The Public Spot
ಅಂಕಣ

Banu Musthaq Not So Great: ಬಾನು ಮುಷ್ತಾಕ್​ ದೊಡ್ಡವರಾಗಲು ಹೀಗೆ ಮಾಡಬೇಕಿತ್ತು..

2025ರ ಮೈಸೂರು ದಸರಾ ಉದ್ಘಾಟನೆಗೆ ಬುಕರ್​ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಕನ್ನಡ ಹಾಗೂ ಕನ್ನಡಾಂಬೆ ಬಗ್ಗೆ ಮಾತನಾಡಿದ್ದ ವಿಚಾರಗಳನ್ನು ಹಿಡಿದುಕೊಂಡು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಳ್ತಿದ್ದಾರೆ. ಬಾನು ಮುಷ್ತಾಕ್ ಹಿಂದೂ ಸಂಸ್ಕೃತಿಯನ್ನು ವಿರೋಧ ಮಾಡುತ್ತಾರೆ. ಅರಿಶಿಣ ಕುಂಕುಮದ ಬಗ್ಗೆಯೂ ಅವರಿಗೆ ತಗಾದೆ ಇದೆ. ಕನ್ನಡದ ಬಾವುಟದ ಬಗ್ಗೆಯೂ ತಕರಾರು ಇದೆ. ಕನ್ನಡವನ್ನ ಕನ್ನಡಾಂಬೆ ಅನ್ನೋದಕ್ಕೂ ಆಕ್ಷೇಪವಿದೆ. ಹೀಗಿರುವಾಗ ಮೂರ್ತಿ ಪೂಜೆಯನ್ನು ವಿರೋಧಿಸುವ ಬಾನು ಮುಷ್ತಾಕ್ ಚಾಮುಂಡಿ ಮಾತೆಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡೋದು ಹೇಗೆ ಅನ್ನೋದು ಬಿಜೆಪಿ ನಾಯಕರ ಸರ್ವೇ ಸಾಮಾನ್ಯ ಪ್ರಶ್ನೆ ಆಗಿದೆ.

ಬುಕರ್​ ಅವಾರ್ಡ್​ ಬಂದಿದ್ದು ಯಾರಿಗೆ..?

ಬಿಜೆಪಿ ನಾಯಕರು ಎತ್ತಿರುವ ಪ್ರಶ್ನೆಯಲ್ಲಿ ಯಾವುದೇ ತಪ್ಪಿಲ್ಲ. ಬಾನು ಮುಷ್ತಾಕ್ ಅವರು ಮಾತನಾಡಿರುವ ವಿಡಿಯೋ ಕ್ಲಿಪ್ಪಿಂಗ್​​ ಕೂಡ ಸಾಕಷ್ಟು ವೈರಲ್​ ಆಗಿವೆ. ಈ ನಡುವೆ ಬುಕರ್​ ಪ್ರಶಸ್ತಿ ಬಂದಿದ್ದೇ ದೀಪಾ ಬಸ್ತಿ ಅನುವಾದ ಮಾಡಿದ್ದ ಹಾರ್ಟ್​ ಲ್ಯಾಂಪ್​ ಅನ್ನೋ ಕೃತಿಗೆ ನಿಜವಾಗಿಯೂ ಬುಕರ್​ ವಿಜೇತೆ ಅಂದರೆ ದೀಪಾ ಬಸ್ತಿಯೇ ಆಗಿದ್ದಾರೆ. ಅನುವಾದ ಕೃತಿ ಆಗಿದ್ದ ಕಾರಣಕ್ಕೆ ಬಾನು ಮುಷ್ತಾಕ್​ ಅವರನ್ನೂ ಬುಕರ್​ ಆಯ್ಕೆ ಮಂಡಳಿ ಪರಿಗಣನೆಗೆ ತೆಗೆದುಕೊಂಡಿತ್ತು. ಇಬ್ಬರಿಗೂ ಪ್ರಶಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಿತ್ತು. ಈಗಲೂ ಕರ್ನಾಟಕ ಸರ್ಕಾರ ಇಬ್ಬರನ್ನೂ ಕರೆದು ದಸರಾ ಉದ್ಘಾಟನೆ ಮಾಡಿಸಲಿ ಎಂದು ಬಿಜೆಪಿ ನಾಯಕರು ಆಗ್ರಹ ಮಾಡಿದ್ದಾರೆ.

ಬಾನು ಮುಷ್ತಾಕ್​ ವಿಚಾರದಲ್ಲಿ ಬಿಜೆಪಿ ಸರಿಯಿದೆ..!

ಮೊದಲನೆಯದಾಗಿ ಸಾಹಿತಿ ಬಾನು ಮುಷ್ತಾಕ್ ಅವರನ್ನು ಬಿಜೆಪಿ ಪ್ರಶ್ನೆ ಮಾಡಿದ್ದೂ ಸರಿಯಾಗಿಯೇ ಇದೆ. ಇನ್ನೂ ಎರಡನೇ ವಾದವೂ ಬಿಜೆಪಿಗರದ್ದು ಸರಿಯಾಗಿಯೇ ಇದೆ. ಬಾನು ಮುಷ್ತಾಕ್ ಅವರನ್ನು ಬುಕರ್​ ಪುರಷ್ಕೃತೆ ಎಂದೇ ಆಯ್ಕೆ ಮಾಡಿರುವುದಾದರೆ, ಬುಕರ್​ ಪ್ರಶಸ್ತಿಯ ಭಾಗವಾಗಿರುವ ದೀಪಾ ಬಸ್ತಿಯವರನ್ನೂ ಉದ್ಘಾಟನೆಗೆ ಕರೆಯುವುದರಲ್ಲಿ ತಪ್ಪೇನಿದೆ ಅಲ್ಲವೇ..? ಬುಕರ್​ ಪ್ರಶಸ್ತಿಯನ್ನು ಅನುವಾದಕರ ಜೊತೆಗೆ ಹಂಚಿಕೊಂಡಿರುವ ಬಾನು ಮುಷ್ತಾಕ್ ಕೂಡ ಈ ವಿವಾದ ಸೃಷ್ಟಿಯಾಗುವ ಮೊದಲೇ ಈ ಬಗ್ಗೆ ಬಹಿರಂಗ ಅಥವಾ ಸರ್ಕಾರದ ಮಟ್ಟದಲ್ಲಿ ಈ ರೀತಿಯ ಪ್ರಸ್ತಾವನೆ ಇಡಬೇಕಿತ್ತು.

ದೊಡ್ಡತನ ಪ್ರದರ್ಶನ ಮಾಡಬೇಕಿತ್ತು ಬಾನು ಮುಷ್ತಾಕ್!

ಸಾಹಿತಿ ಬಾನು ಮುಷ್ತಾಕ್ ಪುಸ್ತಕವನ್ನು ದೀಪಾ ಬಸ್ತಿ ಅನುವಾದ ಮಾಡದೇ ಇದ್ದಿದ್ದರೆ ಬಾನು ಮುಷ್ತಾಕ್ ಇಂದು ಬುಕರ್​ ಪುರಸ್ಕೃತೆ ಎನಿಸಿಕೊಳ್ಳಲು ಸಾಧ್ಯತೆಗಳೇ ಇರುತ್ತಿರಲಿಲ್ಲ. ಹೀಗಿರುವಾಗ ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಹಂಚಿಕೊಂಡಿದ್ದೇವೆ. ನೀವು ನನ್ನನ್ನು ಒಬ್ಬಳನ್ನೇ ಪರಿಗಣಿಸುವುದು ಸೂಕ್ತವಲ್ಲ, ಬುಕರ್​ ಬಂದಿರುವುದೇ ದೀಪಾ ಬಸ್ತಿ ಅವರಿಂದ. ಹೀಗಾಗಿ ಈ ಬಾರಿ ನನ್ನ ಜೊತೆಯಲ್ಲಿ ದೀಪಾ ಬಸ್ತಿ ಅವರನ್ನೂ ಆಹ್ವಾನಿಸಬೇಕು ಎಂದು ಹೇಳಿದ್ದರೆ..! ಇಂದು ಬಾನು ಮುಷ್ತಾಕ್ ಅವರ ಸ್ಥಾನ ಮತ್ತಷ್ಟು ದೊಡ್ಡ ಮಟ್ಟಕ್ಕೆ ಏರಿಕೆ ಆಗುತ್ತಿತ್ತು. ಬಿಜೆಪಿ ನಾಯಕರು ಏನಾದರೂ ಆರೋಪ ಮಾಡಲಿ, ಆದರೆ ಕನ್ನಡಿಗರ ಮನಸ್ಸಲ್ಲಿ ವಾವ್ಹ್ ಎನ್ನುವ ಉದ್ಘಾರವೇ ಬರುತ್ತಿತ್ತು. ಆದರೆ ಬಾನು ಮುಷ್ತಾಕ್ ಅಷ್ಟೊಂದು ದೊಡ್ಡತನ ತೋರಿಸುವ ಮನಸ್ಸು ಮಾಡಿಲ್ಲ. ನನ್ನದೇ ಸಾಧನೆ ಎನ್ನುವಂತೆ ಬೀಗುತ್ತಿದ್ದಾರೆ. ಈಗಲೂ ಅವಕಾಶವಿದೆ, ಉದ್ಘಾಟನೆಗೆ ತನ್ನ ಜೊತೆಗೆ ದೀಪಾ ಬಸ್ತಿ ಅವರನ್ನೂ ಸೇರಿಸಿಕೊಳ್ಳಬೇಕಿದೆ.

ಮತಕ್ಕಾಗಿ ಬಾನು ಮುಷ್ತಾಕ್ ಆಯ್ಕೆ ಅಲ್ಲವೇ..?

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಮರನ್ನು ಓಲೈಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ ಅನ್ನೋ ಭಾವನೆ ಸಾಕಷ್ಟು ಜನರಲ್ಲಿ ಮೂಡಿದೆ. ಇದೀಗ ಬಾನು ಮುಷ್ತಾಕ್ ಅವರು ಬುಕರ್​ ಪ್ರಶಸ್ತಿ ವಿಜೇತೆ ಎಂದು ದಸರಾ ಉದ್ಘಾಟಕಿಯಾಗಿ ಆಯ್ಕೆ ಮಾಡಿದ್ದಾರೆ. ಸರ್ಕಾರಕ್ಕೆ ಬುಕರ್​ ಪ್ರಶಸ್ತಿಯನ್ನು ಇಬ್ಬರು ಕನ್ನಡಿಗರು ಹಂಚಿಕೊಂಡ ಮಾಹಿತಿ ಇರಲಿಲ್ಲವೇ..? ಅಥವಾ ಬಾನು ಮುಷ್ತಾಕ್ ಆಯ್ಕೆ ಮಾಡಿದರೆ ನಾವು ಮುಸ್ಲಿಮರ ಪರ ಇದ್ದೇವೆ. ವಿಶ್ವವಿಖ್ಯಾತ ದಸರಾ ಹಬ್ಬವನ್ನು ಮುಸ್ಲಿಂ ಮಹಿಳೆಯಿಂದ ಉದ್ಘಾಟನೆ ಮಾಡಿಸಿದ್ದೇವೆ ಎನ್ನುವ ಮೂಲಕ ಮತಲಾಭ ಪಡೆಯುವುದು ಆಗಿದೆಯೇ..? ಅನ್ನೋ ಅನುಮಾನ ಮೂಡುತ್ತಿದೆ. ಸರ್ಕಾರ ಹಾಗೂ ಅಧಿಕಾರಿಗಳು, ಮತ್ತೊಮ್ಮೆ ದಸರಾ ಉನ್ನತಾಧಿಕಾರ ಸಭೆ ನಡೆಸಿ ದೀಪಾ ಬಸ್ತಿ ಅವರನ್ನು ಆಹ್ವಾನಿಸುವ ನಿರ್ಧಾರ ಮಾಡಬೇಕಿದೆ. ಇಲ್ಲದಿದ್ದರೆ ಕಾಂಗ್ರೆಸ್​ ಮತಕ್ಕಾಗಿ ಬಾನು ಮುಷ್ತಾಕ್ ಅವರನ್ನು ಬಳಸಿಕೊಳ್ತಿದೆ ಅನ್ನೋ ಅನುಮಾನ ಸತ್ಯವಾಗಲಿದೆ.

Related posts

ಕಾಂಗ್ರೆಸ್​​ನಲ್ಲಿ ಸ್ಟ್ಯಾಂಡಿಂಗ್​ ಮೀಟಿಂಗ್​.. ಬಗೆಹರಿಯುತ್ತಾ ಸಂಕ್ರಾಂತಿ ಸಂಕಷ್ಟ..!

Publicspot

ಕೋಗಿಲು ಕ್ರಾಸ್​ ಡೆಮಾಲಿಷನ್​.. ಮಾನವೀಯತೆಯೋ..? ಮುಸ್ಲಿಂ ಅನ್ನೋ ಕಾರಣಕ್ಕೋ..?

Publicspot

ಸಿಎಂ ಮನದಾಳದ ಮಾತು ಯತೀಂದ್ರ ಮಾತಲ್ಲಿ ಹೊರ ಬೀಳ್ತಿದ್ಯಾ..?

Publicspot

ಕಾಂಗ್ರೆಸ್​ನಲ್ಲಿ ಹೈಕಮಾಂಡ್ ಅಂದ್ರೆ ಯಾರು..? ಹೀಗೆ ಮಾಡೋದು ಸರೀನಾ..?

Publicspot

Legends talks about S.L Byarappa; ಬಾನು ಮುಷ್ತಾಕ್‌ ಮನೆಯಲ್ಲಿ ವಾರ ಕಳೆದಿದ್ರಂತೆ S.L ಭೈರಪ್ಪ..

Publicspot

ರಾಜ್ಯದಲ್ಲಿ ಶುರುವಾಯ್ತು ಆಶಾ ಮಿಡ್‌ನೈಟ್‌ ಹೋರಾಟ.. ಹೇಗಿದೆ ಕಿಚ್ಚು..?

ಯಶವಂತಿ