The Public Spot
ದೇಶ-ವಿದೇಶ

ಲೋಕಸಭೆಯಲ್ಲಿ ಪ್ರಧಾನಿ ಮೇಲೆ ಹಲ್ಲೆಗೆ ನಡೆದಿತ್ತಾ ಪ್ಲಾನ್..? ಮೋದಿ ಗೈರಿಗೆ ಕಾರಣ ಇದೆನಾ..?

ಲೋಕಸಭಾ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರ ಕೊಡಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸದನಕ್ಕೇ ಆಗಮಿಸಿರಲಿಲ್ಲ. ಹೀಗಾಗಿ ಲೋಕಸಭೆಯಲ್ಲಿ ಪ್ರಧಾನಿ ಉತ್ತರ ಕೊಡಲಿಲ್ಲ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್​ ಸೇರಿದಂತೆ INDI ಒಕ್ಕೂಟದ ಸದಸ್ಯರು ತೀವ್ರ ಗದ್ದಲ ಸೃಷ್ಟಿಸಿದರು. ನಂತರ ಎಲ್ಲರೂ ಸಭಾತ್ಯಾಗ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಮಾತ್ರ ತಮ್ಮಷ್ಟಕ್ಕೇ ತಾವು ಭಾಷಣ ಮಾಡಿ, ಹೇಳಬೇಕಿದ್ದನ್ನು ಹೇಳಿ ಮುಗಿಸಿದರು.

ಲೋಕಸಭೆಯಲ್ಲಿ ಮಾತನಾಡಲು ಪ್ರಧಾನಿಯವರಿಗೆ ತಾಕತ್ತಿಲ್ಲ, ಹಾಗಾಗಿ ಸಂಸತ್ತಿಗೆ ಬರಲ್ಲ, ಅಪ್ಪಿತಪ್ಪಿ ಸದನಕ್ಕೆ ಪ್ರಧಾನಿ ಬಂದರೆ ಲೆಫ್ಟಿನೆಂಟ್​ ನರವಾಣೆ ಬರೆದಿರುವ ಪುಸ್ತಕವನ್ನು ನಾನೇ ಹೋಗಿ ಪ್ರಧಾನಿ ಮೋದಿ ಅವರಿಗೆ ಕೊಡ್ತೀನಿ ಅಂತಾ ರಾಹುಲ್​​ ಗಾಂಧಿ ಹೇಳಿದ್ದರು. ಇನ್ನು ಪ್ರಿಯಾಂಕಾ ಗಾಂಧಿ, ಎಲ್ಲೀವರೆಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕರಿಗೆ ಮಾತಾಡಲು ಸ್ಪೀಕರ್​ ಬಿಡಲ್ವೋ, ಅಲ್ಲಿವರೆಗೂ ಪ್ರಧಾನಿ ಅವರು ಮಾತನಾಡಲು ಬಿಡಲ್ಲ ಎಂದು ಬುಧವಾರವೇ ಹೇಳಿದ್ದರು. ಆ ಬಳಿಕ ಪ್ರಧಾನಿ ಮೋದಿ ತಮ್ಮ ಭಾಷಣ ರದ್ದು ಮಾಡಿ, ಸದನಕ್ಕೆ ಗೈರು ಹಾಜರಾಗಿದ್ದರು. ಗುರುವಾರ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಮಾತನಾಡಿ, ಪ್ರಧಾನಿ ಮೋದಿ ಗೈರು ಆಗಿದ್ಯಾಕೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ನಡೆದ ಘಟನೆಯನ್ನು ಇಡೀ ದೇಶವೇ ನೋಡಿದೆ. ಮಹಿಳಾ ಸದಸ್ಯರು ಪ್ರಧಾನಿ ಕುರ್ಚಿ ಕಡೆಗೆ ಹೋಗಿದ್ದು ಯಾಕೆ ಅಂತ ಗೊತ್ತಿದೆ. ಇದು ಕಲಾಪಕ್ಕೆ ಗೌರವ ತರುವ ಸಂಗತಿಯಲ್ಲ ಎಂದಿದ್ದಾರೆ. ಇನ್ನೂ ಕಾಂಗ್ರೆಸ್​ ಸದಸ್ಯರಿಂದ ಲೋಕಸಭಾ ಸದನದಲ್ಲಿ ಊಹೆಗೂ ಮೀರಿದ ಘಟನೆ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದ್ರಿಂದ, ಸದನಕ್ಕೆ ಬರುವುದು ಬೇಡ ಎಂದು ನಾನು ಪ್ರಧಾನಿ ಅವರಿಗೆ ತಿಳಿಸಿದ್ದೆ ಅನ್ನೋ ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ.

ಲೋಕಸಭೆಯಲ್ಲಿ ಮೋದಿ ಮಾತಾಡಲು ಬಂದಾಗ ಅವರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಸಂಸದರು ನಿರ್ಧರಿಸಿದ್ರು. ಅವರ ಮೇಲೆ ದಾಳಿ ಮಾಡಿ ದೊಡ್ಡ ಅಚಾತುರ್ಯ ಸೃಷ್ಟಿಸೋದಕ್ಕೂ ಕಾಂಗ್ರೆಸ್‌‌ ಸಂಸದರು ಸಂಚು ರೂಪಿಸಿದ್ರಂತೆ.. ಅದ್ರಲ್ಲೂ ಪ್ರತಿಪಕ್ಷಗಳ ಮಹಿಳಾ ಸಂಸದರನ್ನೇ ಮುಂದೆ ಕಳಿಸಿ ಹಂಗಾಮ ಸೃಷ್ಟಿಸಲು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷದವರು ತೀರ್ಮಾನ ಮಾಡಿದ್ರಂತೆ.. ಹೀಗಾಗಿನೇ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲೆ ಪ್ರಧಾನಿ ಮೋದಿ ಮಾತನಾಡಲು ಬರಲಿಲ್ಲ… ಮೋದಿಯವರಿಗೆ ಅಧಿವೇಶನಕ್ಕೆ ಬರಬೇಡಿ ಅಂದಿದ್ದು ನಾನೇ ಅಂತ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಕಲಾಪದಲ್ಲೇ ಹೇಳಿಕೆ ನೀಡಿದ್ದಾರೆ. ಅಷ್ಟೆ ಅಲ್ಲದೆ ನನ್ನ ಮನವಿಯನ್ನ ಪ್ರಧಾನಿ ಒಪ್ಪಿಕೊಂಡರು. ಮುಂದೆ ಆಗಬಹುದಾದ ಕೆಟ್ಟ ಘಟನೆಯನ್ನ ತಪ್ಪಿಸಿದ್ರು. ಹೀಗಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದ ಹೇಳ್ತೀನಿ ಎಂದಿದ್ದಾರೆ.

Related posts

ಕೊಲ್ಲೂರಿನಲ್ಲಿ ತಮಿಳುನಾಡು ಸಿಎಂ ವಿಜಯ್‌ ಪೂಜೆ.. ಮೂಕಾಂಬಿಕೆಗೆ ಖಡ್ಗ ಸಮರ್ಪಣೆ..

Publicspot

Election Commission Deadline: ರಾಹುಲ್‌ ಗಾಂಧಿ ಈಗ ಏನ್‌ ಮಾಡ್ತಾರೆ..? ಉತ್ತರ ಏನು..?

Publicspot

LPG ತುಂಬಿದ 2 ಹಡಗು ತೆರಳಲು ಬಿಟ್ಟ ಭಾರತದ ಗೆಳಯ ಇರಾನ್‌..!

Publicspot

Indian Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು..

ಯಶವಂತಿ

ನೀಟ್‌ ಪ್ರಶ್ನೆ ಪತ್ರಿಕೆ ಲೀಕ್‌ ಒಪ್ಕೊಂಡ್ರೆ ಸಾಕಾ..? ಮಕ್ಕಳಿಗೆ ಮಾತ್ರ ಶಿಕ್ಷೆನಾ..?

Publicspot

ನಾವು ಬರಲ್ಲ ಶಾಂತಿ ಸಭೆಗೆ.. ಏನ್​ ಮಾಡ್ತೀರಾ..? ಮಾಡ್ಕೊಳಿ..

Publicspot