The Public Spot
ರಾಜ್ಯ

High Court News: ರಾಜ್ಯದಲ್ಲಿ ಮತ್ತೆ ರಸ್ತೆ ಇಳಿಯುತ್ತವೆ ಬೈಕ್​ ಟ್ಯಾಕ್ಸಿ..!?

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬೈಕ್​ ಟ್ಯಾಕ್ಸಿ ಸೇವೆ ಕೊಡಲಾಗ್ತಿತ್ತು. ರ್ಯಾಪಿಡೋ, ಓಲಾ, ಊಬರ್​ ಸೇರಿದಂತೆ ಪ್ರಮುಖ ಆ್ಯಪ್​ ಆಧಾರಿತ ಸಂಸ್ಥೆಗಳು ಬೈಕ್​ ಮಾಲೀಕರನ್ನು ನೋಂದಣಿ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೆ ಸೇವೆ ಸಿಗುವಂತೆ ಮಾಡಿದ್ದರು. ಬೈಕ್​ ಚಾಲಕರಿಗೂ ಇದರಿಂದ ಇಂಧನದ ಖರ್ಚು ವೆಚ್ಚ ಸರಿದೂಗಿಸಲು ಸಹಕಾರಿ ಆಗಿತ್ತು. ಆದರೆ ಆಟೋದವರ ವಿರೋಧ ಹೆಚ್ಚಾಗಿದ್ದಕ್ಕೆ ರಾಜ್ಯ ಸರ್ಕಾರ ಬೈಕ್​ ಟ್ಯಾಕ್ಸಿ ಬ್ಯಾನ್​ ಮಾಡುವ ನಿರ್ಧಾರ ಮಾಡಿತ್ತು.

https://thepublicspot.com/new-law-in-loksaba-opposition-abjecton-bill-moved-jpc/

ಈಗಾಗಲೇ ಬೈಕ್​ಗಳ ಅವಶ್ಯಕತೆ ಇದೆ ಎನ್ನುವುದಾದರೆ ಕಾನೂನು ರೂಪಿಸಿ ಎಂದು ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಸಲಹೆಯನ್ನೂ ನೀಡಿತ್ತು. ಆದರೆ ರಾಜ್ಯ ಸರ್ಕಾರ ಯಾವುದೇ ಕಾನೂನು ರೂಪಿಸುವ ಕೆಲಸ ಮಾಡಿರಲಿಲ್ಲ. ಇದೀಗ ಮತ್ತೊಮ್ಮೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನಿಯಮ ರೂಪಿಸುವ ಬಗ್ಗೆ ನಿಲುವು ತಿಳಿಸಿ ಎಂದು ಹೈಕೋರ್ಟ್​ 1 ತಿಂಗಳ ಗಡುವು ನೀಡಿದೆ. ಬೈಕ್ ಟ್ಯಾಕ್ಸಿ ನಿಷೇಧ ಪ್ರಶ್ನಿಸಿ ಆಪರೇಟರ್​ಗಳು ಮೇಲ್ಮನವಿ ಸಲ್ಲಿಸಿದ್ದು, 13 ರಾಜ್ಯಗಳು ನಿಯಮ ರೂಪಿಸಿವೆ, ನೀವು ನಿಷೇಧಿಸಿದ್ದೀರಿ. ಈ ರೀತಿ ನಿಷೇಧ ಸರಿಯೇ ಎಂಬುದನ್ನು ಹೈಕೋರ್ಟ್ ಪರಿಶೀಲಿಸಲಿದೆ ಎಂದಿದೆ.

ಬೈಕ್ ಸಂಚಾರದಿಂದ ನಗರದಲ್ಲಿ ದಟ್ಟಣೆಯೂ ಉಂಟಾಗುವುದಿಲ್ಲ. ಕಾರು, ಆಟೋ ಸಂಚರಿಸದ ಕಡೆಯಲ್ಲೂ ಬೈಕ್ ಸಂಚರಿಸಬಹುದು. ಸರ್ಕಾರ ನೀತಿ ರೂಪಿಸುವುದಿದ್ದರೆ ಸಮಯ ನೀಡುತ್ತೇವೆ ಎಂದಿರುವ ಹೈಕೋರ್ಟ್​, ಜೀವನೋಪಾಯದ ಅಂಶವೂ ಅರ್ಜಿಯಲ್ಲಿ ಇರುವುದರಿಂದ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಲು ಸೂಚನೆ ಕೊಟ್ಟಿದೆ ರಾಜ್ಯ ಹೈಕೋರ್ಟ್. ಹೈಕೋರ್ಟ್ ಸಲಹೆಗೆ ಸರ್ಕಾರದ ಪರ ಅಡ್ವೊಕೇಟ್​ ಜನರಲ್​ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, 4 ವಾರದಲ್ಲಿ ಸರ್ಕಾರದ ನಿಲುವು ತಿಳಿಸುತ್ತೇವೆ ಎಂದಿದ್ದಾರೆ. ಸೆಪ್ಟೆಂಬರ್​ 22 ರ ಒಳಗೆ ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ.

ಬೈಕ್​ ಟ್ಯಾಕ್ಸಿಯಿಂದ ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ಲಭ್ಯ ಆಗುತ್ತದೆ. ಅಷ್ಟೇ ಅಲ್ಲದೆ ಆಟೋ ಚಾಲಕರು ಕೇಳಿದಷ್ಟು ದುಡ್ಡು ಕೊಡುವುದು, ಡಬಲ್,​ ತ್ರಿಬಲ್​ ದರ ವಸೂಲಿ ಮಾಡುವುದು ತಪ್ಪುತ್ತದೆ. ಇನ್ನು ಒಬ್ಬರೇ ಗ್ರಾಹಕ ಇದ್ದಾಗ ಆಟೋದಲ್ಲಿ ಸಂಚಾರ ಮಾಡುವುದು ಕಷ್ಟ. ಮೂವರು, ಇಬ್ಬರು ಇದ್ದಾಗ ಆಟೋದಲ್ಲಿ ಹೋದರೆ ಅನುಕೂಲ ಆಗುತ್ತದೆ. ಆದರೆ ಬೈಕ್​ನಲ್ಲಿ ಒಬ್ಬರನ್ನೇ ಕೂರಿಸಿಕೊಂಡು ಹೋಗುವದರಿಂದ ಆಟೋದವರಿಗೆ ಯಾವುದೇ ನಷ್ಟವೂ ಇಲ್ಲ. ಸರ್ಕಾರ ಈ ಬಗ್ಗೆ ನೂತನ ಕಾನೂನು ಜಾರಿ ಬಗ್ಗೆ ನಿರ್ಧಾರ ಮಾಡಬೇಕಿದೆ. ಇಲ್ಲದಿದ್ರೆ ಕಾನೂನು ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.

Related posts

Heavy Rain All Over India: ರಾಜ್ಯ ಮತ್ತು ದೇಶದಲ್ಲಿ ಹೇಗಿದೆ ಮಳೆ ಅಬ್ಬರ.. ಎಲ್ಲೆಲ್ಲಿ ರಜೆ..?

Publicspot

RAIN EFFECT, SCHOOL CLOSED; ಭಾರೀ ಮಳೆ.. ಎಲ್ಲೆಲ್ಲಿ ಶಾಲೆಗಳಿಗೆ ರಜೆ ಘೋಷಣೆ..?

Publicspot

PU, SSLC ಪರೀಕ್ಷೆಗೆ ಸಿದ್ಧತೆ ಇರಲಿ, ಭಯ ಬೇಡ.. ಪತ್ರಿಕೆ ಲೀಕ್‌ ಆಗುವ ಭಯ ಬೇಡ..

Publicspot

ಲಂಕೇಶ್ ಅವರನ್ನು ರೂಪಿಸಿದ್ದು ಅವರ ಬಹುರೂಪಿ ಓದು. ತನ್ನ ಕಾಲಮಾನದ ಎಲ್ಲಾ ವಯೋಮಾನದವರ ಬರವಣಿಗೆ

admin

Cast Censes Congress Ready to Leagal Fight; ಹೈಕೋರ್ಟ್‌ನಲ್ಲಿ ತಡೆ ಸಿಕ್ಕರೂ ಕಾನೂನು ಹೋರಾಟಕ್ಕೆ ಕಾಂಗ್ರೆಸ್‌ ತಯಾರಿ..!

Publicspot

GBA ನಿರ್ಲಕ್ಷ್ಯ.. ಮರ ಬಿದ್ದು ಯುವತಿ ಸಾವು.. ಮೂವರ ಸ್ಥಿತಿ ಗಂಭೀರ..

Publicspot