The Public Spot
ರಾಜ್ಯ

ಹೋಟೆಲ್‌‌ಗಳಿಗೆ ಗ್ಯಾಸ್‌ ಸಿಗ್ತಿಲ್ಲ.. ಆದರೂ ಬಾಗಿಲು ಮುಚ್ಚಲ್ಲ.. ಮುಚ್ಚುತ್ತಿವೆ..

ಬೆಂಗಳೂರು ಹೋಟೆಲ್‌ಗಳಿಗೆ ಕಮರ್ಷಿಯಲ್‌ ಸಿಲಿಂಡರ್‌ ಲಭ್ಯ ಆಗ್ತಿಲ್ಲ. ಈ ಹಿನ್ನೆಲ್ಎಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ ಬಳಿಕ ಹೋಟೆಲ್‌ ಮಾಲೀಕರು ಮಹತ್ವದ ಸಭೆ ನಡೆಸಿದ ಬಳಿಕ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಮಾತನಾಡಿ, ಎಮರ್ಜೆನ್ಸಿ ಮೀಟಿಂಗ್ ಮಾಡಿದ್ದೇವೆ. ಸಭೆಯ ಉದ್ದೇಶ ಎಲ್ಲರಿಗೂ ಗೊತ್ತಿದೆ. ನಮ್ಮ ಉದ್ಯಮ ಉಳಿಬೇಕು, ಬೆಳೆಯಬೇಕು. ಮಾಲೀಕರಿಗೆ ಯಾವುದೇ ಕಷ್ಟ ಆಗಬಾರದು ಅನ್ನೋ ಕಾರಣಕ್ಕೆ ಸಭೆ ಮಾಡಿದ್ದೇವೆ. ಶುಚಿ ರುಚಿ ಊಟ, ವಿವಿಧ ತಿಂಡಿ ತಿನಿಸು, ಗ್ರಾಹಕರಿಗೆ ಎಟಕುವ ದರದಲ್ಲಿ ಕೊಡ್ತ ಇದ್ದೆವು. ಈಗ ಕಮರ್ಷಿಯಲ್‌ ಸಿಲಿಂಡರ್‌ ಕೊರತೆ ಎದುರಾಗಿದೆ. ಆದರೂ ಬೆಂಗಳೂರಲ್ಲಿ ಯಾವುದೇ ಹೋಟೆಲ್ ಬಂದ್ ಆಗಲ್ಲ ಎಂದಿದ್ದಾರೆ.

ಈಗಾಗಲೇ ಸಿಲಿಂಡರ್‌ ಸಿಗದೆ ಬಂದ್ ಆಗಿರೋ ಹೋಟೆಲ್ ಓಪನ್ ಮಾಡ್ತೇವೆ ಎಂದಿರುವ ಪಿ.ಸಿ ರಾವ್‌, ಸಂಘದ ವತಿಯಿಂದ ಮಾತಾಡಿ ಓಪನ್ ಮಾಡಿಸ್ತೇವೆ. ಯಾರು ಹೋಟೆಲ್ ಬಾಗಿಲು ಹಾಕಬಾರದು. ಬಾಗಿಲು ಹಾಕಿದ್ರೆ ಮಾಲೀಕರಿಗೆ ಮೊದಲ ತೊಂದರೆ ಆಗುತ್ತದೆ. ಕಾರ್ಮಿಕರಿಗೆ ಗ್ರಾಹಕರಿಗೆ ಹೆಚ್ಚಿನ ತೊಂದರೆ ಆಗುತ್ತದೆ. ಪಿಜಿ ಮನೆಯಲ್ಲಿ ಇರುವ ಬ್ಯಾಚುಲರ್ಸ್‌ಗೆ, ಐಟಿ ಕಂಪನಿಗೆ ಆಸ್ಪತ್ರೆಗೆ ಅತೀ ಹೆಚ್ಚು ಆಹಾರ ಒದಗಿಸುವ ಪ್ರಯತ್ನ ಹೋಟೆಲ್ ಅವರು ಮಾಡ್ತಾ ಇದ್ದಾರೆ. ಹೋಟೆಲ್ ಬಾಗಿಲು ಹಾಕಿದ್ರೆ ಜನ ಸಾಮಾನ್ಯರಿಗೆ ಅನಾನುಕೂಲ ಆಗಲಿದೆ. 80 ಪರ್ಸೆಂಟ್ ಡೊಮೆಸ್ಟಿಕ್ ಗ್ಯಾಸ್‌ ಬಳಕೆ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ. 20 ಪರ್ಸೆಂಟ್ ಅಷ್ಟೇ ಕಮರ್ಷಿಯಲ್ ಗ್ಯಾಸ್ ಬಳಕೆ ಮಾಡ್ತಾ ಇದ್ದೇವೆ ಈ ಬಗ್ಗೆ ಗಮನ ಹರಿಸ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಜೊತೆ ಚರ್ಚೆ ಮಾಡಿದ್ದೇವೆ. ಉದ್ಯಮ ಉಳಿಸಲು ಗ್ಯಾಸ್ ಕೊಡಿ ಅಂತ ಮನವಿ ಮಾಡಿದ್ದೇವೆ. ಪರ್ಯಾಯ ವ್ಯವಸ್ಥೆ ಬಗ್ಗೆ ಈಗಾಗಲೇ ಹೋಟೆಲ್ ಮಾಲೀಕರು ಚಿಂತನೆ ಮಾಡಿದ್ದಾರೆ. ಇಂಡಕ್ಷನ್ , ವಿದ್ಯುತ್ ಬಾಯ್ಲರ್ ಸೇರಿದಂತೆ ಅನೇಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದೇ ರೀತಿ ಪಾಸಿಟಿವ್ ಚಿಂತನೆ ಬೇಕು ಅಂತ ಚರ್ಚೆ ಮಾಡಿದ್ದೇವೆ. ನಮ್ಮ ಉದ್ಯಮದಿಂದ ಜನ ಸಾಮಾನ್ಯರಿಗೆ ಸಮಸ್ಯೆ ಆಗಬಾರದು. IOC ಅಥವಾ HP ಕಂಪನಿ ಕಡೆಯಿಂದ ಸಣ್ಣ ಪ್ರಮಾಣದಲ್ಲಿ ಗ್ಯಾಸ್‌ ಸಿಗುವ ಇದೆ. ಈಗಾಗಲೇ 2 ಶಿಪ್ ಬಂದಿದೆ ಅನ್ನೋ ಮಾಹಿತಿ ಇದೆ. ಆದರೆ ಗ್ಯಾಸ್ ಸಿಲಿಂಡರ್ ಕೈಗೆ ಬಂದ ಮೇಲೆ ನಂಬೋಕೆ ಆಗುತ್ತದೆ.

ಈಗಾಗಲೇ ಮೆಜೆಸ್ಟಿಕ್ ಅಲ್ಲಿ ಕ್ಲೋಸ್ ಆಗಿರೋ ಹೋಟೆಲ್ ಓಪನ್ ಮಾಡಿದ್ದಾರೆ. ಹೋಟೆಲ್ ಸಂಘದಿಂದ ಮಾತನಾಡಿ ಓಪನ್ ಮಾಡಿಸಿದ್ದೇವೆ. ಕೃಷ್ಣ ವೈಭವ ಹೋಟೆಲ್‌ ಕ್ಲೋಸ್ ಆಗಿತ್ತು. ಇದೀಗ ಓಪನ್‌ ಆಗಿದೆ. ಕಮರ್ಷಿಯಲ್ ಗ್ಯಾಸ್ ಅಗತ್ಯ ಇರೋದು ಶೇಕಡಾ 13 ರಷ್ಟು ಮಾತ್ರ. ಇದರಲ್ಲಿ ಶೇಕಡಾ 7ರಷ್ಟು ಗ್ಯಾಸ್ ಪೂರೈಕೆ ಆದ್ರು ನಮಗೆ ಸಾಕಾಗುತ್ತದೆ. ತಿಂಡಿ & ಟಿ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ಬೆಲೆ ನಿರ್ಧಾರ ಮಾಡೋದು ಮಾಲೀಕರು. ನಾವು ನಿರ್ಧಾರ ಮಾಡೋಕೆ ಆಗಲ್ಲ ಎಂದಿದ್ದಾರೆ. ಇನ್ನು ಸಿಲಿಂಡರ್‌ ಅಲಭ್ಯತೆ ಕಾರಣದಿಂದ ಕೆಲವು ಆಹಾರ ತಿಂಡಿಗಳ ತಯಾರಿಕೆಗೆ ಬ್ರೇಕ್‌ ಹಾಕುವುದಕ್ಕೂ ಹೋಟೆಲ್‌ ಮಾಲೀಕರು ನಿರ್ಧಾರ ಮಾಡಿದ್ದಾರೆ. ಯುದ್ಧ ಹೀಗೇ ಮುಂದುವರಿದರೆ, ಸಂಕಷ್ಟ ಮತ್ತಷ್ಟು ಉಲ್ಬಣ ಆಗುವ ಸಾಧ್ಯತೆ ಹೆಚ್ಚು.

ಹೋಟೆಲ್ ಮಾಲೀಕರು ನಿನ್ನೆ ಸಭೆ ನಡೆಸಿ ಹೋಟೆಲ್ ಮುಚ್ಚಲ್ಲ ಎಂದಿದ್ದರು. ಆದರೆ ಇಂದು ಬೆಳಗ್ಗೆ ಸಾಕಷ್ಟು ಕಡೆ ಹೋಟೆಲ್ ಬಂದ್ ಆಗಿವೆ. ಅಂದುಕೊಂಡಂತೆ ಪರ್ಯಾಯ ವ್ಯವಸ್ಥೆ ಆಗದ ಕಾರಣಕ್ಕೆ ಬೆಂಗಳೂರಿನ ಹೆಸರಾಂತ IDC ಕಿಚನ್ ಬಂದ್ ಆಗಿದೆ. ಗಾಂಧಿ ನಗರ ಬ್ರಾಂಚ್‌ನ ಕಿಚನ್ ಬಂದ್ ಆಗಿರುವ ಕಾರಣಕ್ಕೆ ಬೆಳಗ್ಗೆ ಹೋಟೆಲ್‌ಗೆ ಬಂದ ಗ್ರಾಹಕರು ವಾಪಸ್ ಆಗುವಂತಾಗಿದೆ.

Related posts

ಜಾತಿ ಜನಗಣತಿ ಆರಂಭ.. ಇವತ್ತು ಹೈಕೋರ್ಟ್‌ನಲ್ಲಿ ಸಿಗುತ್ತಾ ಮಧ್ಯಂತರ ತಡೆ..?

Publicspot

ಕಾಂಗ್ರೆಸ್‌ ಸರ್ಕಾರಕ್ಕೆ ನೇಮಕಾತಿ ಬೇಕಿಲ್ವಾ..? ಬಿಜೆಪಿ ರಾಜಕೀಯ ಲಾಭನಾ..?

Publicspot

17.50 ಲಕ್ಷ ಜನರ ಆರೋಗ್ಯ ಖಾತ್ರಿಪಡಿಸುವ ಶುದ್ಧ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಿಎಂ

admin

T.B DAM GATE JAM : 6 ಗೇಟ್​ಗಳು ಕೆಲಸ ಮಾಡ್ತಿಲ್ಲ, ಮುರಿದು ಹೋಗುವ ಭೀತಿ..

Publicspot

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆ

admin