು ಒಪ್ಪಿಕೊಳ್ಳುತ್ತಾ..? ಅಮೆರಿಕ ದಾಹಕ್ಕೆ ಮಣಿಯುತ್ತಾ..?

Publicspot