The Public Spot
ರಾಜಕೀಯ

JDS ಪಕ್ಷ ಬಿಟ್ಟು ಕಾಂಗ್ರೆಸ್​ ಸೇರ್ತಾರಾ ಶಾಸಕ G.T ದೇವೇಗೌಡ..?

JDS ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ G.T ದೇವೇಗೌಡ ಅವರನ್ನು ಕೈಬಿಟ್ಟು ಮಾಜಿ ಶಾಸಕ ಕೃಷ್ಣಾ ರೆಡ್ಡಿ ಅವರಿಗೆ ಮಣೆ ಹಾಕಲಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಶಾಸಕ G.T ದೇವೇಗೌಡ, ಕೋರ್​ ಕಮಿಟಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿರೋದು ಗೊತ್ತಿಲ್ಲ. ಕೃಷ್ಣಾರೆಡ್ಡಿ ಅವರನ್ನು ಕೋರ್ ಕಮಿಟಿ ಅಧ್ಯಕ್ಷ ಮಾಡಿದ್ದಾರೆ ಅಂತಾ ಗೊತ್ತಾಯ್ತು. ಪಕ್ಷ ಸಂಘಟನೆ ಆಗ್ತಿಲ್ಲ ಅಂತ ನನಗೂ ಅನಿಸಿತ್ತು. ಇದರಿಂದ ನಂಗೇನು ಬೇಸರ ಇಲ್ಲ. ವಿರೋಧ ಪಕ್ಷ ನಾಯಕನ ಆಯ್ಕೆಯಲ್ಲಿ ನನಗೆ ನೋವಾಗಿತ್ತು ಅಷ್ಟೇ. ನಾನು ನನ್ನ ಕೆಲಸ ಮಾಡಿಕೊಂಡಿದ್ದೇನೆ. ನನ್ನನ್ನು ಸಚಿವನನ್ನಾಗಿ ಮಾಡಿದ್ರು ಅದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ಗೆಳೆಯ ಕೃಷ್ಣಾರೆಡ್ಡಿ ಅವರಿಗೆ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ನನ್ನ ಪರಿಸ್ಥಿತಿ ಏನೂ ಅಂತಾ ಅವರಿಗೆ ಗೊತ್ತು. ನಾನು ಆರ್ಥಿಕವಾಗಿ ಬಲ ಕಳೆದುಕೊಂಡಿದ್ದೇನೆ ಅಂತ ಅವರಿಗೆ ಗೊತ್ತಿದೆ. ಅದೇ ಕಾರಣಕ್ಕೆ ಹೊಸಬರಿಗೆ ಪಕ್ಷ ಕಟ್ಟಲು ಅವಕಾಶ ಕೊಟ್ಟಿದ್ದಾರೆ. ಇದರಿಂದ ನನಗೆ ಯಾವುದೇ ನೋವಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ ಜಿ.ಟಿ ದೇವೇಗೌಡ. ನಾನು ಜೆಡಿಎಸ್​ ಪಕ್ಷದಲ್ಲೇ ಇದ್ದೇನೆ, ಮುಂದೆ ನೋಡೋಣ ಎನ್ನುವ ಮೂಲಕ ನಾನು ಜೆಡಿಎಸ್​ ಬಿಟ್ಟು ಬೇರೆ ಪಕ್ಷದಿಂದ ರಾಜಕಾರಣ ಮಾಡುವ ಬಗ್ಗೆಯೂ ಸೂಚ್ಯವಾಗಿ ಹೇಳಿಕೊಂಡಿದ್ದಾರೆ ಶಾಸಕ ಜಿ.ಟಿ ದೇವೇಗೌಡ.

ನಾನು ಚಾಮುಂಡಿ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ದಸರಾದಲ್ಲಿ ಆಡಿದ್ದ ಮಾತಿನಿಂದ, ನಾನು ಸಿದ್ದರಾಮಯ್ಯ ಜೊತೆಗೆ ಇದ್ದೇನೆ ಅಂತ ತಿಳಿದುಕೊಂಡರು. ನಾನು ಪಕ್ಷದಲ್ಲಿದ್ದುಕೊಂಡು ದ್ರೋಹ ಮಾಡಲ್ಲ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಲಿ ಅಂತ ಅವರ ಜೊತೆ ಹೋಗಿದ್ದೆ ಅಷ್ಟೆ. ಯಡಿಯೂರಪ್ಪ ಸಿಎಂ ಆದ್ರು ಅದೇ ಖುಷಿ, ಕುಮಾರಸ್ವಾಮಿ ಸಿಎಂ ಆದ್ರು ಅದೇ ಖುಷಿ. ನನ್ನ ಬೆಳೆಯೋಕೆ ಬಿಡಬಾರದು ಅಂತ ಒಂದಷ್ಟು ಮಂದಿ ಅವಗಿನಿಂದ ನನ್ನ ವಿರುದ್ಧ ಕೆಲಸ ಮಾಡಿದ್ರು. ಚಿಕ್ಕ ವಯಸ್ಸಿನಿಂದ ಎಲ್ಲವನ್ನೂ ನೋಡಿಕೊಂಡು ಬಂದಿದ್ದೇನೆ. ಜೆಡಿಎಸ್ ಪಕ್ಷದ ಕೆಲಸವನ್ನು ಮಾಡಿದ್ದೆ, ಅವಾಗ ನಾನು ಪಕ್ಷಕ್ಕೆ ಬೇಕಿದ್ದೆ, ದೇವೇಗೌಡರ ಪಕ್ಷ ಉಳಿಸಲು ಹೋರಾಟವನ್ನೂ ಮಾಡಿದ್ದೆ. ಈಗ ಪಕ್ಷಕ್ಕೆ ಬೇಕಿಲ್ಲ ಎನ್ನುವ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ ಜಿ.ಟಿ ದೇವೇಗೌಡ.

ಜೆಡಿಎಸ್ ಪಕ್ಷಕ್ಕೆ ಜಿ.ಟಿ ದೇವೇಗೌಡ ಬೇಕಾ..? ಬೇಡ್ವಾ..? ಅನ್ನೋ ಪ್ರಶ್ನೆಯನ್ನು ಅವರನ್ನೇ ಕೇಳಿ ಎಂದಿರುವ ಶಾಸಕ ಜಿ.ಟಿ ದೇವೇಗೌಡ, ಪಕ್ಷವನ್ನು ತೊರೆಯುವ ಸುಳಿವು ಕೊಟ್ಟಿದ್ದಾರೆ. ನಿನ್ನೆಯಷ್ಟೇ ಸಮಿತಿಗಳಿಗೆ ಹೊಸದಾಗಿ ನೇಮಕ ಮಾಡಿ ಕುಮಾರಸ್ವಾಮಿ ಆದೇಶ ಮಾಡಿದ್ದರು. ಜಿಟಿ ದೇವೇಗೌಡ ಅವರನ್ನು ಕಳೆದ ಎರಡು ವರ್ಷದಿಂದ ಕೋರ್​ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದಾಗಲೂ ಸಕ್ರಿಯರಾಗಿ ಭಾಗಿಯಾಗಲಿಲ್ಲ. ಹುಣಸೂರಿನಲ್ಲಿ ಮಗನಿಗೆ ಟಿಕೆಟ್​ ಕೊಟ್ಟು ಗೆಲುವು ಕಾಣಲು ಸಹಕಾರ ಕೊಟ್ಟ ಜೆಡಿಎಸ್​ ಬಿಟ್ಟು ಬೇರೆ ಪಕ್ಷಗಳ ಪರವಾಗಿ ಮಾತನಾಡುವುದನ್ನು ನಿಲ್ಲಿಸಲಿಲ್ಲ, ಕುಮಾರಸ್ವಾಮಿ ಜೆಡಿಎಸ್​ ಪಕ್ಷಕ್ಕೆ ಆಧಾರಸ್ತಂಭ ಅನ್ನೋದು ಗೊತ್ತಿದ್ದರೂ ಪದೇ ಪದೇ ಕುಮಾರಸ್ವಾಮಿಯನ್ನು ಕೆಣಕುವಂತೆ ಮಾತನಾಡಿದ್ರು. ಇಷ್ಟೆಲ್ಲಾ ಮಾಡಿದ ಮೇಲೂ ಕೋರ್​ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದ್ರೆ ಪಕ್ಷಕ್ಕೆ ಏನು ಪ್ರಯೋಜನ..? ಅನ್ನೋದು ಜೆಡಿಎಸ್​ ಪಕ್ಷದ ಆಲೋಚನೆಯಾಗಿದೆ.

Related posts

ಮಹಾರಾಷ್ಟ್ರದಲ್ಲಿ ವಿಮಾನ ಅಪಘಾತವೋ.. ಉದ್ದೇಶ ಪೂರ್ವಕ ದುರಂತವೋ..?

Publicspot

ಚಿತ್ತಾಪುರದಲ್ಲಿ RSS ಪಥ ಸಂಚಲನ VS ಭೀಮ್‌ ಆರ್ಮಿ ಫೈಟ್‌ ಸಂಚಲನ..!!

Publicspot

ತ್ರಿಭಾಷಾ ಸೂತ್ರ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಏನು..? ಹಿಂದಿ ಬೇಡ.. ಉರ್ದು ಬೇಕಾ..?

Publicspot

BJP ಯಲ್ಲಿ ಅಡ್ಡ ಮತದಾನ.. ಯಾರ ಮೇಲಿದೆ ಅನುಮಾನ..? ಶಿಸ್ತು ಕ್ರಮ ಏನು..?

Publicspot

ಶಿವಾನಂದ ನೀಲಣ್ಣನವರ್‌ ಬಂಧನ ರಾಜಕೀಯ ಪ್ರೇರಿತ ಅಲ್ಲ..!

Publicspot

Cong MP Trouble: ಹಾಸನದ ಕಾಂಗ್ರೆಸ್​ ಸಂಸದನಿಗೆ ಸಂಕಷ್ಟ..! ಸುಪ್ರೀಂ ಶಾಕ್..

Publicspot