ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ರಾತ್ರೋರಾತ್ರಿ ಮಹಿಳೆ ಮನೆಗೆ ನುಗ್ಗಿದ 5 ಜನ ಆರೋಪಿಗಳು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗ್ತಿದೆ. ಪೊಲೀಸ್ ಇನ್ಫಾರ್ಮರರ್ಸ್ ಎಂದು ಮನೆಗೆ ನುಗ್ಗಿದ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಗಂಗೊಂಡನಹಳ್ಳಿ ಮಾರೇಗೌಡ ಎಂಬುವವರ ಮನೆಯಲ್ಲಿ ವಾಸವಿದ್ದ ಸಂತ್ರಸ್ತೆ ಮತ್ತು ಕುಟುಂಬ. ಎರಡು ಮನೆ ಬಾಡಿಗೆಗೆ ಪಡೆದಿದ್ದರು. ನಿಮ್ಮ ಮನೆಯಲ್ಲಿ ಗಾಂಜಾ ಮತ್ತು ವೇಶ್ಯವಾಟಿಕೆ ನಡೆಸುತಿದ್ದೀರಾ..? ನಾವು ಪೀಣ್ಯ ಪೊಲೀಸರ ಇನ್ಫಾರ್ಮರರ್ಸ್ ಎಂದು ದಾಳಿ ಮಾಡಿದ್ದಾರೆ. ಆ ಬಳಿಕ ಮಾರಕಾಸ್ತ್ರಗಳನ್ನ ತೋರಿಸಿ ಹಲ್ಲೆ ಮಾಡಿದ ಗ್ಯಾಂಗ್, ಸಂತ್ರಸ್ತೆಯ 14 ವರ್ಷದ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಮನೆಯಲ್ಲಿ ಇದ್ದ ಮಕ್ಕಳು ಹಾಗೂ ಸಂತ್ರಸ್ತೆ ಸ್ನೇಹಿತೆಯ ಮೇಲೆ ಹಲ್ಲೆ ಮಾಡಿದ ಬಳಿಕ ಪಕ್ಕದ ಮನೆಗೆ ಮಹಿಳೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಸಂತ್ರಸ್ತೆಯ ಮಗ ಕೂಡಲೇ 112ಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ಮೂರು ಮಂದಿ ಆರೋಪಿಗಳಿಂದ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ಗ್ಯಾಂಗ್ ರೇಪ್ ಸಂಬಂಧ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಆರೋಪಿಗಳ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸುತಿದ್ದಂತೆ ಆರೋಪಿಗಳು ಎಸ್ಕೇಪ್ ಅಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಎಸ್ಕೇಪ್ ಅಗಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗ್ತಿದೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ ಬಾಬಾ ಮಾತನಾಡಿ, ಮೊನ್ನೆ ರಾತ್ರಿ ಮಾದನಾಯಕನಹಳ್ಳಿ ಬಳಿ ಘಟನೆ ನಡೆದಿದೆ. ಮೂರು ಮನೆ ಇದೆ, ಎರಡು ಮತ್ತು ಮೂರನೇ ಮನೆಯಲ್ಲಿ ಘಟನೆ ಆಗಿದೆ. ಈ ಮನೆಯಲ್ಲಿ ಪಶ್ಚಿಮ ಬಂಗಾಳ ಮೂಲದವರು ವಾಸವಿದ್ದರು. ಈ ವೇಳೆ ಐವರು ಪುರುಷರು ಅಲ್ಲಿಗೆ ಬಂದು ಮಹಿಳೆಯರನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದಿದ್ದಾರೆ.

ಸಾಮೂಹಿಕ ಅತ್ಯಾಚಾರ ಸಂಬಂಧ ಈಗ ಐವರ ಮೇಲೆ ಕೇಸ್ ದಾಖಲಾಗಿದೆ. ವಿಚಾರ ತಿಳಿದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಗ್ಯಾಂಗ್ ರೇಪ್ ಮತ್ತು ಡಕಾಯಿತಿ ಕೇಸ್ ದಾಖಲಾಗಿದೆ. ರೇಪ್ ಮಾಡಿದ್ದು ಮಾತ್ರವಲ್ಲದೆ ಹಣ, ಮೊಬೈಲ್ ಫೋನ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಮಹಿಳೆಯರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಅಲ್ಲಿದ್ದ ಗಂಡಸರನ್ನ ಕಟ್ಟಿ ಹಾಕಲಾಗಿತ್ತು. ಅವರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಈಗ ಮೂವರನ್ನ ಬಂಧಿಸಲಾಗಿದೆ. ಉಳಿದ ಇಬ್ಬರಿಗೆ ತೀವ್ರ ಹುಡುಕಾಟ ಮಾಡಲಾಗಿದೆ. ನೆಲಮಂಗಲ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಸಿ ಕೆ ಬಾಬಾ ಮಾಹಿತಿ ನೀಡಿದ್ದಾರೆ.

ಕಾರ್ತಿಕ್, ಗ್ಲೇನ್ ಮತ್ತು ಸುಯೋಗ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಅತ್ಯಾಚಾರ ಎಸಗಿದ ಮನೆಯಿಂದ ಸ್ವಲ್ಪ ದೂರದಲ್ಲೇ ವಾಸವಿದ್ದ ಆರೋಪಿಗಳು. ಮಹಿಳೆಯರ ಜೊತೆಗೆ ಪರಿಚಯ ಇತ್ತು ಅನ್ನೋ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಪರಿಚಯದ ಮೇರೆಗೆ ಮನೆಗೆ ನುಗ್ಗಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎನ್ನಲಾಗ್ತಿದ್ದು, ಆರೋಪಿಗಳನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗ್ತಿದೆ. ಮನೆ ಮಂದಿ ಇರುವಾಗಲೇ ಹೀನ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರ ಕಠಿಣ ಕ್ರಮ ಜರುಗಿಸಬೇಕಿದೆ. ಪರಿಚಯ ಇದ್ದ ಮಾತ್ರಕ್ಕೆ ಮನೆಗೆ ನುಗ್ಗಿ ಸಾಮೂಹಿಕ ಅತ್ಯಾಚಾರ ನಡೆಸುವುದು ಎಂದರೆ ಪೊಲೀಸರು ಹಾಗೂ ಕಾನೂನು ಮೇಲೆ ಭಯ ಇಲ್ಲ ಎಂಬಂತಾಗಿದೆ. ಈ ಪ್ರಕರಣದಲ್ಲಿ ಕಠಿಣ ಕಾನೂನು ಜರುಗಿಸುವ ಮೂಲಕ ಆರೋಪಿಗಳಿಗೆ ಎದುರಾಗುವ ಸಂಕಷ್ಟ ಕಂಡು ಮುಂದಿನ ದಿನಗಳಲ್ಲಿ ಇತರೆ ಆರೋಪಿಗಳಿಗೆ ಭಯ ಹುಟ್ಟುವಂತಾಗಬೇಕು ಎಂದು ಜನರು ಆಗ್ರಹ ಮಾಡ್ತಿದ್ದಾರೆ.


