The Public Spot
ಅಪರಾಧ

DHARMASTHALA BJP RALLY: ಧರ್ಮಸ್ಥಳಲ್ಲಿ ಶುರುವಾಗಿದೆ ಧರ್ಮ ರಾಜಕಾರಣ..

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ SIT ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕರು ಧರ್ಮಸ್ಥಳ ತಲುಪಿದ್ದಾರೆ. ನಿನ್ನೆ ಬಿಜೆಪಿ ಶಾಸಕ ಎಸ್‌ ಆರ್‌ ವಿಶ್ವನಾಥ್‌ ನೇತೃತ್ವದಲ್ಲಿ ಕಾರು ರ್ಯಾಲಿ ಹೋಗಿದ್ದು, SIT ರಚನೆ ಮಾಡುವ ಮೂಲಕ ಧರ್ಮಸ್ಥಳದ ಬಗ್ಗೆ ತೇಜೋವಧೆ ಮಾಡಲಾಗ್ತಿದೆ ಎಂದು ಆರೋಪ ಮಾಡಿದ್ದಾರೆ. ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ನಿಯೋಗ ಶ್ರೀ ಮಂಜುನಾಥನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ನಿಯೋಗದಲ್ಲಿ ಬಿಜೆಪಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಧರ್ಮಸ್ಥಳದ ಜೊತೆಗೆ ನಾವಿದ್ದೇವೆ ಎಂದು ಸಂಕಲ್ಪ ಮಾಡಲಿದ್ದಾರೆ.

ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡಲಾಗ್ತಿದೆ ಎಂದು ದೇವನಹಳ್ಳಿಯ ಧರ್ಮಸ್ಥಳ ಪಾದಯಾತ್ರೆ ಸಮಿತಿ ಕಿಡಿ ಕಾರಿದೆ. ದೇವನಹಳ್ಳಿ ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. SIT ತನಿಖೆಯನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಅನಾಮಿಕ ವ್ಯಕ್ತಿ, ಮಹೇಶ್ ತಿಮರೋಡ್, ಗಿರೀಶ್‌ ಮಟ್ಟಣ್ಣನವರ್‌ ಅವರನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹ ಮಾಡಿದ್ದಾರೆ. SIT‌ ಮಧ್ಯಂತರ ವರದಿ ನೀಡಲಿ, ಎಸ್ಐಟಿ ತನಿಖೆ ನಿಲ್ಲಿಸದೇ ಹೋದ್ರೆ ಧರ್ಮಸ್ಥಳ ಪಾದಯಾತ್ರೆ ಸಮಿತಿ ಮೂಲಕ ಸಾವಿರಾರು ಜನ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡ್ತೇವೆ. ಧರ್ಮಸ್ಥಳದಲ್ಲಿ ಅಹೋರಾತ್ರಿ ಧರಣಿ ಮಾಡ್ತೇವೆ ಅಂತಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ವಿಚಾರದಲ್ಲಿ ಬಿಜೆಪಿ ಧರ್ಮಸ್ಥಳ ಚಲೋ ಮಾಡುತ್ತಿರುವ ವಿಚಾರವಾಗಿ ಸಚಿವ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕವಾಗಿ ನೋಡುವುದಾದರೆ, ಭಕ್ತಿ, ಶ್ರದ್ಧೆ, ನಂಬಿಕೆಯನ್ನ ಕಾಂಗ್ರೆಸ್ಸಿಗರು ಇಟ್ಟುಕೊಂಡಿದ್ದೇವೆ. ಎಲ್ಲ ಧರ್ಮದ ಧಾರ್ಮಿಕ ಕೇಂದ್ರಗಳನ್ನ ಅಭಿವೃದ್ಧಿಪಡಿಸುವ ಒಳ್ಳೆಯ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನಾನು ಧರ್ಮಸ್ಥಳದ ಮೇಲೆ‌ ನಂಬಿಕೆ ಮತ್ತು ಶ್ರದ್ಧೆ ಉಳ್ಳವನಾಗಿದ್ದೇನೆ. ಅನೇಕ ಬಾರಿ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದೇನೆ. ಇದರಲ್ಲಿ ರಾಜಕೀಯ ಮಾಡುವ ಉದ್ದೇಶವಿಲ್ಲ. ದೂರು ಹಿನ್ನೆಲೆಯಲ್ಲಿ ಸತ್ಯಾಸತ್ಯಾತೆ ಬಗ್ಗೆ ಕಾನೂನು ರೀತಿಯ ಮುಂದಿನ ಕ್ರಮ ಆಗುತ್ತದೆ ಎಂದಿದ್ದಾರೆ. ಇನ್ನು ಇದರಲ್ಲಿ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಬಿಜೆಪಿಯವರೇ ಇಂತಹ ಕೃತ್ಯಗಳನ್ನ ಸೃಷ್ಠಿ ಮಾಡ್ತಾರೆ. ಅವರ ಸ್ವಾರ್ಥಕ್ಕಾಗಿ ಸೃಷ್ಠಿ ಮಾಡುವುದ‌ನ್ನೂ ನೋಡಿದ್ದೇವೆ. ತನಿಖೆ ಮಾಡುವಂತೆಯೂ ಅವ್ರೇ ಹೇಳ್ತಾರೆ. ಈಗ ತನಿಖೆಯ ದಾರಿ ತಪ್ಪಿಸುವ ಕೆಲಸವನ್ನೂ ಅವ್ರೇ ಮಾಡ್ತಾರೆ ಎಂದು ಟೀಕಿಸಿದ್ದಾರೆ.

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಬಗ್ಗೆ ಬೀದರ್‌ನಲ್ಲಿ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿದ್ದಾರೆ. ಧರ್ಮಸ್ಥಳ ಪ್ರಕರಣವನ್ನ SITಗೆ ನೀಡಲ್ಲ ಅಂತ ಮೊದಲು ಸಿಎಂ ಸಿದ್ದರಾಮಯ್ಯ ಹೇಳಿದ್ರು. ಆ ಬಳಿಕ ಏಕಾಏಕಿ SIT ರಚಿಸಿ ಧರ್ಮಸ್ಥಳದಲ್ಲಿ ಅಗೆದ್ರು. ಸಿಎಂ ಸಿದ್ದರಾಮಯ್ಯ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ. ಬೇರೆ ಯಾವುದಾದರೂ ಧರ್ಮದ ಬಗ್ಗೆ ಈ ರೀತಿ ಮಾಡುವ ಧಮ್ ಸಿಎಂಗೆ ಇದೆಯಾ..? ಎಂದು ಪ್ರಶ್ನಿಸಿದ್ದಾರೆ. ಧರ್ಮಸ್ಥಳ ಪ್ರಕರಣ ಎಸ್ಐಟಿಗೆ ನೀಡಿದ್ದೆ ತಪ್ಪು ಅಂತ ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗಿದೆ ಅಂತ ಕಾಂಗ್ರೆಸ್‌ನ ಕೆಲವು ನಾಯಕರು ಹೇಳುತ್ತಿದ್ದಾರೆ. ಅಲ್ಲಿ ಒಂದು ಕಡೆ ಅಷ್ಟೇ ಮೂಳೆ ಸಿಕ್ಕಿದೆ, ಅನಾಮಿಕ ವ್ಯಕ್ತಿಗೆ ಮಂಪರು ಪರೀಕ್ಷೆ ಮಾಡಬೇಕು. ಇದರ ಹಿಂದೆ ಯಾರಿದ್ದಾರೆ ಅನ್ನೋದು ತಾನೇ ಹೊರಗೆ ಬರುತ್ತದೆ. ಧರ್ಮಸ್ಥಳ ವಿಚಾರದಲ್ಲಿ ವಿದೇಶಿ ಶಕ್ತಿ ಕೈವಾಡ ಇದೆ ಎಂದು ಕಿಡಿಕಾರಿದ್ದಾರೆ.

Related posts

ಒಂದು ಪ್ರೀತಿ ಮೂವರ ಕೊಲೆ.. ಮನೆಯಲ್ಲೇ ಮಣ್ಣು ಮಾಡಿ ಸಿಕ್ಕಿಬಿದ್ದಿದ್ಯಾಕೆ..?

Publicspot

Mahesh Thimarodi Arrest: ಮಹೇಶ್‌ ತಿಮರೋಡಿ ಅರೆಸ್ಟ್‌.. ಕಾರಣ ಏನು ಗೊತ್ತಾ..?

Publicspot

Sowjanya Case Reopen: ಸೌಜನ್ಯ ಕೇಸ್​ ರೀ ಓಪನ್​ ಆಗುತ್ತಾ..? ಸಾಧ್ಯತೆಗಳು ಇದ್ಯಾ..?

Publicspot

Minors delivery: ಹೊಟ್ಟೆ ನೋವು ಎಂದ ಶಾಲಾ ಬಾಲಕಿಗೆ ಮಗು ಹುಟ್ಟಿದ್ದೇಗೆ..?

Publicspot

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

Publicspot

DARSHAN JAIL SHIFT: ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗೋದು ಪಕ್ಕಾನಾ..?

Publicspot