ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಕೋರ್ಟ್ ಮೊರೆ ಹೋಗಿ ಆ ಬಳಿಕ ಪೊಲೀಸರಿಗೆ ದೂರು ನೀಡಿ SIT ರಚನೆಗೂ ಕಾರಣವಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಧರ್ಮಸ್ಥಳದ ವಿರುದ್ಧ ಮಾಡಿದ್ದ ಆರೋಪದಲ್ಲಿ ಸತ್ಯಕ್ಕಿಂತಲೂ ಸುಳ್ಳನ್ನು ಹೇಳಿದ್ದಾನೆ ಅನ್ನೋ ಕಾರಣಕ್ಕೆ ಪೊಲೀಸ್ರು ಬಂಧಿಸಿದ್ದಾರೆ. ಇಷ್ಟು ದಿನಗಳ ಕಾಲ ಸಾಕಷ್ಟು ಐಷಾರಾಮಿಯಾಗಿ ಅಧಿಕಾರಿಗಳ ಜೊತೆಗೆ ಜೊತೆಗೆ ಓಡಾಡ್ತಿದ್ದ ಚಿನ್ನಯ್ಯ, ಇವತ್ತು ಪೊಲೀಸರ ಸೆರೆಯಾಗಿ ಪೊಲೀಸ್ ಜೀಪ್ನಲ್ಲಿ ಓಡಾಡುವಂತಾಗಿದೆ.
ಒಂದೇ ದಿನದಲ್ಲಿ ಎಲ್ಲಾ ಸೌಕರ್ಯ ಕಳೆದುಕೊಂಡ ಮಾಸ್ಕ್ ಮ್ಯಾನ್ ಚಿನ್ನಯ್ಯ, ಸಾಕ್ಷಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆದುಕೊಂಡಿದ್ದ ದೂರುದಾರ ಚಿನ್ನಯ್ಯ, ಶವಗಳ ಉತ್ಖನನ ವೇಳೆ ಎಸ್.ಐ.ಟಿ ಅಧಿಕಾರಿಗಳನ್ನೇ ಪ್ರಶ್ನಿಸುತ್ತಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ, ಕೋರ್ಟ್ ಸೂಚನೆ ಮೇರೆಗೆ ಅಜ್ಞಾತ ಸ್ಥಳದಿಂದ ಹೊರಡುವ ಮೊದಲು ಚಿನ್ನಯ್ಯನಿಗೆ ಗನ್ ಮ್ಯಾನ್ ಭದ್ರತೆ ಕೊಡಲಾಗಿತ್ತು. ತನ್ನ ಬಳಿ ಏರುಧ್ವನಿಯಲ್ಲಿ ಮಾತನಾಡಿದ ಎಸ್.ಐ.ಟಿ ತಂಡದ ಅಧಿಕಾರಿಯನ್ನೇ ತನಿಖೆ ತಂಡದಿಂದ ಕೈ ಬಿಡುವಂತೆ ಮಾಡಿದ್ದ. ಆದರೆ ಇದೀಗ ಎಲ್ಲವೂ ಉಲ್ಟಾಪಲ್ಟಾ ಆಗಿದೆ.
ಹಲವು ಬಾರಿ ಮಾಸ್ಕ್ ಮ್ಯಾನ್ ಬರುವ ತನಕ ಉತ್ಖನನ ಜಾಗಕ್ಕೆತೆರಳಲು ಆತನಿಗಾಗಿ ಕಾಯುತ್ತಿದ್ದ SIT ಅಧಿಕಾರಿಗಳು, ಪೋಲೀಸ್ ಕಸ್ಟಡಿಯಲ್ಲಿ ಇರದೆ ತನಗೆ ಬೇಕಾದ ಕಡೆ ಇರುವ ಸ್ವಾತಂತ್ರ್ಯ ಪಡೆದುಕೊಂಡಿದ್ದ ಕಾನೂನು ಅಡಿಯಲ್ಲೇ ಮಾಸ್ಕ್ ಮ್ಯಾನ್ ಬಂಧನವಾದ ಬಳಿಕ ಎಲ್ಲಾ ಸೌಲಭ್ಯ ಕಳೆದುಕೊಂಡಿದ್ದಾರೆ. ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದ ಮಾಸ್ಕ್ ಮ್ಯಾನ್ ಪೋಲೀಸ್ ಜೀಪ್ಗೆ ಶಿಫ್ಟ್ ಆಗಿದೆ.
ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ನೀಡಲಾಗಿದೆ. ನ್ಯಾಯಾಲಯದಲ್ಲಿ ಚಿನ್ನಯ್ಯ ಪುಲ್ ಸೈಲೆಂಟ್ ಆಗಿದ್ದು, ಇಷ್ಟು ದಿನಗಳ ಕಾಲ ಕಾನ್ಪಿಡೆಂಟ್ ಆಗಿದ್ದ, ಚಿನ್ನಯ್ಯ ನ್ಯಾಯಾಲಯದಲ್ಲಿ ಸಪ್ಪೆ ಮೋರೆ ಹಾಕಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆ ಎಲ್ಲ ಪ್ರಶ್ನೆಗೂ ಹೌದು ಇಲ್ಲ ಎನ್ನುವ ಸಪ್ಪೆ ಉತ್ತರ ಕೊಟ್ಟಿದ್ದಾನೆ. ನಾನು ಹೆಣಗಳನ್ನು ಹೂತದ್ದು ನಿಜ ಅಂತ ಬೇಸರದಲ್ಲೇ ಹೇಳಿದ್ದಾನೆ ಎನ್ನಲಾಗಿದೆ. ಶವಗಳನ್ನು ಹೂತ ಬಗ್ಗೆ ನ್ಯಾಯಾಧೀಶರು ಕೇಳಿದ್ರೆ, ತನ್ನ ಕಷ್ಟದ ಜೀವನದ ಕಥೆ ಹೇಳಿದ್ದನಂತೆ ಚಿನ್ನಯ್ಯ. ನ್ಯಾಯಾಧೀಶರ ಮುಂದೆ ಚಿನ್ನಯ್ಯನ ಗಲಿಬಿಲಿ ಹೇಳಿಕೆ ನೀಡಿದ್ದಾನೆ. ಉತ್ತರ ಕೊಡಲು ತಡಕಾಡಿದ್ದಾನೆ ಎನ್ನಲಾಗಿದೆ.
ಚಿನ್ನಯ್ಯನ ಮೇಲೆ SIT ಅಧಿಕಾರಿಗಳು ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಎಸ್ಐಟಿ ಮತ್ತು ಸರ್ಕಾರಿ ವಕೀಲರು ಆರೋಪಿಯ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಆರೋಪಿಯ ಹಿಂದೆ ಸಾಕಷ್ಟು ಜನ ಇದ್ದಾರೆ. ಈ ಬಗ್ಗೆ ವಿವರವಾಗಿ ತನಿಖೆ ಅವಶ್ಯಕತೆ ಇದೆ. ಅದ್ರಿಂದ ಹತ್ತು ದಿನ ಕಸ್ಟಡಿಗೆ ಕೊಡಿ ಅಂತ ಕೇಳಿದ್ದಾರೆ SIT ಅಧಿಕಾರಿಗಳು. ಬುರುಡೆ ವಿಚಾರದಲ್ಲಿ ನಾನು ತಂದದ್ದು ಅಲ್ಲ ಅಂತ ಬುರುಡೆ ಸತ್ಯಾಂಶ ಬಾಯ್ಬಿಟ್ಟಿದ್ದಾರೆ ಚಿನ್ನಯ್ಯ ಎನ್ನಲಾಗಿದೆ. SIT ಪರ ವಾದ ಬಳಿಕ ಚಿನ್ನಯ್ಯಗೆ ಮಾತನಾಡಲು ಅವಕಾಶ ಕೊಡಲಾಗಿತ್ತು. ನ್ಯಾಯಾಧೀಶರು ಚಿನ್ನಯ್ಯಗೆ ಅವಕಾಶ ನೀಡಿದ್ರು. ಆಗ ನಾನು ಹೆಣ ಹೂತಾಕಿದ್ದು ನಿಜ ಎಂದಿದ್ದಾನೆ ಚಿನ್ನಯ್ಯ. ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯ ಅಣ್ಣನನ್ನು SIT ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿನ್ನಯ್ಯನ ಅಣ್ಣ ತಾನಾಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ತಾನಾಸಿ. ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗಿ ವಶಕ್ಕೆ ಪಡೆದಿದ್ದಾರೆ ಪೊಲೀಸರು. ಆ ಬಳಿಕ SIT ಕಚೇರಿಗೆ ಕರೆದೊಯ್ದು ತಾನಾಸಿಯನ್ನು ವಿಚಾರಣೆ ಮಾಡಿದ್ದಾರೆ. ಒಟ್ಟಾರೆ ಮಾಸ್ಕ್ ಮ್ಯಾನ್ ನೀಡಿದ ಮಾಹಿತಿ ಮೇರೆಗೆ ಶೋಧ ಮಾಡುತ್ತಿದ್ದ ಎಸ್ಐಟಿ ಅಧಿಕಾರಿಗಳು ಇದೀಗ ಮಾಸ್ಕ್ ಮ್ಯಾನ್ನನ್ನು ಬಂಧನ ಮಾಡಿದ್ದಾರೆ. ವಿಚಾರಣೆ ಬಳಿಕ ಮತ್ತಷ್ಟು ಸಂಗತಿ ಬಯಲಾಗಬೇಕಿದೆ.


