The Public Spot
Uncategorized

Bihar Election Date; ಬಿಹಾರ ಚುನಾವಣೆಗೆ ದಿನಾಂಕ ಫಿಕ್ಸ್​..

ಬಿಹಾರ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದೆ.. ಒಟ್ಟು 2 ಹಂತದಲ್ಲಿ ಚುನಾವಣೆ ಮಾಡಲು ಕೇಂದ್ರ4 ಚುನಾವಣಾ ಆಯೋಗ ನಿರ್ಧಾರ ಮಾಡಿದ್ದು, ನವೆಂಬರ್ 6ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, 2ನೇ ಹಂತದ ಮತದಾನ ನವೆಂಬರ್‌ 11ರಂದು ನಡೆಯಲಿದೆ. ಮೊದಲ ಹಂತದ ಮತದಾನದಂದು 121 ಕ್ಷೇತ್ರಗಳು ಹಾಗೂ 2ನೇ ಹಂತದ ಮತದಾನದ ವೇಳೆ 122 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್‌ 14ರಂದು ಮತ ಎಣಿಕೆ ನಡೆಯಲಿದ್ದು, 243 ಕ್ಷೇತ್ರಗಳ ಫಲಿತಾಂಶ ಹೊರ ಬೀಳಲಿದೆ.

ಕೇಂದ್ರ ಚುನಾವಣಾ ಆಯೋಗ ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ದಿನಾಂಕ ಘೋಷಣೆ ಮಾಡುತ್ತಿದ್ದ ಹಾಗೆ ಬಿಹಾರದಲ್ಲಿ ನೀತಿ ಸಂಹಿತೆ ಜಾರಿ ಆಗಿದ್ದು, ಮೊದಲ ಹಂತದ 121 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಗಳು ಅಕ್ಟೋಬರ್‌‌ 17ರ ಒಳಗೆ ನಾಮಪತ್ರ ಸಲ್ಲಿಸಬೇಕು. 2ನೇ ಹಂತದಲ್ಲಿ 122 ಕ್ಷೇತ್ರಗಳಿಂದ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಅಭ್ಯರ್ಥಿಗಳು ಅಕ್ಟೋಬರ್‌ 20ರ ಒಳಗಾಗಿ ನಾಮಪತ್ರ ಸಲ್ಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್​ ಕುಮಾರ್​ ತಿಳಿಸಿದ್ದಾರೆ.

ಬಿಹಾರದಲ್ಲಿ ಒಟ್ಟು 7 ಕೋಟಿ 43 ಲಕ್ಷದ 55 ಸಾವಿರ 976 ಮತದಾರರಿದ್ದು, ಮಹಿಳಾ ಮತದಾರರ ಸಂಖ್ಯೆ ಮೂರೂವರೆ ಕೋಟಿಯಷ್ಟಿದೆ. ಪುರುಷ ಮತದಾರರ ಸಂಖ್ಯೆ 3 ಕೋಟಿ 92 ಲಕ್ಷ ಇದೆ. ಇದೇ ಮೊದಲ ಬಾರಿಗೆ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿರುವ ಯುವ ಮತದಾರರ ಸಂಖ್ಯೆ ಬರೋಬ್ಬರಿ 14 ಲಕ್ಷದ 1 ಸಾವಿರದ 150 ಆಗಿದೆ. ಅದೇ ರೀತಿ 85 ವರ್ಷ ಮೇಲ್ಪಟ್ಟ 4 ಲಕ್ಷದ 3 ಸಾವಿರದ 985 ಮತದಾರರು. ಇನ್ನೂ 100 ವರ್ಷ ಮೇಲ್ಪಟ್ಟ 14 ಸಾವಿರ ಮತದಾರರು ಬಿಹಾರದಲ್ಲಿ ಇದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಬಿಹಾರದ 243 ಕ್ಷೇತ್ರಗಳಲ್ಲಿ ಒಟ್ಟು 90 ಸಾವಿರದ 712 ಮತಗಟ್ಟೆ ಸ್ಥಾಪನೆ ಆಗ್ತಿದ್ದು, ಎಂಟೂವರೆ ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕಕೊಳ್ಳಲಾಗ್ತಿದೆ. ಇದೇ ಪ್ರಥಮ ಬಾರಿಗೆ ಪ್ರತೀ ವಿಧಾನಸಭೆ ಕ್ಷೇತ್ರಗಳಲ್ಲೂ 800 ಮತಗಟ್ಟೆ ಸ್ಥಾಪಿಸ್ತಿದ್ದು, 1 ಮತಗಟ್ಟೆಯಲ್ಲಿ ಗರಿಷ್ಠ 1200 ಜನ ಮತದಾನ ಮಾಡಬಹುದು.

ಬಿಹಾರ ಚುನಾವಣೆ ಘೋಷಣೆಗೂ ಮೊದಲು ಬಿಹಾರದಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ ಹಮ್ಮಿಕೊಳ್ಳಲಾಗಿತ್ತು. ಮತಪಟ್ಟಿ ಪರಿಷ್ಕರಣೆಯನ್ನು 22 ವರ್ಷಗಳ ಬಳಿಕ ನಡೆಸಿದ್ದು, 69 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಡಿಲೀಟ್‌ ಮಾಡಲಾಗಿದೆ. 69 ಲಕ್ಷ ಡಿಲೀಟ್‌ ಮತದಾರರ ಪಟ್ಟಿಯಲ್ಲಿ ಅಕ್ರಮ ವಲಸಿಗರು, ನಕಲಿ ಮತದಾರರು, ವಿಳಾಸ ಬದಲಿಸಿದವರು, ಮೃತಪಟ್ಟವರು ಸೇರಿದ್ರು. ಇದೀಗ ದೇಶಾದ್ಯಂತ ಮತಪಟ್ಟಿ ಪರಿಷ್ಕರಣೆ ಆಗುತ್ತದೆ. ಚುನಾವಣೆ ಆಯೋಗ ಈಗಾಗಲೇ ಕೆಲಸ ಶುರು ಮಾಡಿದೆ. ಯಾವ್ಯಾವ ರಾಜ್ಯಗಳಲ್ಲಿ S.I.R ಹೇಗೆ ಆಗ್ತಿದೆ ಅನ್ನೋ ಬಗ್ಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ಕೊಡ್ತೇವೆ ಎಂದು CEC ಜ್ಞಾನೇಶ್​ ಕುಮಾರ್​ ತಿಳಿಸಿದ್ದಾರೆ.

ಬಿಹಾರ ರಾಜಕೀಯದಲ್ಲಿ ಸದ್ಯ ಬಿಜೆಪಿ, ಜೆಡಿಯು, ಎಲ್‌ಜೆಪಿ ಮೈತ್ರಿಕೂಟ ಅಧಿಕಾರದಲ್ಲಿದ್ದು, ಸೀಟು ಹಂಚಿಕೆಯೂ ಪೂರ್ಣವಾಗಿದೆ. ಎದುರಾಳಿಯಾಗಿ ಕಾಂಗ್ರೆಸ್‌,‌ ಆರ್‌ಜೆಡಿ INDIA ಒಕ್ಕೂಟದಲ್ಲೂ ಸೀಟು ಹಂಚಿಕೆ ಜಟಾಪಟಿ ಅಂತಿಮ ಹಂತಕ್ಕೆ ಬಂದಿದೆ. ಈಗ ಚುನಾವಣೆ ಘೋಷಣೆ ಆಗ್ತಿದ್ದಂತೆ ಎನ್‌‌ಡಿಎಗೆ ಬಹುಮತ ಸಿಗುತ್ತದೆ ಅನ್ನೋ ವಿಶ್ವಾಸವನ್ನು ಹಾಲಿ ಉಪಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಮಹಾಘಟಬಂಧನ್‌ ಅಧಿಕಾರಕ್ಕೆ ಬರುತ್ತೆ, ನಾನೇ ಮುಖ್ಯಮಂತ್ರಿ ಅಂತ ತೇಜಸ್ವಿ ಯಾದವ್‌ ಘಂಟಾಘೋಷವಾಗಿ ಹೇಳಿದ್ದಾರೆ. ಬಿಹಾರದಲ್ಲಿ ನಮಗೆ ಬೇಡುವ ಸಿಎಂ ಬೇಡ, ಸಿಂಹದಂತೆ ಘರ್ಜಿಸುವ ಮುಖ್ಯಮಂತ್ರಿ ಬೇಕು. ತೇಜಸ್ವಿ ಯಾದವ್‌ ಮುಖ್ಯಮಂತ್ರಿ ಆಗ್ತಾರೆ, ತೇಜಸ್ವಿ ಎಲ್ಲರಿಗೂ ಉದ್ಯೋಗ ನೀಡುತ್ತಾರೆ. ನಿರುದ್ಯೋಗ ಸಮಸ್ಯೆ ದೂರ ಆಗುತ್ತದೆ ಎಂದಿದ್ದಾರೆ.

Related posts

ಸ್ಯಾಂಡಲ್‌ವುಡ್‌ ನಿರ್ಮಾಣಪಕ ವಿರುದ್ಧ ಠಾಣೆ ಮೆಟ್ಟಿಲೇರಿದ ಡೈರೆಕ್ಟರ್‌ ಪ್ರೇಮ್‌..!

Publicspot

ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದಾದ ವೇಳೆ ದರ್ಶನ್​ ಮಾಡಿದ್ದೇನು..?

Publicspot

ಉಗ್ರರು, ಅಪರಾಧಿಗಳ ಪಾಲಿನ ಸ್ವರ್ಗ ನಮ್ಮ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು

Publicspot

New Law In Loksabha: ಪ್ರಧಾನಿ, ಸಿಎಂ, ಮಂತ್ರಿಗಳಿಗೂ ಬರ್ತಿದೆ ಹೊಸ ಕಾನೂನು..!

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

Bollywood; ಗೆಳೆಯನ ಮರಣದ ದಿನವೇ ಉಸಿರು ನಿಲ್ಲಿಸಿದ ಬಾಲಿವುಡ್‌ ನಟ ಧರ್ಮೇಂದ್ರ!!

Publicspot