The Public Spot
ಟ್ರೆಂಡ್

ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಗೌರಿ ಹಬ್ಬ.. ಏನಿದರ ವಿಶೇಷ..?

ಇವತ್ತು ನಾಡಿನಾದ್ಯಂತ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆ ಬೇಗ ಎದ್ದು ಬಾಗಿಲನ್ನು ತೊಳೆದು ಹೊಸ್ತಿಲಿಗೆ ಪೂಜೆ ಸಲ್ಲಿಸಿ ಗೌರಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಬಾಗಿನ ಕೊಡುವ ಬಿದಿರಿನ ಮೊರಗಳನ್ನು ಬಾಗಿಲಲ್ಲಿ ಇಟ್ಟು ಪೂಜೆ ಮಾಡಿದ ನಂತರ ಅದೇ ಮೊರಗಳಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಪದ್ಧತಿ ಜಾರಿಯಲ್ಲಿದೆ. ಬಾಗಿನ ಎಂದರೆ ಹೆಣ್ಣು ಮಗಳ ಜೀವನ ಸುಖವಾಗಿ ಇರಲಿ ಎನ್ನುವ ಕಾರಣಕ್ಕೆ ಮೊದಲು ಗೌರಿಗೆ ಬಾಗಿನ ಅರ್ಪಿಸಿ, ಪೂಜೆ ಸಲ್ಲಿಸಿದ ನಂತರ ಅದೇ ಮೊರಗಳಲ್ಲೇ ಮನೆಯ ಹೆಣ್ಣು ಮಕ್ಕಳಿಗೆ ಬಾಗಿನ ನೀಡಲಾಗುತ್ತದೆ. ಗೌರಿಯನ್ನೂ ಮನೆಯ ಮಗಳು ಎಂದೇ ಭಾವಿಸುತ್ತಾರೆ. ಅಮ್ಮ ಇಂದು ಪೂಜಿತಳಾದ ಮರು ದಿನ ನಾಳೆ ಎಲ್ಲೆಡೆ ಬರುವುದಕ್ಕೆ ಸಿದ್ಧತೆಗಳು ನಡೆದಿವೆ.

ಕೋಲಾರ ಜಿಲ್ಲೆಯ ಸುಳಿದೇನಹಳ್ಳಿ ಗ್ರಾಮದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹತ್ತಾರು ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಗೌರಿ-ಗಣೇಶ ಹಬ್ಬಕ್ಕೆ ಶುಭ ಕೋರಲಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ್ಯ ಸಿ.ಎಸ್.ವೆಂಕಟೇಶ್ ಅವರ ಪತ್ನಿ ಮಾಲಾ, ಗ್ರಾಮದ ನೂರಾರು ಮಹಿಳೆಯರಿಗೆ ಹಸಿರು ಗಾಜಿನ ಬಳೆ ತೊಡಿಸಿ, ಅರಿಶಿನ ಕುಂಕುಮ ಹಾಗೂ ಹೂವು ನೀಡುವ ಮೂಲಕ ಗೌರಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರಿನ ಕೆ.ಜಿ ಕೊಪ್ಪಲಿನ ಟೈಗರ್ಸ್ ತಂಡವು ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಅದಕ್ಕಾಗಿ ಬೆಂಗಳೂರಿನ ದೇವನಹಳ್ಳಿಯಿಂದ 25 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಮೈಸೂರಿಗೆ ತಂದಿದ್ದಾರೆ. ಅಲ್ಲದೆ ಮೈಸೂರಿನಲ್ಲಿ ಗೌರಿ, ಗಣಪತಿ ಹಬ್ಬದಂದು ಮೈಸೂರಿನಲ್ಲೇ ಅತಿ ದೊಡ್ಡ ಗಣೇಶ ಮೂರ್ತಿಯನ್ನು ಪೂಜಿಸುವ ಮೂಲಕ ಯಶಸ್ವಿ 29ನೇ ವರ್ಷವೂ ಗಣಪತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿದೆ. ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಂಡಳಿಗೆ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿದೆ. ಹಬ್ಬದ ಸಿದ್ಧತೆಗಳು ಭರದಿಂದ ಸಾಗಿದೆ. ಇಂದು ಗಣೇಶ ಮಂಟಪದ ಹಾಲಗಂಬ ಪೂಜೆ ನೆರವೇರಿಸಲಾಗುತ್ತೆ. ಈಗಾಗಲೇ ಈದ್ಗಾ ಮೈದಾನವನ್ನು 2 ಭಾಗವಾಗಿ ಪ್ರತ್ಯೇಕಿಸಿ ಒಂದು ಭಾಗದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಹಾಲಗಂಬ ಪೂಜೆ ಜೊತೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಗುತ್ತಿದೆ. ನಾಳೆ ಬೆಳಗ್ಗೆ ಗಣೇಶ ಪ್ರತಿಷ್ಠಾಪನೆ ನೆರವೇರಲಿದೆ.

ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಿ ಪಶುಪಾಲನೆ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಮಾಡಿದ್ದಾರೆ. ಬುಧವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಗಣೇಶ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಎಲ್ಲಾ ವಿಭಾಗದ ಡಿಸಿಪಿ, ಎಸಿಪಿಗಳ ಜೊತೆ ಸಭೆ ಮಾಡಿದ್ದೇವೆ. ಬಲವಂತವಾಗಿ ಯಾರಾದ್ರು ಚಂದಾ ವಸೂಲಿ ಮಾಡಿದರೂ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

Related posts

Hasanambe Last two days; ಕಾಲ್ತುಳಿತ ಸಂಭವಿಸಿದರೆ ನಾವು ಜವಾಬ್ದಾರಿ ಹೊರುವುದಿಲ್ಲ.. ಬಸ್‌ ನಿಲ್ಲಿಸಿ..

Publicspot

ಜೈಲಿನಲ್ಲಿ ಇನ್ಮುಂದೆ ಕೈದಿಗಳಿಗೆ ಸಂಕಷ್ಟ ಫಿಕ್ಸ್​.. ಅಖಾಡಕ್ಕೆ ಖಡಕ್​ ಅಲೋಕ್ ಎಂಟ್ರಿ..​

Publicspot

Bike Taxi Start: ರಾಜ್ಯದಲ್ಲಿ ಬೈಕ್​ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ಅಸ್ತು.. ರಸ್ತೆ ಫೈಟ್​ ನಿಲ್ಲಿಸಲಿ ಖಾಕಿಪಡೆ..

Publicspot

Today Blood moon: ರಕ್ತ ಚಂದ್ರಗ್ರಹ.. ಎಲ್ಲೆಲ್ಲಿ ಕಾಣುತ್ತೆ..? ಏನಿದ್ರ ವಿಶೇಷ..

Publicspot

Sugarcane Farmers Protest; ಸರ್ಕಾರದ ಆಹ್ವಾನ ತಿರಸ್ಕರಿಸಿದ ರೈತರು.. ಸಂಜೆ ತನಕ ಡೆಡ್‌ಲೈನ್‌..

Publicspot

ಚಂದ್ರಗ್ರಹಣ ಬರಿಗಣ್ಣಿನಿಂದಲೇ ನೋಡಿ.. ಇದೆಲ್ಲವೂ ಸೃಷ್ಟಿಯ ಅಚ್ಚರಿಗಳು..

Publicspot