The Public Spot
ರಾಜ್ಯ

ಜ್ಞಾನಭಾರತಿ ಆವರಣದಲ್ಲಿ ತಿಮ್ಮಕ್ಕ ಅಂತ್ಯಕ್ರಿಯೆ.. ವೃಕ್ಷಮಾತೆಯ ಕೊನೆ ಆಸೆ ಏನು ಗೊತ್ತಾ..?

ಸಾಲು ಮರದ ತಿಮ್ಮಕ್ಕ ದತ್ತು ಪುತ್ರ ಉಮೇಶ್ ವನಸಿರಿ ಮಾತನಾಡಿ, ಲಾಲ್ ಬಾಗ್ ಅಥವಾ ಕಬ್ಬನ್ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಮನವಿ ಮಾಡಿದ್ದೇವೆ. ಸರ್ಕಾರ ಇನ್ನೂ ಯಾವುದೇ ನಿರ್ಧಾರವನ್ನು ನಮಗೆ ತಿಳಿಸಿಲ್ಲ. ಹುಲಿಕಲ್ ಗ್ರಾಮದಲ್ಲಿ ಅವರು ನೆಟ್ಟಿರುವ ಮರದ ಕೆಳಗೆ ಸ್ವಲ್ಪ ಹೊತ್ತು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ನಂತರ ನಂತರ ಬೇಲೂರಿಗೆ ಹೋಗಿ ಅಲ್ಲೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿ, ಅಲ್ಲಿಂದ ನೇರವಾಗಿ ಶನಿವಾರ ಬೆಂಗಳೂರಿಗೆ ತಂದು ಸರ್ಕಾರ ಎಲ್ಲಿ ಹೇಳುತ್ತದೋ ಅಲ್ಲಿ ಅಂತ್ಯ ಸಂಸ್ಕಾರ ಮಾಡ್ತೇವೆ ಎಂದಿದ್ದರು.

ಸಾಲು ಮರದ ತಿಮ್ಮಕ್ಕ ಪಾರ್ಥಿವ ಶರೀರವನ್ನು ಹುಲಿಕಲ್ ಗ್ರಾಮಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ಬಳಿಯ ಹುಲಿಕಲ್ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಹಾಸನದ ಬೇಲೂರಿನಲ್ಲೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲು ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಯ್ತು. ಈ ವೇಳೆ ಸಾಲುಮರದ ತಿಮ್ಮಕ್ಕ ಅವರ ಗಂಡ ಬಿಕ್ಕಲ ಚಿಕ್ಕಯ್ಯ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಗಂಡನ ಪಕ್ಕದಲ್ಲೇ ಹೆಂಡತಿಯ ಸಮಾಧಿ ಇರಬೇಕು. ಹುಲಿಕಲ್‌ನಲ್ಲೇ ಅಂತ್ಯ ಸಂಸ್ಕಾರ ಆಗಬೇಕೆಂಬುದು ಸಾಲು ಮರದ ತಿಮ್ಮಕ್ಕನ ಆಸೆಯಾಗಿತ್ತು. ಸಾಲು ಮರದ ತಿಮ್ಮಕ್ಕನ ಸ್ಮಾರಕವೂ ನಮ್ಮೂರಿನಲ್ಲೇ ಆಗಬೇಕು ಎಂದು ತಿಮ್ಮಕ್ಕನ ಸಂಬಂಧಿಕರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಸಾಲು ಮರದ ತಿಮ್ಮಕ್ಕನಿಗೆ ಗ್ರಾಮದಲ್ಲಿ ಎರಡು ಎಕರೆ ಜಮೀನು ಇದೆ. ಹೀಗಾಗಿ ಇಲ್ಲೇ ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ತಿಮ್ಮಕ್ಕ ಪಾರ್ಥಿವ ಶರೀರವನ್ನು ತಡೆದು ನಿಲ್ಲಿಸಿದ್ದರು. ಈ ವೇಳೆ ಸರ್ಕಾರದ ಜೊತೆಗೆ ಮಾತನಾಡ್ತೇನೆ ಎಂದು ಶಾಸಕ ಬಾಲಕೃಷ್ಣ ಗ್ರಾಮಸ್ಥರ ಮನವೊಲಿಸಿದ್ದಾರೆ.

ಹಾಸನದಲ್ಲಿ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಪಾರ್ಥೞಇವ ಶರೀರಕ್ಕೆ ಜನ ಅಂತಿಮ ನಮನ ಸಲ್ಲಿಸಿದ್ದಾರೆ. ಹಾಸನ ಜಿಲ್ಲಾಧಿಕಾರಿ ‌ಕಚೇರಿ ಮುಂದೆಯೂ ಅಂತಿಮ‌ ನಮನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂತಿಮ‌ ದರ್ಶನದ ಬಳಿಕ ಬೇಲೂರಿಗೆ ತಿಮ್ಮಕ್ಕ ಪಾರ್ಥಿವ ಶರೀರ ರವಾನೆ ಮಾಡಲಾಯ್ತು. ಹಲವು ವರ್ಷಗಳಿಂದ ಸಾಕು ಮಗ ಉಮೇಶ್ ಜೊತೆ ಇದ್ದ ತಿಮ್ಮಕ್ಕ, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿದ್ದ ವಾಸವಿದ್ದರು. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಅಲ್ಲಿ ಅಂತಿಮ ಪೂಜೆ ಪುನಸ್ಕಾರ ಮಾಡಿಕೊಂಡು ವಿಧಿವಿಧಾನ ಪೂರೈಸಿದ ಬಳಿಕ ಅಂತಿಮವಾಗಿ ಬೆಂಗಳೂರಿಗೆ ಪಾರ್ಥಿವ ಶರೀರ ತರಲಾಗಿದೆ. ಇವತ್ತು ಬೆಳಗ್ಗೆ 8 ಗಂಟೆಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಜ್ಞಾನಭಾರತಿ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತೆ.

ಹಾಸನದಲ್ಲಿ ಸಾಲುಮರದ ತಿಮ್ಮಕ್ಕನ ದತ್ತು ಪುತ್ರ ಉಮೇಶ್ ಮಾತನಾಡಿ, ಕಳೆದ ಇಪ್ಪತ್ತೆರಡು ವರ್ಷಗಳಿಂದ ತಿಮ್ಮಕ್ಕನವರು ಹಾಸನ ಜಿಲ್ಲೆಯಲ್ಲಿ ಕಳೆದಿದ್ದರು. ಹಾಸನದಲ್ಲಿ ನನ್ನನ್ನು ದತ್ತು ತೆಗೆದುಕೊಂಡಿದ್ದರು. ಅವರ ಕೊನೆಯ ದಿನಗಳನ್ನು ಹಾಸನ ಜಿಲ್ಲೆ ಬೇಲೂರು ತಾಲೂಕು ಬಳ್ಳೂರು ಗ್ರಾಮದಲ್ಲಿ ಕಳೆದಿದ್ದರು. ಹಾಸನ ಜನತೆ ಕೂಡ ಅಮ್ಮನನ್ನು ಅಷ್ಟೇ ಪ್ರೀತಿಸಿದ್ದಾರೆ. ಬೇಲೂರು ಮತ್ತು ಬಳ್ಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 8 ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೃಹ ಸಚಿವ ಪರಮೇಶ್ವರ್ ಅವರು ಮಲೇಶಿಯಾದಿಂದ ಆಗಮಿಸುತ್ತಿದ್ದಾರೆ. ಅರಣ್ಯ ಸಚಿವರು ಖುದ್ದು ನಿಂತು ಎಲ್ಲಾ ಕಾರ್ಯ ಮಾಡಿದ್ದಾರೆ. ಮುಖ್ಯಮಂತ್ರಿಗಳು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ನಾಳೆ ಜ್ಞಾನಭಾರತಿ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ತಿಮ್ಮಕ್ಕ ಅವರ ಬಗ್ಗೆ ಮಾತನಾಡಿ, ಸಾಲುಮರದ ತಿಮ್ಮಕ್ಕ ನಿಧನ, ಬಹಳ ನೋವು ತಂದಿದೆ. ಪರಿಸರಕ್ಕೆ ಹಾಗೂ ಸಮಾಜಕ್ಕೆ ಕೊಡುಗೆ ಅಪಾರವಾಗಿದೆ. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ಅವರು 114 ವರ್ಷಗಳ ಕಾಲ‌ ಬದುಕಿದ್ದಾರೆ. ಅವರಿಗೆ ಮಕ್ಕಳು ಇರಲಿಲ್ಲಾ, ಗಿಡಗಳನ್ನು ಮಕ್ಕಳ ಅಂತಾ ಸಾಕುತಿದ್ರು. ಅವರು‌ ನೆಟ್ಟಿರುವ ಮರಗಳು ಇಂದಿಗೆ ಹೆಮ್ಮರವಾಗಿ ಬೆಳೆದಿದೆ. ಅವರು ದೊಡ್ಡ ಪರಿಸರವಾದಿ, ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದಿಂದ ನಡೆಯಲಿದೆ, ಕೊನೆಯ ಆಸೆ ಪತ್ರ ಕೊಟ್ಟಿದ್ದಾರೆ. ಬೇಲೂರಿನಲ್ಲಿ ವಸ್ತು ಸಂಗ್ರಾಹಾಲಯ ಮಾಡಲು ಆಸೆ ವ್ಯಕ್ತ ಪಡಿಸಿದ್ದಾರೆ. ತಿಮ್ಮಕ್ಕ ವಸ್ತು ಸಂಗ್ರಹಾಲಯ ಮಾಡಲು ಕೊನೆಯ ಆಸೆ ಪತ್ರ ಕೊಟ್ಟಿದ್ದಾರೆ. ಅದನ್ನು ಸರ್ಕಾರ ಪರಿಗಣಿಸುತ್ತದೆ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ.

Related posts

Caste Census Doubt; ಜಾತಿ ಜನಗಣತಿಗೆ ಸರ್ಕಾರದಲ್ಲೇ ವಿರೋಧ.. ಸೆಪ್ಟೆಂಬರ್‌ 22ರಿಂದ ಸಮೀಕ್ಷೆ ಡೌಟ್..

Publicspot

Kannada Sahithya Academy; ಯುವ ಪತ್ರಕರ್ತರಿಗೆ ಕೋಟೆ ನಾಡಲ್ಲಿ ಕನ್ನಡ ಸಾಹಿತ್ಯದ ರಸದೌತಣ

Publicspot

Rain Alert: ರಾಜ್ಯದಲ್ಲಿ ಎರಡು ದಿನ ಮಳೆಯಬ್ಬರ.. ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್‌..!?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

ಹಿಂದೂ ಅನ್ನೋ ಧರ್ಮ ಇಲ್ಲ.. ಲಿಂಗಾಯತ ಸ್ವಾಮೀಜಿಗಳ ನೇರಮಾತು..!!

Publicspot

High Court Dismissed PIL ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಇನ್ನಿಲ್ಲ ತಡೆ..

Publicspot