The Public Spot
ರಾಜ್ಯ

T.B DAM GATE JAM : 6 ಗೇಟ್​ಗಳು ಕೆಲಸ ಮಾಡ್ತಿಲ್ಲ, ಮುರಿದು ಹೋಗುವ ಭೀತಿ..

ಕೊಪ್ಪಳದ ಟಿ.ಬಿ.ಡ್ಯಾಂ ಗೇಟ್‌ಗಳು ಮುರಿದು ಹೋಗುವ ಭಯ ಸೃಷ್ಟಿಯಾಗಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 6 ಟಿಬಿ ಡ್ಯಾಂ ಗೇಟ್‌ಗಳು ರಿಪೇರಿಗೆ ಬಂದಿವೆ. ತುಂಗಭದ್ರಾ ಜಲಾಶಯದ 6 ಗೇಟ್​ಗಳು ಕೆಲಸ ಮಾಡ್ತಿಲ್ಲ ಎಂದು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್‌ ತಂಗಡಗಿ ಮಾಹಿತಿ ನೀಡಿದ್ದಾರೆ. ತುಂಗಾಭದ್ರ ಡ್ಯಾಂ ಗೇಟ್​ಗಳು ಆಪರೇಟ್ ಆಗದೆ ಹಿನ್ನೆಯಲ್ಲಿ ನೀರು ಬಿಡಲು ಆಗ್ತಿಲ್ಲ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ರೂ ಸ್ಪಂದಿಸ್ತಿಲ್ಲ ಎಂದು ದೂರಿದ್ದಾರೆ.

ತುಂಗಾಭದ್ರ ಡ್ಯಾಂನ ಗೇಟ್ ನಂಬರ್​ 11, 18, 20, 24, 27, 28ಗಳು ಕೆಲಸ ಮಾಡದೆ ಸ್ಥಗಿತಗೊಂಡಿವೆ. ಒಂದು ವೇಳೆ 1.5 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚು ನೀರು ಹರಿದು ಬಂದ್ರೆ ಸಮಸ್ಯೆ ಎದುರಾಗಲಿದೆ ಎಂದು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾಹಿತಿ ನೀಡಿದ್ದಾರೆ. ತುಂಗಭದ್ರಾ ನಿರ್ವಹಣಾ ಮಂಡಳಿಯಲ್ಲಿ ರಾಜ್ಯದ ಅಧಿಕಾರಿಗಳಿರಬೇಕು. ಈ ಬಗ್ಗೆ ಕೇಂದ್ರಕ್ಕೆ ರಾಜ್ಯ ಮನವಿ ಮಾಡಿದ್ರೂ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.

ಈಗಾಗಲೇ ಟಿಬಿ ಡ್ಯಾಂನ 19ನೇ ಗೇಟ್​ ಕಿತ್ತುಕೊಂಡು ಹೋಗಿತ್ತು. ಆಗ ತೆಲಂಗಾಣ, ಆಂಧ್ರ, ಹಾಗು ಕರ್ನಾಟಕ ಮೂರೂ ರಾಜ್ಯಗಳು ಒಟ್ಟುಗೂಡಿ ತಾತ್ಕಾಲಿಕವಾಗಿ ರಿಪೇರಿ ಮಾಡಲಾಗಿತ್ತು. ಆ ನಂತರ ಉಳಿದ ಎಲ್ಲಾ ಗೇಟ್​ಗಳನ್ನು ರಿಪೇರಿ ಮಾಡಬೇಕು ಎಂದು ತಿಳಿಸಲಾಗಿತ್ತು. ತಜ್ಞರು ಸಲಹೆ ನೀಡಿದ ಬಳಿಕವೂ ಕ್ರಸ್ಟ್​ ಗೇಟ್​ಗಳ ಬದಲಾವಣೆ ಮಾಡುವ ಕೆಲಸ ಬೇಸಿಗೆಯಲ್ಲೇ ಆಗಬೇಕಿತ್ತು. ಆದರೆ ಮಳೆಗಾಲ ಬಂದರೂ ಕ್ರಸ್ಟ್​ ಗೇಟ್​ಗಳ ಬದಲಾವಣೆ ಮಾಡಿಲ್ಲ.

ಇದೀಗ ಮತ್ತೆ 6 ಗೇಟ್​ಗಳು ಜಾಮ್​ ಆಗಿದ್ದು, ನೀರಿನ ಪ್ರಮಾಣ ಹೆಚ್ಚಾಗ್ತಿದ್ದ ಹಾಗೆ ಗೇಟ್​ಗಳು ಮುರಿದು ಹೋಗುವ ಸಾಧ್ಯತೆಯಿದೆ. ಒಂದು ವೇಳೆ ಗೇಟ್ ಮುರಿದು ಹೋದರೆ ಡ್ಯಾಂನಲ್ಲಿ ಸಂಗ್ರಹ ಇರುವ ನೀರು ಕೂಡ ಪೋಲಾಗುವ ಸಾಧ್ಯತೆಯಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸ್ತಿಲ್ಲ ಅಂತಾ ಸಚಿವರು ದೂರಿದ್ದಾರೆ. ಆದರೆ ಕೇಂದ್ರದ ಮನವೊಲಿಕೆ ಮಾಡಿ ಕೆಲಸ ಮಾಡಿಸುವ ಕಾರ್ಯ ಮಾಡಬೇಕಿದೆ. ಇಲ್ಲದಿದ್ರೆ ಕಳೆದ ವರ್ಷದಂತೆ ಈ ವರ್ಷವೂ ಅನ್ನದಾತರು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ.

Related posts

Mysore Dassara Supreme Court direction; ದಸರಾ ಸಿದ್ದತೆ ನಡುವೆ ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ.. ಬಾನು ಬರ್ತಾರಾ..? ಇಲ್ವಾ..?

Publicspot

17.50 ಲಕ್ಷ ಜನರ ಆರೋಗ್ಯ ಖಾತ್ರಿಪಡಿಸುವ ಶುದ್ಧ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಿಎಂ

admin

ನಾಳೆ, ನಾಡಿದ್ದು CET ಪರೀಕ್ಷೆ.. ಈ ವರ್ಷ ಮಹತ್ವದ ಬದಲಾವಣೆ..

Publicspot

ಬಿಸಿಲ ನಾಡು ಕಲಬುರಗಿಯಲ್ಲಿ ಚಿರತೆ ದಾಳಿ.. ಬೆಚ್ಚಿಬಿದ್ದ ಜನತೆ..

Publicspot

ಇಂದು ನಾಳೆ ಭಾರೀ ಮಳೆ ಆಗುವ ಬಗ್ಗೆ ಅಲರ್ಟ್​.. ಬೆಂಗಳೂರಿಗೆ ಸಂಕಷ್ಟ!!

Publicspot

ಹೊಸ ವರ್ಷ 2026ರ ಸ್ವಾಗತಕ್ಕೆ ಹೇಗಿದೆ ಬೆಂಗಳೂರು ಖಾಕಿ ತಯಾರಿ..?

Publicspot