ಬೆಂಗಳೂರಲ್ಲಿ ವಿಧಾನಸಭೆ ವಿರೋಧ ಪಕ್ಷದ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ನಾನು ಸಮಾಜವಾದಿ, ಜಾತಿವಾದಿ ಅಲ್ಲ ಅಂತ ಹೇಳ್ತಿದ್ರು. ಇದೀಗ ನನ್ನ ಮಗನನ್ನು ನೋಡಿಕೊಳ್ಳಿ ಅಂದಿದ್ದಾರೆ. ಇವರನ್ನು ನೋಡಿದ್ದು ಆಯ್ತು, ಮುಂದೆ ನನ್ನ ಮಗನನ್ನು ನೋಡಿಕೊಳ್ಳಿ ಅಂತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನನ್ನ ಮಗನನ್ನು ಬೆಳಸಿ, ನನ್ನ ಮಗನನ್ನು ಬೆಳಸಿ ಅನ್ನೋದು ಒಳ್ಳೆಯ ಬೆಳವಣಿಗೆ ಅಲ್ಲ, ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಕೊನೆಯುಸಿರು ಇರುವರೆಗೆ ರಾಜಕೀಯದಲ್ಲಿ ಇರ್ತೇನೆ ಎಂದಿರುವ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜಕೀಯವನ್ನು ಮೈಗೂಡಿಸಿಕೊಂಡು ಬಂದವರು, ಜೀವ ಇರೋವರೆಗೂ ಅದೇ ಇರಬೇಕಲ್ಲ. ಅವರು ಹೇಳಿದ್ರಲ್ಲಿ ತಪ್ಪಿಲ್ಲ ಅದು ಅವರ ಇಚ್ಚೆ. ಆದರೆ ನಿಮಗೆ ಜೀವ ಜೀವನ ಕೊಟ್ಟವರುವ ಅನುಭವಿಸಿದ್ದೇನು..? ನಿಮ್ಮದು ಆಯ್ತು, ಇವಾಗ ನನ್ನಂತೆ ನನ್ನ ಮಗನನ್ನು ಬೆಳೆಸಿ ಅಂತಿದ್ದೀರಿ. ಸಿದ್ದರಾಮಯ್ಯ ನವರು ಕೊಟ್ಟದನ್ನು ಯಾವುದನ್ನು ನೆನಪಿಸಿಕೊಂಡು ನೋಡೋಕೆ ಆಗಲ್ಲ. ದೇವರಾಜ್ ಅರಸು ದಿನಗಳ ದಾಖಲೆ ಮುರಿದಿರಬಹುದು. ಅವರ ಕೊಡುಗೆಗಳನ್ನು ಮುರಿಯೋದಕ್ಕೆ ಆಗಿಲ್ಲ. ನಿಮ್ಮ ಸಾಧನೆ ಏನು..? 17 ಬಜೆಟ್‌ನಿಂದ ಜನರಿಗೆ ಏನೇನೂ ಉಪಯೋಗ ಆಗಿಲ್ಲ. ಈಗ ವಂಶ ಪಾರಂಪರ್ಯಕ್ಕೆ ಜೋತು ಬಿದ್ದಿದ್ದೀರಿ. ಇದೀಗ ಅಂತ್ಯ ದಿನಗಳ ಮಾತಾಡಿದ್ದೀರಿ ಎಂದಿದ್ದಾರೆ.

ಇನ್ನೆರಡು ತಿಂಗಳಲ್ಲಿ ರಾಜ್ಯಸಭೆ ಚುನಾವಣೆ ಬರುತ್ತಿದೆ. ರಾಜ್ಯಸಭೆ ಚುನಾವಣೆ ಬರೋ ಅಷ್ಟರಲ್ಲಿ ಅವರ ಸ್ಥಾನ ಕಳೆದುಕೊಳ್ತಾರೆ. ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಕಳೆದುಕೊಳ್ತಾರೆ ಎಂದಿದ್ದಾರೆ ಛಲವಾದಿ. ಇದುವರೆಗೂ ನಾನೇ ಐದು ವರ್ಷ ಅಂತಿದ್ರು. ಈಗ ಅವರಿಗೆ ತಾಕತ್ ಇಲ್ಲ, ನಿನ್ನೆ ವೈರಾಗ್ಯದ ಮಾತಾಡಿದ್ದಾರೆ. ನನ್ನದು ಮುಗಿದಿದೆ ಇನ್ನೂ ಏನಿದ್ದರೂ ನನ್ನ ಮಗನನ್ನು ಕಾಪಾಡಿ ಎಂದಿದ್ದಾರೆ. ಅವರು ಸದ್ಯದಲ್ಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗ್ತಾರೆ. ಅವರ ರಾಜೀನಾಮೆ ಬಳಿಕ ಯಾರು ಬರುತ್ತಾರೆ ಅನ್ನೋದಲ್ಲ. ಅದು ಅವರ ಪಕ್ಷದ ತೀರ್ಮಾನ. ಆದರೆ ದಲಿತರಿಗೆ ಅನ್ಯಾಯ ಮಾಡ್ತಿರೋದಂತೂ ಸತ್ಯ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಯಾರಿಗಾದರೂ ಕೊಡಿ, ದಲಿತರಿಗೂ ಕೊಡಿ. ದಲಿತರ ವೋಟ್ ಬ್ಯಾಂಕ್ ಮಾಡಿಕೊಂಡು ದಲಿತರಿಗೆ ಸಿಎಂ ಆಗುವ ಅವಕಾಶ ಕುಸಿದುಕೊಂಡಿದ್ದು ಸಿದ್ದರಾಮಯ್ಯ ಎಂದು ಟೀಕಿಸಿದ್ದಾರೆ.
ಈಗಲೂ ಕೂಡ ಸಿದ್ದರಾಮಯ್ಯ ದಲಿತ ವಿರೋಧಿಯೇ ಆಗಿದ್ದಾರೆ. ದಲಿತರಿಗೆ ಇಟ್ಟಿದ್ದ ಹಣ ನುಂಗಿದ್ದು ಸಿದ್ದರಾಮಯ್ಯ. ಅದೇ ಕಾರಣಕ್ಕೆ ಅವರಿಂದ ದಲಿತ ಮೀಸಲಾತಿ ಸರಿಮಾಡೋಕೆ ಆಗ್ತಿಲ್ಲ. ಈಗಾಗಲೇ ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಆಗಿದ್ದಾರೆ. ಇವೆಲ್ಲವನ್ನೂ ನನ್ನಿಂದ ಏನು ಮಾಡೋಕೆ ಆಗಿಲ್ಲ ಎಂದು ರಾಜೀನಾಮೆಗೆ ಸಿದ್ದರಾಗ್ತಿದ್ದಾರೆ ಎಂದಿದ್ದಾರೆ.


