The Public Spot
ಅಪರಾಧ

Darshan Jail; ಜೈಲಿನಲ್ಲಿ ಸಹ ಕೈದಿಗಳ ಮೇಲೆ ನಟ ದರ್ಶನ್​ ಹಲ್ಲೆ.. ಎಷ್ಟು ಸತ್ಯ..?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಆರೋಪಿ ಆಗಿ ಜೈಲು ಪಾಲಾಗಿರುವ ನಟ ದರ್ಶನ್​ ಜೈಲಿನಲ್ಲಿ ತನ್ನ ಸಹಚರರ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಇತ್ತೀಚಿಗಷ್ಟೇ ದರ್ಶನ್​ ಇರುವ ಜೈಲಿನ ಬ್ಯಾರಕ್​ನಲ್ಲಿ ಟಿವಿ ಇಲ್ಲ ಎಂದು ಕೋರ್ಟ್​ ಗಮನಕ್ಕೆ ತಂದಿದ್ದ ದರ್ಶನ್​, ಜೈಲಿನಲ್ಲಿ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನುವ ಸುದ್ಧಿ ಬಂದಿತ್ತು. ಕೋರ್ಟ್​ ಕೂಡ ಟಿವಿ ವ್ಯವಸ್ಥೆ ಮಾಡಿ, ಸಿಸಿಟಿವಿ ನಿಗಾ ವಹಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿತ್ತು. ಆದರೆ ಇನ್ನೂ ಟಿವಿ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಷ್ಟರಲ್ಲಿ ತನ್ನ ಸಹಚರರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.

ನಟ ದರ್ಶನ್​ ಬ್ಯಾರಕ್​ನ ಸೆಲ್​ನಲ್ಲೇ ಇರುವ ಅನುಕುಮಾರ್​, ಪ್ರದೋಶ್, ಜಗದೀಶ್, ಲಕ್ಷ್ಮಣ್​​ ಮೇಲೆ ದರ್ಶನ್​ ಹಲ್ಲೆ ಮಾಡುವುದು, ಕಾಲಿನಿಂದ ಒದ್ದು ಏಳ್ರೋ ಮೇಲೆ ಎಂದು ಎಬ್ಬಿಸುವುದು ಮಾಡ್ತಾರೆ ಎನ್ನಲಾಗಿದೆ. ಜೈಲಿನ ಫೋಟೊಗಳು ವೈರಲ್ ಆಗಿದ್ದ ಕಾರಣಕ್ಕೆ ಜೈಲು ನಿಯಮಾವಳಿ ಮತ್ತಷ್ಟು ಕಠಿಣ ಮಾಡಿದ್ದು, ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರನ್ನು ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕ ಮಾಡಲಾಗಿದೆ. ಅಂಶುಕುಮಾರ್ ಚಾರ್ಜ್​ ತೆಗೆದುಕೊಳ್ತಿದ್ದಂತೆ ಜೈಲಿನಲ್ಲಿ ಅತಿ ಕಠಿಣ ರೂಲ್ಸ್ ಜಾರಿಯಾಗಿದೆ. ಇದರಿಂದ ನಟ ದರ್ಶನ್​, ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ ಎನ್ನಲಾಗ್ತಿದೆ.

ದರ್ಶನ್​​ ಸೆಲ್​ ಒಳಗಿನ ಶೌಚಾಲಯವನ್ನು ತಾನೇ ಕ್ಲೀನ್ ಮಾಡಬೇಕು, ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು, ದರ್ಶನ್ ಟಾರ್ಚರ್ ತಾಳಲಾರದೆ ನಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡುವಂತೆ ಅನುಕುಮಾರ್​ ಹಾಗೂ ಜಗ್ಗ ಮನವಿ ಮಾಡಿಕೊಂಡಿದ್ದಾರೆ. ಎರಡು ದಿನದ ಹಿಂದೆ ದರ್ಶನ್ ಸೆಲ್‌ನಲ್ಲಿ‌ ದೊಡ್ಡ ಜಗಳವೇ ನಡೆದಿತ್ತು. ಆ ಬಳಿಕ ಜೈಲು ಅಧಿಕಾರಿಗಳು ಜಗಳ ಬಿಡಿಸಿದ್ದರು. ವಕೀಲರ ನೇಮಕ ವಿಚಾರವಾಗಿಯೂ ಎಲ್ಲರ ನಡುವೆ ಗಲಾಟೆ ಶುರುವಾಗಿದೆ. ಸಹ ಕೈದಿಗಳಿಗೆ ಬೇಲ್ ಸಿಗ್ತಿಲ್ಲ ಅನ್ನೋದರ ಜೊತೆ ದರ್ಶನ್ ಚಿತ್ರಹಿಂಸೆ ತಡೆಯಲಾಗ್ತಿಲ್ಲ. ಬೇರೆ ಜೈಲಿಗೆ ಶಿಫ್ಟ್​ ಮಾಡದಿದ್ದರೆ, ನಾನು ಏನಾದ್ರೂ ಮಾಡಿಕೊಂಡು ಸಾಯೋದಾಗಿ ಅನುಕುಮಾರ್​ ಹೇಳಿಕೊಂಡಿರೊ ಬಗ್ಗೆಯೂ ಮಾಹಿತಿ ಹರಿದಾಡ್ತಿದೆ.

ಇಷ್ಟೆಲ್ಲಾ ಮಾಹಿತಿಗಳು ಜೈಲಿನ ಒಳಗಿನಿಂದ ಬಂದಿರೋದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ ಜೈಲಿನಲ್ಲಿ ಸಹಕೈದಿಗಳು ಹಲ್ಲೆ ಮಾಡಿಕೊಂಡು ಹೊಡೆದಾಡಿದಾಗ ಸಾಮಾನ್ಯವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಜೈಲು ಸಿಬ್ಬಂದಿ ದೂರು ದಾಖಲು ಮಾಡುತ್ತಾರೆ. ಈ ಪ್ರಕರಣದಲ್ಲಿ ದರ್ಶನ್​ ವಿರುದ್ಧ ದೂರು ದಾಖಲಾಗಿದ್ಯಾ..? ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ದರ್ಶನ್​ನನ್ನು ಸ್ಟಾರ್​ ನಟ ಎಂದು ಜೈಲು ಅಧಿಕಾರಿಗಳು ಟ್ರೀಟ್​ ಮಾಡುತ್ತಿಲ್ಲ ಅನ್ನೋ ಸುದ್ದಿ ಈಗಾಗಲೇ ವರದಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ನಟ ದರ್ಶನ್​ ಸಹ ಕೈದಿಗಳ ಮೇಲೆ ಹಲ್ಲೆ ಮಾಡಿದಾಗ ಜೈಲು ಅಧಿಕಾರಿಗಳು ಮತ್ತೊಂದು ದೂರು ದಾಖಲು ಮಾಡಬೇಕಿತ್ತು ಅಲ್ಲವೇ..? ಈ ಬಗ್ಗೆ ಸ್ಪಷ್ಟನೆ ಕೊಡಬೇಕಿರೋದು ಯಾರು..?

Related posts

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

Publicspot

Student Suicide; ಹಾಸ್ಟೆಲ್​ ವಾರ್ಡನ್ ಬೈಯ್ದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಳಾ..?

Publicspot

ಅಪ್ರಾಪ್ತ ವಯಸ್ಸಲ್ಲಿ ಪ್ರೀತಿ.. ಪ್ರೇಮ.. ಇಷ್ಟೆ ಇಷ್ಟೆ.. ಎಚ್ಚರ ತಪ್ಪಿದ್ರೆ ಫಿನಿಷ್..!!

Publicspot

Darshan And Pavitra Gowda Tension: ದರ್ಶನ್​ ಪಾಲಿಗೆ ಮಂಗಳವಾರ ಶುಭವೋ..? ಅಶುಭವೋ..?

Publicspot

ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ಅಟ್ಯಾಕ್​​ ಮಾಡಿದ್ದ ಅಡಕಮಾರನಹಳ್ಳಿ ಆಂಟಿ ಅರೆಸ್ಟ್​..

Publicspot

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.. ಬಂಡಾರದ ಲೆಕ್ಕಾಚಾರ..

Publicspot