ಇರಾನ್ ಸರ್ವನಾಶಕ್ಕೆ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಪಣ ತೊಟ್ಟಿದ್ದು, ಭೀಭತ್ಸ ದಾಳಿ ನಡೆಸುತ್ತಿವೆ. ಇಸ್ರೇಲ್, ಅಮೆರಿಕ ಜಂಟಿ ಕಾರ್ಯಾಚರಣೆಗೂ ಇರಾನ್ ಪ್ರತ್ಯುತ್ತರ ಕೊಡುವುದನ್ನು ಮುಂದುವರಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ 3 ದಿನದಲ್ಲೇ ಅರ್ಧ ನಾಶವಾಗಿದೆ. ಇರಾನ್ ವಾಯುನೆಲೆಯನ್ನ ಅಮೆರಿಕ ಧ್ವಂಸ ಮಾಡಿದೆ. ಇರಾನ್ ಕ್ಷಿಪಣಿ ಸಂಗ್ರಹಗಾರವನ್ನೂ ನಾಶ ಮಾಡಿದೆ. B-2 ಬಾಂಬರ್, ಸೂಸೈಡ್ ಡ್ರೋಣ್ಗಳನ್ನು ಬಳಸಿ ವಿನಾಶ ಮಾಡ್ತಿದೆ. ಕ್ಷಿಪಣಿ ಸಾಗಿಸ್ತಿದ್ದ ಟ್ರಕ್ ಧ್ವಂಸ ಮಾಡ್ತಿರೋ ಅಮೆರಿಕ, ಮೇಲ್ನೋಟಕ್ಕೆ ಮೇಲುಗೈ ಸಾಧಿಸಿದೆ ಎಂದೆನಿಸುತ್ತದೆ. ಆದರೆ ಇರಾನ್ ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವ ಜಾಯಮಾನ ಅಲ್ಲ ಅನ್ನೋದನ್ನು ಆಯತುಲ್ಲಾ ಅಲಿ ಖಮೇನಿ ಸಾಧಿಸಿ ತೋರಿಸಿದ್ದಾರೆ.

ಖಮೇನಿ ಹತ್ಯೆ ಬಳಿಕ ಸಿಡಿದೆದ್ದಿರುವ ಇರಾನ್ ನಮ್ಮ ಸೇನೆ ಇನ್ನೂ ಸಂಪೂರ್ಣವಾಗಿ ಯುದ್ಧ ಸಾರಿಲ್ಲ. ಒಂದು ವೇಳೆ ನಾವು ಯುದ್ಧಕ್ಕೆ ಸಂಪೂರ್ಣವಾಗಿ ತೊಡಗಿದರೆ ಅಮೆರಿಕ ಬೆಚ್ಚಿ ಬೀಳುತ್ತದೆ ಎಂದಿದ್ದಾರೆ. ಕುವೈತ್ನಲ್ಲಿ ಅಮೆರಿಕದ ಅತ್ಯಾಧುನಿಕ F 15 ಯುದ್ಧ ವಿಮಾನಗಳನ್ನು ನಾಶ ಮಾಡಿದೆ. ಮೂರು ಫೈಟರ್ ಜೆಟ್ಗಳನ್ನು ಧ್ವಂಸ ಮಾಡಿದ್ದು, ಅಸದರಲ್ಲಿದ್ದ ಪೈಲಟ್ಗಳು ಪ್ಯಾರಚೂಟ್ ಮೂಲಕ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಯುನೈಟೆಡ್ ಅರಬ್ ಎಮಿರೆಟ್ಸ್ ದೇಶಗಳಲ್ಲಿ ಇರುವ ಅಮೆರಿಕ ವಾಯುನೆಲೆಯನ್ನು ನಾಶ ಮಾಡುತ್ತಾ ಸಾಗಿದೆ.
ಟೆಹ್ರಾನ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಅಮೇರಿಕ & ಇಸ್ರೇಲ್ ದಾಳಿ ಮಾಡ್ತಿದ್ದು ಇರಾನ್ ಅಧಿಕೃತವಾಗಿ 550 ಜನರಿ ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್ ಪರಮೋಚ್ಛ ನಾಯಕ ಖಮೇನಿ ಮತ್ತು ಆತನ ಇಡೀ ಕುಟುಂಬವನ್ನೇ ಹತ್ಯೆ ಮಾಡಲಾಗಿದೆ. ಇದೀಗ ಇರಾನ್ ಸೇನೆ ಸೌದಿ ಅರೆಬಿಯಾ, UAE, ಕುವೈತ್, ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಅಮೆರಿಕ ಪರವಾಗಿ ನಿಂತವರಿಗೂ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ. ಅರಾಮ್ಕೊ ತೈಲ ಸಂಸ್ಕರಣ ಘಟಕದ ಮೇಲೆ ಡ್ರೋಣ್ ದಾಳಿ ಮಾಡಿದ್ದು, ವಿಶ್ವದ ಅತಿದೊಡ್ಡ ತೈಲ ಸಂಸ್ಕರಣ ಘಟಕವನ್ನು ನಾಶ ಮಾಡುವ ಕೆಲಸ ಮಾಡಿದೆ.

ಇರಾನ್ ಕ್ಷಿಪಣಿ ದಾಳಿಗೆ ಇಸ್ರೇಲ್ನ ಜೆರೊಸಲೇಮ್ ನಗರ & ಟೆಲ್ ಅವೀವ್ ನಾಶ ಮಾಡಲಾಗಿದೆ. ಇಸ್ರೇಲ್ ದೇಶದಲ್ಲಿ ಪ್ರಮುಖ ನಗರಗಳು ನಾಶ ಆಗ್ತಿವೆ. ಇಸ್ರೇಲ್ನಲ್ಲಿ 9 ಜನ ಸಾವನ್ನಪ್ಪಿದ್ದು, 221 ಮಂದಿಗೆ ಗಾಯಗೊಂಡಿದ್ದಾರೆ. ಇರಾಕ್ನಲ್ಲಿ ಇಬ್ಬರು ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಕುವೈತ್ನಲ್ಲಿ 1 ಸಾವು ಸಂಭವಿಸಿದ್ದು 32 ಮಂದಿಗೆ ಗಾಯಗೊಂಡಿದ್ದಾರೆ. ಬಹರೇನ್ನಲ್ಲಿ 4 ಮಂದಿಗೆ ಗಾಯಗೊಂಡಿದ್ದಾರೆ. UAE ನಲ್ಲಿ 3 ಸಾವು ಸಂಭವಿಸಿದ್ದು, 58 ಮಂದಿಗೆ ಗಾಯಗೊಂಡಿದ್ದಾರೆ. ಒಮನ್ನಲ್ಲಿ 5 ಮಂದಿಗೆ ಗಾಯಗೊಂಡಿದ್ದಾರೆ. ಭಾರತೀಯರೂ ನಾಲ್ವರು ಸಾವನ್ನಪ್ಪಿದ್ದಾರೆ.
ಇರಾನ್ ಸೋಲನ್ನು ಒಪ್ಪಿಕೊಂಡು ಅಮೆರಿಕಕ್ಕೆ ಶರಣಾಗುವ ಇಚ್ಛೆ ಇದ್ದರೆ ಖಮೇನಿ ತನ್ನ ಜೀವವನ್ನೇ ಸಮರ್ಪಿಸುವ ಕೆಲಸಕ್ಕೆ ಕೈ ಹಾಕ್ತಿರಲಿಲ್ಲ. ಆದರೆ ಖಮೇನಿ ತಾನೂ ಸತ್ತರೂ ಇರಾನ್ ಅಮೆರಿಕಕ್ಕೆ ಶರಣಾಗುವುದು ಸಾಧ್ಯವೇ ಇಲ್ಲ; ಎನ್ನುವ ಸಂದೇಶ ರವಾನಿಸಿದ್ದಾರೆ. ಅದೇ ಕಾರಣಕ್ಕೆ ಖಮೇನಿ ಪ್ರಾಣ ಬಿಡ್ತಿದ್ದ ಹಾಗೆ ಮತ್ತೋರ್ವ ನಾಯಕನ ಆಯ್ಕೆ ಆಗಿದೆ. ಇನ್ನು ಅಮೆರಿಕ ವಿರುದ್ಧ ಸೆಟೆದು ನಿಂತಿರುವ ಇರಾನ್ ಸೇನೆ ಪ್ರತಿಕಾರದ ಶಪಥ ಮಾಡಿದೆ. ಇದೇ ಕಾರಣಕ್ಕೆ ಇರಾನ್ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಟ್ರಂಪ್. ಇರಾನ್ ಜನರು ದಂಗೆ ಏಳುವಂತೆ ಟ್ರಂಪ್ ಕರೆ ಕೊಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿದ್ರೆ ಇರಾನ್ ಅಮೆರಿಕಕ್ಕೆ ಬಗುವ ಸಾಧ್ಯತೆ ಕಡಿಮೆ ಎನ್ನಬಹುದು.


